Tuesday 27 March 2012

ವಿಟ್ಲ ಕನ್ಯಾನ ಬಾಳೆಕೋಡಿ ಸ್ವಾಮೀಜಿಗೆ ಜೀವ ಬೆದರಿಕೆ:



ವಿಟ್ಲ: ಕನ್ಯಾನ ಗ್ರಾಮದ ಶ್ರೀಕಾಶೀಕಾಳಭೈರವೇಶ್ವರ ಕ್ಷೇತ್ರದ ಶಶೀಕಾಂತ ಮಣಿ ಸ್ವಾಮೀಜಿಯವರಿಗೆ  ಬೇನಾಮಿ ವ್ಯಕ್ತಿಯೊಬ್ಬ ಕಳೆದ ಕೆಲ ದಿನಗಳಿಂದ ಹಣದ ಆಮೀಷವೊಡ್ಡಿ ಜೀವ ಬೆದರಿಕೆ ಹಾಗೂ ಮಾನಹಾನಿ ಬೆದರಿಕೆ ಪೋನ್ ಕರೆ ಬರುತ್ತಿರುವ ಬಗ್ಗೆ ಪೊಲೀಸ್ ಠಾಣೆಯಲ್ಲಿ ಮಾ.೨೩ರಂದು ದೂರು ನೀಡಲಾಗಿದ್ದು, ಪೊಲೀಸ್ ಇಲಾಖೆ ಆರೋಪಿಗಳನ್ನು ಪತ್ತೆ ಮಾಡಲು ಮೀನಾಮೇಷ ಎಣಿಸುತ್ತಿದೆ ಎಂದು ದಲಿತ ಸಂಘಟನೆಗಳು ಪತ್ರಿಕಾಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದೆ.
    ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ನಾಗರಿಕ ಹಕ್ಕು ಜಾಗೃತ ಸಮಿತಿ, ದ.ಕ ಜಿಲ್ಲಾ ದಲಿತ್ ಸೇವಾ ಸಮಿತಿ ಹಾಗೂ ದಲಿತ ಸಂಘಟನೆಗಳ ಮುಖಂಡರು ಸೋಮವಾರ ಕನ್ಯಾನ ಶ್ರೀಕ್ಷೇತ್ರದ ವಠಾರದಲ್ಲಿ ಶ್ರೀಶಶೀಕಾಂತ ಮಣಿ ಸ್ವಾಮೀಜಿ ನೇತೃತ್ವದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಅವರು ಅಸಮಾಧಾನ ವ್ಯಕ್ತ ಪಡಿಸಿದರು. ಜಿಲ್ಲಾ ದಲಿತ್ ಸೇವಾ ಸಮಿತಿ ಅಧ್ಯಕ್ಷ ಸೇಸಪ್ಪ ಬಿ.ಕೆ. ಬೆದ್ರಕಾಡು ಮಾತನಾಡಿ ೨ ಲಕ್ಷರ ರೂ. ಕೊಡಬೇಕೆಂದು ಬೇಡಿಕೆಯೊಂದಿಗೆ ಬೆದರಿಸುತ್ತಿರುವ ಆತನ ಬಗ್ಗೆ  ನೀಡಿರುವ ದೂರನ್ನು ಹಗುರವಾಗಿ ಪರಿಗಣಿಸಿದ್ದಂತಿದೆ. ದಲಿತ ಸಮುದಾಯದ ಸ್ವಾಮೀಜಿಯವರಿಗೆ  ಮೂರು ದಿನಗಳೊಳಗೆ ಸೂಕ್ತ ಪೊಲೀಸ್ ಭದ್ರತೆ ಒದಗಿಸದಿದ್ದಲ್ಲಿ ವಿಟ್ಲ ಆರಕ್ಷಕ ಠಾಣೆಯೆದುರು ಶುಕ್ರವಾರ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಎಚ್ಚರಿಸಿದರು.
. ಮಂಗಳವಾರ ವಿಟ್ಲ ಠಾಣೆಯಲ್ಲಿ ಘಟನೆ ಬಗ್ಗೆ ಪ್ರಕರಣ ದಾಖಲಾಗಿದ್ದು, ಠಾಣಾಧಿಕಾರಿ ರಕ್ಷಿತ್ ಎ.ಕೆ ಸ್ವಾಮೀಜಿ ಬಳಿ ತೆರಳಿ ಮಾತುಕತೆ ನಡೆಸಿದ್ದು, ಘಟನೆ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದಾರೆ.

0 comments:

Post a Comment

 
Design by Free WordPress Themes | Bloggerized by - Free Blogger Themes | @javtl