Monday 2 April 2012

ಶಾಲಾ ವಾರ್ಷಿಕೋತ್ಸವದ

ಸಾಲೆತ್ತೂರು: ಜಿಲ್ಲೆಯಲ್ಲಿ ೨೫೦ಕ್ಕಿಂತ ಹೆಚ್ಚು ಆಂಗ್ಲ ಮಾಧ್ಯಮ ಶಾಲೆಗಳು ಇದ್ದು, ಇದರಿಂದ ಸರ್ಕಾರದ ಹೊರೆ ಕಡಿಮೆಯಾಗಿದೆ, ಪ್ರತಿಯೊಬ್ಬರು ವಿದ್ಯಾವಂತರಾದರೆ ಬಲಿಷ್ಠ ಸಮಾಜ ನಿರ್ಮಾಣವಾಗಲು ಸಾಧ್ಯ ಎಂದು ಬಂಟ್ವಾಳ ಶಾಸಕ ರಮಾನಾಥ ರೈ ಹೇಳಿದರು.
ಅವರು ಏಪ್ರಿಲ್೧ರ ಭಾನುವಾರ ಸಾಲೆತ್ತೂರು ಪಾಲ್ತಾಜೆ ಸಿರಿ ವಿದ್ಯಾಲಯ ಆಂಗ್ಲ ಮಾಧ್ಯಮ ಶಾಲೆ ಇದರ ನೂತನ ಕೊಠಡಿಗಳ ಉದ್ಘಾಟನೆ ಹಾಗೂ ಶಾಲಾ ವಾರ್ಷಿಕೋತ್ಸವದ ಸಭಾಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಹಿಂದಿನ ಕಾಲದಲ್ಲಿ ಗುರುಕುಳ ಶಿಕ್ಷಣವು ಅರಮನೆ ಅರಸರಿಗೆ ಮಾತ್ರ ಸೀಮಿತವಾಗಿದ್ದವು, ಆದರೆ ಇದೀಗ ಅಂತಹ ಪರಿಸ್ಥಿತಿ ಹೋಗಿ ಎಲ್ಲಾರೂ ಸಮಾನ ಶಿಕ್ಷಣವನ್ನು ಪಡೆಯುವಂತಾಗಿದ್ದು, ಶೇಕಡ ೧೦೦ರಲ್ಲಿ ೯೯ಜನ ಶಿಕ್ಷಣವನ್ನು ಪಡೆಯುತ್ತಿದ್ದಾರೆ  ಎಂದರು. ಸಿಇಟಿಯಂತಹ ಪರೀಕ್ಷೆಗಳನ್ನು ದುರ್ಬಲ ಹಾಗೂ ಬಡ ವಿದ್ಯಾರ್ಥಿಗಳಿಗೆ ಬರೆಯಲು ಸರ್ಕಾರ ಅವಕಾಶವನ್ನು ಮಾಡಿಕೊಟ್ಟಿದ್ದರಿಂದ ಯಾರು ಕೂಡ ಶಿಕ್ಷಣದಿಂದ ವಂಚಿತರಾಗುವುದಿಲ್ಲ ಎಂದು ಅವರು ತಿಳಿಸಿದರು.
   ಶಾಲೆಯ ನೂತನ ಕೊಠಡಿಗಳ ಉದ್ಘಾಟನೆಯನ್ನು ಉದ್ಯಮಿ ನಡಿಗುತ್ತು ತಿಮ್ಮಪ್ಪ ನಾಯ್ಕ್ ಅವರು ನೆರವೇರಿಸಿದರು. ಸಭಾಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೊಳ್ನಾಡು ಗ್ರಾ.ಪಂ ಅಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ ಕುಲಾಲು ವಹಿಸಿದ್ದರು. ಶಾಲಾ ಕೊಠಡಿ ನಿರ್ಮಾಣಕ್ಕೆ ಸಹಾಯ ಧನ ಒದಗಿಸಿದ ನಡಿಗುತ್ತು ತಿಮ್ಮಪ್ಪ ನಾಯ್ಕ್, ಕಟ್ಟಡ ಕಾಮಗಾರಿ ಮಾಡಿದ ರವಿರಾಜ್, ಶ್ರೀನಿವಾಸ ಅವರ ಪರವಾಗಿ ಚಂದ್ರಹಾಸ ರವರನ್ನು ಇದೇ ಸಂದರ್ಭ ಶಾಲಾ ಸಮಿತಿ ವತಿಯಿಂದ ಸನ್ಮಾನಿಸಲಾಯಿತು.
ಜಿಲ್ಲಾ ಪಂಚಾಯಿತಿ ಸದಸ್ಯರಾದ ಎಂ.ಎಸ್ ಮಹಮ್ಮದ್, ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಬಂಟ್ವಾಳ ಸ್ಥಾಯಿ ಸಮಿತಿ ಅಧ್ಯಕ್ಷ ಮಾಧವ ಮಾವೆ, ಸದಾನಂದ ಶೆಟ್ಟಿ, ಶೀನಪ್ಪ ಆಳ್ವ, ರಾಜೇಶ್ ರೈ ಪಾಲ್ತಾಜೆ, ದೇವಿದಾಸ್ ಶೆಟ್ಟಿ ಪಾಲ್ತಾಜೆ, ಧನಲಕ್ಷ್ಮೀ ಇದ್ದರು.


1 comments:

Anonymous said...

good job...

Post a Comment

 
Design by Free WordPress Themes | Bloggerized by - Free Blogger Themes | @javtl