Monday 23 March 2015

ಕಣ್ಣಿದ್ದೂ ಕುರುಡಾದ ಮನುವಾಣಿ..!

ಬೇಬಿ ನಿರ್ಭಯಾಳ  
ಬದುಕಿಗೆ ಬೆಳಕನ್ನು ನೀಡಲು  
ಮೊಂಬತ್ತಿಯ ಹಿಡಿದು  
ಬೀದಿಗಿಳಿಯಿತು ಜನ ಸಮೂಹ  
 
ಉದಯವಾಣಿಯೆಂಬ  
ಕೋಮುವಾಣಿ ಗೆ  
ಕಾಣಲಿಲ್ಲ ಪುಟ್ಟ  
ಮಗುವಿನ ಕಣ್ಣೀರು  
 
ಸುಳ್ಳು ಸುದ್ಧಿ ಹರಡಿ  
ವಿಕೃತ ಸುಖ ಪಡುವ  
ಚಾಳಿ ಇನ್ನೂ ಬಿಟ್ಟಿಲ್ಲ  
ಈ ವಾಣಿ  
 
ಪತ್ರಿಕಾ ಧರ್ಮವನ್ನು  
ಮರೆತು, ಜನರನ್ನು  
ದಾರಿ ತಪ್ಪಿಸುವ  
ಈ ವಾಣಿ ನಮಗೇಕೆ?  
 
ಸುಳ್ಳು ಸುದ್ದಿ ಹರಡುವ  
ಪತ್ರಿಕೆಯನ್ನು  
ಪ್ರಶ್ನಿಸುವ ವ್ಯವಸ್ಥೆ  
ದೇಶದಲ್ಲಿ ಇಲ್ಲವೇ?  
 
ನಿರ್ಭಯಾಳ ಬದುಕಿನಲ್ಲಿ  
ಚೆಂಡಾಟವಾಡಿದ ಕ್ರೂರಿಗಳ  
ಬೆನ್ನ ಹಿಂದೆ, ಉದಯವಾಣಿ  
ಇರಬಹುದೇ? - ಒಂದು ಸಂಶಯ  
 
                    - ಷಾ ಕುದ್ರಡ್ಕ


Posted by ಪ್ರತಿದಿನ ಪ್ರತಿಕ್ಷಣ

ಪತ್ರಿಕಾ ಧರ್ಮ ಮರೆತ ಉದಯವಾಣಿ..!

ಪತ್ರಿಕಾ ವರದಿಗಳು ಎಷ್ಟು ನಿಷ್ಪಕ್ಷವಾಗಿರುತ್ತವೆ ಎಂಬುದಕ್ಕೆ ಪುಟ್ಟ ಬಾಲೆ ನಿರ್ಭಯಳ ಮೇಲೆ ಜರುಗಿದ ಲೈಂಗಿಕ ದೌರ್ಜನ್ಯವನ್ನು ಖಂಡಿಸಿ ಮಂಗಳೂರಿನ ಪ್ರಜ್ಞಾವಂತ ಜನರು ನಡೆಸಿದ ಮೋಂಬತ್ತಿ ಜಾಥಾವನ್ನು ತಿರುಚಿ ವರದಿ ಮಾಡಿದ ಉದಯವಾಣಿ ಪತ್ರಿಕೆಯೇ ಸಾಕ್ಷಿ.

ಬೇಬಿ ನಿರ್ಭಯಳಿಗಾಗಿ ಮಂಗಳೂರಿನ ಸಾವಿರಾರು ಪ್ರಜ್ಞಾವಂತ ಜನರು ಜಾತಿ ಮತ ಬೇಧವನ್ನು ಮರೆತು ಒಂದಾದರು. ಮೌನವಾಗಿ ಮೋಂಬತ್ತಿ ಹಿಡಿದು ಜಾಥಾ ನಡೆಸಿದರು. ಇದು ಮಂಗಳೂರಿನಲ್ಲಿರುವ ಎಲ್ಲರಿಗೂ ತಿಳಿದ ವಿಷಯ. ಅನೇಕ ಪತ್ರಿಕೆಗಳಲ್ಲೂ, ಇಂಟರ್ನೆಟ್ ಮಾಧ್ಯಮಗಳಲ್ಲೂ ಇದರ ವರದಿ ಪ್ರಕಟವಾಗಿದೆ.

ಆದರೆ ಮಣಿಪಾಲದಿಂದ ಪ್ರಕಟವಾಗುವ ಮಂಗಳೂರಿನ ಕೋಮುವಾದಿ ಪತ್ರಿಕೆಗೆ ಈ ಸತ್ಯವನ್ನು ಅರಗಿಸಿಕೊಳ್ಳಲಾಗಲಿಲ್ಲ. ಮೋಂಬತ್ತಿ ಜಾಥಾವನ್ನು ಇವರ ವರದಿಗಾರರು ಕಂಡಿದ್ದಾರೆ. ಫೋಟೋ ಕೂಡ ಕ್ಲಿಕ್ಕಿಸಿದ್ದಾರೆ. ಆ ಫೋಟೋ ಅನ್ನು ತಮ್ಮ ಪತ್ರಿಕೆಯಲ್ಲೂ ಮುದ್ರಿಸಿದ್ದಾರೆ. ಆದರೆ ಆ ಫೋಟೋಗೆ ನೀಡಿದ ಕ್ಯಾಪ್ಶನ್ ಹೇಗಿತ್ತು ಗೊತ್ತೇ? ಯುವ ಐ ಎ ಎಸ್ ಅಧಿಕಾರಿ ಡಿ.ಕೆ. ರವಿ ಅವರ ನಿಗೂಢ ಸಾವಿನ ಬಗ್ಗೆ ಸರಕಾರದ ಧೋರಣೆಯನ್ನು ಖಂಡಿಸಿ ಹಾಗೂ ಉನ್ನತ ಮಟ್ಟದ ತನಿಖೆಗೆ ಆಗ್ರಹಿಸಿ ವಿದ್ಯಾರ್ಥಿಗಳ ಸಂಘಟನೆ ನಡೆಸಿದ ಮೋಂಬತ್ತಿ ಜಾಥಾ !!!

ಮಾನವೀಯತೆ ನಶಿಸಿ ಹೋದ ವ್ಯಕ್ತಿಯಿಂದಲೇ ಹೊರತು ಇನ್ನಾರಿಂದಲೂ ಇಂತಹ ವರದಿ ಪ್ರಕಟಿಸಲು ಸಾಧ್ಯವಿಲ್ಲ. Respect my Childhood ಎಂಬ ಫಲಕವನ್ನು ಕೈಯಲ್ಲಿ ಹಿಡಿದಿರುವ ಮಕ್ಕಳು ಡಿಕೆ ರವಿಗಾಗಿ ಪ್ರತಿಭಟನೆ ಮಾಡುತ್ತಿದ್ದಾರೆಂದು ಹೇಳಲು ಇವರಿಗೆ ಸ್ವಲ್ಪವಾದರೂ ಬುದ್ಧಿಯೆಂಬುದು ಇಲ್ಲವೇ? ಎಲ್ಲಿಯ ತನಕ ಈ ಪೀತ ಪತ್ರಿಕೆಗಳಿಗೆ ಜನರು ಸಾಮಾಜಿಕ ಬಹಿಷ್ಕಾರ ಹಾಕುವುದಿಲ್ಲವೋ ಅಲ್ಲಿಯ ತನಕ ಸಮಾಜದಲ್ಲಿ ನೆಮ್ಮದಿಯಿರದು.

ಸತ್ಯಸಾರಥಿ


Posted by ಪ್ರತಿದಿನ ಪ್ರತಿಕ್ಷಣ

ಕೋಮುವಾಣಿಯ ಅಚಾತುರ್ಯ..!?

ದಕ್ಷಿಣ ಕನ್ನಡ ಜಿಲ್ಲೆಯ ತೊಕ್ಕೊಟ್ಟಿನಲ್ಲಿ ಇನ್ನೂ ಸಹ ಪ್ರಪಂಚವನ್ನೇ ಸರಿಯಾಗಿ ನೋಡದ ಅಪ್ರಾಪ್ತ ಪ್ರಾಯದ ಬಾಲೆಯೊಂದನ್ನು ವಿಕ್ರತ ಕಾಮಿ ಮಧುಕರ ಎಂಬಾತ ತನ್ನ ಕಾಮ ತೀಟೆಯನ್ನು ತೀರಿಸಲು ಉಪಯೋಗಿಸಿದ್ದನು.ಈ ಪ್ರಕರಣವು ಇಲ್ಲಿನ ಹೇಸಿಗೆಗೆಟ್ಟ ಸರಕಾರ ಮತ್ತು ನೀತಿಗೆಟ್ಟ ಮಾಧ್ಯಮಕ್ಕೆ ದೊಡ್ಡ ಸುದ್ಧಿಯಾಗದಿದ್ದರೂ ಅದೆಷ್ಟೋ ಪೋಷಕರ ನಿದ್ದೆಗೆಡಿಸಿತು.ಇದರ ವಿರುದ್ಧ ಧ್ವನಿ ಎತ್ತದಿದ್ದರೆ ಇಂದು ಆ ಮಗುವಿಗೆ ಆದ ಅನ್ಯಾಯ ನಾಳೆ ನಮ್ಮ ಮನೆಯ ಮಕ್ಕಳಿಗೂ ಆಗಬಹುದು ಎಂದು ಮನಗೊಂಡು ಮಂಗಳೂರಿನ ಸಮಾನ ಮನಸ್ಕರೆಲ್ಲಾ ಜೊತೆಗೂಡಿ "ಜಸ್ಟಿಸ್ ಪಾರ್ ಬೇಬಿ ನಿರ್ಭಯ" ಎಂಬ ನಾಮದೊಂದಿಗೆ ಮೊನ್ನೆ ಶನಿವಾರ  ಸಾವಿರಾರು ಜನರ ಭಾಗವಹಿಸುವಿಕೆಯಲ್ಲಿ ಶಾಂತಿಯುತ್ತ ಮೊಂಭತ್ತಿ ಪ್ರತಿಭಟನೆಯನ್ನು ನಡೆಸಿ ರಾಷ್ಟ್ರಾದಾದ್ಯಂತ ಗಮನ ಸೆಳೆದರು.
          ಆದರೆ ಕೋಮುವಾಣಿ ಎಂಬ ಬಿರುದನ್ನು ಪಡೆದಿರುವ ಉದಯವಾಣಿ ಪತ್ರಿಕೆಗೆ ಮಾತ್ರ ಈ ವಿಷಯ ಗೊತ್ತೇ ಇಲ್ಲಾ ಅಂತ ಕಾಣುತ್ತೆ.ಮೊನ್ನೆ ನಡೆದ ಮೊಂಬತ್ತಿ ಪ್ರತಿಭಟನೆಯ ಭಾವ ಚಿತ್ರವನ್ನು ಪ್ರಕಟಿಸಿ ಅದನ್ನು ಡಿ.ಕೆ. ರವಿಯವರ ಪ್ರಕರಣಕ್ಕೆ ತಿರುಚಲು ಪ್ರಯತ್ನಿಸುತ್ತಿದೆ,ಇದಕ್ಕೆ ಪ್ರಮುಖ ಕಾರಣ ಅನ್ಯಾಯಕ್ಕೊಳಗಾದ ಆ ಮಗು ಮುಸ್ಲಿಮ್ ಸಮುದಾಯಕ್ಕೊಳಪಟ್ಟಿತ್ತು.

ಇಂಥಹ ಸಂಧರ್ಭದಲ್ಲೂ ಸಹ ತನ್ನ ಕೋಮು ವಿಕ್ರತಿಯನ್ನು ತೋರಿಸುವ ಇಂಥಹ ನೀತಿಗೆಟ್ಟ ಪತ್ರಿಕೆಗಳನ್ನು ನಾಡಿನ ಪ್ರತಿಯೊಬ್ಬರೂ ಸಹ ಬಹಿಷ್ಕರಿಸಬೇಕಾಗಿದೆ.ಅನೇಕ ಬಾರಿ ಸುಳ್ಳು ಸುದ್ಧಿಯನ್ನು ಪ್ರಕಟಿಸಿ ಕರಾವಳಿಯ ಜನರ ಕೋಮು ಬಾವನೆಗಳನ್ನು ಕೆರಳಿಸಿ  ಅದೆಷ್ಟೋ ಕೋಮುಗಲಭೆಯನ್ನು ಉಂಟುಮಾಡಿದಂತಹ ಕುಖ್ಯಾತಿಯನ್ನು ಪಡೆದಿದೆ ಈ ಉಗ್ರವಾಣಿ ಪತ್ರಿಕೆ.

          ಇಲ್ಲಿ ಗಮನಿಸಬೇಕಾದ ಪ್ರಮುಖ ಅಂಶವೇನೆಂದರೆ ಡಿ.ಕೆ.ರವಿಯವರ ಪ್ರಕರಣಕ್ಕೆ ಸಂಬಂದಿಸಿದಂತೆ ಮಂಗಳೂರಿನಲ್ಲಿ ಎಲ್ಲಿಯೂ ಸಹ ಮೊಂಬತ್ತಿ ಪ್ರತಿಭಟನೆ ನಡೆದೆ ಇಲ್ಲ.ಎಲ್ಲಿಯಾದರೂ ದಾರಿ ಹೋಕ ನಾಯಿಗಳು ವಿಸರ್ಜಿಸಿದರೂ  ಪೋಟೊ ತೆಗೆದು ಅದನ್ನೇ ಪ್ಲ್ಯಾಶ್ ನ್ಯೂಶ್ ಅಂತ ಪ್ರಕಟಿಸುವ ಕೋಮು ವಾಣಿ ಉದಯವಾಣಿಯಂತಹ ಹಲವು ಕೋಮುವಾದಿ ಪತ್ರಿಕೆಗಳು ಇವತ್ತು ತನ್ನ ಪತ್ರಿಕಾ ಧರ್ಮವನ್ನು ಮರೆತಂತಿದೆ.

          ಸಮಾಜದಲ್ಲಿ ನಡೆಯುತ್ತಿರುವ ಅನಾಚಾರಗಳ ಸತ್ಯಾಸತ್ಯತೆಯನ್ನು ಪ್ರಕಟಿಸಲು ಎಡವಿ ಸದಾ ಸುಳ್ಳು ಸುದ್ದಿಯನ್ನು ಪ್ರಕಟಿಸುತ್ತಿರುವ ದುಷ್ಟ ಶಕ್ತಿಗಳೊಂದಿಗೆ ಕೈ ಜೋಡಿಸಿರುವ ಇಂಥಹ ಹೊಲಸು ಪತ್ರಿಕೆಗಳ ವಿರುದ್ಧ ಸಾರ್ವಜನಿಕರು ಆದಷ್ಟು ಬೇಗ ಎಚ್ಚೆತ್ತುಕೊಳ್ಳಲಿ

ಮಹಮ್ಮದ್ ಅನ್ವರ್
Justice#for#Baby#Nirbhaya


Posted by ಪ್ರತಿದಿನ ಪ್ರತಿಕ್ಷಣ

Thursday 19 March 2015

ಅರಣ್ಯ ರೋಧನವಾದ ಮಂಗಳೂರು ಅತ್ಯಾಚಾರ ಪ್ರಕರಣ..!

"ಮುಗ್ಧ ಹಸುಳೆಯನ್ನು ಅತ್ಯಾಚಾರಗೈದು ರೌದ್ರಾವತಾರ ತೋರಿದ ಕಾಮುಕನ ಬಂಧನಕ್ಕಾಗ್ರಹಿಸಿ, ನ್ಯಾಯಕ್ಕಾಗಿ  ಸ್ಟೇಷನ್ ಮೆಟ್ಟಿಲೇರಿದ ಯುವಕರನ್ನೇ, ಒಳ ದಬ್ಬಿ ರಾಟೆಯೆತ್ತಿದ, ಸಂಘ ಪರಿವಾರದ ಅಡಿಯಾಳುಗಳಂತೆ ವರ್ತಿಸುವ ಮಂಗಳೂರು ಪೋಲೀಸ್ ವಿಭಾಗದ ಅಧಿಕಾರಿಗಳ ವಿರುದ್ದ ಯಾವುದೇ ರೀತಿಯ ಕಾನೂನು ಕ್ರಮ ಜರುಗಿಸಲಾಗದ ಮಿನಿಸ್ಟರ್ ಎಂದು ಸುತ್ತಾಡುವ ಊರಿನವನೇ ಆದ ಗಂಡಸುತನವಿಲ್ಲದವನಿಂದ ಏನು ಮಾಡಲು ಸಾಧ್ಯ"..!?

ಹೀಗೆ ಪ್ರಶ್ನಿಸಿದ್ದು ನಾನಲ್ಲ..,

ನಿನ್ನೆ ಪ್ರಾಯಸ್ತರಿಬ್ಬರಲ್ಲಿ ಮಸೀದಿಯ ಅಧ್ಯಕ್ಷರೋರ್ವರು ಮಾತನಾಡುವುದು ನನಗೆ ಕಿವಿಗೆ ಬಿತ್ತು..! ಈ ಹಿಂದಿನಿಂದಲೂ ಕಾಂಗ್ರೆಸ್ ಪರ ಕೆಲಸ ಮಾಡಿ ಸಮಾಜದಲ್ಲಿ ಗೌರವಾನ್ವಿತರೆನಿಸಿಕೊಂಡಿದ್ದ ಅವರ ಮಾತು ಕೇಳಿ ನಾನು ಒಮ್ಮೆಲೇ ಆವಕ್ಕಾಗಿ ಹೋದೆನು..

ಅವರೊಂದಿಗೆ ಪ್ರತಿ ಚುನಾವಣೆಯ ಸಮಯದಲ್ಲೂ ನಾನು ಹಾಗೂ ಸಂಗಡಿಗರು ಅದೆಷ್ಟೋ ಬಾರಿ ಹಗಲಿರುಳೆನ್ನದೆ ಪಕ್ಷಕ್ಕಾಗಿ ಕೆಲಸ ಮಾಡಿದ್ದೇವೆ..

ಹಾಗೇ ಅವರ ಮಾತು ಮುಂದುವರೀತಿತ್ತು..
ನಮ್ಮ ಮಿನಿಸ್ಟರ್ ಮೇಲೆ ಇವರಿಗೆ ಏನೋ ಅಸಮಾಧಾನ ಇದ್ದುದರಿಂದಲೆ ಹೀಗೆಲ್ಲ ಹೇಳುತ್ತಿದ್ದಾರೆ ಅಂದುಕೊಂಡು ನಾನು ಕೂಡಾ ಸುಮ್ಮನಿದ್ದೆ..

ಆದರೆ ಅದಾಗಲೇ ಪ್ರತಿ ವಾಟ್ಸಾಪ್ ಗ್ರೂಪ್ಗಳಲ್ಲಿ ಹಸುಳೆಯ ಅತ್ಯಾಚಾರದ ಆರೋಪ, ಪ್ರತ್ಯಾರೋಪಗಳು ಹರಿದಾಡುತ್ತಿರುವುದನ್ನು ಕಂಡು, ಮಗುವಿನ ಹೆಸರಲ್ಲೂ ರಾಜಕೀಯ ಮಾಡುತ್ತಿದ್ದಾರಲ್ಲ ಎಂದು ನನ್ನ ಮನಸ್ಸಿನೊಳಗೆ ಚುಚ್ಚುತ್ತಿದ್ದವು..

ಆದರೆ ನಾನು ಕಂಡು ಕೊಂಡ ಹಾಗೆ ಒಂದಂತು ನಿಜ, ಎಲ್ಲೋ ಒಂದು ಕಡೆ ನಮ್ಮ ಮಿನಿಸ್ಟರ್ ಅವರ ಸೋಷಿಯಲ್ ಮೀಡಿಯೇಟರ್ಗಳಾಗಿ ವರ್ತಿಸುತ್ತಿರುವ ಜನರೇ ಅವರ ಭವಿಷ್ಯಕ್ಕೆ ಧಕ್ಕೆಯಾಗುತ್ತಿದ್ದಾರೆ.

ಇಂದು ಮಿನಿಸ್ಟರ್ ಅವರ ವಿರುದ್ದ ಕೇಳಿ ಬರುವ ಆರೋಪಗಳು ಬಹುತೇಕ ಅವರಿಂದಾಗಿಯೇ ಆಗಿದೆ. ಕಂಡದ್ದನ್ನು, ಉಂಡದನ್ನೂ, ಕಕ್ಕಿದ್ದನ್ನೂ ನೆಕ್ಕಿದ್ದನ್ನೂ ಅತಿಯಾಗಿ ಫೋಟಾಯಿಸಿ ಅನಾವಶ್ಯಕ ವಾರ್ತೆ ಮಾಡುವ ಚೇಳಗಳಿಂದ ಖಂಡಿತವಾಗಿಯೂ ಮಿನಿಸ್ಟರ್ ಅವರ ರಾಜಕೀಯ ಭವಿಷ್ಯಕ್ಕೆ ತೊಡಕಾಗಲಿದೆ..
ಅದೂ ಅಲ್ಲದೆ ಉಳ್ಳಾಲದಲ್ಲಿ ನಡೆದ ಅತ್ಯಾಚಾರ ಪ್ರಕರಣವನ್ನು ಸುಳ್ಳು ಎಂದು ನಿರೂಪಿಸಲು ಬಹುತೇಕ ಇಂತಹ ಚೇಳುಗಳು ಹರಸಾಹಸ ಪಟ್ಟಿರುವುದು ಎಲ್ಲಾ ವಾಟ್ಸಾಪ್ ಗ್ರೂಪ್ಗಳಲ್ಲಿ ಎದ್ದು ಕಾಣುತ್ತಿತು.. ಹಾಗೆ ನೋಡಿದರೆ ಮಿನಿಸ್ಟರ್ ಅವರನ್ನು ತನ್ನ ಕರ್ತವ್ಯದಿಂದ ನುಣುಚಿಕೊಳ್ಳುವಂತೆ ಮಾಡಲು ಇವರುಗಳೇ ಕಾರಣ. ಮಾಡಬೇಕಾದ ಕಾರ್ಯಗಳನ್ನು ಮಾಡದೆ, ಅನಾವಶ್ಯಕ ಕಾರ್ಯಗಳನ್ನ ಪ್ರಚುರಪಡಿಸುವ ಇವರುಗಳ ತಂತ್ರ ಎಷ್ಟು ಸರಿಯೋ ದೇವನೇ ಬಲ್ಲ.

ಇನ್ನು ಕೆಲ ಪರದೇಷದಲ್ಲಿ ಕೂತ ಮಿನಿಸ್ಟರ್ ಅಭಿಮಾನಿಗಳು, ಮಿನಿಸ್ಟರ್ ಸ್ವಿಚ್ ಆಫ್ ಮಾಡಿರಲಿಲ್ಲ, ಮಗುವಿಗೆ ಡೆಸ್ಕ್ ಬಿತ್ತು, ಅಂತೆ ಕಂತೆಗಳ ಮಹಾ ಮಾಹಾಪೂರವನ್ನೇ ಹರಿದು ಬಿಡುತ್ತಿದ್ದರು..

ಆದರೆ ನಿಜ ಸಂಗತಿಯ ವಿಷ್ಲೇಶಿಸಿದ ನಾನೂ ಕೆಲವು ಸತ್ಯಗಳನ್ನು ಕಂಡುಕೊಂಡೆ.

ಒಬ್ಬ ಅರೋಪಿಯನ್ನು ರಕ್ಷಿಸಲು ಅಧಿಕಾರದಲ್ಲಿದ್ದುಕೊಂಡೇ ಹೆಣಗಾಡಿದ ಪ್ರಯತ್ನದ ಅರ್ಧದಷ್ಟು ಕೂಡ, ಮಗುವಿನ ಪರ ನ್ಯಾಯಕ್ಕೆ ಪ್ರಯತ್ನಿಸಲಸಾಧ್ಯವಾದುದು ಮಿನಿಸ್ಟರ್ಗಳಾಗಿರುವ ನಮ್ಮ ಸಮುದಾಯಿಕರ ಅಧೋಗತಿಯೇ ಸರಿ..

ಇಂತಹ ಪೊಳ್ಳು ಜಾತ್ಯಾತೀತತೆ ಇದ್ದರೇನು ಇಲ್ಲದಿದ್ದರೇನು, ನನ್ನ ಅಭಿಮಾನಿ ಸಹೋದರರೆ ಚಿಂತಿಸಿ..

ಅಧಿಕಾರದಲ್ಲಿದ್ದುಕೊಂಡೇ
ಇನ್ನು, ಶಾಲೆಯ ಹೆಸರು ಹಾಳಾಗದಿರಲು ಅರಂಭದಲ್ಲೇ ಮ್ಯಾನೇಜ್ಮೆಂಟ್ ಮಾಡಿದ ಕಸರತ್ತು, ಆರೋಪಿಯನ್ನು  ರಕ್ಷಿಸಲೆತ್ನಿಸಿದ ಸಂಘ ಪರಿವಾರಿಗಳ ಕೈವಾಡ, ತೊಕ್ಕೋಟು ಹಾಸ್ಪಿಟಲ್ ಕುತಂತ್ರ, ಪೋಲೀಸ್ ಇಲಾಖೆಯ ದೌರ್ಜನ್ಯ, ಸ್ಥಳೀಯ ವಾರ್ತಾ ವಾಹಿನಿಗಳ ಇಬ್ಬಗೆ ನೀತಿ, ಸ್ಥಳೀಯ ಕೆಲ ಕಾಂಗ್ರೆಸಿಗರ ಪೊಳ್ಳು ಜಾತ್ಯಾತೀತತೆಯ ನಾಟಕತ್ವ, ನಾಮ್ಕೆ ವಾಸ್ತೆ ಸೋಷಿಯಲ್ ಮೀಡಿಯೆಟರ್ಗಳ ಸುಳ್ಳು ನಿರೂಪಣಾ ಕಂತೆಗಳ ನಡುವಿನಲ್ಲಿ ಏನೂ ತಿಳಿಯದ ಹಸುಳೆಯ ಮುಗ್ದ ಕೂಗು ತಿಳಿಯದಾದುದು ನಿಜವಾಗಿಯೂ  ಖೇದಕರ. ಖಂಡಿತವಾಗಿಯೂ ಪ್ರಕರಣ ತಿರುಚಲು ಹೆಣಗಾಡಿದವರೆ ಆ ಮಗು ನಿಮ್ಮ ಮನೆಯದ್ದೋ, ನಿಮ್ಮ ಸಹೋದರಿಯೋ, ಹೆಂಡತಿಯೋ, ತಾಯಿಯೋ, ಮಗಳೋ ಆಗಿರುತ್ತಿದ್ದಲ್ಲಿ ಏನಾಗುತಿತ್ತು.?!

ಹಾಗೆ ಇದೊಂದು ಹೆತ್ತವರಿಗೆ ಸಮಾಧಾನ ಪಡಿಸುವ ಪ್ರಕರಣವಾಗಿ ಮುಕ್ತಾಯಗೊಳಿಸದೆ, ಸಮಾಜಕ್ಕೆ ಪಾಠವಾಗಬೇಕಾದಂತಹ ತೀರ್ಪಾಗಿ, ಸಮಾಜದಲ್ಲಿ ಇಂತಹ ನೀಚತನ ಮರುಕಳಿಸದಂತೆ ಪ್ರತಿಯೊಬ್ಬರೂ ಜಾತಿ-ಮತ ಭೇದ ಮರೆತು ಪ್ರಯತ್ನಿಸಬೆಕಾಗಿದೆ. ಅಂತಹ ವಿಕೃತ ಕಾಮುಕರ ಬಗ್ಗೆ ಸಮಾಜದಲ್ಲಿ ಜಾಗ್ರತೆ ಹುಟ್ಟಿಸಿ, ಸಮಾಜದಲ್ಲಿರುವ ಅಂತಹ ತೊಡಕುಗಳನ್ನು ಹೋಗಲಾಡಿಸಲು ಯಾರನ್ನೂ ಕಾಯದೇ, ಸ್ವಯಂ ಹೋಗಲಾಡಿಸಲು ಪಣ ತೊಟ್ಟ ಉತ್ತಮ ಸಮುದಾಯವೊಂದು ಹೊರ ಹೊಮ್ಮಲಿ ಎಂದು ಆಷಿಸುತ್ತಾ...!

ಇತೀ ತಮ್ಮ ಹಿತೈಷಿ,
ಜಾವೇದ್ ಉಳ್ಳಾಲ..

 
Design by Free WordPress Themes | Bloggerized by - Free Blogger Themes | @javtl