Tuesday 30 December 2014

ಬಯೋತ್ಪಾದಕ ಮಾಧ್ಯಮಗಳು..!

ಇನ್ನೆಷ್ಟು ಮಾನಸಿಕ ಅಸ್ವಸ್ಥರು ಹುಟ್ಟಲಿರುವರೋ....??!!ನಿನ್ನೆಯಷ್ಟೇ ಸಮಾಜ ಘಾತುಕ ಭಯ ಉತ್ಪಾದಕರ ಬಾಂಬ್ ದಾಳಿಗೆ ಬೆಂಗಳೂರು ಬೆಚ್ಚಿಬಿದ್ದಿತ್ತು.ಒಬ್ಬರು ಅಮಾಯಕ ಮಹಿಳೆ ಇವರ ದುಷ್ಕೃತ್ಯಕ್ಕೆ ಬಲಿಯಾಗಿದ್ದರು.ಬಾಂಬ್ ಸ್ಪೋಟವಾದಾಗ ಸ್ಪೋಟದ ಸಮಗ್ರತೆಯನ್ನು ಸಚಿತ್ರವಾಗಿ ವರದಿ ಮಾಡಬೇಕಾದಂತಹ ಮಾಧ್ಯಮಗಳು ಕಾನೂನುಪಾಲಕರಿಗಿಂತ ತ್ವರಿತವಾಗಿ ಅಪರಾಧಿಗಳನ್ನು ಸೆರೆಹಿಡಿಲು ತಾಮುಂದು,ತಾಮುಂದುಅನ್ನುವಂತೆ ಪೈಪೋಟಿ ನಡೆಸಿದವು ಪೋಲೀಸ್ಉನ್ನತಾಧಿಕಾರಿಗಳುಸ್ಪೋಟದ ಹಿಂದಿರುವ ಶಕ್ತಿಗಳು ಯಾರೆಂದು ಗೊತ್ತಿಲ್ಲ ಎಂದು ಹೇಳಿಕೆ ನೀಡುವಾಗ ಇಲ್ಲಿನ ಮಾಧ್ಯಮಗಳಿಗೆ ಈ ಸಲ ಅದು ಯಾವುದೋ "ಅಲ್ ಉಮ್ಮ " ಅನ್ನುವ ಸಂಘಟನೆಯ ಕೈವಾಡವೆಂದು ಪ್ರಸಾರ ಮಾಡಿಯೇ ಬಿಟ್ಟಿತು...!!ಅದರಲ್ಲಿ ಅಚ್ಚರಿ ಪಡುವಂತದ್ದೇನಿಲ್ಲ, ಎಲ್ಲಿಯಾದರೂ ಬಾಂಬ್ ಸ್ಪೋಟಗೊಂಡರೆ ಅದರ ಪೂರ್ವಾಪರ ತಿಳಿಯದೆ ಯಾವುದೋ ಇಸ್ಲಾಮಿಕ್ ಹೆಸರಿನ ಸಂಘಟನೆಗಳ ಮೇಲೆ ಹೊರಿಸಿ ಮುಸ್ಲಿಮರನ್ನು ಸಂಶಯದಿಂದ ನೋಡುವಂತಾಗಿಸುವುದು ಮಾಧ್ಯಮದವರಿಗೆ ಪರಿಪಾಠವಾದಂತಿದೆ.ಜನತೆಯ ಮನಸ್ಸಿನಿಂದ ನಿನ್ನೆಯ ಬಾಂಬ್ ಸ್ಪೋಟದ ಭಯ ಮರೆಯಾಗುವ ಮುನ್ನವೇ ಅದು ಯಾವುದೋ ಅಬ್ದುಲ್ಲ ಖಾನ್ ಅನ್ನುವ ಹೆಸರಿನಲ್ಲಿ ಈ ಮೈಲ್ ರವಾನೆಯಾಗುತ್ತದೆ.ಬಾಂಬ್ ಸ್ಪೋಟದ ಬೆದರಿಕೆಯನ್ನು ಹಾಕುತ್ತಾನೆ ಮೂಡಬಿದ್ರೆ ಆಳ್ವಾಸ್ ಕಾಲೇಜಿಗೆ,ಅದಲ್ಲದೆ ನನ್ಜೊತೆ 600 ಯುವಕರ ಪಡೆ ಇದೆಯೆಂದು.ಮೊದಲೇ ಒಂದು ಸಮುದಾಯವನ್ನು ಗುರಿಯಾಗಿಸಿ ವರದಿ ಬಿತ್ತರಿಸುವ ಮಾಧ್ಯಮಗಳಿಗೆ ಒಬ್ಬ ಮುಸ್ಲಿಮನ ಹೆಸರು ಕೇಳಿಸಿದಾಗ ಆಹಾರ ದೊರಕಿದಂತಾಯ್ತು.ವರ್ಣರಂಜಿತವಾದ ವರದಿಗಳನ್ನು ಬಿತ್ತರಿಸಲು ಪ್ರಾರಂಭಿಸಿದವು..!!ಕಾನೂನು ಪಾಲಕರ ಸಮಯೋಚಿತವಾದ ತನಿಖೆಯಿಂದ ಈ ಮೇಲ್ ಕಳುಹಿಸಿದವನು ಅಬ್ದುಲ್ಲ ಖಾನ್ ಅಲ್ಲ ಅದು ಸತೀಶ್ ಅಂತ ಗೊತ್ತಾದದ್ದೇ ತಡ ಕ್ಷಣ ಮಾತ್ರದಲ್ಲಿ ಆತನನ್ನು ಮಾನಸಿಕ ರೋಗಿಯನ್ನಾಗಿಸಿ ಬಿಟ್ಟರು...!!!ಇಷ್ಟೆಲ್ಲಾ ಜ್ವಲಂತವಾದ ಸಮಸ್ಯೆಗಳು ಸಮಾಜದಲ್ಲಿ ತಲೆದೂರುತ್ತಾ ಇರುವಾಗ ಒಬ್ಬ ಮಾನಸಿಕ ರೋಗಿಯಾದವನಿಗೆ ತನ್ನಈ ಮೇಲ್ ಖಾತೆಯಿಂದ ಅನ್ಯ ಸಮುದಾಯದ ಯುವಕನ ಹೆಸರಲ್ಲಿ ಇಂತಹ ಮೇಲ್ ಕಳುಹಿಸಲು ಸಾಧ್ಯನಾ...??ಇಂತಹ ಮಾನಸಿಕ ರೋಗಿಗಳನ್ನು ಸೂಕ್ತವಾಗಿ ತನಿಖೆಗೊಳಪಡಿಸಿದರೆ ಇನ್ನಷ್ಟು ಮಾನಸಿಕ ರೋಗಿಗಳನ್ನು ಪತ್ತೆಹಚ್ಚಲು ಸಾಧ್ಯವಾದೀತು.ಅಂದು ಪ್ರದೀಪ್,ಇಂದು ಸತೀಶ್..ನಾಳೆ ಇನ್ನೊಬ್ಬ ಮಾನಸಿಕ ರೋಗಿ ಬೆಳಕಿಗೆ ಬರುವುದಕ್ಕಿಂತ ಮುಂಚೆ ಕಾನೂನು ಪಾಲಕರು ಜಾಗೃತರಾಗಬೇಕಿದೆ.ಮಾನಸಿಕ ಅಸ್ವಸ್ಥತೆ ದೇಶದ ಶಾಂತಿ,ಸೌಹಾರ್ದತೆಗೆ ಮಾರಕವಾಗದಿರಲಿ.

ಸ್ನೇಹಜೀವಿ ಅಡ್ಕ

Friday 26 December 2014

ಸಂಭ್ರಮ..!

ಭಾರತ ಸಂಭ್ರಮಿಸುತ್ತಿದೆ... 
ಚಂದ್ರನಲ್ಲಿಗೆ ತಾನು ಮುಟ್ಟಿದೆನೆಂದು. 
 
ಮೂರು ಹೊತ್ತು ಊಟವಿಲ್ಲದ 
ಕಡು ಬಡವನನ್ನು ಮೆಟ್ಟಿ.. 
ಮನೆಯಿಲ್ಲದೆ ಮರದಡಿಯಲ್ಲಿ 
ಮಲಗುವ ಕಂದಮ್ಮಗಳ ತುಳಿದು.. 
ಎಳೆ ಮಗುವನ್ನು ಬೆನ್ನಿಗೆ ಕಟ್ಟಿ 
ದುಡಿಯುವ ಹೆಣ್ಣು ಮಗಳ ಕಡೆಗಣಿಸಿ.. 
ತಾನು ಸೀದಾ ಹೋದದ್ದು ಚಂದ್ರನಲ್ಲಿಗೆ... 
 
ಭೂಮಿಯಲಿ ಸಿಗದ ಮನಶಾಂತಿ 
ಚಂದ್ರನಲ್ಲಿ ಹುಡುಕುವ ತವಕವೇ ? 
ಮುಂದುವರಿದ ವಿಶ್ವ ರಾಷ್ಟ್ರಗಳಿಗೆ 
ಸರಿ ಸಾಟಿಯಾಗಿ ನಿಲ್ಲುವ ಹಂಬಲವೇ ? 
ಕೂಡಿಟ್ಟ ಜನರ ಸಂಪತ್ತನ್ನು 
ಮುಗಿಸಿ ಬಿಡುವ ತಂತ್ರವೇ ? 
      ಗೊತ್ತಿಲ್ಲ! 
ಅಂತೂ ನಾವು ತಲುಪಿದೆವು ಚಂದ್ರನಲ್ಲಿಗೆ... 
 
ಭಾರತ ಸಂಬ್ರಮಿಸುತ್ತಿದೆ ... 
ಚಂದ್ರನಲ್ಲಿಗೆ ತಾನು ಮುಟ್ಟಿದೆ ನೆಂದು... 
 
                      @sha kudradka @

ಹಿಂಸೆ


ಮನುಷ್ಯ ದೇಹಗಳು  
ಛಿದ್ರಗೊಂಡು ಬೀಳುತ್ತಿವೆ, 
ಗಾಳಿಯ ರಭಸಕ್ಕೆ  
ಬಿದ್ದ ತರಗೆಲೆಯಂತೆ  
 
ಹಿಂಸಾ ಮುಖ  
ವ್ಯಾಘ್ರರ ಕ್ರೂರ ಕೈಗಳ  
ರುದ್ರ ನರ್ತನಕ್ಕೆ  
ಬಲಿಯಾಗುತ್ತಿದೆ ಬಡ ಜೀವ  
 
ಮರಣದ ನೋವು  
ಅರಿತವನೊಬ್ಬ  
ಮನುಷ್ಯ ಜೀವ  
ತೆಗೆಯುವನೇ? 
 
ತಾನು ಕೊಲ್ಲುವ  
ವ್ಯಕ್ತಿಯ ನಂಬಿ  
ಬದುಕುವ ಕುಟುಂಬವ  
ಮರೆತನೆ ?  
 
ಧರ್ಮ, ಪಾರ್ಟಿಗಾಗಿ  
ಹಿಂಸೆ ಗಿಳಿಯುವ  
ನೀಚ ಪ್ರವೃತ್ತಿ  
ಕೊನೆಗೊಳ್ಳುವುದಾದರೂ ಎಂದು? 
 
ಬಾಪೂಜಿ ಕಂಡ  
"ರಾಮ ರಾಜ್ಯ"  
ಕಟ್ಟುವ ಸಮಯ  
ಬರುವುದಾದರೂ ಎಂದು ?  
 
 
                - ಷಾ ಕುದ್ರಡ್ಕ

Saturday 6 December 2014

ಮರೆಯದಿರೋಣ ಆ ಬಾಬರಿ..!

ಅದೊಂದು ಕಾಲವಿತ್ತು, ಹಿಂದೂ ಮುಸ್ಲಿಮರು ಪರಸ್ಪರ ಭೇಧಭಾವವಿಲ್ಲದೆ ಐಕ್ಯತೆಯಿಂದ ಬದುಕುತ್ತಿದ್ದಂತಹ ಕಾಲವಾಗಿತ್ತು.ಇವರ ಈ ಐಕ್ಯತೆಯು ಬ್ರಿಟೀಷರಿಗೆ ತನ್ನ ರಾಜ್ಯ ವಿಸ್ತರಣೆಗೆ ಕಗ್ಗಂಟಾಗಿ ಉಳಿಯಿತು.ಇವರ ಐಕ್ಯತೆಯನ್ನು ಒಡೆಯಲು ಬ್ರಿಟೀಷರು ಹಲವಾರು ತಂತ್ರಗಳನ್ನು ಪ್ರಯೋಗಿಸಿದರು,ಆದರೆ ಅದರಲ್ಲಿ ಯಾವುದರಲ್ಲಿಯೂ ಸಫಲತೆಯನ್ನು ಕಾಣದೇ ಇದ್ದಾಗ ಹಿಂದೂ ಮತ್ತು ಮುಸ್ಲಿಮರ ಮಧ್ಯೆ ಪರಸ್ಪರ ಭಿನ್ನಮತವನ್ನು ಸ್ರಷ್ಟಿಸಲು ಇವರು ಕಂಡುಹಿಡಿದ ವಾಮಮಾರ್ಗವಾಗಿತ್ತು ಈ ಬಾಬರಿ ಮಸೀದಿ ವಿವಾದ.ಅದಕ್ಕಾಗಿ ಅಲ್ಲಿಂದ ಇಲ್ಲಿಗೆ ಇಲ್ಲಿಂದ ಅಲ್ಲಿಗೆ ಕಿಚ್ಚನ್ನು ಹಬ್ಬಿಸಿ ಹಿಂದೂ ಮತ್ತು ಮುಸಲ್ಮಾನರ ಮಧ್ಯೆ ಭಿನತೆಯನ್ನು ಸ್ರಷ್ಟಿಸುವಲ್ಲಿ ಸಫಲರಾದರು.ಬ್ರಿಟಿಷರು ಭಾರತ ಬಿಟ್ಟು ತೊಲಗಿದ ನಂತರ ಅವರು ಮುಂದುವರಿಸದೇ ಬಿಟ್ಟಿದ್ದ ಕೆಲಸವನ್ನು ಮುಂದುವರಿಸಲು ಸ್ವಾತಂತ್ರ್ಯಾ ಪೂರ್ವದಲ್ಲಿ ಅವರ ಗೂಡಾಚಾರಿಗಳಾಗಿದ್ದಂತಹ ಸಂಘಪರಿವಾರದವರು ಗುತ್ತಿಗೆ ಪಡೆದುಕೊಂಡರು.ಹೀಗೆ ಬ್ರಿಟೀಷರಿಂದ ಕಲಿತಿದ್ದ ಹಲವು ಶಕುನಿಯ ಬುದ್ಧಿಗಳನ್ನು ಪ್ರಯೋಗಿಸಿ ಬಾಬರಿ ಮಸೀದಿಯನ್ನು ನೆಲಸಮಗೊಳಿಸುವಲ್ಲಿ ಯಶಸ್ವಿಯೂ ಆದರು.ಇಲ್ಲಿ ಸಂಘಪರಿವಾರದ ಉದ್ದೇಶ ಮಸೀದಿಯನ್ನು ಧ್ವಂಸಗೊಳಿಸುವುದಾಗಿರಲ್ಲಿಲ್ಲ ಬದಲಾಗಿ ದೇಶಾದಾದ್ಯಂತ ಕೋಮುಗಲಭೆಯನ್ನು ಸ್ರಷ್ಟಿಸಿ,ಮುಸಲ್ಮಾನರ ಪ್ರಾರ್ಥನಾಲಯಗಳನ್ನು ನಾಶ ಮಾಡಿ ಅವರ ಮನದಲ್ಲಿ ಭಯವನ್ನು ತುಂಬಿಸಿ ಅವರ ಶಕ್ತಿಯನ್ನು ನಿಷ್ಕ್ರಿಯಗೊಳಿಸಿ  ತಮ್ಮದೇ ಆದ ಒಂದು ಹೊಸ ಸಾಮ್ರಾಜ್ಯವನ್ನು ರೂಪಿಸುವ ಬಹುದೊಡ್ಡ ಯೋಜನೆಯೊಂದನ್ನು ಕೈಗೊಂಡಿತ್ತು ಆದರೆ ಇಸ್ಲಾಮಿನ ತಕ್ವಗಳನ್ನು ಮೈಗೂಡಿಸಿಕೊಂಡು ಅಲ್ಲಾಹನಿಗೆ ಹೊರತು ಬೇರೆ ಯಾರಿಗೂ ಹೆದರದ ಹಲವು ಮುಸಲ್ಮಾನರು ಈ ಸಮಾಜದಲ್ಲಿ ಇನ್ನೂ ಸಹ ಜೀವಂತವಾಗಿರುವುದರಿಂದ ಇವರು ಹಾಕಿದ ಗುರಿಯ ಒಂದಂಶವನ್ನೂ ಮುಟ್ಟಲು ಈಗಲೂ ಸಹ ಹೆಣಗಾಡುತ್ತಿದ್ದಾರೆ.
    ಬಾಬರಿ ಮಸೀದಿ ಶಹೀದ್ ಆಗಿ ಇಂದಿಗೆ ವರುಷ ೨೨ ಸಂದರೂ ಅದರ ನೆನಪು ಮಾತ್ರ ಎಂದೆಂದಿಗೂ ಅಮರ,ಆದರೆ ಇದರ ಹಿಂದಿರುವ ಹಲವಾರು ಸತ್ಯಾಂಶಗಳು ನಮ್ಮಲ್ಲಿ ಹಲವರಿಗೆ ತಿಳಿದಿಲ್ಲ ಆದ್ದರಿಂದ "ನ್ಯಾಯದ ನಿರೀಕ್ಷೆಯಲ್ಲಿ ಬಾಬರ್ ಮಸೀದಿ" ಎಂಬ ಪುಸ್ತಕದಿಂದ ಆಯ್ದಂತಹ ಕೆಲವು ಪ್ರಮುಖ ಘಟನಾವಳಿಗಳನ್ನು ನಿಮಗೆ ನೆನಪಿಸುವ ಉದ್ದೇಶದಿಂದ ಇಲ್ಲಿ ವಿವರಿಸಿದ್ದೇನೆ

 *1528:ಆಡಳಿತಗಾರ ಬಾಬರ್ ಗೆ ಗೌರವಯುತವಾಗಿ ಮುಘಲ್ ಗವರ್ನರ್ ಮೀರ್ ಬಾಕ್ರಿ ಬಾಬರಿ ಮಸ್ಜಿದ್ ನಿರ್ಮಿಸಿದನು.ಮಧ್ಯಕಾಲೀನ ಸಾಹಿತ್ಯದಲ್ಲಿ ಹಿಂದೂ ಮಂದಿರದ ಕುರಿತು ಅಥವಾ ಸ್ಥಳದಲ್ಲಿ ರಾಮನ ಸಂಬಂದದ ಕುರಿತು  ಯಾವುದೇ ರೀತಿಯ ಪ್ರಸ್ತಾಪವಿಲ್ಲ

*1532-1623:ತುಳಸಿದಾಸನು ರಾಮಯಣದ ಹಿಂದಿ ಆವ್ರತಿ’ರಾಮ್ ಚರಿತ್ ಮಾನಸ್’ ಅನ್ನು ಬರೆಯುತ್ತಾನೆ.ರಾಮನನ್ನು ಹಿಂದೂ ದೇವರಾದ ವಿಷ್ಣುವಿನ ಅವತಾರವಾಗಿ ಪೂರ್ಣ ದೇವತೆಯ ಸ್ಥಾನಕ್ಕೆ ಏರಿಸಲಾಯಿತು,ತುಳಸಿದಾಸನು ಅಯೋದ್ಯೆಯಲ್ಲಿ ಬಾಬರಿ ಮಸ್ಜಿದ್ ನೊಂದಿಗೆ ರಾಮ ಜನ್ಮ ಸ್ಥಳದ ಸಂಬಂದವನ್ನು ಎಲ್ಲಿಯೂ ಕಲ್ಪಿಸಿಲ್ಲ.

*1759-60:ರಾಜ್ ಚತುರ್ಮಾನ್ ತನ್ನ"ಚಹರ್ ಗುಲ್ಶನ್" ನಲ್ಲಿ ಮೊದಲ ಬಾರಿಗೆ ಆಧುನಿಕ ಅಯೋಧ್ಯೆಯು ರಾಮನ ಜನ್ಮಸ್ಥಾನವಾಗಿರುವ ಸಾಧ್ಯತೆ ಇದೆ ಎಂದು ಉಲ್ಲೇಖಿಸುತ್ತಾನೆ.ಆದರೆ ಬಾಬರಿ ಮಸೀದಿಯೊಂದಿಗೆ ಇದರ ಸಂಬಂದದ ಬಗ್ಗೆ ಯಾವುದೇ ಪ್ರಸ್ತಾಪ ಮಾಡಿಲ್ಲ.

*1788:ಕ್ಯಾಥೋಲಿಕ್ ಧರ್ಮಗುರು ಜೋಸೆಫ್ ಟೀಫನ್ತೆಲೆರ್ ರಾಮ ಜನ್ಮಸ್ಥಳವು ಮಸ್ಜಿದ್ ಸಮೀಪದಲ್ಲಿದೆ ಎಂದು ನಂಬಲಾಗಿದೆ ಎಂದು ಉಲ್ಲೇಖಿಸುತ್ತಾನೆ.ಮಸ್ಜಿದ್ ರಾಮನ ಜನ್ಮಸ್ಥಳವಾಗಿರಬಹುದೆಂಬ ಮೊತ್ತಮೊದಲ ಪ್ರಸ್ತಾಪದಲ್ಲಿ ಯಾವುದೇ ದಾಖಲೆಗಳು ಅಥವಾ ಪುರಾವೆಗಳನ್ನು ನೀಡಿಲ್ಲ.ಅಯೋಧ್ಯೆಯಲ್ಲಿರುವ ಹಲವು ಪ್ರದೇಶಗಳನ್ನು ರಾಮನ ಜನ್ಮಸ್ಥಳ ಎಂದು ಹೇಳಲಾಗುತ್ತಿತ್ತು.

*1859:ಬ್ರಿಟೀಷ್ ಆಡಳಿತವು ಮಸ್ಜಿದ್ ನ ಒಳಾಂಗಣವನ್ನು ಮುಸ್ಲಿಮರಿಗೆ ಮತ್ತು ಹೊರಾಂಗಣವನ್ನು ಹಿಂದೂಗಳಿಗೆ ಪ್ರಾರ್ಥನೆ ಮಾಡಲು ಅನುಮತಿಸುವುದರೊಂದಿಗೆ ಪ್ರತ್ಯೇಕ ಪ್ರಾರ್ಥನಾಲಯಗಳಾಗಿ ಬೇರ್ಪಡಿಸುದಕ್ಕೆ ಬೇಲಿ ಹಾಕುತ್ತದೆ

*1885:ರಾಮ್ ಚಬೂತ್ರದಲ್ಲಿ ಮಂದಿರವನ್ನು ಕಟ್ಟಲು ಅನುಮತಿಯನ್ನು ಕೋರಿ ಮಹಾಂತ್ ರಘುವೀರ್ ನಿಂದ ಮೊದಲ ದೂರು ದಾಖಲಾಗುತ್ತದೆ,ಆದರೆ ಪೈಝಾಬಾದ್ ಜಿಲ್ಲಾಕೋರ್ಟ್ ದೂರನ್ನು ತಿರಸ್ಕರಿಸಿತು
 
*ಡಿಸೆಂಬರ್22,1949:ಸಂಘಪರಿವಾರದ ಗುಂಪೊಂದು ರಾತ್ರಿ ಸಮಯದಲ್ಲಿ ಯಾರಿಗೂ ಗೊತ್ತಾಗದ ರೀತಿಯಲ್ಲಿ ರಾಮನ ವಿಗ್ರಹವೊಂದನ್ನು ಮಸೀದಿಯೊಳಗೆ ಇರಿಸುತ್ತದೆ

*ಜನವರಿ 6,1950:ಜಿಲ್ಲಾ ಮಾಜಿಸ್ಟ್ರೇಟ್ ಕೆ.ಕೆ ನಯ್ಯರ್ ಎಂಬಾತನು ಬಾಗಿಲುಗಳಿಗೆ ಬೀಗಹಾಕುವ ಮೂಲಕ ಮತ್ತು ಅಯೋದ್ಯೆ ಮುನ್ಸಿಪಾಲ್ ಕಾರ್ಪೋರೇಷನ್ ಅನ್ನು ಆಸ್ತಿ ನಿರ್ವಾಕನಾಗಿ ನೇಮಿಸಿ ಮಸೀದಿಯನ್ನು ಜಪ್ತಿ ಮಾಡುತ್ತಾರೆ.ಕೆಲಸಮಯದ ಜನ ಸಂಘದ ಟಿಕೆಟ್ ಮೂಲಕ ಸಂಸದನಾಗಿ ಆಯ್ಕೆಯಾದ ನಯ್ಯರ್ ವಿಗ್ರಹಗಳಿಗೆ ಪೂಜೆ ಮಾಡುವ ಮತ್ತು ಅದರ ಉಸ್ತುವಾರಿ ನಡೆಸುವ ಅನುಮತಿಯನ್ನು ನೀಡುತ್ತಾನೆ.ಮುಸ್ಲಿಮರು ತಮ್ಮ ಸ್ವಂತ ಮಸೀದಿಯ 300 ಯಾರ್ಡ್ ಗಿಂತ ಹತ್ತಿರ ಸಮೀಪಿಸುವುದಕ್ಕೆ ನಿರ್ಬಂದಿಸಲಾಯಿತು.

*1950:ಮಸೀದಿ ಗೇಟ್ ಗಳು ಮುಕ್ತವಾಗಬೇಕು ಮತ್ತು ನಮಾಜ್ ಗೆ ಅನುಮತಿಸಬೇಕೆಂದು ಕೋರಿ ಹಾಶಿಮ್ ಅನ್ಸಾರಿ ಪೈಝಾಬಾದ್ ಕೋರ್ಟ್ ನಲ್ಲಿ ದಾವೆ ಹೂಡುತ್ತಾರೆ.ಇದಾದ ಕೂಡಲೇ ಆಸ್ಥಾನ್ ಜನ್ಮ ಭೂಮಿಯಲ್ಲಿ ವಿಗ್ರಹಗಳಿಗೆ ಪ್ರಾರ್ಥನೆ ಮಾಡಲು ಅವಕಾಶವನ್ನು ಬೇಡುತ್ತಾ  ಗೋಪಾಲ್ ವಿಶಾರದ್ ಮತ್ತು ಮಹಾಂತ್ ಪರಮಹಂಸ ರಾಮಚಂದ್ರ ದಾಸ್ ದಾವೆ ಹೂಡುತ್ತಾರೆ.

*1959:ಮಂದಿರದ ವ್ಯವಸ್ಥಾಪಕತ್ವದಿಂದ ಪ್ರಿಯಾದತ್ ರಾಮ್ ರನ್ನು ವಜಾಗೊಳಿಸುವಂತೆ ಹಾಗೂ ತನ್ನನ್ನೆ ಮಂದಿರದ ಉಸ್ತುವಾರಿ ನೋಡಿಕೊಳ್ಳಲಾಗುವಂತೆ ಕೋರಿ ನಿರ್ಮೋಹಿ ಅಖಾಡವು (ಮಹಂತ್ ಬಾಸ್ಕರ್ ದಾಸ್ ನೆತ್ರತ್ವದಲ್ಲಿ)ಪೈಝಾಬಾದ್ ಕೋರ್ಟ್ ನಲ್ಲಿ ಒಂದು ದೂರನ್ನು ದಾಖಲಿಸಿತಿ.

*1961:ಮಸ್ಜಿದ್ನಲ್ಲಿ ಮುಸ್ಲಿಮರಿಗೆ ಪ್ರಾರ್ಥನೆ ಮಾಡುವ ಹಕ್ಕನ್ನು ಮರು ಸ್ಥಾಪಿಸುವಂತೆ ಉತ್ತರಪ್ರದೇಶದ ಸುನ್ನಿ ಸೆಂಟ್ರಲ್ ವಕ್ಫ್ ಬೋರ್ಡ್ ದಾವೆಯನ್ನು ಹೂಡಿತು.

*1964:ಹಿಂದೂಗಳು ಸಲ್ಲಿಸಿದ ಮೂರು ದಾವೆ ಮತ್ತು ಮುಸ್ಲಿಮರು ಸಲ್ಲಿಸಿದ ಒಂದು ದಾವೆಯನ್ನು ದಾವೆ ನಂ 12/196 ಎಂದು ಕ್ರೋಡಿಕರಿಸುವುದರೊಂದಿಗೆ ಈ ವಿವಾದ ಪ್ರಮುಖ ಪ್ರಮುಖ ದಾವೆಯಾಗಿ ಮಾರ್ಪಟ್ಟಿತು.

*1984:ಮೊಘಲ್ ಸಾಮ್ರಾಟ ಬಾಬರ್ ರಾಮ ಮಂದಿರವನ್ನು ನಿರ್ಮೂಲನಗೊಳಿಸಿದ್ದಾನೆ ಎಂದು ಹೇಳಿಕೊಳ್ಳುವ ಕೆಲವು ಮತಾಂಧ ಹಿಂದೂಗಳು ಮಸ್ಜಿದ್ ತಮ್ಮದೇ ಎಂದು ವಾದಿಸುತ್ತಾ ಅದರ ಬೀಗ ತೆಗೆಯುವಂತೆ ವಿಶ್ವ ಹಿಂದೂ ಪರಿಷತ್ ನೇತ್ರತ್ವದಲ್ಲಿ ಬ್ರಹತ್ ಚಳುವಳಿಯೊಂದನ್ನು ಪ್ರಾರಂಭಿಸಿತು.

*1984:ವಿವಾದಿತ ಸ್ಥಳವನ್ನು ಮುಕ್ತಗೊಳಿಸಿ ಅಲ್ಲಿ ರಾಮ ಮಂದಿರವನ್ನು ಕಟ್ಟಲು ವಿಶ್ವ ಹಿಂದೂ ಪರಿಷತ್ ಸಮಿತಿಯೊಂದನ್ನು ರಚಿಸಿತು.
 
*ಪೆಬ್ರವರಿ 1,1986:ಸಾರ್ವಜನಿಕವಾಗಿ ಆರಾದನೆ ನಡೆಸಲು ಸಾಧ್ಯವಾಗಬೇಕೆಂದು ಹಿಂದೂಗಳ ಪರವಾಗಿ ಯು.ಸಿ ಪಾಂಡೆ ಎಂಬಾತನು ನೀಡಿದ ದಾವೆಯನ್ನು ಆಧರಿಸಿ ಜಿಲ್ಲಾ ಮ್ಯಾಜಿಸ್ಟ್ರೀಟ್ ಟಿ.ಕೆ ಪಾಂಡೆಯ ಶಿಫಾರಸ್ಸಿನ ಮೇರೆಗೆ ಜಿಲ್ಲಾ ನ್ಯಾಯಾಧೀಶ ಕೆ.ಎಂ ಪಾಂಡೆ ಎಂಬಾತನು ಮುಸ್ಲಿಮರ ಅಭಿಪ್ರಾಯವನ್ನು ಕಡೆಗಣಿಸಿ ಹಿಂದೂಗಳಿಗೆ ಸಾರ್ವಜನಿಕವಾಗಿ ಪ್ರಾರ್ಥಿಸಲು ಅನುಮತಿ ನೀಡಿದನು.ಮಾಧ್ಯಮಗಳ ಹಾಗು ಭರ್ಜರಿ ಪ್ರಚಾರದ ಸಮ್ಮುಖದೊಂದಿಗೆ ಮಸ್ಜಿದನ್ನು ಹಿಂದೂಗಳಿಗೆ ನೀಡಲಾಯಿತು.

*ನವೆಂಬರ್ 9,1989:ಆಗಿನ ಪ್ರಧಾನಿ ರಾಜೀವ್ ಗಾಂಧಿಯವರು ವಿವಾದಿತವಲ್ಲದ ಸ್ಥಳದಲ್ಲಿ ಶಿಲಾನ್ಯಾಸ ಅಥವಾ ನೆಲ ಅಗೆಯುವ ಕೆಲಸಕ್ಕೆ ಅನುಮತಿ ನೀಡಿದರು.

*ನವೆಂಬರ್11,1989:ಬಿ.ಜೆ.ಪಿ ಮತ್ತು ವಿ.ಎಚ್.ಪಿ ಕೂಟವು ಮುಸ್ಲಿಮರು ತಮ್ಮ ವಕ್ಫ್ ನ ಭಾಗವಾಗಿದೆ ಎಂದು ವಾದಿಸುತ್ತಿದ್ದ ಭೂಮಿ ಪಕ್ಕದಲ್ಲೇ ಮಂದಿರ ನಿರ್ಮಾಣಕ್ಕಾಗಿ ಅಡಿಪಾಯವನ್ನು ಹಾಕಿತು.ರಕ್ತ ರಂಜಿತ ರಥ ಯಾತ್ರೆಯು ದ್ವೇಷವನ್ನು ಬಿತ್ತಿತು,ಮುಸ್ಲಿಮ್ ವಿರೋಧಿ ಭಾವನೆಯನ್ನು ಕೆರಳಿಸಿತು ಮತ್ತು ವ್ಯಾಪಕ ಗಲಭೆಯನ್ನು ಸ್ರಷ್ಟಿಸಿತು.ಈ ವಿವಾದವು ಹೈಕೋರ್ಟ್ ಮತ್ತು ಸುಪ್ರೀಮ್ ಕೋರ್ಟ್ ಮುಂದೆ ಕಾಯ್ದಿರಿಸಲಾಯಿತು.

*ಸೆಪ್ಟೆಂಬರ್ 25,1990:ಆಗಿನ ಬಿ.ಜೆ.ಪಿ ಅಧ್ಯಕ್ಷ ಅಡ್ವಾಣಿಯ ನೇತ್ರತ್ವದಲ್ಲಿ ಗುಜರಾತಿನ ಸೋಮನಾಥದಿಂದ ಉತ್ತರಪ್ರದೇಶದ ಅಯೋಧ್ಯೆವರೆಗೆ ರಥಯಾತ್ರೆಯನ್ನು ನಡೆಸಲಾಯಿತು.

*ನವೆಂಬರ್,1990:ಬಿಹಾರದ ಸಮಸ್ತಿಪುರದತ್ತ ಸಾಗುತ್ತಿರುವ ಅಡ್ವಾಣಿಯನ್ನು ಬಂದಿಸಲಾಯಿತು.ಅದರ ಪರಿಣಾಮವಾಗಿ ಬಿ.ಜೆ.ಪಿ ಮತ್ತು ಎಡಪಕ್ಷಗಳ ಬೆಂಬಲದ ವಿ.ಪಿ ಸಿಂಗ್ ನೇತ್ರತ್ವದ ಸರಕಾರಕ್ಕೆ ಬಿ.ಜೆ.ಪಿ ನೀಡಿದ ಬೆಂಬಲ ಹಿಂಪಡೆಯುವುದರೊಂದಿಗೆ ಸರಕಾರ ಪತನವಾಯಿತು.

*1991:ಉತ್ತರ ಪ್ರದೇಶದಲ್ಲಿ ಬಿ.ಜೆ.ಪಿ ಅಧಿಕಾರ ಹಿಡಿಯಿತು.

*ಅಕ್ಟೋಬರ್ 7,1991:ಉತ್ತರ ಪ್ರದೇಶದ ಬಿ.ಜೆ.ಪಿ ಸರಕಾರವು ಮಸ್ಜಿದ್ ನ ಸಾಮಿಪ್ಯವಿದ್ದ 2.77 ಎಕರೆ ವಕ್ಫ್ ಭೂಮಿಯನ್ನು ಸ್ವಾದೀನಪಡಿಸಿಕೊಂಡಿತು ಮತ್ತು ನಿರ್ಮಾಣ ಕಾಮಗಾರಿಯನ್ನು ಪ್ರಾರಂಭಿಸಿತು.ಕಾಮಗಾರಿ ನಿಲ್ಲಿಸುವಂತೆ ಸುಪ್ರೀಮ್ ಕೋರ್ಟ್ ನೀಡಿದ ಹಲವು ನಿರ್ದೇಶನಗಳನ್ನು ಮುಖ್ಯಮಂತ್ರಿ ಕಲಾಣ್ ಸಿಂಗ್ ಕಡೆಗಣಿಸಿದರು.

*ಜುಲೈ 23,1992:ತನಗೆ ಪರಿಹಾರವೊಂದನ್ನು ಕಂಡುಹುಡುಕುವುದಕ್ಕಾಗಿ ಕಾಮಗಾರಿ ನಿಲ್ಲಿಸುವಂತೆ ಪ್ರಧಾನ ಮಂತ್ರಿ ಸಾದುಗಳೊಂದಿಗೆ ಒಪ್ಪಂದವೊಂದನ್ನು ಮಾಡಿಕೊಳ್ಳುತ್ತಾರೆ.ಉತ್ತರ ಪ್ರದೇಶ ಮುಖ್ಯಮಂತ್ರಿ ಮಸ್ಜಿದ್ ಗೆ ರಕ್ಷಣೆ ನೀಡುವ ಮತ್ತು ಯಥಾ ಸ್ಥಿತಿ ಕಾಪಾಡುವ ಭರವಸೆ ನೀಡುತ್ತಾರೆ.

*ನವೆಂಬರ್ 28,1992:ಸುಪ್ರೀಮ್ ಕೋರ್ಟ್ ನಿರ್ಧಾರವನ್ನು ಲಕ್ಷಿಸದೆ ಮಂದಿರ ನಿರ್ಮಾಣ ಕಾಮಗಾರಿ ಮುಂದುವರಿಯುತ್ತದೆಂದು ಎಲ್.ಕೆ ಅಡ್ವಾಣಿಯಿಂದ ಸವಾಲು.

*ಡಿಸೆಂಬರ್ 6,1992:ಬಿ.ಜೆ.ಪಿ , ಆರ್.ಎಸ್.ಎಸ್ ಮತ್ತು ಸಂಘಪರಿವಾರದ ಮೂರು ಲಕ್ಷಕ್ಕಿಂತಲೂ ಅಧಿಕ ಸ್ವಯಂ ಸೇವಕರು ಕರಸೇವೆಗಾಗಿ ಒಟ್ಟು ಸೇರುತ್ತಾರೆ.ಪೋಲಿಸರು ಮದ್ಯ ಪ್ರವೇಶಿಸುವುದಿಲ್ಲ,ಮುಸ್ಲಿಮರ ಪ್ರಾರ್ಥನಾಲಯ ಮತ್ತು ಐತಿಹಾಸಿಕ ಸ್ಮಾರಕವಾಗಿದ್ದಂತಹ ಬಾಬರಿ ಮಸ್ಜಿದ್ ಸಂಪೂರ್ಣ ನೆಲಸಮವಾಗುತ್ತದೆ.ಈ ಘಟನೆಯು ದೇಶದಾದ್ಯಂತ ಕೋಮುಗಲಭೆ ಸ್ರಷ್ಟಿಸಲು ಕಾರಣವಾಯಿತು ಮತ್ತು ಸುಮಾರು ಎರಡು ಸಾವಿರಕ್ಕಿಂತಲೂ ಅಧಿಕ ಜನರು ಬಲಿಯಾದರು
   ಹೀಗೆಯೆ ಐತಿಹಾಸಿಕ ಸ್ಮಾರಕ ಬಾಬರಿ ಮಸೀದಿಯು ಬ್ರಿಟಿಷರ ಎಜೆಂಟರಾದ ಸಂಘಪರಿವಾರದವರಿಂದ ದುರಂತ ಕಂಡಿತು.
 ಮೇಲಿನ ಎಲ್ಲಾ ಅಂಶಗಳನ್ನು "ನ್ಯಾಯದ ನಿರೀಕ್ಷೆಯಲ್ಲಿ ಬಾಬರಿ ಮಸ್ಜಿದ್"ಎಂಬ ಪುಸ್ತಕದಿಂದ ಸಂಗ್ರಹಿಸಲಾಗಿದೆ.
ಇಂಶಾಅಲ್ಲಾಹ್ ಒಂದಲ್ಲ ಒಂದು ದಿನ ನಾವು ಬಾಬರ್ ಮಸೀದಿಯನ್ನು ಪುನಃ ನಿರ್ಮಿಸೋಣ.ಸಂಘಪರಿವಾರದವರಿಂದ ಹರಾಜಾಗಿರುವ ನಮ್ಮ ದೇಶದ ಸಂವಿದಾನದ ಗೌರವವನ್ನು ಮತ್ತೆ  ಎತ್ತಿ ಹಿಡಿಯೋಣ.

* ಮಹಮ್ಮದ್ ಅನ್ವರ್ ಮಠ.

 
Design by Free WordPress Themes | Bloggerized by - Free Blogger Themes | @javtl