Monday 2 April 2012

ಶಾಲಾ ವಾರ್ಷಿಕೋತ್ಸವದ

ಸಾಲೆತ್ತೂರು: ಜಿಲ್ಲೆಯಲ್ಲಿ ೨೫೦ಕ್ಕಿಂತ ಹೆಚ್ಚು ಆಂಗ್ಲ ಮಾಧ್ಯಮ ಶಾಲೆಗಳು ಇದ್ದು, ಇದರಿಂದ ಸರ್ಕಾರದ ಹೊರೆ ಕಡಿಮೆಯಾಗಿದೆ, ಪ್ರತಿಯೊಬ್ಬರು ವಿದ್ಯಾವಂತರಾದರೆ ಬಲಿಷ್ಠ ಸಮಾಜ ನಿರ್ಮಾಣವಾಗಲು ಸಾಧ್ಯ ಎಂದು ಬಂಟ್ವಾಳ ಶಾಸಕ ರಮಾನಾಥ ರೈ ಹೇಳಿದರು.
ಅವರು ಏಪ್ರಿಲ್೧ರ ಭಾನುವಾರ ಸಾಲೆತ್ತೂರು ಪಾಲ್ತಾಜೆ ಸಿರಿ ವಿದ್ಯಾಲಯ ಆಂಗ್ಲ ಮಾಧ್ಯಮ ಶಾಲೆ ಇದರ ನೂತನ ಕೊಠಡಿಗಳ ಉದ್ಘಾಟನೆ ಹಾಗೂ ಶಾಲಾ ವಾರ್ಷಿಕೋತ್ಸವದ ಸಭಾಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಹಿಂದಿನ ಕಾಲದಲ್ಲಿ ಗುರುಕುಳ ಶಿಕ್ಷಣವು ಅರಮನೆ ಅರಸರಿಗೆ ಮಾತ್ರ ಸೀಮಿತವಾಗಿದ್ದವು, ಆದರೆ ಇದೀಗ ಅಂತಹ ಪರಿಸ್ಥಿತಿ ಹೋಗಿ ಎಲ್ಲಾರೂ ಸಮಾನ ಶಿಕ್ಷಣವನ್ನು ಪಡೆಯುವಂತಾಗಿದ್ದು, ಶೇಕಡ ೧೦೦ರಲ್ಲಿ ೯೯ಜನ ಶಿಕ್ಷಣವನ್ನು ಪಡೆಯುತ್ತಿದ್ದಾರೆ  ಎಂದರು. ಸಿಇಟಿಯಂತಹ ಪರೀಕ್ಷೆಗಳನ್ನು ದುರ್ಬಲ ಹಾಗೂ ಬಡ ವಿದ್ಯಾರ್ಥಿಗಳಿಗೆ ಬರೆಯಲು ಸರ್ಕಾರ ಅವಕಾಶವನ್ನು ಮಾಡಿಕೊಟ್ಟಿದ್ದರಿಂದ ಯಾರು ಕೂಡ ಶಿಕ್ಷಣದಿಂದ ವಂಚಿತರಾಗುವುದಿಲ್ಲ ಎಂದು ಅವರು ತಿಳಿಸಿದರು.
   ಶಾಲೆಯ ನೂತನ ಕೊಠಡಿಗಳ ಉದ್ಘಾಟನೆಯನ್ನು ಉದ್ಯಮಿ ನಡಿಗುತ್ತು ತಿಮ್ಮಪ್ಪ ನಾಯ್ಕ್ ಅವರು ನೆರವೇರಿಸಿದರು. ಸಭಾಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೊಳ್ನಾಡು ಗ್ರಾ.ಪಂ ಅಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ ಕುಲಾಲು ವಹಿಸಿದ್ದರು. ಶಾಲಾ ಕೊಠಡಿ ನಿರ್ಮಾಣಕ್ಕೆ ಸಹಾಯ ಧನ ಒದಗಿಸಿದ ನಡಿಗುತ್ತು ತಿಮ್ಮಪ್ಪ ನಾಯ್ಕ್, ಕಟ್ಟಡ ಕಾಮಗಾರಿ ಮಾಡಿದ ರವಿರಾಜ್, ಶ್ರೀನಿವಾಸ ಅವರ ಪರವಾಗಿ ಚಂದ್ರಹಾಸ ರವರನ್ನು ಇದೇ ಸಂದರ್ಭ ಶಾಲಾ ಸಮಿತಿ ವತಿಯಿಂದ ಸನ್ಮಾನಿಸಲಾಯಿತು.
ಜಿಲ್ಲಾ ಪಂಚಾಯಿತಿ ಸದಸ್ಯರಾದ ಎಂ.ಎಸ್ ಮಹಮ್ಮದ್, ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಬಂಟ್ವಾಳ ಸ್ಥಾಯಿ ಸಮಿತಿ ಅಧ್ಯಕ್ಷ ಮಾಧವ ಮಾವೆ, ಸದಾನಂದ ಶೆಟ್ಟಿ, ಶೀನಪ್ಪ ಆಳ್ವ, ರಾಜೇಶ್ ರೈ ಪಾಲ್ತಾಜೆ, ದೇವಿದಾಸ್ ಶೆಟ್ಟಿ ಪಾಲ್ತಾಜೆ, ಧನಲಕ್ಷ್ಮೀ ಇದ್ದರು.


ಕ್ರಿಕೆಟ್ ಮೈದಾನದಲ್ಲಿ ಮಾರಮಾರಿ.


ಕನ್ಯಾನ:  ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾಟವನ್ನು ವೀಕ್ಷಿಸುತ್ತಿದ್ದ ಸಂದರ್ಭ ಪೂರ್ವ ದ್ವೇಷದ ಹಿನ್ನೆಲೆಯಲ್ಲಿ ತಂಡವೊಂದು ವ್ಯಕ್ತಿಯೊಬ್ಬನ ಮೇಲೆ ಮಾರಕಾಯುಧಗಳಿಂದ ಹಲ್ಲೆ ನಡೆಸಿದ ಘಟನೆ ಕನ್ಯಾನ ಸಮೀಪದ ಗೋಳಿಕಟ್ಟೆ ಎಂಬಲ್ಲಿ ಏರಿಲ್ ೧ರ ಶನಿವಾರ ರಾತ್ರಿ ನಡೆದಿದ್ದು, ಗಾಯಾಳುವಿನ ಸ್ಥಿತಿ ಚಿಂತಾಜನಕವಾಗಿದೆ.
 ಕೇರಳ ಮೂಲದ  ಉಂಬೈ ಎಂಬಾತನೇ ಗಂಭೀರವಾಗಿ ಹಲ್ಲೆಗೊಳಗಾಗಿದ್ದು, ಚಿಂತಾಜನಕ ಸ್ಥಿತಿಯಲ್ಲಿ ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ.  ಕೇರಳದ ಪೈವಳಿಕೆ ನಿವಾಸಿಗಳಾದ ರಿಯಾಝ್, ಹಜೀಜ್ ಹಾಗೂ ನೂರ್ ಷಾ ಎಂಬವರೇ ಹಲ್ಲೆ ನಡೆಸಿದ ಆರೋಪಿಗಳೆಂದು ಗಾಯಾಳು ಆರೋಪಿಸಿದ್ದಾನೆ.
    ಕನ್ಯಾನದಲ್ಲಿ ಶನಿವಾರ ರಾತ್ರಿ  ಮ್ಯಾಕ್ಸಿನ್ ಗೋಳಿಕಟ್ಟೆ ಎಂಬ ಎಂಬ ಸಂಘಟನೆ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾಟದವನ್ನು ಆಯೋಜಿಸಿತ್ತು. ಈ ಪಂದ್ಯಾಟವನ್ನು ವೀಕ್ಷಿಸಲೆಂದು ಉಂಬೈ ತನ್ನ ಸ್ನೇಹಿತ ಜತೆ ಬಂದಿದ್ದ ಎನ್ನಲಾಗಿದೆ. ಅದೇ ಸಂದರ್ಭದಲ್ಲಿ ಆರೋಪಿಗಳಾದ ಪೈವಳಿಕೆ ನಿವಾಸಿಗಳಾದ ರಿಯಾಝ್, ಹಜೀಜ್ ಹಾಗೂ ನೂರ್ ಷಾ ಎಂಬವರು ಕೂಡ ಬಂದಿದ್ದರು. ಈ ಇಬ್ಬರ ತಂಡದ ನಡುವೆ ಈ ಹಿಂದೆಯೂ ಜಗಳವಾಗಿದ್ದವು. ಈ ಬಗ್ಗೆ ಕೇರಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿತ್ತು ಎನ್ನಲಾಗಿದೆ. ಇವರ ನಡುವೆ ಪರಸ್ಪರ ದ್ವೇಷದ ಬೀಜ ಆಗಾಗ ಆರಂಭವಾಗುತ್ತಿತ್ತು. ಇದೇ ಕಾರಣಕ್ಕೆ ಮೂವರ ತಂಡ ಉಂಬೈನೊಂದಿಗೆ ಜಗಳ ತೆಗೆದು ಆತನಿಗೆ ಯದ್ವಾತದ್ವಾ ಹಲ್ಲೆ ನಡೆಸಿದೆ ಎಂದು ಹೇಳಲಾಗಿದೆ. ಘಟನೆಯಲ್ಲಿ ತೀವ್ರವಾಗಿ ತಲೆಗೆ ಗಾಯಗೊಂಡಿದ್ದ ಉಂಬೈಯನ್ನು ಸ್ಥಳೀಯರು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಘಟನೆ ಬಗ್ಗೆ ವಿಟ್ಲ ಪೊಲೀಸ್ ಠಾಣೆಗೆ ದೂರು ನೀಡಿದ್ದು,ರಿಯಾಝ್, ಹಜೀಜ್ ಹಾಗೂ ನೂರ್ ಷಾ ಎಂಬ ಮೂವರ ಮೇಲೆ ಪ್ರಕರಣ ದಾಖಲಾಗಿದೆ.
 .

Sunday 1 April 2012

ವಾರ್ತಾ ಮಾಧ್ಯಮದ ಮಹತ್ವ



       ಮಾಧ್ಯಮ ರಹಿತ ಸಮಾಜ ಎಂಬುವುದು ಪ್ರಸ್ತುತ ಕಾಲಘಟ್ಟದಲ್ಲಿ ಊಹಿಸಲಾಗದ ಒಂದು ವಿಷಯವಾಗಿದೆ. ಯಾವುದೇ ದೇಶದಲ್ಲಿ ಮಾಧ್ಯಮಕ್ಕೆ ನಿರ್ಭಂಧಗಳನ್ನು ಆ ದೇಶದ ಪ್ರಾಧಿಕಾರವು ವಿಧಿಸಿದೆ ಎಂದರೆ ಅದು ಒಂದು ಸರ್ವಾಧಿಕಾರೀ ಆಡಳಿತವಿರುವ ದೇಶವೆಂದು ಸಾಮಾನ್ಯ ಜ್ಞಾನವಿರುವ ಯಾವುದೇ ವ್ಯಕ್ತಿಯೂ ನಿಸ್ಸಂದೇಹವಾಗಿ ಹೇಳಬಲ್ಲನು. ವಾಸ್ತವದಲ್ಲಿ ವಿಶ್ವದ ಯಾವುದೇ ದೇಶದಲ್ಲಿ ಮಾಧ್ಯಮ ಪ್ರಜಾಪ್ರಭುತ್ವದ ಆಧಾರ ಸ್ತಂಭಗಳಲ್ಲೊಂದು ಎಂದರೂ ತಪ್ಪಾಗಲಾರದು. ದೇಶವೊಂದರ ಆಡಳಿತ ವೈಖರಿಯನ್ನು ಪಕ್ಷತೆಯನ್ನೂ ಜನತೆಯ ಮುಂದಿಡುವುದು ಈಗ ಮಾಧ್ಯಮವಲ್ಲದೇ ಬೇರೆ ಯಾವುದೇ ಅಲ್ಲ ಅಷ್ಟರ ಮಟ್ಟಿಗೆ ಇಂದು ಮಾಧ್ಯಮ ಪ್ರಾಮುಖ್ಯತೆಯನ್ನು ಪಡೆದಿದೆ. 
ಪ್ರಪಂಚದಲ್ಲಿ ಎಲ್ಲಿ ಯಾವುದೇ ಘಟನೆ ನಡೆದಾಗ ಜನರಿಗೆ ವಷ್ಟುನಿಷ್ಟಾ ಸುದ್ದಿಯನ್ನು ಮಟ್ಟಿಸುವಂತಹ ಕೆಲಸವನ್ನು ಅದು ಮಾಡುತ್ತಿದೆ. ಓರ್ವ ರಾಜಕಾರಣಿಯ ಯಶಸ್ವಿಗೆ ಅದು ಸಹಾಯಕವಾಗಿದ್ದು, ಹಾಗೂ ಆತ ಕೆಟ್ಟ ದಾರಿ ಹಿಡಿದಾಗ ಆತನ ವಿನಾಶಕ್ಕೂ ಅದು ಕಾರಣವಾಗಿದೆ. ಇದಕ್ಕೊಂದು ಉದಾಹರಣೆಯೇ ಇತ್ತೀಚಿಗೆ ಬೆಂಗಳೂರಿನ ಸದನದೊಳಗೆ ಬ್ಲೂ ಸಿನಿಮಾ ನೋಡುತ್ತಿದ್ದ ಮೂವರು ಸಚಿವರನ್ನು ತನ್ನ ಕ್ಯಾಮರ ಮೂಲಕ ಖಾಸಗಿ ಚಾನೇಲ್‌ವೊಂದು ಅದನ್ನು ಸೆರೆಹಿಡಿದು ಅದನ್ನು ಜನರಿಗೆ ತೋರಿಸಿದ್ದರಿಂದ ಆ ಮೂವರು ರಾಜೀನಾಮೆ ನೀಡುವಂತೆ ಮಾಡಿದೆ. ಅದಲ್ಲದೇ ಈಜಿಪ್ಟ್‌ನ್ನು ಮೂವತ್ತು ವರ್ಷಗಳ ಕಾಲ ಅಧಿಕಾರ ನಡೆಸಿದ ಸರ್ವಾಧಿಕಾರಿ ಹುಸ್ನಿ ಮುಬಾರಕ್‌ನ ವಿರುದ್ಧ ನಡೆದ ದಂಗೆಯೂ ಆರಂಭವಾದದ್ದು ಅಂತರ್ಜಾಲ ಮಾಧ್ಯಮದಿಂದಾಗಿದೆ. ಮಧ್ಯ ಪ್ರಾಂಚ್ಯದಲ್ಲಿ ನಡೆಯುತ್ತಲೇ ಇರುವ ಸರಕಾರಿ ವಿರೋಧಿ ದಂಗೆಗಳಲ್ಲಿ ಮಾಧ್ಯಮದ ಸಜೀವ ಸಾನಿಧ್ಯವೂ ಇದ್ದೇ ಇದೆ.
 ಕಳೆದ ಅದೇಷ್ಟು ವರ್ಷಗಳಿಂದ ಪ್ರಮಾಣಿಕತೆಯಿಂದ ಕೆಲಸ ಮಾಡುತ್ತಿದ್ದಂತಹ ಪತ್ರಿಕೆ ಹಾಗೂ ದೃಶ್ಯ ಮಾಧ್ಯಮಗಳನ್ನು ಕೆಲ ಸಮಾಜದ ಘಾತುಕ ಶಕ್ತಿಗಳು ಅದರ ವಿರುದ್ಧ ತಮ್ಮ ಆಕ್ರಮನ ಮಾಡುತ್ತಿದ್ದಾರೆ. ಪತ್ರಿಕೆಯಲ್ಲಿ ಯಾವುದೇ ಸುದ್ದಿ ಪ್ರಕಟವಾದಗ ಅದರ ವಿರೋಧಿ ಶಕ್ತಿಗಳು ಪತ್ರಿಕೆ ಕಛೇರಿ ಮೇಲೆ ದಾಳಿ ಹಾಗೂ ಪತ್ರಿಕೆಗಳನ್ನು ಸುಟ್ಟು ಹಾಕುತ್ತಿರುವುದು ಇದರಿಂದ ಪತ್ರಿಕೆಯ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಭಂಗ ತರುತ್ತಿದ್ದಾರೆ ಎಂದು ಹೇಳಬಹುದಾಗಿದೆ. ಒಂದು ಪತ್ರಿಕೆ ಹಾಗೂ ದೃಶ್ಯ ಮಾಧ್ಯಮ ತಪ್ಪು ಮಾಡಿದಾಗ ಅದನ್ನು ವಿರುದ್ಧ ಪ್ರತಿಭಟಿಸಲು ಜನತೆಗೆ ಅದೇಷ್ಟು ದಾರಿಗಳು ಇರುವಾಗ ಘಾತುಕ ಶಕ್ತಿಗಳು ಈ ರೀತಿಯಾಗಿ ಮಾಡುವುದು ಸರಿಯೇ? ಎಂಬ ಪ್ರಶ್ನೆ ಪ್ರಜ್ಞಾವಂತ ನಾಗರಿಕರಿಂದ ಕೇಳಿ ಬರತ್ತಿದೆ. ಓರ್ವ ಪತ್ರಕರ್ತನಿಗೆ ಸಮಾಜದಲ್ಲಿ ನಡೆಯುವಂತಹ ಅನ್ಯಾಯ ಅಕ್ರಮಗಳ ವಿರುದ್ಧ ಅಭಿವ್ಯಕ್ತಿ ಸ್ವಾತಂತ್ರ್ಯದ ಮೂಲಕ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಲು ಅವಕಾಶವಿದೆ. ಆದರೆ ಇಂದಿನ ದಿನಗಳಲ್ಲಿ ಪತ್ರಕರ್ತನ ಮೇಲೆ ಹಲ್ಲೆ, ಕೊಲೆ ಹಾಗೂ ಪತ್ರಿಕಾ ಕಛೇರಿ ಮೇಲೆ ದಾಳಿ ನಡೆಯುತ್ತಲೇ ಇದೆ. ಮುಂಬೈಯಲ್ಲಿ ಖ್ಯಾತ ಪತ್ರಕರ್ತರೋರ್ವರು ಅಂಡರ್ ವರ್ಲ್ದ್ ಡಾನ್‌ಗಳ ವಿರುದ್ಧ ಪತ್ರಿಕೆಯಲ್ಲಿ ವರದಿ ಮಾಡಿಕ್ಕೆ ಅವರನ್ನು ಆ ಡಾನ್‌ಗಳು ನಡು ರಸ್ತೆಯಲ್ಲಿಯೇ ಕೊಚ್ಚಿ ಹಾಕಿದ್ದರು. ಇದು ಮಾನವ ಹಕ್ಕಿನ ಉಲ್ಲಂಘನೆಯಾಗಿದೆ. ಈ ಕೃತ್ಯದ ತನಿಖೆ ಮುಗಿದ್ದು, ಆರೋಪಿಗಳನ್ನು ಪೊಲೀಸರ ಬಂಧಿಸಿದ್ದಾಗ ಆರೋಪಿಗಳ ಪೈಕಿ ಜಿಗ್ನಾ ಎಂಬ ಪತ್ರಕರ್ತೆ ಇದರಲ್ಲಿ ಭಾಗಿಯಾಗಿದ್ದಾಳೆ ಎಂದು ಪೊಲೀಸ್ ತನಿಖೆಯಿಂದ ಬಯಲಾದಾಗ ಪತ್ರಕರ್ತರಲ್ಲಿ ಕೂಡ ಕೆಲವರು ಕೆಟ್ಟವರು ಇದ್ದರೆ ಎಂಬುವುದು ಸಾಭಿತಾಗಿದೆ.
    ಒಟ್ಟಾಗಿ ಹೇಳುವುದಾದರೆ ಮಾಧ್ಯಮವೆಂಬುವುದು ಪ್ರಜಾಪ್ರಭುತ್ವ ಅವಿಭಾಜ್ಯ ಅಂಗವಾಗಿದ್ದು, ಪ್ರಪಂಚದ ಎಲ್ಲಾ ಆಗೂಹೋಗುಗಳನ್ನು ಅದು ವಿಮರ್ಶೆ ಮಾಡುತ್ತ ಪ್ರಮಾಣಿಕವಾಗಿ ಕೆಲಸ ಮಾಡುತ್ತಿದೆ. ಯಾವುದೇ ಓರ್ವ ಪತ್ರಕರ್ತ ತಪ್ಪು ಮಾಡಿದಾಗ ಇಡೀ ಮಾಧ್ಯಮ ವರ್ಗವನ್ನು ದೂರುವುದು ಸರಿಯಲ್ಲ. ವಾರ್ತಾ ಮಾಧ್ಯಮ ಪ್ರಮಾಣಿಕವಾಗಿ ಕೆಲಸ ಮಾಡುವಾಗ ಅದಕ್ಕೆ ಜನತೆ ಹಾಗೂ ಸರಕಾರ ಸಂಪೂರ್ಣವಾಗಿ ಬೆಂಬಲ ನೀಡಿದ್ದಾರೆ ಆದರ್ಶ ಸಮಾಜ ನಿರ್ಮಾಣ ವಾಗುವುದರಲ್ಲಿ ಯಾವುದೇ ಸಂದೇಹವಿಲ್ಲ.

ಮಹಮ್ಮದ್ ಅಲಿ
ಪತ್ರಕರ್ತ ವಿಟ್ಲ

 
Design by Free WordPress Themes | Bloggerized by - Free Blogger Themes | @javtl