Monday 26 March 2012

ಸಾರಡ್ಕ ರಸ್ತೆಯ ಅವ್ಯವ್ಯವಸ್ಥೆ

             ವಿಟ್ಲ: ಕರ್ನಾಟಕ-ಕೇರಳ ಗಡಿಪ್ರದೇಶದ ಸಾರಡ್ಕ ಎಂಬಲ್ಲಿ ರಸ್ತೆಯ ತಡೆಗೋಡೆ ಕಳೆದ ಎರಡು ವರ್ಷಗಳ ಹಿಂದೆಯೇ ಕುಸಿದು ಬಿದ್ದಿದ್ದು, ಅದರ ಕಾಮಗಾರಿ ಇನ್ನೂ ಕೂಡ ಆರಂಭವಾಗಿಲ್ಲ. ಈ ರಸ್ತೆ ಮೂಲಕ ದಿನ ನಿತ್ಯ ಅದೇಷ್ಟು ವಾಹನಗಳು ಸಂಚಾರಿಸುತ್ತಿದೆ. ವಿಟ್ಲದಿಂದ ಪೆರ್ಲ, ಬದಿಯಡ್ಕ, ಕಾಸರಗೋಡು, ಪಾಣಾಜೆ ಮೂಲಕ ಪುತ್ತೂರು ಕಡೆ ದಿನ ನಿತ್ಯ ನೂರಾರು ವಾಹನಗಳು ಇದೇ ರಸ್ತೆಯಿಂದಲೇ ಸಂಚಾರಿಸುತ್ತಿದೆ. ಎರಡು ವರ್ಷಗಳ ಹಿಂದೆ ಕರ್ನಾಟಕ ರಾಜ್ಯಕ್ಕೆ ಸಂಬಂಧಪಟ್ಟ ನದಿಯೊಂದಕ್ಕೆ ಅಡ್ಡಲಾಗಿ ಕಟ್ಟಿರುವ ತಡೆಗೋಡೆಯ ಕಲ್ಲುಗಳು ಕುಸಿದು ಬಿದ್ದಿದೆ. ಸಂಬಂಧಪಟ್ಟ ಜನಪ್ರತಿನಿಧಿಗಳಾಗಲಿ, ಅಧಿಕಾರಿಗಳಾಗಲಿ ಈ ಬಗ್ಗೆ ಯಾವುದೇ ರೀತಿಯ ಕ್ರಮ ಕೈಗೊಳ್ಳದೆ ಇದ್ದಾರೆ. ವರ್ಷದ ಹಿಂದೆ ಸಾರಡ್ಕ ಈ ರಸ್ತೆಯಲ್ಲಿ ಸಂಚಾರಿಸುತ್ತಿದ್ದ ಲಾರಿ, ಹಾಗೂ ಆಮ್ನಿಯೊಂದು ಸೈಡ್ ಕೊಡುವ ಭರದಲ್ಲಿ ಹೊಳೆಗೆ ಬಿದ್ದಿದ್ದವು ಎಂದು ಸಾರ್ವಜನಿಕರು ತಿಳಿಸಿದ್ದಾರೆ. ಈ ರಸ್ತೆಯಲ್ಲಿ ಹೆಚ್ಚಾಗಿ ಬಸ್ಸು, ಲಾರಿ, ಟ್ಯಾಂಕರ್‌ನಂತ ಮುಂತಾದ ಘನ ವಾಹನಗಳೇ ಈ ರಸ್ತೆ ಮೂಲಕ ಹಾದು ಹೋಗುತ್ತಿದೆ. ಈ ಸಂದರ್ಭ ಪರಸ್ಪರ ವಾಹನಗಳು ಅಡ್ಡದಿಡ್ಡಿಯಾಗಿ ರಸ್ತೆಬದಿಗೆ ಸವರಿ ಅವಘಾಡಗಳು ಸಂಭವಿಸುತ್ತಲೇ ಇರುತ್ತದೆ. ಮಳೆಗಾಲದಲ್ಲಿ ಇಲ್ಲಿ ನದಿ ತುಂಬಿ ಹರಿಯುತ್ತಿದ್ದು, ಇದರಿಂದ ವಾಹನ ಚಾಲಕರು ರೋಸಿ ಹೋಗಿದ್ದಾರೆ. ಈ ಬಗ್ಗೆ ಸಂಬಂಧಪಟ್ಟವರಲ್ಲಿ ಒತ್ತಡ ಹಾಕಿದರೆ ಇದು ನಮಗೆ ಸಂಬಂಧಪಟ್ಟದ್ದಲ್ಲ ಎಂದು ಹೇಳಿ ಕೈ ತೊಳೆದುಕೊಳ್ಳುತ್ತ, ಜನರ ಪ್ರಾಣದ ಮೇಲೆ ಅವರು ಆಟವಾಡುತ್ತಿದ್ದಾರೆ ಎಂದು ಸ್ಥಳೀಯರು ದೂರಿದ್ದಾರೆ. ಕಳಪೆ ಕಾಮಗಾರಿಯಿಂದ ಈ ರಸ್ತೆ ಬದಿಯ ತಡೆಗೋಡೆ ಕುಸಿದು ಬಿದ್ದಿದ್ದು, ವರ್ಷ ಎರಡು ಕಳೆದರೂ ಇದರ ಮರು ಕಾಮಗಾರಿ ಇನ್ನೂ ಆರಂಭವಾಗಿಲ್ಲ. ಮುಂದಿನ ಮಳೆಗಾಲ ಬರುವ ಒಳಗೆ ಸಂಬಂಧಪಟ್ಟವರು ಇದಕ್ಕೊಂದು ಪರಿಹಾರ ಕಂಡುಕೊಳ್ಳದೇ ಇದ್ದರೆ ಇಲ್ಲಿ ಜನರ ಪ್ರಾಣಕ್ಕೆ ಅಪಾಯವಾಗುದಂತ್ತೂ ಸತ್ಯ ಎಂದು ಸಾರ್ವಜನಿಕರು ತಿಳಿಸಿದ್ದಾರೆ.
 

                                                                                              




--
Mohammad Ali
Vittla
Reporter, Vittla
9980205258

0 comments:

Post a Comment

 
Design by Free WordPress Themes | Bloggerized by - Free Blogger Themes | @javtl