Monday 26 March 2012

ವಿಟ್ಲ ಗ್ರಾಮ ಪಂಚಾಯತ್ ನಲ್ಲಿ ಸ್ವಚತಾ ಕಾರ್ಯಕ್ರಮ


ವಿಟ್ಲ: ಸ್ವಚ್ಛತೆಯ ಗ್ರಾಮ ನಮ್ಮ ಜೀವನ ಹೇಗಿರಬೇಕೆಂದು ತೋರಿಸುತ್ತದೆ, ಸ್ವಚ್ಛ ಗ್ರಾಮವಿದ್ದಾರೆ ನಮ್ಮ ಆರೋಗ್ಯವು ಉತ್ತಮವಾಗಿರುತ್ತದೆ ಎಂದು ದ.ಕನ್ನಡ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಕೆ.ಟಿ ಶೈಲಜಾ ಭಟ್ ಹೇಳಿದರು.
  ವಿಟ್ಲ ಗ್ರಾ.ಪಂಚಾಯಿತಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ. ಜನಶಿಕ್ಷಣ ಟ್ರಸ್ಟ್ ಮಂಗಳೂರು ಹಾಗೂ ಸಮಾಜ ಕಾರ್ಯ ವಿದ್ಯಾರ್ಥಿಗಳು ವಿಟ್ಲ ಸರ್ಕಾರಿ ಕಾಲೇಜು ಇದರ ಸಹಯೋಗದಲ್ಲಿ ಭಾನುವಾರ ಸಂಜೆ ವಿಟ್ಲ ಪಂಚಾಯಿತಿ ಸಭಾಭವನದಲ್ಲಿ ನಡೆದ "ಸ್ವಚ್ಛ ಗ್ರಾಮದೆಡೆಗೆ-ನಮ್ಮ ನಡಿಗೆ" ವಿಶೇಷ ನೈರ್ಮಲ್ಯ ಸಪ್ತಾಹ ವಿಶೇಷ ಪ್ರೇರಣಾ ಶಿಬಿರವನ್ನು ಉದ್ಘಾಟಸಿ ಅವರು ಮಾತನಾಡಿದರು.
ಜನರಿಗೆ ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸಬೇಕು, ಕಸ ತ್ಯಾಜಗಳನ್ನು ಸಂಗ್ರಹಿಸಿ ವಿಲೇವೇರಿ ಮಾಡಬೇಕು, "ಸ್ವಚ್ಛ ನಿರ್ಮಾಲ ಗ್ರಾಮ" ಬಹುಮಾನದಲ್ಲಿ ಬಂದ ೫೦ಲಕ್ಷ ರೂ. ಹಣವನ್ನು ಇಂತಹ ಕಾರ್ಯಗಳಿಗೆ ಬಳಸಲಾಗುವುದು ಎಂದರು.
 ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ವಿಟ್ಲ ಗ್ರಾ.ಪಂ ಅಧ್ಯಕ್ಷ ರಮಾನಾಥ ವಿಟ್ಲ  ಇನ್ನೂ ೬ ತಿಂಗಳ ಒಳಗೆ ವಿಟ್ಲ ಪರಿಸರದ ಎಲ್ಲಾ ಚರಂಡಿಗಳನ್ನು ಸ್ವಚ್ಛಗೊಳಸಲಾಗುವುದು ಹಾಗೂ ವಿಟ್ಲ ರಸ್ತೆ ವಿಸ್ತರಣೆ ಅನುದಾನವಾದ ಹಣವನ್ನು ನಾಲ್ಕು ಮಾರ್ಗದಲ್ಲಿ ಚರಂಡಿ ವ್ಯವಸ್ಥೆಯನ್ನು ಮಾಡಲಾಗುವುದು ಎಂದು ತಿಳಿಸಿದರು.
  ಬಂಟ್ವಾಳ ತಾಲ್ಲೂಕು ಪಂಚಾಯಿತಿ ಸದಸ್ಯರಾದ ಉಷಾ ಕೆ, ಜೂಲಿಯಾನ ಮೇರಿ ಲೋಬೋ, ಮಂಗಳೂರು ಜನಶಿಕ್ಷಣ ಟ್ರಸ್ಟ್ ಇದರ ನಿರ್ದೇಶಕ ಶ್ರೀ ಕೃಷ್ಣ ಮೂಲ್ಯ,  ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಇದರ ಯೋಜನಾಧಿಕಾರಿ ದಯಾವತಿ, ವಿಶೇಷ ಆರ್ಥಿಕ ವಲಯ ಹಸಿರು ಪಟ್ಟಿ ಇದರ ಸಲಹೆಗಾರ ದೀನೇಶ್ ನಾಯಕ್, ವಿಟ್ಲ ಸಮುದಾಯ ಆರೋಗ್ಯ ಕೇಂದ್ರ ಇಲ್ಲಿಯ ವೈದ್ಯಾಧಿಕಾರಿ ಡಾ.ಪ್ರಶಾಂತ್, ಉಪನ್ಯಾಸಕ ಜಾನ್ ಡಿ,ಸೋಜ, ಪಂ ಅಭಿವೃದ್ಧಿ ಅಧಿಕಾರಿ ರಮೇಶ್ ರಾಠೋಡ್, ಕಾರ್ಯದರ್ಶಿ ಜಗದೀಶ್ ನಾಯಕ್, ಎಂ.ಕೆ ಮೂಸ ಇದ್ದರು.
    ಮಾರ್ಚ್ ೨೫ರಿಂದ ಮಾರ್ಚ್ ೩೧ ವರೆಗೆ ವಿಟ್ಲ ಪರಿಸರದ ವಿವಿಧಕಡೆಗಳಲ್ಲಿ ಸ್ವಚ್ಛ ಗ್ರಾಮದೆಡೆಗೆ-ನಮ್ಮ ನಡಿಗೆ" ವಿಶೇಷ ನೈರ್ಮಲ್ಯ ಸಪ್ತಾಹ ಕಾರ್ಯಕ್ರಮ ನಡೆಯಲಿದೆ.



0 comments:

Post a Comment

 
Design by Free WordPress Themes | Bloggerized by - Free Blogger Themes | @javtl