Saturday 12 May 2012

ವಿಟ್ಲ ಸರ್ಕಾರಿ ಕಾಲೇಜು ಮೂಲಸೌಕರ್ಯ ವಂಚಿತ,


ಮಹಮ್ಮದ್ ಅಲಿ ವಿಟ್ಲ.
ವಿಟ್ಲ: ಪ್ರಸ್ತುತ ವಿಟ್ಲದಲ್ಲಿ ಈ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಕುಳಿತುಕೊಳ್ಳಲು ಸರಿಯಾದ ತರಗತಿಗಳಿಲ್ಲ, ಶೌಚಾಲಯವಿಲ್ಲ, ಆವರಣಗೋಡೆಯಿಲ್ಲ, ಸಭಾಭವನವಿಲ್ಲ, ನಿರ್ಜನ ಪ್ರದೇಶದಲ್ಲಿರುವ ಈ ಕಾಲೇಜಿಗೆ ವಿದ್ಯಾರ್ಥಿಗಳು ೨ ಕಿ.ಮೀ ಕಾಲು ನಡಿಗೆ ಮೂಲಕ ಸಂಚಾರಿಸಬೇಕಾಗಿದೆ. ಸರಿಯಾದ ಕಾಲೇಜು ಕ್ಯಾಂಟಿನ್‌ಯಿಲ್ಲ, ಸರಿಯಾದ ಕ್ರೀಡಾಂಗಣವಿಲ್ಲ, ಇನ್ನೂ ಅನೇಕ ಸಮಸ್ಯೆಗಳಿರುವ ಕಾಲೇಜು ಬಂಟ್ವಾಳ ತಾಲ್ಲೂಕಿನ ವಿಟ್ಲ ಎಂಬ ಪ್ರದೇಶದಲ್ಲಿ ಬೊಬ್ಬೆಕೇರಿ ಎಂಬಲ್ಲಿದೆ. ಅದೇ ವಿಟ್ಲ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಇದು ಮೂಲಸೌಕರ್ಯ ಪಡೆಯುವಲ್ಲಿ ಹಿಂದುಳಿದಿದೆ. ೭೫೦ಕ್ಕಿಂತಲೂ ಅಧಿಕ ವಿದ್ಯಾರ್ಥಿಗಳಿರುವ ಈ ಕಾಲೇಜು ದ.ಕನ್ನಡ ಜಿಲ್ಲೆಯಲ್ಲೇ ಇಂತಹ ದುಸ್ಥಿತಿಯ ಕಾಲೇಜು ಬೇರೆ ಎಲ್ಲಿಯೂ ಕಂಡು ಬರಲು ಸಾಧ್ಯವಿಲ್ಲ. ಬಿ.ಎ, ಬಿ.ಕಾಂ, ಎಂ.ಎಸ್.ಡಬ್ಲ್ಯೂ, ಬಿ.ಎಸ್.ಡಬ್ಲ್ಯೂ, ವ್ಯಾಸಂಗಗಳು ಪ್ರಸ್ತುತ ಇದೀಗ ನಡೆಯುತ್ತಿದೆ. ಈ ಕಾಲೇಜಿಗೆ ಕನ್ಯಾನ, ಬಾಯಾರು, ಕಬಕ, ಪೆರುವಾಯಿ, ಪಕಳಕುಂಜ, ಸಾಲೆತ್ತೂರು. ಬಾಕ್ರಬೈಲು, ಕಲ್ಲಡ್ಕ, ಮುಂತಾದ ಪ್ರದೇಶಗಳಿಂದ ವಿದ್ಯಾರ್ಥಿಗಳು ಇಲ್ಲಿಗೆ ಬರುತ್ತಾರೆ.
೨೦ ವರ್ಷಗಳ ಹಿಂದೆ ಅಂದರೆ ೧೯೯೩ರಲ್ಲಿ ಆರಂಭವಾದ ಈ ಕಾಲೇಜು ಪುತ್ತೂರು ರಸ್ತೆಯ ಕೆ.ಇ.ಬಿ ಬಳಿಯ ಪುರಭವನ ಬಳಿ ಕಾರ್ಯಚರಣೆ ನಡೆಸುತ್ತಿತ್ತು. ಕೆಲ ಜನಪ್ರತಿನಿಧಿಗಳ ಸಹಕಾರದೊಂದಿಗೆ ಅದನ್ನು ೨ ಕಿ.ಮೀ ದೂರದ ವಿಟ್ಲ ಬೊಬ್ಬೆಕೇರಿ ಒಟ್ಟೆಶಾಂತಿ ಬಳಿಗೆ ಸ್ವಂತ ಕಟ್ಟಡಕ್ಕೆ ಸ್ಥಳಾಂತರಗೊಂಡಿತ್ತು. ಆದರೆ ಈ ಜಾಗದ ಕೆಲ ಜಾಗಗಳು ಖಾಸಗಿ ವ್ಯಕ್ತಿಗಳ ಪಾಲಾಗುತ್ತಿದೆ. ಕಾಲೇಜಿನ ಸ್ವಂತ ಜಾಗದಲ್ಲಿ ಮೂರು ತರಗತಿ ಕೊಠಡಿಗಳು, ಪ್ರಾಂಶುಪಾಲರ ಕೊಠಡಿ, ಗ್ರಂಥಾಲಯ ಕೊಠಡಿ, ಉಪನ್ಯಾಸಕರ ಕೊಠಡಿ ಆರಂಭವಾಗಿತ್ತು.
ಕಾಲೇಜಿನ ಸ್ವಲ್ಪ ದೂರದಲ್ಲಿ ದೊಡ್ಡದಾದ ಸಭಾಭವನ ಕಟ್ಟಲಾಗಿದೆ ಅದರಲ್ಲಿ ೬ ತರಗತಿಗಳು ನಡೆಯುತ್ತಿರುತ್ತದೆ. ಅಲ್ಲಿ ಒಂದು ತರಗತಿಯ ಪಾಠ ಪ್ರವಚನ ಇನ್ನೊಂದು ತರಗತಿಗೆ ಕೇಳಿಸುತ್ತದೆ ಇದರಿಂದ  ಪಾಠ ವಿದ್ಯಾರ್ಥಿಗಳಿಗೆ ಅರ್ಥವಾಗುತ್ತಿಲ್ಲ. ಇದರ ಮಹಡಿ ಶೀಟ್‌ನ ತೂತಾಗಿ ಮಳೆಗಾಲದಲ್ಲಿ ನೀರು ಒಳಗಡೆ ಬೀಳುತ್ತದೆ. ಬೇಸಿಗೆಗಾಲದಲ್ಲಿ ಪಾರಿವಾಳ ಹಿಕ್ಕಿನ ಅಭಿಷೇಕ ವಿದ್ಯಾರ್ಥಿಗಳ ಮೈಮೇಲೆ ಬೀಳುತ್ತದೆ, ಇಲ್ಲಿಗೆ ಉಪನ್ಯಾಸಕರು ಒಂದು ಅವಧಿ ತರಗತಿ ಮುಗಿಸಿ ಕಾಲೇಜು ಕಚೇರಿಗೆ ತೆರಳಲು ಅವರಿಗೆ ಅಂದಾಜು ೧೫ ನಿಮಿಷಗಳುಬೇಕು. ಇಲ್ಲಿ ಕಾರ್ಡ್‌ಬೋರ್ಡ್ ಪಾರ್ಟಿಶನ್ ಮಾಡಿ ತರಗತಿಗಳು ನಡೆಯುತ್ತವೆ. ವಿದ್ಯಾರ್ಥಿಗಳು ಸಂಖ್ಯೆಯನ್ನು ಮನದಲ್ಲಿಟ್ಟುಕೊಂಡ ಕೆಲವರು ನೂತನ ಕಟ್ಟಡ ಕಟ್ಟಿಸಲು ಕೈಹಾಕಿದ್ದರು ಆದರೆ ಅದು ಹಣದ ಕೊರತೆಯಿಂದ ಅರ್ಧಕ್ಕೆ ನಿಂತಿದೆ. ಕೆಂಪು ಕಲ್ಲಿನಿಂದ ಕಟ್ಟಲಾದ ಈ ಕಟ್ಟಡ ಅರ್ಧಕ್ಕೆ ನಿಂತ ಪರಿಣಾಮ ಅದೀಗ ಪಾಲುಬಿದ್ದಿದ್ದು, ಅದು ದನಗಳಿಗೆ ಹಾಗೂ ನಾಯಿಗಳಿಗೆ ಆಶ್ರಯತಾಣವಾಗಿದೆ.
ಪದವಿ ವಿದ್ಯಾರ್ಥಿಗಳಿಗೆ ೧೫ ತರಗತಿ ಕೊಠಡಿಗಳು, ೧೨ ಶೌಚಾಲಯ ಕೊಠಡಿಗಳು, ಕನಿಷ್ಠಪಕ್ಷ ೩೦ವಿದ್ಯಾರ್ಥಿಗಳು ಕುಳಿತುಕೊಳ್ಳಲು ಬೇಕಾದಂತಹ ಗ್ರಂಥಾಲಯ ಕೊಠಡಿಗಳುಬೇಕೇಬೇಕು ಎಂದು ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ. ವಾಚ್‌ಮ್ಯಾನ್, ಪಿವನ್, ಗ್ರಂಥಾಲಯ ಸಹಾಯಕ, ವಾಣಿಜ್ಯಶಾಸ್ತ್ರ, ಕಲಾಶಾಸ್ತ್ರ, ಮುಂತಾದ ತರಗತಿಗಳಿ ಉಪನ್ಯಾಸಕರ ಕೊರತೆಯಿದೆ. ಈ ಎಲ್ಲಾ ಸಮಸ್ಯೆಯನ್ನು ಸಂಬಂಧಪಟ್ಟವರು ನಿವಾರಿಸಿದರೆ ಇಲ್ಲಿಯ ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರು ನೆಮ್ಮದಿಯಿಂದ ಇರಲು ಸಾಧ್ಯ ಎಂಬ ಮಾತು ಕೇಳಿ ಬರುತ್ತಿದೆ. ಆದರೆ ಮೇಲಾಧಿಕಾರಿಗಳಿಗೆ ಈ ಸಮಸ್ಯೆಯನ್ನು ಮುಟ್ಟಿಸಲು ಯಾರು ಕೂಡ ಮುಂದೆ ಬರುತ್ತಿಲ್ಲ ಆರೋಪಗಳು ಕೇಳಿಬರುತ್ತಿದೆ.

ಮಾಣಿ ಅಪಘಾತ



ವಿಟ್ಲ: ಸರ್ಕಾರಿ ಬಸ್, ಆಟೋ ರಿಕ್ಷಾ ಹಾಗೂ ಬೈಕ್ ಪರಸ್ಪರ ಅಪಘಾತಕ್ಕೀಡಾದ ಪರಿಣಾಮ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡ ಘಟನೆ ವಿಟ್ಲ ಠಾಣಾ ವ್ಯಾಪ್ತಿಯ ಮಾಣಿ ಜಂಕ್ಷನ್‌ನಲ್ಲಿ ಶನಿವಾರ ಮಧ್ಯಾಹ್ನ ನಡೆದಿದೆ.
 ಪಾಟ್ರುಕೋಡಿ ನಿವಾಸಿ ಜುಬೈರ್(೨೩) ಎಂಬವರು ಗಾಯಗೊಂಡ ಬೈಕ್ ಸವಾರ.
ಪುತ್ತೂರು ಕಡೆಯಿಂದ ಕೆಎಸ್‌ಆರ್‌ಟಿಸಿ ಬಸ್ ಮಂಗಳೂರು ಕಡೆ ತೆರಳುತ್ತಿದ್ದವು ಅದರ ಹಿಂಬಾದಿಯಿಂದ ಬೈಕ್‌ವೊಂದು ಚಲಿಸುತ್ತಿತ್ತು. ಬಸ್ಸಿನ ಮುಂಬಾಗದಲ್ಲಿ ಆಟೋ ರಿಕ್ಷಾ ಚಾಲಕ ಅದನ್ನು ಬದಿಗೆ ನಿಲ್ಲಿಸಲು ಮುಂದದಾಗ ಬಸ್ ಚಾಲಕ ಬ್ರೇಕ್ ಹಾಕಿದ್ದರಿಂದ ಬೈಕ್ ಬಸ್ಸಿನ ಹಿಂಬಾದಿಗೆ ಡಿಕ್ಕಿ ಹೊಡೆದು ಈ ಘಟನೆ ಸಂಭವಿಸಿದೆ. ಗಾಯಾಳುವನ್ನು ಬಂಟ್ವಾಳ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

 
Design by Free WordPress Themes | Bloggerized by - Free Blogger Themes | @javtl