Saturday 12 May 2012

ವಿಟ್ಲ ಸರ್ಕಾರಿ ಕಾಲೇಜು ಮೂಲಸೌಕರ್ಯ ವಂಚಿತ,


ಮಹಮ್ಮದ್ ಅಲಿ ವಿಟ್ಲ.
ವಿಟ್ಲ: ಪ್ರಸ್ತುತ ವಿಟ್ಲದಲ್ಲಿ ಈ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಕುಳಿತುಕೊಳ್ಳಲು ಸರಿಯಾದ ತರಗತಿಗಳಿಲ್ಲ, ಶೌಚಾಲಯವಿಲ್ಲ, ಆವರಣಗೋಡೆಯಿಲ್ಲ, ಸಭಾಭವನವಿಲ್ಲ, ನಿರ್ಜನ ಪ್ರದೇಶದಲ್ಲಿರುವ ಈ ಕಾಲೇಜಿಗೆ ವಿದ್ಯಾರ್ಥಿಗಳು ೨ ಕಿ.ಮೀ ಕಾಲು ನಡಿಗೆ ಮೂಲಕ ಸಂಚಾರಿಸಬೇಕಾಗಿದೆ. ಸರಿಯಾದ ಕಾಲೇಜು ಕ್ಯಾಂಟಿನ್‌ಯಿಲ್ಲ, ಸರಿಯಾದ ಕ್ರೀಡಾಂಗಣವಿಲ್ಲ, ಇನ್ನೂ ಅನೇಕ ಸಮಸ್ಯೆಗಳಿರುವ ಕಾಲೇಜು ಬಂಟ್ವಾಳ ತಾಲ್ಲೂಕಿನ ವಿಟ್ಲ ಎಂಬ ಪ್ರದೇಶದಲ್ಲಿ ಬೊಬ್ಬೆಕೇರಿ ಎಂಬಲ್ಲಿದೆ. ಅದೇ ವಿಟ್ಲ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಇದು ಮೂಲಸೌಕರ್ಯ ಪಡೆಯುವಲ್ಲಿ ಹಿಂದುಳಿದಿದೆ. ೭೫೦ಕ್ಕಿಂತಲೂ ಅಧಿಕ ವಿದ್ಯಾರ್ಥಿಗಳಿರುವ ಈ ಕಾಲೇಜು ದ.ಕನ್ನಡ ಜಿಲ್ಲೆಯಲ್ಲೇ ಇಂತಹ ದುಸ್ಥಿತಿಯ ಕಾಲೇಜು ಬೇರೆ ಎಲ್ಲಿಯೂ ಕಂಡು ಬರಲು ಸಾಧ್ಯವಿಲ್ಲ. ಬಿ.ಎ, ಬಿ.ಕಾಂ, ಎಂ.ಎಸ್.ಡಬ್ಲ್ಯೂ, ಬಿ.ಎಸ್.ಡಬ್ಲ್ಯೂ, ವ್ಯಾಸಂಗಗಳು ಪ್ರಸ್ತುತ ಇದೀಗ ನಡೆಯುತ್ತಿದೆ. ಈ ಕಾಲೇಜಿಗೆ ಕನ್ಯಾನ, ಬಾಯಾರು, ಕಬಕ, ಪೆರುವಾಯಿ, ಪಕಳಕುಂಜ, ಸಾಲೆತ್ತೂರು. ಬಾಕ್ರಬೈಲು, ಕಲ್ಲಡ್ಕ, ಮುಂತಾದ ಪ್ರದೇಶಗಳಿಂದ ವಿದ್ಯಾರ್ಥಿಗಳು ಇಲ್ಲಿಗೆ ಬರುತ್ತಾರೆ.
೨೦ ವರ್ಷಗಳ ಹಿಂದೆ ಅಂದರೆ ೧೯೯೩ರಲ್ಲಿ ಆರಂಭವಾದ ಈ ಕಾಲೇಜು ಪುತ್ತೂರು ರಸ್ತೆಯ ಕೆ.ಇ.ಬಿ ಬಳಿಯ ಪುರಭವನ ಬಳಿ ಕಾರ್ಯಚರಣೆ ನಡೆಸುತ್ತಿತ್ತು. ಕೆಲ ಜನಪ್ರತಿನಿಧಿಗಳ ಸಹಕಾರದೊಂದಿಗೆ ಅದನ್ನು ೨ ಕಿ.ಮೀ ದೂರದ ವಿಟ್ಲ ಬೊಬ್ಬೆಕೇರಿ ಒಟ್ಟೆಶಾಂತಿ ಬಳಿಗೆ ಸ್ವಂತ ಕಟ್ಟಡಕ್ಕೆ ಸ್ಥಳಾಂತರಗೊಂಡಿತ್ತು. ಆದರೆ ಈ ಜಾಗದ ಕೆಲ ಜಾಗಗಳು ಖಾಸಗಿ ವ್ಯಕ್ತಿಗಳ ಪಾಲಾಗುತ್ತಿದೆ. ಕಾಲೇಜಿನ ಸ್ವಂತ ಜಾಗದಲ್ಲಿ ಮೂರು ತರಗತಿ ಕೊಠಡಿಗಳು, ಪ್ರಾಂಶುಪಾಲರ ಕೊಠಡಿ, ಗ್ರಂಥಾಲಯ ಕೊಠಡಿ, ಉಪನ್ಯಾಸಕರ ಕೊಠಡಿ ಆರಂಭವಾಗಿತ್ತು.
ಕಾಲೇಜಿನ ಸ್ವಲ್ಪ ದೂರದಲ್ಲಿ ದೊಡ್ಡದಾದ ಸಭಾಭವನ ಕಟ್ಟಲಾಗಿದೆ ಅದರಲ್ಲಿ ೬ ತರಗತಿಗಳು ನಡೆಯುತ್ತಿರುತ್ತದೆ. ಅಲ್ಲಿ ಒಂದು ತರಗತಿಯ ಪಾಠ ಪ್ರವಚನ ಇನ್ನೊಂದು ತರಗತಿಗೆ ಕೇಳಿಸುತ್ತದೆ ಇದರಿಂದ  ಪಾಠ ವಿದ್ಯಾರ್ಥಿಗಳಿಗೆ ಅರ್ಥವಾಗುತ್ತಿಲ್ಲ. ಇದರ ಮಹಡಿ ಶೀಟ್‌ನ ತೂತಾಗಿ ಮಳೆಗಾಲದಲ್ಲಿ ನೀರು ಒಳಗಡೆ ಬೀಳುತ್ತದೆ. ಬೇಸಿಗೆಗಾಲದಲ್ಲಿ ಪಾರಿವಾಳ ಹಿಕ್ಕಿನ ಅಭಿಷೇಕ ವಿದ್ಯಾರ್ಥಿಗಳ ಮೈಮೇಲೆ ಬೀಳುತ್ತದೆ, ಇಲ್ಲಿಗೆ ಉಪನ್ಯಾಸಕರು ಒಂದು ಅವಧಿ ತರಗತಿ ಮುಗಿಸಿ ಕಾಲೇಜು ಕಚೇರಿಗೆ ತೆರಳಲು ಅವರಿಗೆ ಅಂದಾಜು ೧೫ ನಿಮಿಷಗಳುಬೇಕು. ಇಲ್ಲಿ ಕಾರ್ಡ್‌ಬೋರ್ಡ್ ಪಾರ್ಟಿಶನ್ ಮಾಡಿ ತರಗತಿಗಳು ನಡೆಯುತ್ತವೆ. ವಿದ್ಯಾರ್ಥಿಗಳು ಸಂಖ್ಯೆಯನ್ನು ಮನದಲ್ಲಿಟ್ಟುಕೊಂಡ ಕೆಲವರು ನೂತನ ಕಟ್ಟಡ ಕಟ್ಟಿಸಲು ಕೈಹಾಕಿದ್ದರು ಆದರೆ ಅದು ಹಣದ ಕೊರತೆಯಿಂದ ಅರ್ಧಕ್ಕೆ ನಿಂತಿದೆ. ಕೆಂಪು ಕಲ್ಲಿನಿಂದ ಕಟ್ಟಲಾದ ಈ ಕಟ್ಟಡ ಅರ್ಧಕ್ಕೆ ನಿಂತ ಪರಿಣಾಮ ಅದೀಗ ಪಾಲುಬಿದ್ದಿದ್ದು, ಅದು ದನಗಳಿಗೆ ಹಾಗೂ ನಾಯಿಗಳಿಗೆ ಆಶ್ರಯತಾಣವಾಗಿದೆ.
ಪದವಿ ವಿದ್ಯಾರ್ಥಿಗಳಿಗೆ ೧೫ ತರಗತಿ ಕೊಠಡಿಗಳು, ೧೨ ಶೌಚಾಲಯ ಕೊಠಡಿಗಳು, ಕನಿಷ್ಠಪಕ್ಷ ೩೦ವಿದ್ಯಾರ್ಥಿಗಳು ಕುಳಿತುಕೊಳ್ಳಲು ಬೇಕಾದಂತಹ ಗ್ರಂಥಾಲಯ ಕೊಠಡಿಗಳುಬೇಕೇಬೇಕು ಎಂದು ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ. ವಾಚ್‌ಮ್ಯಾನ್, ಪಿವನ್, ಗ್ರಂಥಾಲಯ ಸಹಾಯಕ, ವಾಣಿಜ್ಯಶಾಸ್ತ್ರ, ಕಲಾಶಾಸ್ತ್ರ, ಮುಂತಾದ ತರಗತಿಗಳಿ ಉಪನ್ಯಾಸಕರ ಕೊರತೆಯಿದೆ. ಈ ಎಲ್ಲಾ ಸಮಸ್ಯೆಯನ್ನು ಸಂಬಂಧಪಟ್ಟವರು ನಿವಾರಿಸಿದರೆ ಇಲ್ಲಿಯ ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರು ನೆಮ್ಮದಿಯಿಂದ ಇರಲು ಸಾಧ್ಯ ಎಂಬ ಮಾತು ಕೇಳಿ ಬರುತ್ತಿದೆ. ಆದರೆ ಮೇಲಾಧಿಕಾರಿಗಳಿಗೆ ಈ ಸಮಸ್ಯೆಯನ್ನು ಮುಟ್ಟಿಸಲು ಯಾರು ಕೂಡ ಮುಂದೆ ಬರುತ್ತಿಲ್ಲ ಆರೋಪಗಳು ಕೇಳಿಬರುತ್ತಿದೆ.

ಮಾಣಿ ಅಪಘಾತ



ವಿಟ್ಲ: ಸರ್ಕಾರಿ ಬಸ್, ಆಟೋ ರಿಕ್ಷಾ ಹಾಗೂ ಬೈಕ್ ಪರಸ್ಪರ ಅಪಘಾತಕ್ಕೀಡಾದ ಪರಿಣಾಮ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡ ಘಟನೆ ವಿಟ್ಲ ಠಾಣಾ ವ್ಯಾಪ್ತಿಯ ಮಾಣಿ ಜಂಕ್ಷನ್‌ನಲ್ಲಿ ಶನಿವಾರ ಮಧ್ಯಾಹ್ನ ನಡೆದಿದೆ.
 ಪಾಟ್ರುಕೋಡಿ ನಿವಾಸಿ ಜುಬೈರ್(೨೩) ಎಂಬವರು ಗಾಯಗೊಂಡ ಬೈಕ್ ಸವಾರ.
ಪುತ್ತೂರು ಕಡೆಯಿಂದ ಕೆಎಸ್‌ಆರ್‌ಟಿಸಿ ಬಸ್ ಮಂಗಳೂರು ಕಡೆ ತೆರಳುತ್ತಿದ್ದವು ಅದರ ಹಿಂಬಾದಿಯಿಂದ ಬೈಕ್‌ವೊಂದು ಚಲಿಸುತ್ತಿತ್ತು. ಬಸ್ಸಿನ ಮುಂಬಾಗದಲ್ಲಿ ಆಟೋ ರಿಕ್ಷಾ ಚಾಲಕ ಅದನ್ನು ಬದಿಗೆ ನಿಲ್ಲಿಸಲು ಮುಂದದಾಗ ಬಸ್ ಚಾಲಕ ಬ್ರೇಕ್ ಹಾಕಿದ್ದರಿಂದ ಬೈಕ್ ಬಸ್ಸಿನ ಹಿಂಬಾದಿಗೆ ಡಿಕ್ಕಿ ಹೊಡೆದು ಈ ಘಟನೆ ಸಂಭವಿಸಿದೆ. ಗಾಯಾಳುವನ್ನು ಬಂಟ್ವಾಳ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

Monday 2 April 2012

ಶಾಲಾ ವಾರ್ಷಿಕೋತ್ಸವದ

ಸಾಲೆತ್ತೂರು: ಜಿಲ್ಲೆಯಲ್ಲಿ ೨೫೦ಕ್ಕಿಂತ ಹೆಚ್ಚು ಆಂಗ್ಲ ಮಾಧ್ಯಮ ಶಾಲೆಗಳು ಇದ್ದು, ಇದರಿಂದ ಸರ್ಕಾರದ ಹೊರೆ ಕಡಿಮೆಯಾಗಿದೆ, ಪ್ರತಿಯೊಬ್ಬರು ವಿದ್ಯಾವಂತರಾದರೆ ಬಲಿಷ್ಠ ಸಮಾಜ ನಿರ್ಮಾಣವಾಗಲು ಸಾಧ್ಯ ಎಂದು ಬಂಟ್ವಾಳ ಶಾಸಕ ರಮಾನಾಥ ರೈ ಹೇಳಿದರು.
ಅವರು ಏಪ್ರಿಲ್೧ರ ಭಾನುವಾರ ಸಾಲೆತ್ತೂರು ಪಾಲ್ತಾಜೆ ಸಿರಿ ವಿದ್ಯಾಲಯ ಆಂಗ್ಲ ಮಾಧ್ಯಮ ಶಾಲೆ ಇದರ ನೂತನ ಕೊಠಡಿಗಳ ಉದ್ಘಾಟನೆ ಹಾಗೂ ಶಾಲಾ ವಾರ್ಷಿಕೋತ್ಸವದ ಸಭಾಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಹಿಂದಿನ ಕಾಲದಲ್ಲಿ ಗುರುಕುಳ ಶಿಕ್ಷಣವು ಅರಮನೆ ಅರಸರಿಗೆ ಮಾತ್ರ ಸೀಮಿತವಾಗಿದ್ದವು, ಆದರೆ ಇದೀಗ ಅಂತಹ ಪರಿಸ್ಥಿತಿ ಹೋಗಿ ಎಲ್ಲಾರೂ ಸಮಾನ ಶಿಕ್ಷಣವನ್ನು ಪಡೆಯುವಂತಾಗಿದ್ದು, ಶೇಕಡ ೧೦೦ರಲ್ಲಿ ೯೯ಜನ ಶಿಕ್ಷಣವನ್ನು ಪಡೆಯುತ್ತಿದ್ದಾರೆ  ಎಂದರು. ಸಿಇಟಿಯಂತಹ ಪರೀಕ್ಷೆಗಳನ್ನು ದುರ್ಬಲ ಹಾಗೂ ಬಡ ವಿದ್ಯಾರ್ಥಿಗಳಿಗೆ ಬರೆಯಲು ಸರ್ಕಾರ ಅವಕಾಶವನ್ನು ಮಾಡಿಕೊಟ್ಟಿದ್ದರಿಂದ ಯಾರು ಕೂಡ ಶಿಕ್ಷಣದಿಂದ ವಂಚಿತರಾಗುವುದಿಲ್ಲ ಎಂದು ಅವರು ತಿಳಿಸಿದರು.
   ಶಾಲೆಯ ನೂತನ ಕೊಠಡಿಗಳ ಉದ್ಘಾಟನೆಯನ್ನು ಉದ್ಯಮಿ ನಡಿಗುತ್ತು ತಿಮ್ಮಪ್ಪ ನಾಯ್ಕ್ ಅವರು ನೆರವೇರಿಸಿದರು. ಸಭಾಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೊಳ್ನಾಡು ಗ್ರಾ.ಪಂ ಅಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ ಕುಲಾಲು ವಹಿಸಿದ್ದರು. ಶಾಲಾ ಕೊಠಡಿ ನಿರ್ಮಾಣಕ್ಕೆ ಸಹಾಯ ಧನ ಒದಗಿಸಿದ ನಡಿಗುತ್ತು ತಿಮ್ಮಪ್ಪ ನಾಯ್ಕ್, ಕಟ್ಟಡ ಕಾಮಗಾರಿ ಮಾಡಿದ ರವಿರಾಜ್, ಶ್ರೀನಿವಾಸ ಅವರ ಪರವಾಗಿ ಚಂದ್ರಹಾಸ ರವರನ್ನು ಇದೇ ಸಂದರ್ಭ ಶಾಲಾ ಸಮಿತಿ ವತಿಯಿಂದ ಸನ್ಮಾನಿಸಲಾಯಿತು.
ಜಿಲ್ಲಾ ಪಂಚಾಯಿತಿ ಸದಸ್ಯರಾದ ಎಂ.ಎಸ್ ಮಹಮ್ಮದ್, ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಬಂಟ್ವಾಳ ಸ್ಥಾಯಿ ಸಮಿತಿ ಅಧ್ಯಕ್ಷ ಮಾಧವ ಮಾವೆ, ಸದಾನಂದ ಶೆಟ್ಟಿ, ಶೀನಪ್ಪ ಆಳ್ವ, ರಾಜೇಶ್ ರೈ ಪಾಲ್ತಾಜೆ, ದೇವಿದಾಸ್ ಶೆಟ್ಟಿ ಪಾಲ್ತಾಜೆ, ಧನಲಕ್ಷ್ಮೀ ಇದ್ದರು.


ಕ್ರಿಕೆಟ್ ಮೈದಾನದಲ್ಲಿ ಮಾರಮಾರಿ.


ಕನ್ಯಾನ:  ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾಟವನ್ನು ವೀಕ್ಷಿಸುತ್ತಿದ್ದ ಸಂದರ್ಭ ಪೂರ್ವ ದ್ವೇಷದ ಹಿನ್ನೆಲೆಯಲ್ಲಿ ತಂಡವೊಂದು ವ್ಯಕ್ತಿಯೊಬ್ಬನ ಮೇಲೆ ಮಾರಕಾಯುಧಗಳಿಂದ ಹಲ್ಲೆ ನಡೆಸಿದ ಘಟನೆ ಕನ್ಯಾನ ಸಮೀಪದ ಗೋಳಿಕಟ್ಟೆ ಎಂಬಲ್ಲಿ ಏರಿಲ್ ೧ರ ಶನಿವಾರ ರಾತ್ರಿ ನಡೆದಿದ್ದು, ಗಾಯಾಳುವಿನ ಸ್ಥಿತಿ ಚಿಂತಾಜನಕವಾಗಿದೆ.
 ಕೇರಳ ಮೂಲದ  ಉಂಬೈ ಎಂಬಾತನೇ ಗಂಭೀರವಾಗಿ ಹಲ್ಲೆಗೊಳಗಾಗಿದ್ದು, ಚಿಂತಾಜನಕ ಸ್ಥಿತಿಯಲ್ಲಿ ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ.  ಕೇರಳದ ಪೈವಳಿಕೆ ನಿವಾಸಿಗಳಾದ ರಿಯಾಝ್, ಹಜೀಜ್ ಹಾಗೂ ನೂರ್ ಷಾ ಎಂಬವರೇ ಹಲ್ಲೆ ನಡೆಸಿದ ಆರೋಪಿಗಳೆಂದು ಗಾಯಾಳು ಆರೋಪಿಸಿದ್ದಾನೆ.
    ಕನ್ಯಾನದಲ್ಲಿ ಶನಿವಾರ ರಾತ್ರಿ  ಮ್ಯಾಕ್ಸಿನ್ ಗೋಳಿಕಟ್ಟೆ ಎಂಬ ಎಂಬ ಸಂಘಟನೆ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾಟದವನ್ನು ಆಯೋಜಿಸಿತ್ತು. ಈ ಪಂದ್ಯಾಟವನ್ನು ವೀಕ್ಷಿಸಲೆಂದು ಉಂಬೈ ತನ್ನ ಸ್ನೇಹಿತ ಜತೆ ಬಂದಿದ್ದ ಎನ್ನಲಾಗಿದೆ. ಅದೇ ಸಂದರ್ಭದಲ್ಲಿ ಆರೋಪಿಗಳಾದ ಪೈವಳಿಕೆ ನಿವಾಸಿಗಳಾದ ರಿಯಾಝ್, ಹಜೀಜ್ ಹಾಗೂ ನೂರ್ ಷಾ ಎಂಬವರು ಕೂಡ ಬಂದಿದ್ದರು. ಈ ಇಬ್ಬರ ತಂಡದ ನಡುವೆ ಈ ಹಿಂದೆಯೂ ಜಗಳವಾಗಿದ್ದವು. ಈ ಬಗ್ಗೆ ಕೇರಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿತ್ತು ಎನ್ನಲಾಗಿದೆ. ಇವರ ನಡುವೆ ಪರಸ್ಪರ ದ್ವೇಷದ ಬೀಜ ಆಗಾಗ ಆರಂಭವಾಗುತ್ತಿತ್ತು. ಇದೇ ಕಾರಣಕ್ಕೆ ಮೂವರ ತಂಡ ಉಂಬೈನೊಂದಿಗೆ ಜಗಳ ತೆಗೆದು ಆತನಿಗೆ ಯದ್ವಾತದ್ವಾ ಹಲ್ಲೆ ನಡೆಸಿದೆ ಎಂದು ಹೇಳಲಾಗಿದೆ. ಘಟನೆಯಲ್ಲಿ ತೀವ್ರವಾಗಿ ತಲೆಗೆ ಗಾಯಗೊಂಡಿದ್ದ ಉಂಬೈಯನ್ನು ಸ್ಥಳೀಯರು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಘಟನೆ ಬಗ್ಗೆ ವಿಟ್ಲ ಪೊಲೀಸ್ ಠಾಣೆಗೆ ದೂರು ನೀಡಿದ್ದು,ರಿಯಾಝ್, ಹಜೀಜ್ ಹಾಗೂ ನೂರ್ ಷಾ ಎಂಬ ಮೂವರ ಮೇಲೆ ಪ್ರಕರಣ ದಾಖಲಾಗಿದೆ.
 .

Sunday 1 April 2012

ವಾರ್ತಾ ಮಾಧ್ಯಮದ ಮಹತ್ವ



       ಮಾಧ್ಯಮ ರಹಿತ ಸಮಾಜ ಎಂಬುವುದು ಪ್ರಸ್ತುತ ಕಾಲಘಟ್ಟದಲ್ಲಿ ಊಹಿಸಲಾಗದ ಒಂದು ವಿಷಯವಾಗಿದೆ. ಯಾವುದೇ ದೇಶದಲ್ಲಿ ಮಾಧ್ಯಮಕ್ಕೆ ನಿರ್ಭಂಧಗಳನ್ನು ಆ ದೇಶದ ಪ್ರಾಧಿಕಾರವು ವಿಧಿಸಿದೆ ಎಂದರೆ ಅದು ಒಂದು ಸರ್ವಾಧಿಕಾರೀ ಆಡಳಿತವಿರುವ ದೇಶವೆಂದು ಸಾಮಾನ್ಯ ಜ್ಞಾನವಿರುವ ಯಾವುದೇ ವ್ಯಕ್ತಿಯೂ ನಿಸ್ಸಂದೇಹವಾಗಿ ಹೇಳಬಲ್ಲನು. ವಾಸ್ತವದಲ್ಲಿ ವಿಶ್ವದ ಯಾವುದೇ ದೇಶದಲ್ಲಿ ಮಾಧ್ಯಮ ಪ್ರಜಾಪ್ರಭುತ್ವದ ಆಧಾರ ಸ್ತಂಭಗಳಲ್ಲೊಂದು ಎಂದರೂ ತಪ್ಪಾಗಲಾರದು. ದೇಶವೊಂದರ ಆಡಳಿತ ವೈಖರಿಯನ್ನು ಪಕ್ಷತೆಯನ್ನೂ ಜನತೆಯ ಮುಂದಿಡುವುದು ಈಗ ಮಾಧ್ಯಮವಲ್ಲದೇ ಬೇರೆ ಯಾವುದೇ ಅಲ್ಲ ಅಷ್ಟರ ಮಟ್ಟಿಗೆ ಇಂದು ಮಾಧ್ಯಮ ಪ್ರಾಮುಖ್ಯತೆಯನ್ನು ಪಡೆದಿದೆ. 
ಪ್ರಪಂಚದಲ್ಲಿ ಎಲ್ಲಿ ಯಾವುದೇ ಘಟನೆ ನಡೆದಾಗ ಜನರಿಗೆ ವಷ್ಟುನಿಷ್ಟಾ ಸುದ್ದಿಯನ್ನು ಮಟ್ಟಿಸುವಂತಹ ಕೆಲಸವನ್ನು ಅದು ಮಾಡುತ್ತಿದೆ. ಓರ್ವ ರಾಜಕಾರಣಿಯ ಯಶಸ್ವಿಗೆ ಅದು ಸಹಾಯಕವಾಗಿದ್ದು, ಹಾಗೂ ಆತ ಕೆಟ್ಟ ದಾರಿ ಹಿಡಿದಾಗ ಆತನ ವಿನಾಶಕ್ಕೂ ಅದು ಕಾರಣವಾಗಿದೆ. ಇದಕ್ಕೊಂದು ಉದಾಹರಣೆಯೇ ಇತ್ತೀಚಿಗೆ ಬೆಂಗಳೂರಿನ ಸದನದೊಳಗೆ ಬ್ಲೂ ಸಿನಿಮಾ ನೋಡುತ್ತಿದ್ದ ಮೂವರು ಸಚಿವರನ್ನು ತನ್ನ ಕ್ಯಾಮರ ಮೂಲಕ ಖಾಸಗಿ ಚಾನೇಲ್‌ವೊಂದು ಅದನ್ನು ಸೆರೆಹಿಡಿದು ಅದನ್ನು ಜನರಿಗೆ ತೋರಿಸಿದ್ದರಿಂದ ಆ ಮೂವರು ರಾಜೀನಾಮೆ ನೀಡುವಂತೆ ಮಾಡಿದೆ. ಅದಲ್ಲದೇ ಈಜಿಪ್ಟ್‌ನ್ನು ಮೂವತ್ತು ವರ್ಷಗಳ ಕಾಲ ಅಧಿಕಾರ ನಡೆಸಿದ ಸರ್ವಾಧಿಕಾರಿ ಹುಸ್ನಿ ಮುಬಾರಕ್‌ನ ವಿರುದ್ಧ ನಡೆದ ದಂಗೆಯೂ ಆರಂಭವಾದದ್ದು ಅಂತರ್ಜಾಲ ಮಾಧ್ಯಮದಿಂದಾಗಿದೆ. ಮಧ್ಯ ಪ್ರಾಂಚ್ಯದಲ್ಲಿ ನಡೆಯುತ್ತಲೇ ಇರುವ ಸರಕಾರಿ ವಿರೋಧಿ ದಂಗೆಗಳಲ್ಲಿ ಮಾಧ್ಯಮದ ಸಜೀವ ಸಾನಿಧ್ಯವೂ ಇದ್ದೇ ಇದೆ.
 ಕಳೆದ ಅದೇಷ್ಟು ವರ್ಷಗಳಿಂದ ಪ್ರಮಾಣಿಕತೆಯಿಂದ ಕೆಲಸ ಮಾಡುತ್ತಿದ್ದಂತಹ ಪತ್ರಿಕೆ ಹಾಗೂ ದೃಶ್ಯ ಮಾಧ್ಯಮಗಳನ್ನು ಕೆಲ ಸಮಾಜದ ಘಾತುಕ ಶಕ್ತಿಗಳು ಅದರ ವಿರುದ್ಧ ತಮ್ಮ ಆಕ್ರಮನ ಮಾಡುತ್ತಿದ್ದಾರೆ. ಪತ್ರಿಕೆಯಲ್ಲಿ ಯಾವುದೇ ಸುದ್ದಿ ಪ್ರಕಟವಾದಗ ಅದರ ವಿರೋಧಿ ಶಕ್ತಿಗಳು ಪತ್ರಿಕೆ ಕಛೇರಿ ಮೇಲೆ ದಾಳಿ ಹಾಗೂ ಪತ್ರಿಕೆಗಳನ್ನು ಸುಟ್ಟು ಹಾಕುತ್ತಿರುವುದು ಇದರಿಂದ ಪತ್ರಿಕೆಯ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಭಂಗ ತರುತ್ತಿದ್ದಾರೆ ಎಂದು ಹೇಳಬಹುದಾಗಿದೆ. ಒಂದು ಪತ್ರಿಕೆ ಹಾಗೂ ದೃಶ್ಯ ಮಾಧ್ಯಮ ತಪ್ಪು ಮಾಡಿದಾಗ ಅದನ್ನು ವಿರುದ್ಧ ಪ್ರತಿಭಟಿಸಲು ಜನತೆಗೆ ಅದೇಷ್ಟು ದಾರಿಗಳು ಇರುವಾಗ ಘಾತುಕ ಶಕ್ತಿಗಳು ಈ ರೀತಿಯಾಗಿ ಮಾಡುವುದು ಸರಿಯೇ? ಎಂಬ ಪ್ರಶ್ನೆ ಪ್ರಜ್ಞಾವಂತ ನಾಗರಿಕರಿಂದ ಕೇಳಿ ಬರತ್ತಿದೆ. ಓರ್ವ ಪತ್ರಕರ್ತನಿಗೆ ಸಮಾಜದಲ್ಲಿ ನಡೆಯುವಂತಹ ಅನ್ಯಾಯ ಅಕ್ರಮಗಳ ವಿರುದ್ಧ ಅಭಿವ್ಯಕ್ತಿ ಸ್ವಾತಂತ್ರ್ಯದ ಮೂಲಕ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಲು ಅವಕಾಶವಿದೆ. ಆದರೆ ಇಂದಿನ ದಿನಗಳಲ್ಲಿ ಪತ್ರಕರ್ತನ ಮೇಲೆ ಹಲ್ಲೆ, ಕೊಲೆ ಹಾಗೂ ಪತ್ರಿಕಾ ಕಛೇರಿ ಮೇಲೆ ದಾಳಿ ನಡೆಯುತ್ತಲೇ ಇದೆ. ಮುಂಬೈಯಲ್ಲಿ ಖ್ಯಾತ ಪತ್ರಕರ್ತರೋರ್ವರು ಅಂಡರ್ ವರ್ಲ್ದ್ ಡಾನ್‌ಗಳ ವಿರುದ್ಧ ಪತ್ರಿಕೆಯಲ್ಲಿ ವರದಿ ಮಾಡಿಕ್ಕೆ ಅವರನ್ನು ಆ ಡಾನ್‌ಗಳು ನಡು ರಸ್ತೆಯಲ್ಲಿಯೇ ಕೊಚ್ಚಿ ಹಾಕಿದ್ದರು. ಇದು ಮಾನವ ಹಕ್ಕಿನ ಉಲ್ಲಂಘನೆಯಾಗಿದೆ. ಈ ಕೃತ್ಯದ ತನಿಖೆ ಮುಗಿದ್ದು, ಆರೋಪಿಗಳನ್ನು ಪೊಲೀಸರ ಬಂಧಿಸಿದ್ದಾಗ ಆರೋಪಿಗಳ ಪೈಕಿ ಜಿಗ್ನಾ ಎಂಬ ಪತ್ರಕರ್ತೆ ಇದರಲ್ಲಿ ಭಾಗಿಯಾಗಿದ್ದಾಳೆ ಎಂದು ಪೊಲೀಸ್ ತನಿಖೆಯಿಂದ ಬಯಲಾದಾಗ ಪತ್ರಕರ್ತರಲ್ಲಿ ಕೂಡ ಕೆಲವರು ಕೆಟ್ಟವರು ಇದ್ದರೆ ಎಂಬುವುದು ಸಾಭಿತಾಗಿದೆ.
    ಒಟ್ಟಾಗಿ ಹೇಳುವುದಾದರೆ ಮಾಧ್ಯಮವೆಂಬುವುದು ಪ್ರಜಾಪ್ರಭುತ್ವ ಅವಿಭಾಜ್ಯ ಅಂಗವಾಗಿದ್ದು, ಪ್ರಪಂಚದ ಎಲ್ಲಾ ಆಗೂಹೋಗುಗಳನ್ನು ಅದು ವಿಮರ್ಶೆ ಮಾಡುತ್ತ ಪ್ರಮಾಣಿಕವಾಗಿ ಕೆಲಸ ಮಾಡುತ್ತಿದೆ. ಯಾವುದೇ ಓರ್ವ ಪತ್ರಕರ್ತ ತಪ್ಪು ಮಾಡಿದಾಗ ಇಡೀ ಮಾಧ್ಯಮ ವರ್ಗವನ್ನು ದೂರುವುದು ಸರಿಯಲ್ಲ. ವಾರ್ತಾ ಮಾಧ್ಯಮ ಪ್ರಮಾಣಿಕವಾಗಿ ಕೆಲಸ ಮಾಡುವಾಗ ಅದಕ್ಕೆ ಜನತೆ ಹಾಗೂ ಸರಕಾರ ಸಂಪೂರ್ಣವಾಗಿ ಬೆಂಬಲ ನೀಡಿದ್ದಾರೆ ಆದರ್ಶ ಸಮಾಜ ನಿರ್ಮಾಣ ವಾಗುವುದರಲ್ಲಿ ಯಾವುದೇ ಸಂದೇಹವಿಲ್ಲ.

ಮಹಮ್ಮದ್ ಅಲಿ
ಪತ್ರಕರ್ತ ವಿಟ್ಲ

Friday 30 March 2012

ದುರ್ಗಾಪೂಜೆ ಮಂಡಲ:


ದುರ್ಗಾಪೂಜೆ ಮಂಡಲ:



ದುರ್ಗಾಪೂಜೆ ಮಂಡಲ:
ವಿಟ್ಲದ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಬುಧವಾರ ನಡೆದ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಗುಡಿ ಹಾಗೂ ಶ್ರೀ ನಾಗಕಟ್ಟೆಯ ಶಿಲಾನ್ಯಾಸ ಕಾರ್ಯಕ್ರಮದ ಅಂಗವಾಗಿ ದೇವಸ್ಥಾನದಲ್ಲಿ ದುರ್ಗಾಪೂಜೆಯ ಮಂಡಲ ರಚಿಸಲಾಯಿತು. ಮಾಣಿಲ ಶ್ರೀಧಾಮ ಕ್ಷೇತ್ರದ ಮೋಹನ್ ದಾಸ ಸ್ವಾಮೀಜಿ, ನಾರಾಯಣ್(ಭಟ್ ಸ್ವಾಮಿ ಇದ್ದರು.




--
Mohammad Ali
Vittla
Reporter, Vittla
9980205258

ವಿಟ್ಲ ಕಾಶಿಮಠ ರಿಕ್ಷಾ ರಸ್ತೆಗೆ ಪಲ್ಟಿ

ಬಂಟ್ವಾಳ: ಜೀಪೊಂದನ್ನು ಓವರ್‌ಟೇಕ್ ಮಾಡುವ ಭರದಲ್ಲಿ ರಿಕ್ಷಾವೊಂದು ರಸ್ತೆಗೆ ಪಲ್ಟಿ ಹೊಡೆದ ಪರಿಣಾಮ ಇಬ್ಬರಿಗೆ ಗಂಭೀರ ರೀತಿಯಲ್ಲಿ ಗಾಯಗೊಂಡು ಹಾಗೂ ಯುವತಿಯೊಬ್ಬಳು ಸಣ್ಣಪುಟ್ಟ ಗಾಯಗಳಿಂದ ಅಪಾಯದಿಂದ ಪಾರಾದ ಘಟನೆ ವಿಟ್ಲ ಕಾಶಿಮಠ ಸಮೀಪ ನಿನ್ನೆ ನಡೆದಿದೆ.
 ಕರೋಪ್ಪಾಡಿ ಗ್ರಾಮದ ಮಿತ್ತನಡ್ಕ ದರ್ಖಾಸು ನಿವಾಸಿ ಅಬ್ದುಲ್ಲ ಅವರ ಪುತ್ರ ಉಮ್ಮರ್(೪೫), ಹಾಗೂ ಅವರ ಪತ್ನಿ ನೆಬಿಸಾ ಗಂಭೀರವಾಗಿ ಗಾಯಗೊಂಡಿದ್ದು, ಅವರ ಪುತ್ರಿ ಅಪ್ಸಾ(೧೫) ಅಪಾಯದಿಂದ ಪಾರಾಗಿದ್ದು, ವಿಟ್ಲದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
 ಈ ಮೂವರು ಕನ್ಯಾನದ ವಿಜಯಡ್ಕದಿಂದ ವಿಟ್ಲ ಮಾರ್ಗವಾಗಿ ಪುತ್ತೂರು ಆಸ್ಪತ್ರೆಗೆ ಇಬ್ರಾಹಿಂ ಎಂಬವರ ಆಟೋ ರಿಕ್ಷಾದಲ್ಲಿ ತೆರಳುತ್ತಿದ್ದ ಸಂದರ್ಭ ಚಾಲಕ ಕಾಶಿಮಠ ಅಪಾಯಕಾರಿ ತಿರುವಿನಲ್ಲಿ ಜೀಪೊಂದನ್ನು ಓವರ್‌ಟೇಕ್ ಮಾಡುವ ಭರದಲ್ಲಿ ಆಟೋ ರಿಕ್ಷಾ ರಸ್ತೆಗೆ ಪಲ್ಟಿ ಹೊಡೆದು ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದಿತ್ತು. ಸ್ಥಳೀಯರು ಅವರನ್ನು ವಿಟ್ಲದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಅಪಘಾತ ತೀವ್ರತೆ ರಿಕ್ಷಾ ಸಂಪೂರ್ಣವಾಗಿ ಅಪ್ಪಾಚಿಯಾಗಿದೆ. ವಿಟ್ಲ ಠಾಣಾಧಿಕಾರಿ ರಕ್ಷಿತ್ ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ.

ಹೊನಲು ಬೆಳಕಿನ ಮುಕ್ತ ಕಬಡ್ಡಿ ಪಂದ್ಯಾಟ


ಶೈನಿಂಗ್ ಗೈಸ್ ತಂಡಕ್ಕೆ ಪ್ರಶಸ್ತಿ : ಮಂಗಳಪದವು ನ್ಯಾಶನಲ್ ಯುವಕ ಮಂಡಲ ಇದರ ವತಿಯಿಂದ ಹೊನಲು ಬೆಳಕಿನ ಮುಕ್ತ ಕಬಡ್ಡಿ ಪಂದ್ಯಾಟ ಹಾಗೂ ಸನ್ಮಾನ ಸಮಾರಂಭವು ಇತ್ತೀಚೆಗೆ ಮಂಗಳಪದವು ಕ್ರೀಡಾಂಗಣದಲ್ಲಿ ನಡೆಯಿತು.  ೨೪ ತಂಡಗಳು ಭಾಗವಹಿಸಿದ್ದ ಈ ಕಬಡ್ಡಿ ಪಂದ್ಯಾಟದಲ್ಲಿ ಶೈನಿಂಗ್ ಗೈಸ್ ಮಂಗಳಪದವು ತಂಡ ಪ್ರಥಮ, ಮಾಣಿ ಯುವಕ ಮಂಡಲ ದ್ವಿತೀಯ, ಜೈ ಯುವ ಶಕ್ತಿ ಆಲದಪದವು ತಂಡ ತೃತೀಯ ಹಾಗೂ ನೇಶನಲ್ ಯೂತ್‌ಕ್ಲಬ್ ಮಂಗಳಪದವು ತಂಡ ಚತುರ್ಥ ಸ್ಥಾನವನ್ನು ಪಡೆದುಕೊಂಡಿತು.
    ಶಮೀರ್ ಕಲ್ಲಡ್ಕ, ಹಾರಿಸ್ ಕಲ್ಪನೆ ಹಾಗೂ ಝಿಯಾದ್ ಕ್ರಮವಾಗಿ ಸವ್ಯಸಾಚಿ, ಉತ್ತಮ ದಾಳಿಗಾರ ಹಾಗೂ ಉತ್ತಮ ಹಿಡಿತಗಾರ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡರು.

ಎತ್ತ ಸಾಗುತ್ತಿದೆ ಮಾಧ್ಯಮ ರಂಗ..?!


ಕರ್ನಾಟಕದ ಮಾಧ್ಯಮರಂಗ ಯಾವತ್ತೂ ನಡುರೋಡಲ್ಲಿ ಲಂಗೋಟಿ ಹಾಕಿಕೊಂಡು ಕುಣಿಯುವಷ್ಟು ಮೂರೂಬಿಟ್ಟವಂತೆ ನಡೆದುಕೊಂಡಿರಲಿಲ್ಲ. ಚಾನೆಲ್ ಸರ್ಫ್ ಮಾಡುವಾಗ ಈಗ ತಾನೇ ಸುವರ್ಣನ್ಯೂಸಲ್ಲಿ ಒಂದು ಕ್ರೈಂಪ್ರೋಗ್ರಾಂ ಬರುತ್ತಿತ್ತು. ಅದರಲ್ಲಿ ಕೋತಿ ಆಡಿಸುವರಂತೆ ಕೆಕರುಮಕರಾಗಿ ವೇಷಧರಿಸಿದ್ದ ವ್ಯಕ್ತಿಯೊಬ್ಬ ಕರೆಂಟು ಹೊಡೆಸಿಕೊಂಡವನಂತೆ ಟಂಗುಟಂಗನೆ ಎಗರಾಡಿಕೊಂಡು ಆಂಕರಿಂಗ್ ಮಾಡುತ್ತಿದ್ದ. ಶಿವಮೊಗ್ಗದ ಕಾಲೇಜೊಂದರಲ್ಲಿ ಆಶ್ಲೀಲ ಎಮ್ಮೆಮ್ಮೆಸ್ ಬಹಿರಂಗಗೊಂಡ ವಿದ್ಯಾರ್ಥಿಯೊಬ್ಬಳ ಬಗ್ಗೆ ಆ ಪ್ರೋಗ್ರಾಂ. ಆ ಯುವತಿಯ ಇಡೀ ಎಂಎಂಎಸ್ ಬ್ಲೂಫ್ಲಿಲ್ಮ್ ಅನ್ನೇ ಚೂರೇಚೂರು ಮಬ್ಬಾಗಿಸಿ ಪೂರಾ ಪ್ರಸಾರವಾಯಿತು. ಆಕೆಯ ಮನೆಯ ವಿಳಾಸವನ್ನೂ ಪ್ರಸಾರ ಮಾಡಲಾಯಿತು. ಆ ಯುವತಿ ಮಾಡಿದ ತಪ್ಪಿಗೆ ಆಕೆಯ ಫೋಟೋವನ್ನೂ ಪ್ರಸಾರಿಸಿ ಆಕೆಯ ತಂದೆತಾಯಿಯ ಮಾನವನ್ನೂ ಹರಾಜು ಹಾಕಲಾಯಿತು. ಈ ಪ್ರೋಗ್ರಾಂಗೆ ಸ್ಕ್ರಿಪ್ಟ್ ಬರೆದದ್ದು ಓರ್ವ ಮಹಿಳೆ, ಟಿಆರ್ ಪಿ ಬರುತ್ತೆ ಅಂದ್ರೆ ಬ್ಲೂಫಿಲಮ್ಮನ್ನೂ ಪ್ರಸಾರ ಮಾಡುವ ನೀಚತನಕ್ಕೆ ಇಳಿದ ಸುವರ್ಣನ್ಯೂಸ್ ಸಂಪಾದಕನ ಜಾಗದಲ್ಲಿ ಕುಳಿತ ಮಡೆಯನ ತಲೆಯಲ್ಲಿ ಏನು ತುಂಬಿಕೊಂಡಿದೆ? ಪತ್ರಿಕಾಧರ್ಮದ ಬಗ್ಗೆ ಪುಂಖಾನುಪುಂಖವಾಗಿ ಪುಂಗಿ ಊದುವ ಇತ ಇವತ್ತು ಬ್ಲೂಫಿಲ್ಮ್ ಪ್ರಸಾರ ಮಾಡಿದ್ದನ್ನ ಸಹಿಸಿಕೊಳ್ಳುವುದು ಹೇಗೆ? ಮಿನಿಮಂ ಲೆವೆಲ್ ನಾಚಿಕೆ ಮಾನ ಮರ್ಯಾದೆ ಅನ್ನೋದು ಏನಾದ್ರೂ ಇದೆಯೇ ಈ ಮುಠ್ಠಾಳರಿಗೆ?
ಕವಡೆ ಶಾಸ್ತ್ರದ ಚಿನ್ನಪ್ಪ

Tuesday 27 March 2012

ವಿಟ್ಲ ಕನ್ಯಾನ ಬಾಳೆಕೋಡಿ ಸ್ವಾಮೀಜಿಗೆ ಜೀವ ಬೆದರಿಕೆ:



ವಿಟ್ಲ: ಕನ್ಯಾನ ಗ್ರಾಮದ ಶ್ರೀಕಾಶೀಕಾಳಭೈರವೇಶ್ವರ ಕ್ಷೇತ್ರದ ಶಶೀಕಾಂತ ಮಣಿ ಸ್ವಾಮೀಜಿಯವರಿಗೆ  ಬೇನಾಮಿ ವ್ಯಕ್ತಿಯೊಬ್ಬ ಕಳೆದ ಕೆಲ ದಿನಗಳಿಂದ ಹಣದ ಆಮೀಷವೊಡ್ಡಿ ಜೀವ ಬೆದರಿಕೆ ಹಾಗೂ ಮಾನಹಾನಿ ಬೆದರಿಕೆ ಪೋನ್ ಕರೆ ಬರುತ್ತಿರುವ ಬಗ್ಗೆ ಪೊಲೀಸ್ ಠಾಣೆಯಲ್ಲಿ ಮಾ.೨೩ರಂದು ದೂರು ನೀಡಲಾಗಿದ್ದು, ಪೊಲೀಸ್ ಇಲಾಖೆ ಆರೋಪಿಗಳನ್ನು ಪತ್ತೆ ಮಾಡಲು ಮೀನಾಮೇಷ ಎಣಿಸುತ್ತಿದೆ ಎಂದು ದಲಿತ ಸಂಘಟನೆಗಳು ಪತ್ರಿಕಾಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದೆ.
    ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ನಾಗರಿಕ ಹಕ್ಕು ಜಾಗೃತ ಸಮಿತಿ, ದ.ಕ ಜಿಲ್ಲಾ ದಲಿತ್ ಸೇವಾ ಸಮಿತಿ ಹಾಗೂ ದಲಿತ ಸಂಘಟನೆಗಳ ಮುಖಂಡರು ಸೋಮವಾರ ಕನ್ಯಾನ ಶ್ರೀಕ್ಷೇತ್ರದ ವಠಾರದಲ್ಲಿ ಶ್ರೀಶಶೀಕಾಂತ ಮಣಿ ಸ್ವಾಮೀಜಿ ನೇತೃತ್ವದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಅವರು ಅಸಮಾಧಾನ ವ್ಯಕ್ತ ಪಡಿಸಿದರು. ಜಿಲ್ಲಾ ದಲಿತ್ ಸೇವಾ ಸಮಿತಿ ಅಧ್ಯಕ್ಷ ಸೇಸಪ್ಪ ಬಿ.ಕೆ. ಬೆದ್ರಕಾಡು ಮಾತನಾಡಿ ೨ ಲಕ್ಷರ ರೂ. ಕೊಡಬೇಕೆಂದು ಬೇಡಿಕೆಯೊಂದಿಗೆ ಬೆದರಿಸುತ್ತಿರುವ ಆತನ ಬಗ್ಗೆ  ನೀಡಿರುವ ದೂರನ್ನು ಹಗುರವಾಗಿ ಪರಿಗಣಿಸಿದ್ದಂತಿದೆ. ದಲಿತ ಸಮುದಾಯದ ಸ್ವಾಮೀಜಿಯವರಿಗೆ  ಮೂರು ದಿನಗಳೊಳಗೆ ಸೂಕ್ತ ಪೊಲೀಸ್ ಭದ್ರತೆ ಒದಗಿಸದಿದ್ದಲ್ಲಿ ವಿಟ್ಲ ಆರಕ್ಷಕ ಠಾಣೆಯೆದುರು ಶುಕ್ರವಾರ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಎಚ್ಚರಿಸಿದರು.
. ಮಂಗಳವಾರ ವಿಟ್ಲ ಠಾಣೆಯಲ್ಲಿ ಘಟನೆ ಬಗ್ಗೆ ಪ್ರಕರಣ ದಾಖಲಾಗಿದ್ದು, ಠಾಣಾಧಿಕಾರಿ ರಕ್ಷಿತ್ ಎ.ಕೆ ಸ್ವಾಮೀಜಿ ಬಳಿ ತೆರಳಿ ಮಾತುಕತೆ ನಡೆಸಿದ್ದು, ಘಟನೆ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದಾರೆ.

ನೆನೆಗುದಿಗೆ ಬಿದ್ದ ವಿಟ್ಲ ರಸ್ತೆ ವಿಸ್ತರಣೆ ಯೋಜನೆ

.
ವಿಟ್ಲ: ಇಲ್ಲಿಯ ಜನತೆಯ ಬಹುವರ್ಷದ ಬೇಡಿಕೆಯಾಗಿದ್ದ ವಿಟ್ಲ ಪೇಟೆ ರಸ್ತೆ ವಿಸ್ತರಣೆ ಯೋಜನೆಗೆ ರಾಜ್ಯ ಸರ್ಕಾರದಿಂದ ೨ ಕೋಟಿ ರೂಪಾಯಿ ಅನುದಾನವಾಗಿದ್ದರೂ ಕೂಡ ಇಲಾಖೆಯ ಅಧಿಕಾರಿಗಳು ಟೆಂಡರ್ ಕರೆಯಲು ಮೀನಾಮೇಷ ಎಣಿಸುತ್ತಿದ್ದು, ಇದರಿಂದ ಇಲ್ಲಿಯ ಜನತೆ ರೋಸಿ ಹೋಗಿದ್ದಾರೆ.
 ರಸ್ತೆಯ ಮಧ್ಯದಿಂದ ೧೬.೫, ೧೬.೫ರಂತೆ ಒಟ್ಟು ೩೩ ಅಡಿ ಉದ್ದಕ್ಕೆ ರಸ್ತೆಯನ್ನು ಅಗಲೀಕರಣಗೊಳಿಸಲು ಇಲಾಖೆ ಈ ಹಿಂದೆಯೇ ಯೋಜನೆ ರೂಪಿಸಿದ್ದು, ಅದಕ್ಕಾಗಿ ವಿಟ್ಲದ ಕಲ್ಲಕಟ್ಟ ಸೇತುವೆಯಿಂದ ಶಾಲಾ ರಸ್ತೆಯ ಅತಿಥಿ ಗೃಹದ ವರೆಗೆ ರಸ್ತೆ ವಿಸ್ತರಣೆ ಮಾಡಲು ಈಗಾಗಲೇ ಸರ್ಕಾರದಿಂದ ೨ಕೋಟಿ ರೂಪಾಯಿ ಅನುದಾನವಾಗಿದೆ ಎಂದು ಸರ್ಕಾರದ ಸಂಬಂಧಪಟ್ಟ ಇಲಾಖೆ ಅಧಿಕೃತವಾಗಿ ಹೇಳುತ್ತಿದೆ. ಆದರೆ ಇದು ಹೇಳಿ ವರ್ಷ ಒಂದು ಆದರೂ ಕಾಮಗಾರಿ ಇನ್ನೂ ಪ್ರಾರಂಭವಾಗಿಲ್ಲ.

ಪ್ರತಿದಿನ ಟ್ರಾಫಿಕ್ ಕಿರಿಕಿರಿ:
      ವಿಟ್ಲ ಪೇಟೆಯಲ್ಲಿ ಪ್ರತಿದಿನ ಟ್ರಾಫಿಕ್ ಸಮಸ್ಯೆ ಉಂಟಾಗುತ್ತಿದ್ದು, ಇದರಿಂದ ಇಲ್ಲಿಯ ಜನತೆ ರೋಸಿ ಹೋಗಿದ್ದಾರೆ. ಮಂಗಳವಾರ ವಾರದ ಸಂತೆವಾಗಿದ್ದರಿಂದ ಇಲ್ಲಿ ಜನರಿಗೆ ಓಡಾಡಲು ಪರದಾಡುವಂತಹ ಪರಿಸ್ಥಿತಿ ನಿರ್ಮಾವಾಗುತ್ತಿದ್ದು, ಪೇಟೆಯ ಖಾಸಗಿ ಬಸ್ ನಿಲ್ದಾಣದೊಳಗೆ ಇಕ್ಕಾಟ್ಟಿನಿಂದ ಕೂಡಿದ ಪರಿಣಾಮ ಅವಘಾಡಗಳು ಸಂಭವಿಸುತ್ತಲೇ ಇರುತ್ತದೆ. ಸಂಜೆ ವೇಳೆ ಶಾಲಾ ಕಾಲೇಜು ಬಿಡುವ ಹೊತ್ತಿನಲ್ಲಿ ವಿಟ್ಲ ಪೇಟೆಯ ಟ್ರಾಫಿಕ್‌ಗೆ ವಿದ್ಯಾರ್ಥಿಗಳು ಸಿಕ್ಕಿಹಾಕಿ ಹೊದ್ದಡುತ್ತಿದ್ದಾರೆ. ಬೆಳಿಗ್ಗೆ ಹಾಗೂ ಸಂಜೆ ಹೊತ್ತುಗಳಲ್ಲಿ ಇಲ್ಲಿಯ ವಾಹನ ಚಾಲಕರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಪ್ರತಿದಿನಲೂ ನರಕಯಾತನೇ ಅನುಭವಿಸುತ್ತಿದ್ದಾರೆ. ಒಂದೇ ಸಮಯಕ್ಕೆ ಎದುರು ಬದುರಾಗಿ ವಾಹನಗಳು ರಸ್ತೆಯಲ್ಲಿ ಸಂಚಾರಿಸಲು ಸಾಧ್ಯವಾಗುತ್ತಿಲ್ಲ. ಒಂದು ವೇಳೆ ಸಂಚಾರಿಸಿದರೆ ಪರಸ್ಪರ ವಾಹನಗಳು ಸವಾರಿ ದಿನಪೂರ್ತಿ ಟ್ರಾಫಿಕ್ ಜಾಮ್ ಉಂಟಾಗುತ್ತದೆ.

ವಿಸ್ತರಣೆಗೆ ವಿರೋಧ:  ವಿಟ್ಲ ಕೆಲ ವರ್ತಕರು ಸ್ವತ: ತಮ್ಮ ಅಂಗಡಿಗಳ ಅರ್ಧ ಭಾಗವನ್ನು ರಸ್ತೆ ವಿಸ್ತರಣೆಗೆ ಬಿಟ್ಟುಕೊಟ್ಟಿದ್ದು, ನಾಲ್ಕು ಮಾರ್ಗ ಜಕ್ಷನ್‌ನಲ್ಲಿ ಬೆರಳೆಣಿಕೆಯಷ್ಟು ಅಂಗಡಿ ಮಾಲೀಕರು ತಮ್ಮ ಅಂಗಡಿಯನ್ನು ಬಿಟ್ಟು ಕೊಡಲು ಹಿಂದೇಟು ಹಾಕುತ್ತಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿಗಳು ಸತತ ಮೂರು ಭಾರೀ ವಿಟ್ಲಕ್ಕೆ ಭೇಟಿ ನೀಡಿ ಅಂಗಡಿ ಮಾಲೀಕರೊಂದಿಗೆ ಮಾತುಕತೆ ನಡೆಸಿದ್ದು, ಈ ಸಮಸ್ಯೆ ಅನ್ನು ಸೌಹರ್ದವಾಗಿ ಬಗೆಹರಿಸಲು ಕರೆ ನೀಡಿದ್ದರು.  ಅದು ಕಳೆದು ವರ್ಷ ಒಂದು ಕಳೆದರೂ ರಸ್ತೆ ವಿಸ್ತರಣೆ ಮಾತ್ರ ವಿಟ್ಲದ ಜನತೆಗೆ ಕನಸ್ಸಾಗಿಯೇ ಉಳಿದಿದೆ.

ಅಧಿಕಾರಿಗಳು ಏನು ಹೇಳುತ್ತಾರೆ?:   (ಇದನ್ನು ಬಾಕ್ಸ್ ಮಾಡಬಹುದು)
  ಇತ್ತೀಚೆಗೆ ವಿಟ್ಲ-ಸಾರಡ್ಕ ರಸ್ತೆ ಕಾಮಗಾರಿ ನಡೆಯುತ್ತಿದ್ದ ಸಂದರ್ಭ ಭೇಟಿ ನೀಡಿದ್ದ ಎಕ್ಸಿಕ್ಯುಟಿವ್ ಎಂಜಿನಿಯರ್ ಅವರು ವಿಟ್ಲ ಅಂಗಡಿ ಮಾಲೀಕರ ಸಭೆ ಕರೆದು ಇನ್ನೂ ಕೂಡ ರಸ್ತೆ ವಿಸ್ತರಣೆಗೆ ತಮ್ಮ ಅಂಗಡಿಗಳನ್ನು ಬಿಟ್ಟು ಕೊಡದವರೊಂದಿಗೆ ಮಾತುಕತೆ ನಡೆಸಿ ಬಳಿಕ ತೀರ್ಮಾನ ಕೈಗೊಳ್ಳಲಾಗುವುದು ಎಂದಿದ್ದಾರೆ.
 ಕಳೆದ ಹಲವಾರು ತಿಂಗಳುಗಳಿಂದ ಇದೇ ರೀತಿಯ ಹಾರೈಕೆಯ ಮಾತುಗಳನ್ನು ಇಲಾಖೆಯ ಅಧಿಕಾರಿ ಹೇಳುತ್ತಿದ್ದು, ಇದೂವರೆಗೂ ಯಾವುದೇ ರೀತಿಯ ಕ್ರಮ ಕೈಗೊಳ್ಳಲಿಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ.

ಇಲಾಖೆಯ ಯೋಜನೆಗಳು:
ಅತೀ ಕಿರಿದಾದ ವಿಟ್ಲ ಪೇಟೆಯ ರಸ್ತೆಗಳಲ್ಲಿರುವ ವಿದ್ಯುತ್ ಕಂಬಗಳನ್ನು ತೆರವುಗೊಳಿಸಿ, ರಸ್ತೆ ಮಧ್ಯದಿಂದ ೧೬.೫, ಅಡಿ ರಸ್ತೆಯನ್ನು ಅಗಳಗೊಳಿಸಬೇಕು. ನಾಲ್ಕು ಮಾರ್ಗ ಜಕ್ಷನ್‌ನಲ್ಲಿ ವೃತ್ತ ನಿರ್ಮಿಸಿ ಸುಗಮ ಸಂಚಾರಕ್ಕೆ ಅನುಮಾಡಿಕೊಟ್ಟರೆ, ಹಾಗೂ ರಸ್ತೆ ಬದಿಗಳಲ್ಲಿ ಚರಂಡಿಗಳನ್ನು ರಚಿಸಲಾಗುವುದು. ಇದರಿಂದ ವಿಟ್ಲದ ಪೇಟೆಯಲ್ಲಿ ಸಂಭವಿಸುತ್ತಿದ್ದ ದಟ್ಟನೆಯ ಟ್ರಾಫಿಕ್ ಸಮಸ್ಯೆಯನ್ನು ನಿವಾರಿಸಬಹುದು ಎಂಬ ಯೋಜನೆಗಳನ್ನು ಅವರು ರೂಪಿಸುತ್ತಿದ್ದು,  ಆದರೆ ಅದು ಮಾತ್ರ ಅನುಷ್ಠಾನಕ್ಕೆ ಇದೂವರೆಗೂ ಬರಲಿಲ್ಲ?

ವಿಟ್ಲ ವಿಧಾನ ಸಭಾ ಕ್ಷೇತ್ರವು ಪುತ್ತೂರು ಕ್ಷೇತ್ರಕ್ಕೆ ಹಂಚಿ ಹೋಗಿದ್ದರಿಂದ ಇದರ ಅಭಿವೃದ್ಧಿ ಕೂಡ ಅದರ ಜತೆಗೆ ಹೋಗಿದೆ ಎಂದು ಇಲ್ಲಿಯ ಗ್ರಾಮಸ್ಥರು ಹೇಳುತ್ತಿದ್ದಾರೆ. ಇನ್ನೂ ಕೆಲ ತಿಂಗಳಲ್ಲಿ ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವ ನಡೆಯುವ ಸಾಧ್ಯತೆ ಕೂಡ ಇದೆ. ಈ ಸಂದರ್ಭ ಲಕ್ಷಾಂತರ ಜನರು ವಿಟ್ಲ ಪೇಟೆ ಮೂಲಕವೇ ದೇವಸ್ಥಾನಕ್ಕೆ ಹಾದು ಹೋಗಬೇಕಾಗಿದೆ. ಈ ಸಂದರ್ಭ ದಟ್ಟನೆಯ ಟ್ರಾಫಿಕ್ ಆಗುವ ಸಂಭವ ಹೆಚ್ಚು ಇದೆ. ಇನ್ನಾದರೂ ಸಂಬಂಧಪಟ್ಟ ಸ್ಥಳೀಯ ಜನಪ್ರತಿನಿಧಿಗಳು, ವಿವಿಧ ಪಕ್ಷದ ನಾಯಕರು, ಊರಿನ ಹಿರಿಯರು ವಿಟ್ಲ ಪೇಟೆ ಅಭಿವೃದ್ಧಿ ಬಗ್ಗೆ ಮೇಲಾಧಿಕಾರಿಗಳಿಗೆ ಒತ್ತಡ ಹಾಕದಿದ್ದರೆ ಈ ಯೋಜನೆ ಜನರಿಗೆ ಕನಸ್ಸಾಗಿಯೇ ಉಳಿವುದರಲ್ಲಿ ಯಾವುದೇ ಸಂಶಯವಿಲ್ಲ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಶೀಘ್ರವಾಗಿ ಅಂಗಡಿ ಮಾಲೀಕರ ಸಭೆ ಕರೆದು, ಬಳಿಕ ಈ ಯೋಜನೆಗೆ ಟೆಂಡರ್ ಕರೆಯಬೇಕೆಂದು ಪ್ರಜ್ಞಾವಂತ ನಾಗರಿಕರು ಹೇಳಿದ್ದಾರೆ.


ದ್ಸಿಕ್ರ್ ಹಲ್ಕಾ ಕಾರ್ಯಕ್ರಮ

ವಿಟ್ಲ :  ಪೂರ್ವಿಕ ಉಲಮಾಗಳನ್ನು ಗೌರವಿಸಿ ಅನುಸರಿಸುವುದು ಇಹ-ಪರ ವಿಜಯಕ್ಕೆ ನಾಂದಿ ಎಂದು  ಮೌಲಾನಾ ಪೇರೋಡ್ ಅಬ್ರುರ್ರಹ್ಮಾನ್ ಸಖಾಫಿ ಹೇಳಿದರು.
  ಮರ್‌ಹೂಂ ಶೈಖುನಾ ಸುರಿಬೈಲು ಉಸ್ತಾದರ ೧೦ನೇ ಆಂಡ್ ನೇರ್ಚೆ ಹಾಗೂ ಅನುಸ್ಮರಣಾ ಸಮ್ಮೇಳನದ ಪ್ರಯುಕ್ತ ಆರು ದಿವಸಗಳ ಕಾಲ ಸುರಿಬೈಲ್ ಅಶ್-ಅರಿಯ್ಯದಲ್ಲಿ ನಡೆದ ಕಾರ್ಯಕ್ರಮ ಶುಕ್ರವಾರ ಸಮಾಪನ ಕಾರ್ಯಕ್ರಮದಲ್ಲಿ ಅವರು  ಮುಖ್ಯ ಭಾಷಣಗೈದು ಮಾತನಾಡಿದರು
ಶೈಖುನಾ ತಾಜುಲ್ ಉಲಮಾ ಸಯ್ಯಿದ್ ಅಬ್ದುರ್ರಹ್ಮಾನ್ ಅಲ್-ಬುಖಾರಿ ಉಳ್ಳಾಲ ಅಧ್ಯಕ್ಷತೆ ವಹಿಸಿದ್ದು, ಉಡುಪಿ ಖಾಝಿ ಪಿ.ಎಂ. ಇಬ್ರಾಹಿಂ ಮುಸ್ಲಿಯಾರ್ ಬೇಕಲ ಉದ್ಘಾಟಿಸಿದರು.
   
    ಎ.ಪಿ. ಮುಹಮ್ಮದ್ ಮುಸ್ಲಿಯಾರ್ ಕಾಂತಪುರಂ, ಅಬ್ಬಾಸ್ ಮುಸ್ಲಿಯಾರ್ ಅಲ್-ಮದೀನಾ ಮಂಜನಾಡಿ, ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ, ಕೆ.ಪಿ. ಹುಸೈನ್ ಸಅದಿ ಕೆ.ಸಿ.ರೋಡ್, ಎಂ.ಎಸ್.ಎಂ. ಅಬ್ದುರ್ರಶೀದ್ ಝೈನಿ ಕಾಮಿಲ್ ಸಖಾಫಿ ಮೊದಲಾದವರು ಭಾಗವಹಿಸಿದ್ದರು.
    ಸಯ್ಯಿದ್ ಅಬ್ದುರ್ರಹ್ಮಾನ್ ಇಂಬಿಚ್ಚಿಕೋಯ ತಂಙಳ್ ಪೊನ್ನಂಗಳ ಬಾಯಾರ್ ಇವರ ನೇತೃತ್ವದಲ್ಲಿ ದ್ಸಿಕ್ರ್ ಹಲ್ಕಾ ಕಾರ್ಯಕ್ರಮ ನಡೆಯಿತು. ಸಯ್ಯಿದ್ ಜಲಾಲುದ್ದೀನ್ ತಂಙಳ್ ಉಜಿರೆ, ಸಯ್ಯಿದ್ ಸಿ.ಟಿ.ಎಂ. ಉಮರ್ ಆಟಕೋಯ ತಂಙಳ್ ಮನ್‌ಶರ್, ಸಯ್ಯಿದ್ ಜಲಾಲುದ್ದೀನ್ ತಂಙಳ್ ಪೆರಾಲ, ಇಬ್ರಾಹಿಂ ಬಾವ ಹಾಜಿ ಮಂಗಳೂರು, ಕುಂಞಿ ಅಹ್ಮದ್ ಹಾಜಿ ದೇರಳಕಟ್ಟೆ, ಹುಸೈನ್ ಹಾಜಿ ಕೊಡಾಜೆ, ಅಝೀಝ್ ಹಾಜಿ ಕುತ್ತಾರ್, ಉಸ್ಮಾನ್ ಹಾಜಿ ಮಿತ್ತೂರು ಎನ್.ಎಸ್. ಕರೀಂ ಹಾಜಿ ಮಂಜನಾಡಿ, ಸಿ.ಎಂ. ಅಬೂಬಕ್ಕರ್ ಲತೀಫಿ ಎಣ್ಮೂರು ಮೊದಲಾದವರು ಉಪಸ್ಥಿತರಿದ್ದರು.
    ಬಂಟ್ವಾಳ ಶಾಸಕ ಬಿ. ರಮಾನಾಥ ರೈ ಅವರ ಅಧ್ಯಕ್ಷತೆಯಲ್ಲಿ ಸೌಹಾರ್ದ ಸಮಾವೇಶ ನಡೆಯಿತು. ಶಾಸಕ ಯು.ಟಿ. ಖಾದರ್, ವಕ್ಫ್ ಮಂಡಳಿ ಚೆಯರ್‌ಮೆನ್ ಎನ್.ಕೆ.ಎಂ. ಶಾಫಿ ಸಅದಿ ನಂದಾವರ, ಜಿ.ಪಂ. ಸದಸ್ಯ ಎಂ.ಎಸ್. ಮುಹಮ್ಮದ್, ಜಿಲ್ಲಾ ವಕ್ಫ್ ಬೋರ್ಡ್ ಅಧ್ಯಕ್ಷ ಹಾಜಿ ಉಸ್ಮಾನ್, ಎ.ಎ. ಹೈದರ್ ಪರ್ತಿಪ್ಪಾಡಿ, ಯು.ಎಸ್. ಹಂಝ ಉಳ್ಳಾಲ, ಎಸ್.ಕೆ. ಖಾದರ್ ಹಾಜಿ ಮುಡಿಪು, ಕೆ.ಎಂ. ಸಿದ್ದೀಕ್ ಮೋಂಟುಗೋಳಿ, ಕೆ.ಎಂ. ಇಸ್ಮಾಯಿಲ್ ಸಅದಿ ಕಿನ್ಯ, ಎಂ.ಬಿ.ಎಂ. ಸಾದಿಕ್ ಮಾಸ್ಟರ್ ಮಲೆಬೆಟ್ಟು, ಅಬ್ದುರ್ರಹ್ಮಾನ್ ಮದನಿ ಪಡನ್ನ, ಅಬ್ದುಲ್ ರಝಾಕ್ ಕುಕ್ಕಾಜೆ, ಬಿ.ಎಂ. ಅಬ್ಬಾಸ್ ಅಲಿ ಬೋಳಂತೂರು, ರಫೀಕ್ ಹಾಜಿ ಸುರಿಬೈಲು, ನಾರಾಯಣ ಟೈಲರ್ ಬೋಳಂತೂರು, ಯಾಕೂಬ್ ದಂಡೆಮಾರ್, ಇಬ್ರಾಹಿಂ ಖಲೀಲ್ ಮೊದಲಾದವರು ಭಾಗವಹಿಸಿದ್ದರು. ದಾರುಲ್ ಅಶ್-ಅರಿಯ್ಯ ಮೆನೇಜರ್ ಸಿ.ಎಚ್. ಮುಹಮ್ಮದ್ ಅಲಿ ಸಖಾಫಿ, ಸಿ.ಎಚ್. ಯೂಸುಫ್ ಮದನಿ ಇದ್ದರು.


ಬಾಯಾರಿಕೆ

ಬಿಸಿಲ ಧಗೆಯಲ್ಲಿ ಬಾಯಾರಿದ ಹಸು 

Monday 26 March 2012

ಸಾರಡ್ಕ ರಸ್ತೆಯ ಅವ್ಯವ್ಯವಸ್ಥೆ

             ವಿಟ್ಲ: ಕರ್ನಾಟಕ-ಕೇರಳ ಗಡಿಪ್ರದೇಶದ ಸಾರಡ್ಕ ಎಂಬಲ್ಲಿ ರಸ್ತೆಯ ತಡೆಗೋಡೆ ಕಳೆದ ಎರಡು ವರ್ಷಗಳ ಹಿಂದೆಯೇ ಕುಸಿದು ಬಿದ್ದಿದ್ದು, ಅದರ ಕಾಮಗಾರಿ ಇನ್ನೂ ಕೂಡ ಆರಂಭವಾಗಿಲ್ಲ. ಈ ರಸ್ತೆ ಮೂಲಕ ದಿನ ನಿತ್ಯ ಅದೇಷ್ಟು ವಾಹನಗಳು ಸಂಚಾರಿಸುತ್ತಿದೆ. ವಿಟ್ಲದಿಂದ ಪೆರ್ಲ, ಬದಿಯಡ್ಕ, ಕಾಸರಗೋಡು, ಪಾಣಾಜೆ ಮೂಲಕ ಪುತ್ತೂರು ಕಡೆ ದಿನ ನಿತ್ಯ ನೂರಾರು ವಾಹನಗಳು ಇದೇ ರಸ್ತೆಯಿಂದಲೇ ಸಂಚಾರಿಸುತ್ತಿದೆ. ಎರಡು ವರ್ಷಗಳ ಹಿಂದೆ ಕರ್ನಾಟಕ ರಾಜ್ಯಕ್ಕೆ ಸಂಬಂಧಪಟ್ಟ ನದಿಯೊಂದಕ್ಕೆ ಅಡ್ಡಲಾಗಿ ಕಟ್ಟಿರುವ ತಡೆಗೋಡೆಯ ಕಲ್ಲುಗಳು ಕುಸಿದು ಬಿದ್ದಿದೆ. ಸಂಬಂಧಪಟ್ಟ ಜನಪ್ರತಿನಿಧಿಗಳಾಗಲಿ, ಅಧಿಕಾರಿಗಳಾಗಲಿ ಈ ಬಗ್ಗೆ ಯಾವುದೇ ರೀತಿಯ ಕ್ರಮ ಕೈಗೊಳ್ಳದೆ ಇದ್ದಾರೆ. ವರ್ಷದ ಹಿಂದೆ ಸಾರಡ್ಕ ಈ ರಸ್ತೆಯಲ್ಲಿ ಸಂಚಾರಿಸುತ್ತಿದ್ದ ಲಾರಿ, ಹಾಗೂ ಆಮ್ನಿಯೊಂದು ಸೈಡ್ ಕೊಡುವ ಭರದಲ್ಲಿ ಹೊಳೆಗೆ ಬಿದ್ದಿದ್ದವು ಎಂದು ಸಾರ್ವಜನಿಕರು ತಿಳಿಸಿದ್ದಾರೆ. ಈ ರಸ್ತೆಯಲ್ಲಿ ಹೆಚ್ಚಾಗಿ ಬಸ್ಸು, ಲಾರಿ, ಟ್ಯಾಂಕರ್‌ನಂತ ಮುಂತಾದ ಘನ ವಾಹನಗಳೇ ಈ ರಸ್ತೆ ಮೂಲಕ ಹಾದು ಹೋಗುತ್ತಿದೆ. ಈ ಸಂದರ್ಭ ಪರಸ್ಪರ ವಾಹನಗಳು ಅಡ್ಡದಿಡ್ಡಿಯಾಗಿ ರಸ್ತೆಬದಿಗೆ ಸವರಿ ಅವಘಾಡಗಳು ಸಂಭವಿಸುತ್ತಲೇ ಇರುತ್ತದೆ. ಮಳೆಗಾಲದಲ್ಲಿ ಇಲ್ಲಿ ನದಿ ತುಂಬಿ ಹರಿಯುತ್ತಿದ್ದು, ಇದರಿಂದ ವಾಹನ ಚಾಲಕರು ರೋಸಿ ಹೋಗಿದ್ದಾರೆ. ಈ ಬಗ್ಗೆ ಸಂಬಂಧಪಟ್ಟವರಲ್ಲಿ ಒತ್ತಡ ಹಾಕಿದರೆ ಇದು ನಮಗೆ ಸಂಬಂಧಪಟ್ಟದ್ದಲ್ಲ ಎಂದು ಹೇಳಿ ಕೈ ತೊಳೆದುಕೊಳ್ಳುತ್ತ, ಜನರ ಪ್ರಾಣದ ಮೇಲೆ ಅವರು ಆಟವಾಡುತ್ತಿದ್ದಾರೆ ಎಂದು ಸ್ಥಳೀಯರು ದೂರಿದ್ದಾರೆ. ಕಳಪೆ ಕಾಮಗಾರಿಯಿಂದ ಈ ರಸ್ತೆ ಬದಿಯ ತಡೆಗೋಡೆ ಕುಸಿದು ಬಿದ್ದಿದ್ದು, ವರ್ಷ ಎರಡು ಕಳೆದರೂ ಇದರ ಮರು ಕಾಮಗಾರಿ ಇನ್ನೂ ಆರಂಭವಾಗಿಲ್ಲ. ಮುಂದಿನ ಮಳೆಗಾಲ ಬರುವ ಒಳಗೆ ಸಂಬಂಧಪಟ್ಟವರು ಇದಕ್ಕೊಂದು ಪರಿಹಾರ ಕಂಡುಕೊಳ್ಳದೇ ಇದ್ದರೆ ಇಲ್ಲಿ ಜನರ ಪ್ರಾಣಕ್ಕೆ ಅಪಾಯವಾಗುದಂತ್ತೂ ಸತ್ಯ ಎಂದು ಸಾರ್ವಜನಿಕರು ತಿಳಿಸಿದ್ದಾರೆ.
 

                                                                                              




--
Mohammad Ali
Vittla
Reporter, Vittla
9980205258

ವಿಟ್ಲ ಗ್ರಾಮ ಪಂಚಾಯತ್ ನಲ್ಲಿ ಸ್ವಚತಾ ಕಾರ್ಯಕ್ರಮ


ವಿಟ್ಲ: ಸ್ವಚ್ಛತೆಯ ಗ್ರಾಮ ನಮ್ಮ ಜೀವನ ಹೇಗಿರಬೇಕೆಂದು ತೋರಿಸುತ್ತದೆ, ಸ್ವಚ್ಛ ಗ್ರಾಮವಿದ್ದಾರೆ ನಮ್ಮ ಆರೋಗ್ಯವು ಉತ್ತಮವಾಗಿರುತ್ತದೆ ಎಂದು ದ.ಕನ್ನಡ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಕೆ.ಟಿ ಶೈಲಜಾ ಭಟ್ ಹೇಳಿದರು.
  ವಿಟ್ಲ ಗ್ರಾ.ಪಂಚಾಯಿತಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ. ಜನಶಿಕ್ಷಣ ಟ್ರಸ್ಟ್ ಮಂಗಳೂರು ಹಾಗೂ ಸಮಾಜ ಕಾರ್ಯ ವಿದ್ಯಾರ್ಥಿಗಳು ವಿಟ್ಲ ಸರ್ಕಾರಿ ಕಾಲೇಜು ಇದರ ಸಹಯೋಗದಲ್ಲಿ ಭಾನುವಾರ ಸಂಜೆ ವಿಟ್ಲ ಪಂಚಾಯಿತಿ ಸಭಾಭವನದಲ್ಲಿ ನಡೆದ "ಸ್ವಚ್ಛ ಗ್ರಾಮದೆಡೆಗೆ-ನಮ್ಮ ನಡಿಗೆ" ವಿಶೇಷ ನೈರ್ಮಲ್ಯ ಸಪ್ತಾಹ ವಿಶೇಷ ಪ್ರೇರಣಾ ಶಿಬಿರವನ್ನು ಉದ್ಘಾಟಸಿ ಅವರು ಮಾತನಾಡಿದರು.
ಜನರಿಗೆ ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸಬೇಕು, ಕಸ ತ್ಯಾಜಗಳನ್ನು ಸಂಗ್ರಹಿಸಿ ವಿಲೇವೇರಿ ಮಾಡಬೇಕು, "ಸ್ವಚ್ಛ ನಿರ್ಮಾಲ ಗ್ರಾಮ" ಬಹುಮಾನದಲ್ಲಿ ಬಂದ ೫೦ಲಕ್ಷ ರೂ. ಹಣವನ್ನು ಇಂತಹ ಕಾರ್ಯಗಳಿಗೆ ಬಳಸಲಾಗುವುದು ಎಂದರು.
 ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ವಿಟ್ಲ ಗ್ರಾ.ಪಂ ಅಧ್ಯಕ್ಷ ರಮಾನಾಥ ವಿಟ್ಲ  ಇನ್ನೂ ೬ ತಿಂಗಳ ಒಳಗೆ ವಿಟ್ಲ ಪರಿಸರದ ಎಲ್ಲಾ ಚರಂಡಿಗಳನ್ನು ಸ್ವಚ್ಛಗೊಳಸಲಾಗುವುದು ಹಾಗೂ ವಿಟ್ಲ ರಸ್ತೆ ವಿಸ್ತರಣೆ ಅನುದಾನವಾದ ಹಣವನ್ನು ನಾಲ್ಕು ಮಾರ್ಗದಲ್ಲಿ ಚರಂಡಿ ವ್ಯವಸ್ಥೆಯನ್ನು ಮಾಡಲಾಗುವುದು ಎಂದು ತಿಳಿಸಿದರು.
  ಬಂಟ್ವಾಳ ತಾಲ್ಲೂಕು ಪಂಚಾಯಿತಿ ಸದಸ್ಯರಾದ ಉಷಾ ಕೆ, ಜೂಲಿಯಾನ ಮೇರಿ ಲೋಬೋ, ಮಂಗಳೂರು ಜನಶಿಕ್ಷಣ ಟ್ರಸ್ಟ್ ಇದರ ನಿರ್ದೇಶಕ ಶ್ರೀ ಕೃಷ್ಣ ಮೂಲ್ಯ,  ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಇದರ ಯೋಜನಾಧಿಕಾರಿ ದಯಾವತಿ, ವಿಶೇಷ ಆರ್ಥಿಕ ವಲಯ ಹಸಿರು ಪಟ್ಟಿ ಇದರ ಸಲಹೆಗಾರ ದೀನೇಶ್ ನಾಯಕ್, ವಿಟ್ಲ ಸಮುದಾಯ ಆರೋಗ್ಯ ಕೇಂದ್ರ ಇಲ್ಲಿಯ ವೈದ್ಯಾಧಿಕಾರಿ ಡಾ.ಪ್ರಶಾಂತ್, ಉಪನ್ಯಾಸಕ ಜಾನ್ ಡಿ,ಸೋಜ, ಪಂ ಅಭಿವೃದ್ಧಿ ಅಧಿಕಾರಿ ರಮೇಶ್ ರಾಠೋಡ್, ಕಾರ್ಯದರ್ಶಿ ಜಗದೀಶ್ ನಾಯಕ್, ಎಂ.ಕೆ ಮೂಸ ಇದ್ದರು.
    ಮಾರ್ಚ್ ೨೫ರಿಂದ ಮಾರ್ಚ್ ೩೧ ವರೆಗೆ ವಿಟ್ಲ ಪರಿಸರದ ವಿವಿಧಕಡೆಗಳಲ್ಲಿ ಸ್ವಚ್ಛ ಗ್ರಾಮದೆಡೆಗೆ-ನಮ್ಮ ನಡಿಗೆ" ವಿಶೇಷ ನೈರ್ಮಲ್ಯ ಸಪ್ತಾಹ ಕಾರ್ಯಕ್ರಮ ನಡೆಯಲಿದೆ.



Saturday 17 March 2012

ರಾಜಕೀಯ ವಿದ್ಯಮಾನಗಳ ವಿಶ್ಲೇಶಣೆ....!

ಪ್ರತಿದಿನ ಪ್ರತಿಕ್ಶಣ ರಾಜಕೀಯ ವಿದ್ಯಮಾನಗಳ ವಿಶ್ಲೇಶಣೆಯಲ್ಲಿ ನಿಮ್ಮ ವಿಶ್ಲೇಶಣೆ ಹಾಗೂ ಅಭಿಪ್ರಾಯಗಳನ್ನೂ ಪ್ರಕಟಿಸಿ.

Wednesday 15 February 2012

Welcome to www.prathidina.tk Prathidina Prathikshana

Dear readers, 
 We are  here by happy to say that we have fulfilled the requirment of KANNADA blog of information and news on internet. This blog is to convey the truth of every bit of information to every kannadiga's and so as get out thier feedbacks....!

Pls support us to improve the blog by comments and feedbacks.
thanks

www.prathidina.tk


 
Design by Free WordPress Themes | Bloggerized by - Free Blogger Themes | @javtl