Saturday 29 November 2014

ಮರೆಯದಿರೋಣ ಬಾಬರಿ ಮಸ್ಜಿದ್...!

ಮರೆಯದಿರೋಣ ಡಿಸೆಂಬರ್ 6..!!!

ಭಾರತೀಯ ಭವ್ಯ ಇತಿಹಾಸಕ್ಕೆ ಕಪ್ಪು ಮಸಿ ಬಳಿದ ಆ ಕರಾಳ ದಿನ ಮಗದೊಮ್ಮೆ ನಮ್ಮ ಮುಂದೆ ಬರುತ್ತಿದೆ.

400 ವರ್ಷಗಳ ಕಾಲ ಅಲ್ಲಾಹನಿಗೆ ಸುಜೂದ್ ಕರುಣಿಸಿದ ಆ ಭವ್ಯ ಮಂದಿರದ ಧ್ವಂಸ ನಮ್ಮೆದೆಯಲ್ಲಿ ಮಾಸದ ಗಾಯವಾಗಿಯೇ ಉಳಿದಿದೆ.

ನೆನಪಿಸಲೂ ಅಸಹ್ಯವಾಗುತ್ತಿದೆ..!!!
ಮುಸ್ಲಿಮರ ರಕ್ಷಕ ಮುಖವಾಡವನ್ನು ಹೊತ್ತಿದ್ದ ಕಾಂಗ್ರೆಸ್ ಸರಕಾರದ ಸಂಪೂರ್ಣ ಸಹಾಯದೊಂದಿಗೆ ಸಂಘಪರಿವಾರವು ನಮ್ಮ ನಂಬಿಕೆಯನ್ನು ಮೆಟ್ಟಿ ನಿಂತು ಸವಾಲು ಹಾಕಿದ ಆ ದಿನ..!!!!

ನಿಮ್ಮ ಸವಾಲನ್ನು ನಾವು ಸ್ವೀಕರಿಸಿದ್ದೇವೆ.
ಇಂದು ಜನ್ಮ ಪಡೆಯುವ ಪುಟ್ಟ ಮಗುವಿನೊಂದಿಗೂ ನೆನಪಿಸುವೆವು ನಿಮ್ಮ ಕ್ರೂರತೆಯನ್ನು..!!!
ಇಂಶಾ ಅಲ್ಲಾಹ್...
ಮುಂದೊಂದು ದಿನ ಅಯೋಧ್ಯೆಯ ಮಣ್ಣಿನಲ್ಲಿ ಬಾಂಗ್ ಶಬ್ದ ಮೊಳಗುವ ದಿನ ದೂರವಿಲ್ಲ ಎಂಬ ಎಚ್ಚರಿಕೆ ಘಂಟೆಯ ಬಾರಿಸುತ್ತಾ,,

ಬರಲಿದೆ ಮುಂದೊಂದು ದಿನ,
ಅಂದು ಮುಸಲ್ಮಾನರ ಸುದಿನ,!!
ಬಾಬರಿ ತಲೆಯುತ್ತಿ ನಿಲ್ಲುವ ಕ್ಷಣ,
ಅವಕಾಶ ಕಾಯುತ ಪ್ರತಿ ಕ್ಷಣ..!!!

ಸಫ್ವಾನ್ ಅಡ್ಯನಡ್ಕ.

Thursday 20 November 2014

ಶಹೀದೆ ಮಿಲ್ಲತ್ ಟಿಪ್ಪು ಸುಲ್ತಾನ್ ರ.ಅ ರವರ ಜನುಮದಿನೋತ್ಸವದ ಶುಭಾಶಯಗಳು

ಟಿಪ್ಪು (ರ.ಅ )ದಿ ಗ್ರೇಟ್ ....!!!

ಭಾರತ ದೇಶ ಕಂಡ ಅಪ್ರತಿಮ ದೇಶ ಪ್ರೇಮಿ  ,ಸ್ವತಂತ್ರ್ಯ ಭಾರತಕ್ಕಾಗಿ ರಣರಂಗದಲ್ಲಿ ಶಹೀದಾದ ಪ್ರಪ್ರಥಮ ದೊರೆ,ಕಾಲಾನುಸಾರವಾಗಿ ನಡೆದಂತಹ ಆಂಗ್ಲೋ -ಮೈಸೂರು ಮೂರನೇ ಯುದ್ಧದ ಸಂದರ್ಭದಲ್ಲಿ ಒಡಂಬಡಿಕೆಯ ಪ್ರಕಾರ ಯುದ್ಧದ ಖರ್ಚನ್ನು ಭರಿಸಲು ಅಸಾಧ್ಯವಾದಂತಹ ಸಂದರ್ಭದಲ್ಲಿ ತನ್ನ ಹತ್ತು ವರ್ಷದ ಅಬ್ದುಲ್ ಮಲಿಕ್ ಹಾಗೂ ಎಂಟು ವರ್ಷದ ಮೊಯ್ದೀನ್ ಅನ್ನುವ ತನ್ನಿಬ್ಬರು ಕರುಳ ಕುಡಿಗಳನ್ನು ವರ್ಷಾನುಗಟ್ಟಲೆ ಸ್ವತಂತ್ರ್ಯ ಭಾರತಕ್ಕೋಸ್ಕರ ಒತ್ತೆಯಿಟ್ಟಂತಹ ಮಹಾನ್ ಸ್ವಾತಂತ್ರ್ಯ ಹೋರಾಟಗಾರ,ಇಲ್ಲಿನ ಹಿಂದೂ,ಮುಸ್ಲಿಂ, ಕ್ರೈಸ್ತರು ಪರಸ್ಪರ ಸಹೋದರರು ಅವರ ಹಿತವನ್ನು ಕಾಪಾಡುವುದು ನನ್ನ ಕರ್ತವ್ಯವೆಂದು ಸಾರಿದ ಮಹಾನ್ ಮೇಧಾವಿ,ಶೃಂಗೇರಿ ಮಠದಲ್ಲಿರುವ ಬೆಳೆಬಾಳುವ ಚಿನ್ನಾಭರಣಗಳನ್ನು ಲೂಟಿ ಮಾಡುವ ಉದ್ದೇಶಕ್ಕಾಗಿ ಮರಾಠರು ಶೃಂಗೇರಿ ಮಠದ ಮೇಲೆ ದಾಳಿ ಮಾಡಿದಾಗ ಕೆಚ್ಚೆದೆಯಿಂದ ಹೋರಾಡಿ ಮರಾಠರನ್ನು ಸದೆಬಡಿದು ಶೃಂಗೇರಿ ಮಠವನ್ನು ಸಂರಕ್ಷಿಸಿದ ಮಹಾನ್ ಜಾತ್ಯಾತೀತ ನಾಯಕ ಶಹೀದೆ ಮಿಲ್ಲತ್ ಟಿಪ್ಪು ಸುಲ್ತಾನ್ ರ.ಅ ರವರ ಜನ್ಮದಿನವಾಗಿದೆ ಇಂದು.

ದೇಶದ ಇತಿಹಾಸವನ್ನು ತಿರುಚಿಕೊಂಡು ಟಿಪ್ಪು ಸುಲ್ತಾನ್ ರ.ಅ ರವರು ಮುಸ್ಲಿಂ ಸಮುದಾಯದ ಹೆಸರಿನಿಂದ ಗುರುತಿಸುವರು ಅನ್ನುವ ಏಕೈಕ ಕಾರಣಕ್ಕೋಸ್ಕರ ಇಂದು ಟಿಪ್ಪು ಸುಲ್ತಾನ್  ರ.ಅ ರವರನ್ನು ಮತಾಂಧ, ದೇಶದ್ರೋಹಿ ಅನ್ನುವಂತೆ ಬಿಂಬಿಸುವ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತಿರುವುದು ಖೇದಕರ .

ತನ್ನ ಹದಿನೈದನೇ ವಯಸ್ಸಿನಲ್ಲೇ ತನ್ನ ತಂದೆಯೊಂದಿಗೆ ಪ್ರಥಮ ಮೈಸೂರು ಯುದ್ಧದಲ್ಲಿ ನಾಯಕತ್ವವನ್ನು ವಹಿಸಿಕೊಂಡು ಬ್ರಿಟಿಷರ ಮುಂದೆ ಕೆಚ್ಚೆದೆಯಿಂದ ಹೋರಾಡಿದ ಟಿಪ್ಪು ಸುಲ್ತಾನ್ ರ.ಅ ರವರು "ಮೈಸೂರಿನ ಹುಲಿ " ಅನ್ನುವ ಬಿರುದನ್ನು ಪಡೆದುಕೊಂಡು ಜಗತ್ಪ್ರಸಿದ್ಧರಾದರು.

"ನೂರು ವರ್ಷ ಇಲಿಯಾಗಿ ಬಾಳುವುದಕ್ಕಿಂತ ಮೂರು ದಿವಸ ಹುಲಿಯಾಗಿ ಜೀವಿಸು " ಎಂದು ಜಗತ್ತಿಗೆ ತನ್ನ ವೀರಾವೇಷದಿಂದ ಕೂಡಿದ ಹೋರಾಟಗಳಿಂದ  ಕಾಣಿಸಿ ಕೊಟ್ಟರು.

ಜಾತ್ಯತೀತವಾದ ಸಂವಿಧಾನವನ್ನು ನಿರ್ನಾಮಗೊಳಿಸಿ ಮನುವಾದವನ್ನು ಬೆಳೆಸಲು ಹಾತೊರೆಯುತ್ತಿರುವ ಕೆಲವು ಸ್ವಯಂಘೋಷಿತ ಧರ್ಮ ರಕ್ಷಕರೆನಿಸಿಕೊಳ್ಳುವ ಸಂಘಪರಿವಾರದವರು ಕೆ.ಎಲ್ ಬೈರಪ್ಪ,ಡಿ.ಎಚ್ ಶಂಕರಮೂರ್ತಿ ಯಂತವರು ಬರೆದಂತಹ ಕಾದಂಬರಿಗಳನ್ನು ದೇಶದ ಇತಿಹಾಸವೆಂದು ತಿಳಿದು  ಟಿಪ್ಪು ಸುಲ್ತಾನ್ ರ.ಅ ರವರನ್ನು ಮತಾಂಧರನ್ನಾಗಿ ಚಿತ್ರೀಕರಿಸುತ್ತಿರುವುದು ವಿಪರ್ಯಾಸ..!!

ಬ್ರಿಟಿಷರ ಪಾಲಿಗೆ ಕಗ್ಗಂಟಾಗಿದ್ದಂತಹ ಟಿಪ್ಪು ಸುಲ್ತಾನ್ ರ.ಅ ರವರನ್ನು ರಣರಂಗದಲ್ಲಿ ಸೋಲಿಸುವುದು ಅಸಾಧ್ಯವೆಂದು ಮನಗಂಡಂತಹ ಬ್ರಿಟಿಷರು ಕುತಂತ್ರದ ಮೂಲಕ ಅವರನ್ನು ಸಾಯಿಸಿದರು.ಬ್ರಿಟಿಷರ ಗುಂಡುಗಳು ಅವರ ಎದೆಗಳನ್ನು ಸೀಳಿದಾಗಲೂ ಅವರು ತನ್ನನ್ನು ವಂಚನೆಯ ಮೂಲಕ ಆಕ್ರಮಿಸಲು ಬಂದ ಬ್ರಿಟಿಷರ ವಿರುದ್ಧ ವೀರಾವೇಷದಿಂದ ಹೋರಾಡಿದ್ದರು.ಅವರ ಪ್ರಾಣಪಕ್ಷಿ ಹಾರಿಹೋಗಿದೆ ಅನ್ನುವುದನ್ನು ಖಚಿತಪಡಿಸಿಕೊಂಡ ಬ್ರಿಟಿಷರು ಅವರ ಎದೆಯ ಮೇಲೆ ನಿಂತು "ಇಂದಿನಿಂದ ಭಾರತ ನಮ್ಮದು " ಎಂದು ಉದ್ಘರಿಸಿದರು...!!

ಅಂದು ಬ್ರಿಟಿಷರ ಪಾಲಿಗೆ ಸಿಂಹಸ್ವಪ್ನರಾಗಿದ್ದರು ಶಹೀದೆ ಮಿಲ್ಲತ್ ಟಿಪ್ಪು ಸುಲ್ತಾನ್ ರ.ಅ ...!!

ಇಂದು ಕೋಮುವಾದಿಗಳ ಪಾಲಿಗೆ ಸಿಂಹಸ್ವಪ್ನವಾಗಿಬಿಟ್ಟಿದೆ ಶಹೀದೆ ಮಿಲ್ಲತ್ ಟಿಪ್ಪು ಸುಲ್ತಾನ್ ರ.ಅ ರವರ ಆ ಕೆಚ್ಚದೆಯ ನೆನಪುಗಳು...!!

ನಾಡಿನ ಸರ್ವ ಜನತೆಗೂ ಶಹೀದೆ ಮಿಲ್ಲತ್ ಟಿಪ್ಪು ಸುಲ್ತಾನ್ ರ.ಅ ರವರ ಜನುಮದಿನೋತ್ಸವದ ಶುಭಾಶಯಗಳನ್ನು ಸಲ್ಲಿಸುತ್ತಾ, ನಮ್ಮೊಳಗಿರುವ ಮೀರ್ ಸಾದಿಕ್ ರಂತವರನ್ನು  ,ಕೋಮುವಾದಿಗಳನ್ನೂ ಹಿಮ್ಮೆಟ್ಟಿಸುತ್ತಾ ಸೌಹಾರ್ದಯುತ ಸಮಾಜ ನಿರ್ಮಾಣಕ್ಕೆ ಟಿಪ್ಪು ಸುಲ್ತಾನ್ ರ.ಅ ರವರು ತೋರಿಸಿಕೊಟ್ಟ ಧೈರ್ಯವು ಸ್ಪೂರ್ತಿಯಾಗಲಿ ಅಂದು ಹಾರೈಸುತ್ತಿದ್ದೇನೆ.

ಸ್ನೇಹಜೀವಿ ಅಡ್ಕ

Wednesday 12 November 2014

ಕ್ಷಮಿಸಿ ಬಿಡು ಸಹೋದರಿ ನಂದಿತಾ ನನ್ನನ್ನು.......

ಕ್ಷಮಿಸಿ ಬಿಡು ಸಹೋದರಿ ನಂದಿತಾ ನನ್ನನ್ನು..........
ನಿನಗೆ ಆಗಿರುವ ಅನ್ಯಾಯದ ವಿರುದ್ಧ ಅಕ್ಷರಗಳ ಮೂಲಕವಾದರೂ ಧ್ವನಿ ಎತ್ತಬೇಕೆಂದು ಪೆನ್ನನ್ನು ಕೈಗೆ ತೆಗೆದುಕೊಂಡಾಗಳೆಲ್ಲಾ ಯಾರ ಬಗ್ಗೆ ಬರೆಯಬೇಕೆಂಬುದರ ಅರಿವೇ ಇಲ್ಲದೆ ಕಂಗಾಲಾಗಿದ್ದೇನೆ
*ನಿನ್ನ ಸಾವನ್ನೇ ಬಂಡವಾಳವಾಗಿಸಿಕೊಂಡು ತಮ್ಮ ರಾಜಕೀಯ ಬೇಳೆಯನ್ನು ಬೇಯಿಸಿಕೊಳ್ಳಲು ಪ್ರಯತ್ನಿಸುತ್ತಿರುವ ದುಷ್ಟ ರಾಜಕಾರಣಿಗಳ ಬಗ್ಗೆ ಬರೆಯಲೇ?
*ಇನ್ನೊಂದು ಧರ್ಮದವರ ವಿರುದ್ಧ ದಾಳಿ ನಡೆಸಲು ಹಾಗು ಸಮಾಜಘಾತಕ ಚಟುವಟಿಕೆಗಳನ್ನು ಮಾಡಲು ನಿನ್ನಂತ ಸಹೋದರಿಯರ ಸಾವನ್ನೇ ಎದುರು ನೋಡುತ್ತಿರುವ ಸ್ವಯಂ ಘೋಷಿತ ಧರ್ಮ ರಕ್ಷಕರ ಬಗ್ಗೆ ಬರೆಯಲೇ?
*ಅನ್ಯಸ್ತ್ರೀಯರನ್ನು ಕಣ್ಣೆತ್ತಿಯೂ ನೋಡಬಾರದು(ಕೆಟ್ಟ ದ್ರಷ್ಟಿಯಿಂದ)ಎಂದು ಇಸ್ಲಾಮ್ ಕಲಿಸಿದ ಪಾಠವನ್ನು ದಿಕ್ಕರಿಸಿ ನಿನ್ನನ್ನು ಪ್ರೇಮದ ಬಲೆಗೆ ಬೀಳಿಸಿ ನಿನ್ನ ಈ ಸಾವಿನಲ್ಲಿ ಪಾಲುಗಾರಿಕೆಯನ್ನು ಪಡೆದಿರುವ ಆ ನಾಮಧಾರಿ ಮುಸ್ಲಿಂ ಯುವಕರ ಬಗ್ಗೆ ಬರೆಯಲೇ?
*ಗರುಡ ಪಕ್ಷಿಯು ಸಣ್ಣ ಹಕ್ಕಿ ಮರಿಯನ್ನು ಎತ್ತಿಕೊಂಡು ಹೇಗೆ ಹೋಗಿ ಕುಕ್ಕಿ ಕುಕ್ಕಿ ತಿನ್ನುತ್ತದೆಯೋ ಅದೇ ರೀತಿ ಇನ್ನೂ ಸಹ ಸರಿಯಾಗಿ ಬೆಲೆಯದ ಆ ನಿನ್ನ ದೇಹವನ್ನು ಕುಕ್ಕಿ ಕುಕ್ಕಿ ತಿಂದ ಕತ್ತಲಲ್ಲಿ ಬೆತ್ತಲಾಗುವ ಆ ಮಾಧ್ಯಮಗಳ ಬಗ್ಗೆ ಬರೆಯಲೇ?
ನಿನ್ನ ಚಿತೆಯ ಅಗ್ನಿಯಲ್ಲಿ ಮೈ ಕಾಯಿಸಿ ಕೊಂಡವರೇ ತುಂಬಿ ಹೋಗಿದ್ದಾರೆ ಸಹೋದರಿ ಈ ಸಮಾಜದಲ್ಲಿ.ಸಮಾಜದಲ್ಲಿ ಪುಕ್ಕಟೆ ಪ್ರಚಾರಗಳನ್ನು ಗಿಟ್ಟಿಸಿಕೊಳ್ಳುವ ಸಲುವಾಗಿ ಸಹೋದರಿ ಸೌಜನ್ಯಾಳ ಪ್ರಕರಣವನ್ನು ಬಳಸಿ ತೋರಿಕೆಗಾಗಿ ಅಲ್ಲಲ್ಲಿ ಕೆಲವು ವೇದಿಕೆಗಳನ್ನು ಕಟ್ಟಿ ನಾಯಕನೆನಿಸಿಕೊಂಡ ಆಸಾಮಿಯೊಬ್ಬನಿಂದ ಪ್ರೇರಿತರಾದ ಕೆಲವರು ನಿನ್ನ ಪ್ರಕರಣದಲ್ಲೂ ಲಾಭ ಪಡೆಯಲು ನೋಡುತ್ತಿದಾರಮ್ಮ. ನೀನು ಅತ್ಯಾಚಾರಕ್ಕೆ ಒಳಪಟ್ಟಿಲ್ಲವೆಂದುಹಲವಾರು ದಾಖಲೆಗಳಿದ್ದರೂ ತಮ್ಮ ಬೇಳೆ ಬೇಯಿಸಿಕೊಳ್ಳಲು ನಿನ್ನ ಮಾನವನ್ನೇ ಹರಾಜಿಗಿಡಲು ಹೊರಟ ಆ ನಿನ್ನ ಧರ್ಮದ ಸ್ವಯಂ ಘೋಷಿತ ಧರ್ಮ ರಕ್ಷಕರ ಬಗ್ಗೆ ಮರುಕ ಪಡುತ್ತಿದ್ದೀಯಾ ಸಹೋದರಿ? ಈ ದೇಶದ ಮುಸ್ಲಿಮರ ಸರ್ವನಾಶಕ್ಕಾಗಿ ಭಾರತ ಮಾತೆಯನ್ನೆ ಬ್ರಿಟೀಷರ ಕೈಗೆ ಕೊಡಲು ಪ್ರಯತ್ನಪಟ್ಟ ತಲೆಹಿಡುಕರಮ್ಮ ಅವರು.ನನಗೆ ಅವರ ಬಗ್ಗೆ ತುಂಬಾ ಮರುಕವಿದೆ ಸಹೋದರಿ
*ಮುಝಪ್ಪರ್ ನಗರದಲ್ಲಿ ನಿನ್ನ ಹಾಗೆಯೇ ಇರುವ ಅದೆಷ್ಟೋ ನನ್ನ ಸಹೋದರಿಯರನ್ನು ಅವರ ಗಂಡಂದಿರ ಎದುರಲ್ಲೆ,ಅವರ ತಾಯಂದಿರ ಎದುರಲ್ಲೇ,ಅವರು ಹೆತ್ತ ಸ್ವಂತ ಮಕ್ಕಳ ಎದುರಲ್ಲೇ ಅವರನ್ನು ವಿವಸ್ತ್ರಗೊಳಿಸಿ ಸಾಮೂಹಿಕ ಅತ್ಯಾಚಾರ ನಡೆಸಿ ಕೊಲೆಗೈದಂತಹ ಆ ಪಾಪಿಗಳ ಬಗ್ಗೆ ನನಗೆ ಮರುಕವಿದೆ ಸಹೋದರಿ
*ಅಸ್ಸಾಮಿನಲ್ಲಿ ನಿನ್ನಂತೆಯೆ ಇರುವ ಅದೆಷ್ಟೋ ಮಂದಿ ನನ್ನ ಸಹೋದರಿಯರನ್ನು ಅಟ್ಟಾಡಿಸಿಕೊಂಡು ಹೋಗಿ ಅವರ ಮುಗಿಲು ಮುಟ್ಟಿದ ಆಕ್ರಂದನವನ್ನೂ ಸಹ ಕೇಳದೆ ಅವರ ಮಾನವನ್ನು ಕುಕ್ಕಿ ಕುಕ್ಕಿ ತಿಂದಂತಹ ಆ ದುರಾತ್ಮರ ಬಗ್ಗೆ ನನಗೆ ಮರುಕವಿದೆ ಸಹೋದರಿ.
*ನಿನ್ನ ಹಾಗೆಯೇ ಗುಜರಾತಿನಲ್ಲಿದ್ದಂತಹ ಅದೆಷ್ಟೋ ನನ್ನ ಸಹೋದರಿಯರನ್ನು ಬೀದಿ ಬೀದಿಗಳಲ್ಲಿ ಅಡ್ಡಡ್ಡಾ ಮಲಗಿಸಿ ಅತ್ಯಾಚಾರವೆಸಗಿ ಕೊಂದಂತಹ ಆ ಪಾಪಿಗಳ ಬಗ್ಗೆ ನನಗೆ ಮರುಕವಿದೆ ಸಹೋದರಿ.
*ಗುಜರಾತಿನ ಆ ನನ್ನ ತುಂಬು ಗರ್ಭಿಣಿ ಸಹೋದರಿಯ ಹೊಟ್ಟೆಯನ್ನು ಸೀಳಿ ಅದರೊಳಗಿದ್ದ ಭ್ರೂಣವನ್ನು ತ್ರಿಶೂಲದಲ್ಲಿ ತೆಗೆದು ಬೆಂಕಿಗೆ ಹಾಕಿ ಕೊಂದ ಆ ರಾಕ್ಷಸರ ಬಗ್ಗೆ ನನಗೆ ಮರುಕವಿದೆ ಸಹೋದರಿ
*ಇಷ್ಟೆಲ್ಲಾ ನಡೆಯುತ್ತಿದ್ದರೂ ತನಗಾವುದರ ಅರಿವಿಲ್ಲದಂತೆ ಮೂಕಪ್ರೇಕ್ಷಕನಾಗಿನೋಡುತ್ತಿದ್ದ ಆ ಗಲಭೆಯ ರೂವಾರಿ ಅಂದಿನ ಗುಜರಾತಿನ ಮುಖ್ಯಮಂತ್ರಿಯ ಬಗ್ಗೆ ನನಗೆ ಮರುಕವಿದೆ ಸಹೋದರಿ
*ಗುಜರಾತ್,ಮುಝಪ್ಪರ್ ನಗರ, ಅಸ್ಸಾಂ ಹಾಗು ದೇಶದ ನಾನಾ ಕಡೆಗಳಲ್ಲಿ ತಮ್ಮ ರಾಜಕೀಯ ಲಾಭಕ್ಕಾಗಿ ಕೋಮುಗಲಬೆ ನಡೆಸಿ ಅದೆಷ್ಟೋ ಹೆಣ್ಣು ಮಕ್ಕಳನ್ನು ವಿಧವೆಯರನ್ನಾಗಿ ಮಾಡಿದ,ಅದೆಷ್ಟೋ ಮಕ್ಕಳನ್ನು ಅನಾಥರನ್ನಾಗಿ ಮಾಡಿದ,ಅದೆಷ್ಟೋ ಕುಟುಂಬಗಳನ್ನು ಬೀದಿ ಪಾಲು ಮಾಡಿದ ಆ ನರಹಂತಕರ ಬಗ್ಗೆ ನನಗೆ ಮರುಕವಿದೆ ಸಹೋದರಿ
ಇವರುಗಳು ಬದಲಾಗುವುದಿಲ್ಲ ಸಹೋದರಿ,ಒಂದು ವೇಳೆ ಇವರುಗಳು ಬದಲಾದರೂ ಇವರ ಮನಸ್ಸಿನಲ್ಲಿ ತುಂಬಿರುವ ಆ ಕೋಮು ಮನೋಭಾವನೆ ಯಾವತ್ತೂ ಬದಲಾಗುವುದಿಲ್ಲ,ಇವರುಗಳಿಂದಾಗಿ ನಮ್ಮ ಭಾರತವು ಬದಲಾಗುವುದಿಲ್ಲ ಏಕೆಂದರೆ ಇವತ್ತು ರಾಜಕಾರಣಿಗಳಿಂದ ಹಿಡಿದು,ಅಧಿಕಾರಿ ವರ್ಗಗಳಿಂದ ಹಿಡಿದು ಸಾಮಾನ್ಯ ಗುಮಾಸ್ತನವರೆಗೂ ಇಂತಹ ಪ್ಯಾಶಿಸ್ಟ್ ಮನೋಸ್ಥಿತಿಯವರೆ ತುಂಬಿ ಹೋಗಿದ್ದಾರೆ ಸಹೋದರಿ..
ಸಹೋದರಿಯರಾದ ಸೌಜನ್ಯ,ರತ್ನ ಕೊಟ್ಟಾರಿ,ಮತಾಂದ ಪತ್ರಕರ್ತ ವಿ.ಟಿ.ಪ್ರಸಾದನಿಂದ ಹತ್ಯೆಯಾದ ವಿಟ್ಲದ ದುಲೈಕಾ ಹಾಗು ಮುಂತಾದ ಸಹೋದರಿಯರಿಗೆ ಆದ ರೀತಿಯಲ್ಲಿ ನಿನಗೂ ನ್ಯಾಯ ಮರೀಚಿಕೆಯಾಗದಿರಲಿ.ನಿನ್ನ ಸಾವಿನ ನಿಜ ಬಣ್ಣ ಬಯಲಾಗಿ ನಿನ್ನ ಆತ್ಮಕ್ಕೆ ಶಾಂತಿ ಸಿಗುವಂತಾಗಲಿ ಎಂದು ಹಾರೈಸುವ

ನಿನ್ನ ಒಬ್ಬ ಮುಸ್ಲಿಮ್ ಸಹೋದರ
MJV

Tuesday 11 November 2014

ಶಿಕ್ಷಣ ಪ್ರಿಯರಿಗೆ ಶಿಕ್ಷಣ ದಿನದ ಶುಭಾಷಯಗಳು..!

"November 11"
National Education Day

ಸ್ವತಂತ್ರ ಭಾರತದ ಮೊಟ್ಟಮೊದಲ ಶಿಕ್ಷಣ ಮಂತ್ರಿ,ಭಾರತ-ರತ್ನ ಡಾ.ಮೌಲಾನಾ ಅಬುಲ್ ಕಲಾಂ ಆಝಾದ್ ರವರ ಜನ್ಮದಿನವಾಗಿದೆ ಇಂದು..
ಈ ದಿವಸವನ್ನು ಭಾರತದಾದ್ಯಂತ "ರಾಷ್ಟ್ರೀಯ ಶಿಕ್ಷಣ ದಿನ" ವನ್ನಾಗಿ ಆಚರಿಸಲಾಗುತ್ತಿದೆ..

ಮೌಲಾನಾ ಆಝಾದರು 1888 ನವೆಂಬರ್ 11 ರಂದು ಪವಿತ್ರ ಮಕ್ಕಾದಲ್ಲಿ ಜನಿಸಿದರು..
ತದನಂತರ ಮೌಲಾನರವರು ಭಾರತಕ್ಕೆ ಬಂದು ಸ್ವಾತಂತ್ರ್ಯ ಚಳುವಳಿಯಲ್ಲಿ ಸಕ್ರಿಯ ಪಾತ್ರ ವಹಿಸಿದವರು..
ಖಿಲಾಫತ್ ಚಳುವಳಿಯ ಮುಂದಾಳುತ್ವ ವಹಿಸಿ ಹೋರಾಟದ ಕಿಚ್ಚು ಹಚ್ಚಿದವರು.
ಆದರೆ ದುರದೃಷ್ಟವಶಾತ್  ಇಂದು ಕೆಲವು ಫ್ಯಾಸಿಸ್ಟ್ ಶಕ್ತಿಗಳು ಅವರ ಹೆಸರನ್ನು ಭಾರತದ ಇತಿಹಾಸ ಪುಟಗಳಿಂದ ಕಿತ್ತೊಗೆಯಲು ಯತ್ನಿಸುತ್ತಾ ಇವೆ..
ಇಂಥಾ ಧೀರ ಹೋರಾಟಗಾರರಾದ ಮೌಲಾನ ಅಝಾದರನ್ನು ಅವರ ಜನ್ಮದಿವಸ ದಲ್ಲಾದರೂ ನೆನೆಯುವುದು ಮತ್ತು ನೆನಪಿಸುವುದು ಭಾರತೀಯರಾದ ನಮ್ಮೆಲ್ಲರ ಹೊಣೆಯಾಗಿದೆ..

ಶಿಕ್ಷಣಪ್ರಿಯ ನಾಗರಿಕರಿಗೆ ಶಿಕ್ಷಣ ದಿನದ ಶುಭಾಶಯಗಳು..

Monday 10 November 2014

ಶೋಭಕ್ಕನ ಅಶೋಭೆಯ ರಾಜಕೀಯ..!

ಅವರನ್ನ ಅರೆಸ್ಟ್ ಮಾಡ್ರಿ... ಅರೆಸ್ಟ್ ಮಾಡ್ರಿ...

ಹೀಗಾಂತ ಹೇಳಿದ್ದು ಬೇರೆ ಯಾರು ಅಲ್ಲ. ಕುಮಾರೀ/ಶ್ರಿಮತಿ ಶೋಭಾ ಕರಂದ್ಲಾಜೆಯವರು. ಕುಮಾರೀ ನಂದಿತಾ ಸಾವಿನ ಪ್ರಕರಣದ ಆರೋಪಿಗಳನ್ನು ಕೂಡಲೇ ಬಂಧಿಸಬೇಕು ಎಂದು ಕಾಂಗ್ರೆಸ್ ಸರಕಾರದ ವಿರುದ್ಧ ವಾಗ್ದಾನವನ್ನು ಮಾಡಿದ್ದಾರೆ..!!

ಶ್ರೀಮತಿ/ಕುಮಾರೀ ಶೋಭಾವರೆ ನಿಮಗೆ ನಾಚಿಕೆಯಾಗಬೇಕು ನಂದಿತಾ ಸಾವಿನ ವಿಚಾರದಲ್ಲಿ ರಾಜಕೀಯ ಮಾಡುವುದಕ್ಕೆ. ಯಾಕೆಂದರೆ ನಾವು ಮರೆತಿಲ್ಲ ಕಳೆದುಹೋದ ಆ ಒಂದು ಘಟನೆಯನ್ನು. ಯಾಡಿಯುರಪ್ಪನವರ ಮಡದಿಯ ಸಾವಿನ ಹಿಂದೆ ನಿಮ್ಮ ನೇರ ಕೈವಾಡ ಇದೆ ಎಂದು ಈಗಾಗಲೇ ಕರ್ನಾಟಕದ ಜನತೆಗೆ ತಿಳಿದಿದೆ. ಇಂತಹ ತರ್ಡ್ ಕ್ಲಾಸ್ ಕೆಲಸವನ್ನು ಮಾಡಿದ ನಿಮಗೆ ಕುಮಾರೀ ನಂದಿತಾ ಸಾವಿನ ಬಗ್ಗೆ ಮಾತುಗಳನ್ನಾಡುವುದಕ್ಕೆ ಎನು ಅರ್ಹತೆಯಿದೆ ಹೇಳಿ??

ನಂದಿತಾ ಬಿಜೆಪಿ ಪಕ್ಷದವರಿಗೆ ತಂಗಿಯ ಸಮಾನ ಸರಿ ಅನ್ನೊದಾದರೆ, ನರ್ಸ್ ಜಯಲಕ್ಷ್ಮಿ ಯಾರು?
ಹಾಲಪ್ಪ ತನ್ನ ಸ್ನೇಹಿತನ ಹೆಂಡತಿಯ ಮೇಲೆ ಅತ್ಯಾಚಾರವನ್ನು ಮಾಡಲು ಯತ್ನಿಸಿದ್ದಾನೆ ಹಾಗಾದರೆ ಆ ಮಹಿಳೆ ನಿಮಗೆ ಸಹೋದರಿ ಸಮಾನವಲ್ಲವೆ?? ಸದಾನಂದ ಗೌಡನ ಮಗ ಸಿನಿಮಾ ನಟಿಯನ್ನು ಮದುವೆಯಾಗುತ್ತೇನೆ ಎಂದು ನಂಬಿಸಿ ಆಕೆಯನ್ನು ತನ್ನ ಕಾಮಕ್ಕೆ ಬಳಸುತ್ತಾನೆ ಆಗ ಮಹಿಳೆಯ ಮೇಲೆ ಕಣಿಕರ ಬರಲಿಲ್ಲವೆ? ಉಡುಪಿಯಲ್ಲಿ ರಘುಪತಿ ಭಟ್ ತನ್ನ ಹೆಂಡತಿಯನ್ನು ಕೊಲೆ ಮಾಡುತ್ತಾನೆ ಆಗ ನಿಮಗೆ ಸಂಬಂಧಗಳ ಬಗ್ಗೆ ಅರಿವು ಇರಲಿಲ್ಲವೆ??

ಅತ್ಯಾಚಾರಕ್ಕೆ ಪ್ರಚೋದನೆಯನ್ನು ನೀಡುವವರು ನಿಮ್ಮ ಅಧಿಕಾರಿಗಳೆ ಅನ್ನುವ ಮಾತು ಇಡೀ ಕರ್ನಾಟಕ ರಾಜ್ಯದಲ್ಲಿ  ಜನಪ್ರಿಯತೆಯನ್ನು ಪಡೆದಿದೆ. ಸದನದಲ್ಲಿ ಬ್ಲೂ ಫಿಲಂ ನೋಡಿದವರು ನಿಮ್ಮದೆ ಅಧಿಕಾರಿಗಳು, ಭ್ರಷ್ಟಾಚಾರದ ಆರೋಪದಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ಕಂಬಿ ಎನಿಸಿದ್ದು ನಿಮ್ಮ ಅಧಿಕಾರಿಗಳು, ತಾನು ಚಲಿಸುವ ವಾಹನವನ್ನು ಒವರ್ ಟೇಕ್ ಮಾಡಿದ ಅನ್ನುವ ನೆಪ ಇಟ್ಟುಕೊಂಡು ಹಿಂಬದಿಯಲ್ಲಿ ಬರುತ್ತಿದ್ದ ಕಾರು ಚಾಲಕನನ್ನು ತಡೆದು ಹಲ್ಲೆ ನಡೆಸಿದ ಕೀರ್ತಿಯು ತಮ್ಮ ಅಧಿಕಾರಿಗಳಿಗೆ ಸಲ್ಲುತ್ತದೆ. ಇಷ್ಟೆಲ್ಲ ಕುಕ್ರತ್ಯಗಳನ್ನು ಮಾಡಿರುವ ಬಿ.ಜೆ.ಪಿ ಪಕ್ಷದ ಅಧಿಕಾರಿಗಳಿಗೆ ಅಥವಾ ಶೋಭಾಳಿಗೆ ಅತ್ಯಾಚಾರಗಳ ಬಗ್ಗೆ ಮಾತನಾಡುವ ನೈತಿಕ  ಹಕ್ಕು ಇದೆಯ ಎಂದು ಜನಗಳೆ ತೀರ್ಮಾನಿಸಬೇಕಾಗಿದೆ..!!
.
.
ಸಲಾಂ ಸಮ್ಮಿ

Saturday 8 November 2014

ನೈತಿಕತೆ ಮರೆತ ಈಶ್ವರಪ್ಪ ಹಾಗೂ ಬಿ.ಜೆ.ಪಿ!

ಕರ್ನಾಟಕದಲ್ಲಿ ತಾನು ಪ್ರತಿನಿಧಿಸುತ್ತಿರುವ ಪಕ್ಷ ಅಧಿಕಾರದಲ್ಲಿರುವಾಗ ತನ್ನದೇ ಪಕ್ಷದ ನಾಯಕರಿಂದ ಪದ್ಮಪ್ರಿಯ ಕೊಲೆಯಾದಾಗಲೂ,ಹಾಲಪ್ಪನ ಪ್ರಕರಣ ನಡೆದಾಗಲೂ,ರೇಣುಕಾಚಾರ್ಯನ ಕಿಸ್ಸಿಂಗ್ ಪ್ರಕರಣ ನಡೆದಾಗಲೂ,ಸದನದ ಪಾವಿತ್ರ್ಯತೆ ಯನ್ನು ನಾಶಪಡಿಸಿದಾಗಲೂ ಮಾತೆತ್ತದ ಈಶ್ವರಪ್ಪ.....

ಧರ್ಮಸ್ಥಳದ ಸೌಜನ್ಯ ಕೊಲೆಯಾದಾಗಲೂ,ಕುಂದಾಪುರದ ರತ್ನಳ ಸಾವು ಸಂಭವಿಸಿದಾಗಲೂ,ಸೂರಿಕುಮೇರಿನ ಸೌಮ್ಯ ಕಾಮುಕನ ಕಾಮದಾಹಕ್ಕೆ ಬಲಿಯಾದಾಗಲೂ,ಮಂಗಳೂರಿನ ಅಕ್ಷತಾ ಳ ಸಾವು ಸಂಭವಿಸಿದಾಗಲೂ,ಸೌಜನ್ಯಕ್ಕಾದರೂ ಪ್ರತಿಭಟಿಸುವ ಸಲುವಾಗಿ ಬೀದಿಗಿಳಿಯಲೇ ಇಲ್ಲ.
ಯಾಕಂದರೆ ಅವರೆಲ್ಲರ ಸಾವು ತನ್ನ ಧರ್ಮದ ಅಧರ್ಮೀಯರಿಂದಲೇ ಆಗಿತ್ತು..!!
ಅದು ರಾಜಕೀಯ ಬೇಳೆ ಬೇಯಿಸಿಕೊಳ್ಳಲು ವೇದಿಕೆಯನ್ನು ಸೃಷ್ಟಿ ಮಾಡುತ್ತಿರಲಿಲ್ಲ.

ತನ್ನ ಆಚಾರವಿಲ್ಲದ ನಾಲಗೆಯ ಮೂಲಕ ಸದಾ ವಿವಾದಾಸ್ಪದ ಹೇಳಿಕೆಗಳನ್ನು ನೀಡುವ ಈಶ್ವರಪ್ಪ ರಾಜ್ಯದ ಮುಖ್ಯಮಂತ್ರಿ ಮತ್ತು ಗೃಹ ಸಚಿವರ ಮನೆಯವರನ್ನು ಅತ್ಯಾಚಾರ ಮಾಡಬೇಕಿತ್ತು ಅನ್ನುವ ಖಂಡನಾರ್ಹವಾದ ಹೇಳಿಕೆಗಳನ್ನು ನೀಡಿ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ.

ಉರಿಯುವ ಬೆಂಕಿಗೆ ಸೀಮೆ ಎಣ್ಣೆ ಸುರಿದು ಸಮಾಜದಲ್ಲಿ ಅರಾಜಕತೆ ಸೃಷ್ಟಿ ಮಾಡುವ ಸಮಯಸಾಧಕ ರಾಜಕಾರಣಿಗಳನ್ನು ಮಟ್ಟ ಹಾಕಿ,ನಂದಿತಾಳ ಸಾವಿಗೆ ಕಾರಣರಾದ ಅಪರಾಧಿಗಳು ಶಿಕ್ಷಿಸುವಂತಾಗಲಿ ಎಂದು ಆಶಿಸೋಣ...

ಸ್ನೇಹಜೀವಿ ಅಡ್ಕ

Thursday 6 November 2014

"ಬ್ಯಾರಿ ಫೋರಂ" ಪ್ರಸ್ತುತ ಪಡಿಸುವ "ಉಮ್ಮ ಅಬ್ಬಡೆ ಪೋರಿಸ"

ಪ್ರತಿದಿನ ಪ್ರತಿಕ್ಷಣ http://prathidina.blogspot.com

ಮೊನ್ನೆ ಮೊನ್ನೆ ಪರಿಚಯವಾದ ಹುಡುಗಿಯೊಬ್ಬಳ ಪ್ರೀತಿಗಾಗಿ ತನ್ನ ತಂದೆ ತಾಯಿಯರ ಪ್ರೀತಿಯನ್ನೇ ದಿಕ್ಕರಿಸಿ ಹೋದ ಯುವಕನೊಬ್ಬ ಆ ಹುಡುಗಿಯಲ್ಲಿ ತನ್ನ ತಂದೆ ತಾಯಿಯರು ತೋರಿಸುತ್ತಿದ್ದಂತಹ  ಪ್ರೀತಿಯನ್ನು ಕಾಣದೇ ಇದ್ದಾಗ ಮತ್ತೊಮ್ಮೆ ಅವನ ಅವರ ಪ್ರೀತಿಗಾಗಿ ಚಡಪಡಿಸುತ್ತಿರುವ ಅವನ ಮನದಾಳದ ಕೂಗನ್ನು ಸಾಹಿತ್ಯದ ಮೂಲಕ ನಿಮ್ಮ ಮುಂದೆ ಇಡುತ್ತಿದ್ದೇವೆ "ಉಮ್ಮ ಅಬ್ಬಡೆ ಪೋರಿಸ" ಎಂಬ ಬ್ಯಾರಿ ಹಾಡಿನ ಮೂಲಕ....
  ಪ್ರತಿಯೊಬ್ಬರ ಕಣ್ಣನ್ನು ತೇವಗೊಳಿಸಲಿರುವ ಅನ್ವರ್ ಮಠ ಅವರ ಸಾಹಿತ್ಯದೊಂದಿಗೆ, ಮುರ್ಶಿದ್ ಸಜಿಪ ಹಾಡಿರುವ "ಬ್ಯಾರಿ ಫೋರಂ" ಪ್ರಸ್ತುತ ಪಡಿಸುವ "ಉಮ್ಮ ಅಬ್ಬಡೆ ಪೋರಿಸ" ಎಂಬ ಆಲ್ಬಾಂ ಹಾಡು .
ರಾಝ್ ಬಾಳಾಯ ನಿರ್ಮಾಣ ಮಾಡಿದ ಈ ಆಲ್ಭಂ ಹಾಡಿಗೆ ಸಲಾಂ ಸಮ್ಮಿ ನಿರ್ದೇಶನಗಳನ್ನು ನೀಡಿದ್ದಾರೆ. ಗ್ರಾಫಿಕ್ ಮಾಸ್ಟರ್ ಹೈದರ್ ಅಲಿ ಎ.ಕೆ ಅವರು ಎಡಿಟ್ ಮಾಡಿದರೆ, ಗ್ರಾಫಿಕ್ ಝೋನ್ ಕಬೀರ್ ಲಿಮ್ರಾ ಅವರು ಡಿಸೈನ್ ಕೆಲಸವನ್ನು ನಿರ್ವಹಿಸಿದ್ದಾರೆ.

Watch "Bearys Forum Presents "Abba Ummade Porisa"" on YouTube - Bearys Forum Presents "Abba Ummade Porisa": http://youtu.be/TiW_5e2QEb4

ಪ್ರತಿಯೊಬ್ಬರು ತಪ್ಪದೆ ನೋಡಿ ಹಾಗೆಯೇ ನಮ್ಮನ್ನು ಪ್ರೋತ್ಸಾಹಿಸಿ..
.
ಬ್ಯಾರಿ ಫೋರಂ ತಂಡ 

http://prathidina.blogspot.com

Tuesday 4 November 2014

ಮನಚುಚ್ಚಿದ ವರದಕ್ಷಿಣೆಯ ಕಥೆ..!

http://prathidina.blogspot.com

'ಉಮ್ಮಾ......ಇಲ್ಲಿ ನೋಡು..!!!ಜೊಹರಾ ಬರೆಯಲು ಬಿಡುವುದಿಲ್ಲ.ತೊಂದರೆ ಕೊಡುತ್ತಿದ್ದಾಳೆ...!!!!'
ಓದುವ ಕೊಠಡಿಯೊಳಗಿನಿಂದ ತನ್ನ ಮಗ ಅನ್ವರ್ ನ ಕೂಗು.!!

'ಜೊಹರಾ.....ಅವನಿಗೆ ತಂಟೆ ಮಾಡ್ಬೇಡ.ಅವನಿಗೆ ತೊಂದರೆ ಕೊಟ್ರೆ ಬಾಪಾ ಫೋನ್ ಮಾಡಿದಾಗ ಹೇಳ್ತೇನೆ ನೋಡು.!!' ಎಂದು ತಾಯಿ ಮುನೀರಾ ಹೇಳಿದ್ದೇ ತಡ..,ಜೊಹರಾ ಮೌನಿಯಾಗಿಯೇ ಬಿಟ್ಟಳು.ತಂದೆ ಅಶ್ರಫ್ ನಿಗೆ ಜೊಹರಾಳೊಂದಿಗಿದ್ದ ಎಲ್ಲಿಲ್ಲದ ಪ್ರೀತಿಯೇ ಅವಳ ಮೌನಕ್ಕೆ ಕಾರಣವಾಗಿತ್ತು.!!!!

ಅಂದ ಹಾಗೆ ಅಶ್ರಫ್-ಮುನೀರಾ ದಂಪತಿಗೆ ಎರಡು ಮಕ್ಕಳು.ಜೊಹರಾ ಮತ್ತು ಅನ್ವರ್.
ದೊಡ್ಡವಳಾದ ಜೊಹರಾ ನಾಲ್ಕನೇ ತರಗತಿಯಲ್ಲಿ ಕಲಿಯುತ್ತಿದ್ದಳು.
ಇನ್ನೂ ಚಿಕ್ಕವಳಾಗಿದ್ದರೂ ಕೆಲವೊಂದು ವಿಷಯಗಳನ್ನು ಸ್ವತಃ ಅರ್ಥ ಮಾಡಿಕೊಳ್ಳುತ್ತಿದ್ದಳು.

ಅಶ್ರಫ್ ವಿದೇಶದ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದನು.ಕಾಣಲು ಸುಂದರಿಯಾಗಿದ್ದ ಮುನೀರಾಳನ್ನು ಇಷ್ಟಪಟ್ಟು ಮದುವೆ ಮಾಡಿಕೊಂಡಿದ್ದರೂ ನಂತರ ದಿನಗಳಲ್ಲಿ ವರದಕ್ಷಿಣೆ ಯ ಹೆಸರು ಹೇಳಿ ಕಿರುಕುಳ ನೀಡಲು ಪ್ರಾರಂಭಿಸಿದ್ದನು.

ಮಗ್ರಿಬ್ ನಮಾಝ್ ನಂತರ ಮಕ್ಕಳಿಗೆ ಪಾಠ ಹೇಳಿಕೊಡುವಲ್ಲಿ ತಲ್ಲೀನಳಾಗುತ್ತಿದ್ದಳು ಮುನೀರಾ.
ಈ ಸಮಯದಲ್ಲಿ ವಿದೇಶದಿಂದ ಅಶ್ರಫ್ ನ ಕರೆ ಬರುತ್ತಿತ್ತು.ಫೋನ್ ಬರುವುದಕ್ಕಿಂತ ಮುಂಚೆ ಮುನೀರಾಳ ಮುಖದಲ್ಲಿರುತ್ತಿದ್ದ ಮಂದಹಾಸ ನಂತರ ಇರುತ್ತಿರಲಿಲ್ಲ.
ಮುನೀರಾಳ ಈ ಬದಲಾವಣೆಯನ್ನು ಮಗಳು ಜೊಹರಾ ಗಮನಿಸುತ್ತಿದ್ದಾಳೆ ಎಂಬುವುದು ಮುನೀರಾಳಿಗೆ ತಿಳಿಯದ ಸತ್ಯವಾಗಿತ್ತು.!!!!

ತಮ್ಮ ನಡುವಿನ ಬಿರುಕನ್ನು ಮಕ್ಕಳಿಗೆ ತಿಳಿಯದಂತೆ ಎಚ್ಚರ ವಹಿಸಿದ್ದ ಇಬ್ಬರೂ ಪುಟ್ಟ ಮಗಳು ಜೊಹರಾಳ ಮುಂದೆ ಎಡವಿದ್ದರು ಎಂದಷ್ಟೇ ಹೇಳಬಹುದು.!! ಜೊಹರಾಳು ತಂದೆ-ತಾಯಿಯರ ಈ ಬಿರುಕನ್ನು ಅಂದಾಜಿಸಿದ್ದರೂ ತಿಳಿಯದಂತೆ ನಟಿಸುವಲ್ಲಿ ಯಶಸ್ವಿಯಾಗಿದ್ದಳು.

ತಿಂಗಳೆರಡು ಕಳೆದಾಗ ಅಶ್ರಫ್ ಊರಿಗೆ ಬಂದನು.ತನ್ನ ಜೀವವಾದ ಜೊಹರಾಳಿಗೆ ಇಷ್ಟವಾದ ಚಾಕಲೇಟ್ ಗಳನ್ನು ತಂದಿದ್ದರೂ ಜೊಹರಾಳಿಗೆ ಅದೇನೂ ಬೇಡವಾಗಿತ್ತು.ಇಷ್ಟಪಟ್ಟ ಚಾಕಲೇಟ್ ಗಳ ಪೊಟ್ಟಣದ ಮೇಲೆ ತಾಯಿಯ ಕಣ್ಣೀರನ್ನು ಅವಳು ದೂರದಿಂದಲೇ ಕಾಣುತ್ತಿದ್ದಳು.

ಅದೊಂದು ಶನಿವಾರ.....
ಮಧ್ಯಾಹ್ನ ಶಾಲೆ ಬಿಟ್ಟು ಮನೆ ತಲುಪಿದ ಜೊಹರಾ ಮತ್ತು ಅನ್ವರ್ ನನ್ನು ಎಂದಿನಂತೆ ಮುನೀರಾಳು ಸ್ವೀಕರಿಸಿದಳು.
ಶಾಲೆ ಬಿಟ್ಟು ಬಂದ ನಂತರ ತಾಯಿಯ ಮುಖಕ್ಕೆ ಚುಂಬಿಸುತ್ತಿದ್ದ ಜೊಹರಾಳಿಗೆ ಅಂದು ತಾಯಿಯ ಮುಖದಲ್ಲಿದ್ದ ಬೆರಳಚ್ಚುಗಳನ್ನು ನೋಡಿ ಕಣ್ಣೀರು ಉಕ್ಕಿ ಬಂದಿತ್ತು..!!
ತಾಯಿಯನ್ನು ಬಿಗಿದಪ್ಪಿಕೊಂಡು,'ಉಮ್ಮಾ....ವರದಕ್ಷಿಣೆ ಕೇಳುವ ಒಬ್ಬನೊಂದಿಗೆ ನನ್ನ ಮದುವೆಯನ್ನು ನಿಶ್ಚಯಿಸಿದರೆ ಮಾತ್ರ ನಿನ್ನ ಈ ನೋವನ್ನು ನಾನೂ ಅನುಭವಿಸಲು ಸಾಧ್ಯ.!!'ಎಂದು ಹರಿತವಾದ ಮಾತೊಂದನ್ನು ಹೇಳಿದಾಗ ಮುನೀರಾಳ ಹೃದಯವು ಕಲ್ಲಾಗಿ ಮಾರ್ಪಾಡು ಹೊಂದಿತ್ತು..!!!

ಇದೆಲ್ಲವನ್ನೂ ದೂರದಿಂದ ನೋಡುತ್ತಿದ್ದ ಅಶ್ರಫ್ ನ ಕಣ್ಣುಗಳು ಪಶ್ಚಾತಾಪವನ್ನು ಯಾಚಿಸುತ್ತಿದ್ದರೂ ಪುಟ್ಟ ಮಗು ಜೊಹರಾ ಅಶ್ರಫ್ ನನ್ನು ದುರುಗುಟ್ಟುತ್ತಲೇ ನೋಡುತ್ತಿದ್ದಳು.!!!

ಇದು ಒಬ್ಬಳು ಮುನೀರಾಳ ಕಥೆ.!!!
ಇನ್ನೆಷ್ಟು ಮುನೀರಾಗಳಿರಬಹುದು ನಮ್ಮೆಡೆಯಲ್ಲಿ.??!!
ಮುನೀರಾಳ ಕಣ್ಣೀರಿಗೆ ಕಾರಣವಾದ "ವರದಕ್ಷಿಣೆ" ಎಂಬ ರಾಕ್ಷಸ ಪಿಡುಗು ಇನ್ನೋರ್ವಳು ಮುನೀರಾಳ ಕಣ್ಣೀರಿಗೆ ಕಾರಣವಾಗದಿರಲಿ ಎಂದು ಆಶಿಸೋಣ.ಅಲ್ಲವೇ???

ಸಫ್ವಾನ್ ಅಡ್ಯನಡ್ಕ.

 
Design by Free WordPress Themes | Bloggerized by - Free Blogger Themes | @javtl