Tuesday, 27 March 2012

ವಿಟ್ಲ ಕನ್ಯಾನ ಬಾಳೆಕೋಡಿ ಸ್ವಾಮೀಜಿಗೆ ಜೀವ ಬೆದರಿಕೆ:



ವಿಟ್ಲ: ಕನ್ಯಾನ ಗ್ರಾಮದ ಶ್ರೀಕಾಶೀಕಾಳಭೈರವೇಶ್ವರ ಕ್ಷೇತ್ರದ ಶಶೀಕಾಂತ ಮಣಿ ಸ್ವಾಮೀಜಿಯವರಿಗೆ  ಬೇನಾಮಿ ವ್ಯಕ್ತಿಯೊಬ್ಬ ಕಳೆದ ಕೆಲ ದಿನಗಳಿಂದ ಹಣದ ಆಮೀಷವೊಡ್ಡಿ ಜೀವ ಬೆದರಿಕೆ ಹಾಗೂ ಮಾನಹಾನಿ ಬೆದರಿಕೆ ಪೋನ್ ಕರೆ ಬರುತ್ತಿರುವ ಬಗ್ಗೆ ಪೊಲೀಸ್ ಠಾಣೆಯಲ್ಲಿ ಮಾ.೨೩ರಂದು ದೂರು ನೀಡಲಾಗಿದ್ದು, ಪೊಲೀಸ್ ಇಲಾಖೆ ಆರೋಪಿಗಳನ್ನು ಪತ್ತೆ ಮಾಡಲು ಮೀನಾಮೇಷ ಎಣಿಸುತ್ತಿದೆ ಎಂದು ದಲಿತ ಸಂಘಟನೆಗಳು ಪತ್ರಿಕಾಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದೆ.
    ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ನಾಗರಿಕ ಹಕ್ಕು ಜಾಗೃತ ಸಮಿತಿ, ದ.ಕ ಜಿಲ್ಲಾ ದಲಿತ್ ಸೇವಾ ಸಮಿತಿ ಹಾಗೂ ದಲಿತ ಸಂಘಟನೆಗಳ ಮುಖಂಡರು ಸೋಮವಾರ ಕನ್ಯಾನ ಶ್ರೀಕ್ಷೇತ್ರದ ವಠಾರದಲ್ಲಿ ಶ್ರೀಶಶೀಕಾಂತ ಮಣಿ ಸ್ವಾಮೀಜಿ ನೇತೃತ್ವದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಅವರು ಅಸಮಾಧಾನ ವ್ಯಕ್ತ ಪಡಿಸಿದರು. ಜಿಲ್ಲಾ ದಲಿತ್ ಸೇವಾ ಸಮಿತಿ ಅಧ್ಯಕ್ಷ ಸೇಸಪ್ಪ ಬಿ.ಕೆ. ಬೆದ್ರಕಾಡು ಮಾತನಾಡಿ ೨ ಲಕ್ಷರ ರೂ. ಕೊಡಬೇಕೆಂದು ಬೇಡಿಕೆಯೊಂದಿಗೆ ಬೆದರಿಸುತ್ತಿರುವ ಆತನ ಬಗ್ಗೆ  ನೀಡಿರುವ ದೂರನ್ನು ಹಗುರವಾಗಿ ಪರಿಗಣಿಸಿದ್ದಂತಿದೆ. ದಲಿತ ಸಮುದಾಯದ ಸ್ವಾಮೀಜಿಯವರಿಗೆ  ಮೂರು ದಿನಗಳೊಳಗೆ ಸೂಕ್ತ ಪೊಲೀಸ್ ಭದ್ರತೆ ಒದಗಿಸದಿದ್ದಲ್ಲಿ ವಿಟ್ಲ ಆರಕ್ಷಕ ಠಾಣೆಯೆದುರು ಶುಕ್ರವಾರ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಎಚ್ಚರಿಸಿದರು.
. ಮಂಗಳವಾರ ವಿಟ್ಲ ಠಾಣೆಯಲ್ಲಿ ಘಟನೆ ಬಗ್ಗೆ ಪ್ರಕರಣ ದಾಖಲಾಗಿದ್ದು, ಠಾಣಾಧಿಕಾರಿ ರಕ್ಷಿತ್ ಎ.ಕೆ ಸ್ವಾಮೀಜಿ ಬಳಿ ತೆರಳಿ ಮಾತುಕತೆ ನಡೆಸಿದ್ದು, ಘಟನೆ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದಾರೆ.

ನೆನೆಗುದಿಗೆ ಬಿದ್ದ ವಿಟ್ಲ ರಸ್ತೆ ವಿಸ್ತರಣೆ ಯೋಜನೆ

.
ವಿಟ್ಲ: ಇಲ್ಲಿಯ ಜನತೆಯ ಬಹುವರ್ಷದ ಬೇಡಿಕೆಯಾಗಿದ್ದ ವಿಟ್ಲ ಪೇಟೆ ರಸ್ತೆ ವಿಸ್ತರಣೆ ಯೋಜನೆಗೆ ರಾಜ್ಯ ಸರ್ಕಾರದಿಂದ ೨ ಕೋಟಿ ರೂಪಾಯಿ ಅನುದಾನವಾಗಿದ್ದರೂ ಕೂಡ ಇಲಾಖೆಯ ಅಧಿಕಾರಿಗಳು ಟೆಂಡರ್ ಕರೆಯಲು ಮೀನಾಮೇಷ ಎಣಿಸುತ್ತಿದ್ದು, ಇದರಿಂದ ಇಲ್ಲಿಯ ಜನತೆ ರೋಸಿ ಹೋಗಿದ್ದಾರೆ.
 ರಸ್ತೆಯ ಮಧ್ಯದಿಂದ ೧೬.೫, ೧೬.೫ರಂತೆ ಒಟ್ಟು ೩೩ ಅಡಿ ಉದ್ದಕ್ಕೆ ರಸ್ತೆಯನ್ನು ಅಗಲೀಕರಣಗೊಳಿಸಲು ಇಲಾಖೆ ಈ ಹಿಂದೆಯೇ ಯೋಜನೆ ರೂಪಿಸಿದ್ದು, ಅದಕ್ಕಾಗಿ ವಿಟ್ಲದ ಕಲ್ಲಕಟ್ಟ ಸೇತುವೆಯಿಂದ ಶಾಲಾ ರಸ್ತೆಯ ಅತಿಥಿ ಗೃಹದ ವರೆಗೆ ರಸ್ತೆ ವಿಸ್ತರಣೆ ಮಾಡಲು ಈಗಾಗಲೇ ಸರ್ಕಾರದಿಂದ ೨ಕೋಟಿ ರೂಪಾಯಿ ಅನುದಾನವಾಗಿದೆ ಎಂದು ಸರ್ಕಾರದ ಸಂಬಂಧಪಟ್ಟ ಇಲಾಖೆ ಅಧಿಕೃತವಾಗಿ ಹೇಳುತ್ತಿದೆ. ಆದರೆ ಇದು ಹೇಳಿ ವರ್ಷ ಒಂದು ಆದರೂ ಕಾಮಗಾರಿ ಇನ್ನೂ ಪ್ರಾರಂಭವಾಗಿಲ್ಲ.

ಪ್ರತಿದಿನ ಟ್ರಾಫಿಕ್ ಕಿರಿಕಿರಿ:
      ವಿಟ್ಲ ಪೇಟೆಯಲ್ಲಿ ಪ್ರತಿದಿನ ಟ್ರಾಫಿಕ್ ಸಮಸ್ಯೆ ಉಂಟಾಗುತ್ತಿದ್ದು, ಇದರಿಂದ ಇಲ್ಲಿಯ ಜನತೆ ರೋಸಿ ಹೋಗಿದ್ದಾರೆ. ಮಂಗಳವಾರ ವಾರದ ಸಂತೆವಾಗಿದ್ದರಿಂದ ಇಲ್ಲಿ ಜನರಿಗೆ ಓಡಾಡಲು ಪರದಾಡುವಂತಹ ಪರಿಸ್ಥಿತಿ ನಿರ್ಮಾವಾಗುತ್ತಿದ್ದು, ಪೇಟೆಯ ಖಾಸಗಿ ಬಸ್ ನಿಲ್ದಾಣದೊಳಗೆ ಇಕ್ಕಾಟ್ಟಿನಿಂದ ಕೂಡಿದ ಪರಿಣಾಮ ಅವಘಾಡಗಳು ಸಂಭವಿಸುತ್ತಲೇ ಇರುತ್ತದೆ. ಸಂಜೆ ವೇಳೆ ಶಾಲಾ ಕಾಲೇಜು ಬಿಡುವ ಹೊತ್ತಿನಲ್ಲಿ ವಿಟ್ಲ ಪೇಟೆಯ ಟ್ರಾಫಿಕ್‌ಗೆ ವಿದ್ಯಾರ್ಥಿಗಳು ಸಿಕ್ಕಿಹಾಕಿ ಹೊದ್ದಡುತ್ತಿದ್ದಾರೆ. ಬೆಳಿಗ್ಗೆ ಹಾಗೂ ಸಂಜೆ ಹೊತ್ತುಗಳಲ್ಲಿ ಇಲ್ಲಿಯ ವಾಹನ ಚಾಲಕರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಪ್ರತಿದಿನಲೂ ನರಕಯಾತನೇ ಅನುಭವಿಸುತ್ತಿದ್ದಾರೆ. ಒಂದೇ ಸಮಯಕ್ಕೆ ಎದುರು ಬದುರಾಗಿ ವಾಹನಗಳು ರಸ್ತೆಯಲ್ಲಿ ಸಂಚಾರಿಸಲು ಸಾಧ್ಯವಾಗುತ್ತಿಲ್ಲ. ಒಂದು ವೇಳೆ ಸಂಚಾರಿಸಿದರೆ ಪರಸ್ಪರ ವಾಹನಗಳು ಸವಾರಿ ದಿನಪೂರ್ತಿ ಟ್ರಾಫಿಕ್ ಜಾಮ್ ಉಂಟಾಗುತ್ತದೆ.

ವಿಸ್ತರಣೆಗೆ ವಿರೋಧ:  ವಿಟ್ಲ ಕೆಲ ವರ್ತಕರು ಸ್ವತ: ತಮ್ಮ ಅಂಗಡಿಗಳ ಅರ್ಧ ಭಾಗವನ್ನು ರಸ್ತೆ ವಿಸ್ತರಣೆಗೆ ಬಿಟ್ಟುಕೊಟ್ಟಿದ್ದು, ನಾಲ್ಕು ಮಾರ್ಗ ಜಕ್ಷನ್‌ನಲ್ಲಿ ಬೆರಳೆಣಿಕೆಯಷ್ಟು ಅಂಗಡಿ ಮಾಲೀಕರು ತಮ್ಮ ಅಂಗಡಿಯನ್ನು ಬಿಟ್ಟು ಕೊಡಲು ಹಿಂದೇಟು ಹಾಕುತ್ತಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿಗಳು ಸತತ ಮೂರು ಭಾರೀ ವಿಟ್ಲಕ್ಕೆ ಭೇಟಿ ನೀಡಿ ಅಂಗಡಿ ಮಾಲೀಕರೊಂದಿಗೆ ಮಾತುಕತೆ ನಡೆಸಿದ್ದು, ಈ ಸಮಸ್ಯೆ ಅನ್ನು ಸೌಹರ್ದವಾಗಿ ಬಗೆಹರಿಸಲು ಕರೆ ನೀಡಿದ್ದರು.  ಅದು ಕಳೆದು ವರ್ಷ ಒಂದು ಕಳೆದರೂ ರಸ್ತೆ ವಿಸ್ತರಣೆ ಮಾತ್ರ ವಿಟ್ಲದ ಜನತೆಗೆ ಕನಸ್ಸಾಗಿಯೇ ಉಳಿದಿದೆ.

ಅಧಿಕಾರಿಗಳು ಏನು ಹೇಳುತ್ತಾರೆ?:   (ಇದನ್ನು ಬಾಕ್ಸ್ ಮಾಡಬಹುದು)
  ಇತ್ತೀಚೆಗೆ ವಿಟ್ಲ-ಸಾರಡ್ಕ ರಸ್ತೆ ಕಾಮಗಾರಿ ನಡೆಯುತ್ತಿದ್ದ ಸಂದರ್ಭ ಭೇಟಿ ನೀಡಿದ್ದ ಎಕ್ಸಿಕ್ಯುಟಿವ್ ಎಂಜಿನಿಯರ್ ಅವರು ವಿಟ್ಲ ಅಂಗಡಿ ಮಾಲೀಕರ ಸಭೆ ಕರೆದು ಇನ್ನೂ ಕೂಡ ರಸ್ತೆ ವಿಸ್ತರಣೆಗೆ ತಮ್ಮ ಅಂಗಡಿಗಳನ್ನು ಬಿಟ್ಟು ಕೊಡದವರೊಂದಿಗೆ ಮಾತುಕತೆ ನಡೆಸಿ ಬಳಿಕ ತೀರ್ಮಾನ ಕೈಗೊಳ್ಳಲಾಗುವುದು ಎಂದಿದ್ದಾರೆ.
 ಕಳೆದ ಹಲವಾರು ತಿಂಗಳುಗಳಿಂದ ಇದೇ ರೀತಿಯ ಹಾರೈಕೆಯ ಮಾತುಗಳನ್ನು ಇಲಾಖೆಯ ಅಧಿಕಾರಿ ಹೇಳುತ್ತಿದ್ದು, ಇದೂವರೆಗೂ ಯಾವುದೇ ರೀತಿಯ ಕ್ರಮ ಕೈಗೊಳ್ಳಲಿಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ.

ಇಲಾಖೆಯ ಯೋಜನೆಗಳು:
ಅತೀ ಕಿರಿದಾದ ವಿಟ್ಲ ಪೇಟೆಯ ರಸ್ತೆಗಳಲ್ಲಿರುವ ವಿದ್ಯುತ್ ಕಂಬಗಳನ್ನು ತೆರವುಗೊಳಿಸಿ, ರಸ್ತೆ ಮಧ್ಯದಿಂದ ೧೬.೫, ಅಡಿ ರಸ್ತೆಯನ್ನು ಅಗಳಗೊಳಿಸಬೇಕು. ನಾಲ್ಕು ಮಾರ್ಗ ಜಕ್ಷನ್‌ನಲ್ಲಿ ವೃತ್ತ ನಿರ್ಮಿಸಿ ಸುಗಮ ಸಂಚಾರಕ್ಕೆ ಅನುಮಾಡಿಕೊಟ್ಟರೆ, ಹಾಗೂ ರಸ್ತೆ ಬದಿಗಳಲ್ಲಿ ಚರಂಡಿಗಳನ್ನು ರಚಿಸಲಾಗುವುದು. ಇದರಿಂದ ವಿಟ್ಲದ ಪೇಟೆಯಲ್ಲಿ ಸಂಭವಿಸುತ್ತಿದ್ದ ದಟ್ಟನೆಯ ಟ್ರಾಫಿಕ್ ಸಮಸ್ಯೆಯನ್ನು ನಿವಾರಿಸಬಹುದು ಎಂಬ ಯೋಜನೆಗಳನ್ನು ಅವರು ರೂಪಿಸುತ್ತಿದ್ದು,  ಆದರೆ ಅದು ಮಾತ್ರ ಅನುಷ್ಠಾನಕ್ಕೆ ಇದೂವರೆಗೂ ಬರಲಿಲ್ಲ?

ವಿಟ್ಲ ವಿಧಾನ ಸಭಾ ಕ್ಷೇತ್ರವು ಪುತ್ತೂರು ಕ್ಷೇತ್ರಕ್ಕೆ ಹಂಚಿ ಹೋಗಿದ್ದರಿಂದ ಇದರ ಅಭಿವೃದ್ಧಿ ಕೂಡ ಅದರ ಜತೆಗೆ ಹೋಗಿದೆ ಎಂದು ಇಲ್ಲಿಯ ಗ್ರಾಮಸ್ಥರು ಹೇಳುತ್ತಿದ್ದಾರೆ. ಇನ್ನೂ ಕೆಲ ತಿಂಗಳಲ್ಲಿ ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವ ನಡೆಯುವ ಸಾಧ್ಯತೆ ಕೂಡ ಇದೆ. ಈ ಸಂದರ್ಭ ಲಕ್ಷಾಂತರ ಜನರು ವಿಟ್ಲ ಪೇಟೆ ಮೂಲಕವೇ ದೇವಸ್ಥಾನಕ್ಕೆ ಹಾದು ಹೋಗಬೇಕಾಗಿದೆ. ಈ ಸಂದರ್ಭ ದಟ್ಟನೆಯ ಟ್ರಾಫಿಕ್ ಆಗುವ ಸಂಭವ ಹೆಚ್ಚು ಇದೆ. ಇನ್ನಾದರೂ ಸಂಬಂಧಪಟ್ಟ ಸ್ಥಳೀಯ ಜನಪ್ರತಿನಿಧಿಗಳು, ವಿವಿಧ ಪಕ್ಷದ ನಾಯಕರು, ಊರಿನ ಹಿರಿಯರು ವಿಟ್ಲ ಪೇಟೆ ಅಭಿವೃದ್ಧಿ ಬಗ್ಗೆ ಮೇಲಾಧಿಕಾರಿಗಳಿಗೆ ಒತ್ತಡ ಹಾಕದಿದ್ದರೆ ಈ ಯೋಜನೆ ಜನರಿಗೆ ಕನಸ್ಸಾಗಿಯೇ ಉಳಿವುದರಲ್ಲಿ ಯಾವುದೇ ಸಂಶಯವಿಲ್ಲ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಶೀಘ್ರವಾಗಿ ಅಂಗಡಿ ಮಾಲೀಕರ ಸಭೆ ಕರೆದು, ಬಳಿಕ ಈ ಯೋಜನೆಗೆ ಟೆಂಡರ್ ಕರೆಯಬೇಕೆಂದು ಪ್ರಜ್ಞಾವಂತ ನಾಗರಿಕರು ಹೇಳಿದ್ದಾರೆ.


ದ್ಸಿಕ್ರ್ ಹಲ್ಕಾ ಕಾರ್ಯಕ್ರಮ

ವಿಟ್ಲ :  ಪೂರ್ವಿಕ ಉಲಮಾಗಳನ್ನು ಗೌರವಿಸಿ ಅನುಸರಿಸುವುದು ಇಹ-ಪರ ವಿಜಯಕ್ಕೆ ನಾಂದಿ ಎಂದು  ಮೌಲಾನಾ ಪೇರೋಡ್ ಅಬ್ರುರ್ರಹ್ಮಾನ್ ಸಖಾಫಿ ಹೇಳಿದರು.
  ಮರ್‌ಹೂಂ ಶೈಖುನಾ ಸುರಿಬೈಲು ಉಸ್ತಾದರ ೧೦ನೇ ಆಂಡ್ ನೇರ್ಚೆ ಹಾಗೂ ಅನುಸ್ಮರಣಾ ಸಮ್ಮೇಳನದ ಪ್ರಯುಕ್ತ ಆರು ದಿವಸಗಳ ಕಾಲ ಸುರಿಬೈಲ್ ಅಶ್-ಅರಿಯ್ಯದಲ್ಲಿ ನಡೆದ ಕಾರ್ಯಕ್ರಮ ಶುಕ್ರವಾರ ಸಮಾಪನ ಕಾರ್ಯಕ್ರಮದಲ್ಲಿ ಅವರು  ಮುಖ್ಯ ಭಾಷಣಗೈದು ಮಾತನಾಡಿದರು
ಶೈಖುನಾ ತಾಜುಲ್ ಉಲಮಾ ಸಯ್ಯಿದ್ ಅಬ್ದುರ್ರಹ್ಮಾನ್ ಅಲ್-ಬುಖಾರಿ ಉಳ್ಳಾಲ ಅಧ್ಯಕ್ಷತೆ ವಹಿಸಿದ್ದು, ಉಡುಪಿ ಖಾಝಿ ಪಿ.ಎಂ. ಇಬ್ರಾಹಿಂ ಮುಸ್ಲಿಯಾರ್ ಬೇಕಲ ಉದ್ಘಾಟಿಸಿದರು.
   
    ಎ.ಪಿ. ಮುಹಮ್ಮದ್ ಮುಸ್ಲಿಯಾರ್ ಕಾಂತಪುರಂ, ಅಬ್ಬಾಸ್ ಮುಸ್ಲಿಯಾರ್ ಅಲ್-ಮದೀನಾ ಮಂಜನಾಡಿ, ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ, ಕೆ.ಪಿ. ಹುಸೈನ್ ಸಅದಿ ಕೆ.ಸಿ.ರೋಡ್, ಎಂ.ಎಸ್.ಎಂ. ಅಬ್ದುರ್ರಶೀದ್ ಝೈನಿ ಕಾಮಿಲ್ ಸಖಾಫಿ ಮೊದಲಾದವರು ಭಾಗವಹಿಸಿದ್ದರು.
    ಸಯ್ಯಿದ್ ಅಬ್ದುರ್ರಹ್ಮಾನ್ ಇಂಬಿಚ್ಚಿಕೋಯ ತಂಙಳ್ ಪೊನ್ನಂಗಳ ಬಾಯಾರ್ ಇವರ ನೇತೃತ್ವದಲ್ಲಿ ದ್ಸಿಕ್ರ್ ಹಲ್ಕಾ ಕಾರ್ಯಕ್ರಮ ನಡೆಯಿತು. ಸಯ್ಯಿದ್ ಜಲಾಲುದ್ದೀನ್ ತಂಙಳ್ ಉಜಿರೆ, ಸಯ್ಯಿದ್ ಸಿ.ಟಿ.ಎಂ. ಉಮರ್ ಆಟಕೋಯ ತಂಙಳ್ ಮನ್‌ಶರ್, ಸಯ್ಯಿದ್ ಜಲಾಲುದ್ದೀನ್ ತಂಙಳ್ ಪೆರಾಲ, ಇಬ್ರಾಹಿಂ ಬಾವ ಹಾಜಿ ಮಂಗಳೂರು, ಕುಂಞಿ ಅಹ್ಮದ್ ಹಾಜಿ ದೇರಳಕಟ್ಟೆ, ಹುಸೈನ್ ಹಾಜಿ ಕೊಡಾಜೆ, ಅಝೀಝ್ ಹಾಜಿ ಕುತ್ತಾರ್, ಉಸ್ಮಾನ್ ಹಾಜಿ ಮಿತ್ತೂರು ಎನ್.ಎಸ್. ಕರೀಂ ಹಾಜಿ ಮಂಜನಾಡಿ, ಸಿ.ಎಂ. ಅಬೂಬಕ್ಕರ್ ಲತೀಫಿ ಎಣ್ಮೂರು ಮೊದಲಾದವರು ಉಪಸ್ಥಿತರಿದ್ದರು.
    ಬಂಟ್ವಾಳ ಶಾಸಕ ಬಿ. ರಮಾನಾಥ ರೈ ಅವರ ಅಧ್ಯಕ್ಷತೆಯಲ್ಲಿ ಸೌಹಾರ್ದ ಸಮಾವೇಶ ನಡೆಯಿತು. ಶಾಸಕ ಯು.ಟಿ. ಖಾದರ್, ವಕ್ಫ್ ಮಂಡಳಿ ಚೆಯರ್‌ಮೆನ್ ಎನ್.ಕೆ.ಎಂ. ಶಾಫಿ ಸಅದಿ ನಂದಾವರ, ಜಿ.ಪಂ. ಸದಸ್ಯ ಎಂ.ಎಸ್. ಮುಹಮ್ಮದ್, ಜಿಲ್ಲಾ ವಕ್ಫ್ ಬೋರ್ಡ್ ಅಧ್ಯಕ್ಷ ಹಾಜಿ ಉಸ್ಮಾನ್, ಎ.ಎ. ಹೈದರ್ ಪರ್ತಿಪ್ಪಾಡಿ, ಯು.ಎಸ್. ಹಂಝ ಉಳ್ಳಾಲ, ಎಸ್.ಕೆ. ಖಾದರ್ ಹಾಜಿ ಮುಡಿಪು, ಕೆ.ಎಂ. ಸಿದ್ದೀಕ್ ಮೋಂಟುಗೋಳಿ, ಕೆ.ಎಂ. ಇಸ್ಮಾಯಿಲ್ ಸಅದಿ ಕಿನ್ಯ, ಎಂ.ಬಿ.ಎಂ. ಸಾದಿಕ್ ಮಾಸ್ಟರ್ ಮಲೆಬೆಟ್ಟು, ಅಬ್ದುರ್ರಹ್ಮಾನ್ ಮದನಿ ಪಡನ್ನ, ಅಬ್ದುಲ್ ರಝಾಕ್ ಕುಕ್ಕಾಜೆ, ಬಿ.ಎಂ. ಅಬ್ಬಾಸ್ ಅಲಿ ಬೋಳಂತೂರು, ರಫೀಕ್ ಹಾಜಿ ಸುರಿಬೈಲು, ನಾರಾಯಣ ಟೈಲರ್ ಬೋಳಂತೂರು, ಯಾಕೂಬ್ ದಂಡೆಮಾರ್, ಇಬ್ರಾಹಿಂ ಖಲೀಲ್ ಮೊದಲಾದವರು ಭಾಗವಹಿಸಿದ್ದರು. ದಾರುಲ್ ಅಶ್-ಅರಿಯ್ಯ ಮೆನೇಜರ್ ಸಿ.ಎಚ್. ಮುಹಮ್ಮದ್ ಅಲಿ ಸಖಾಫಿ, ಸಿ.ಎಚ್. ಯೂಸುಫ್ ಮದನಿ ಇದ್ದರು.


ಬಾಯಾರಿಕೆ

ಬಿಸಿಲ ಧಗೆಯಲ್ಲಿ ಬಾಯಾರಿದ ಹಸು 

Monday, 26 March 2012

ಸಾರಡ್ಕ ರಸ್ತೆಯ ಅವ್ಯವ್ಯವಸ್ಥೆ

             ವಿಟ್ಲ: ಕರ್ನಾಟಕ-ಕೇರಳ ಗಡಿಪ್ರದೇಶದ ಸಾರಡ್ಕ ಎಂಬಲ್ಲಿ ರಸ್ತೆಯ ತಡೆಗೋಡೆ ಕಳೆದ ಎರಡು ವರ್ಷಗಳ ಹಿಂದೆಯೇ ಕುಸಿದು ಬಿದ್ದಿದ್ದು, ಅದರ ಕಾಮಗಾರಿ ಇನ್ನೂ ಕೂಡ ಆರಂಭವಾಗಿಲ್ಲ. ಈ ರಸ್ತೆ ಮೂಲಕ ದಿನ ನಿತ್ಯ ಅದೇಷ್ಟು ವಾಹನಗಳು ಸಂಚಾರಿಸುತ್ತಿದೆ. ವಿಟ್ಲದಿಂದ ಪೆರ್ಲ, ಬದಿಯಡ್ಕ, ಕಾಸರಗೋಡು, ಪಾಣಾಜೆ ಮೂಲಕ ಪುತ್ತೂರು ಕಡೆ ದಿನ ನಿತ್ಯ ನೂರಾರು ವಾಹನಗಳು ಇದೇ ರಸ್ತೆಯಿಂದಲೇ ಸಂಚಾರಿಸುತ್ತಿದೆ. ಎರಡು ವರ್ಷಗಳ ಹಿಂದೆ ಕರ್ನಾಟಕ ರಾಜ್ಯಕ್ಕೆ ಸಂಬಂಧಪಟ್ಟ ನದಿಯೊಂದಕ್ಕೆ ಅಡ್ಡಲಾಗಿ ಕಟ್ಟಿರುವ ತಡೆಗೋಡೆಯ ಕಲ್ಲುಗಳು ಕುಸಿದು ಬಿದ್ದಿದೆ. ಸಂಬಂಧಪಟ್ಟ ಜನಪ್ರತಿನಿಧಿಗಳಾಗಲಿ, ಅಧಿಕಾರಿಗಳಾಗಲಿ ಈ ಬಗ್ಗೆ ಯಾವುದೇ ರೀತಿಯ ಕ್ರಮ ಕೈಗೊಳ್ಳದೆ ಇದ್ದಾರೆ. ವರ್ಷದ ಹಿಂದೆ ಸಾರಡ್ಕ ಈ ರಸ್ತೆಯಲ್ಲಿ ಸಂಚಾರಿಸುತ್ತಿದ್ದ ಲಾರಿ, ಹಾಗೂ ಆಮ್ನಿಯೊಂದು ಸೈಡ್ ಕೊಡುವ ಭರದಲ್ಲಿ ಹೊಳೆಗೆ ಬಿದ್ದಿದ್ದವು ಎಂದು ಸಾರ್ವಜನಿಕರು ತಿಳಿಸಿದ್ದಾರೆ. ಈ ರಸ್ತೆಯಲ್ಲಿ ಹೆಚ್ಚಾಗಿ ಬಸ್ಸು, ಲಾರಿ, ಟ್ಯಾಂಕರ್‌ನಂತ ಮುಂತಾದ ಘನ ವಾಹನಗಳೇ ಈ ರಸ್ತೆ ಮೂಲಕ ಹಾದು ಹೋಗುತ್ತಿದೆ. ಈ ಸಂದರ್ಭ ಪರಸ್ಪರ ವಾಹನಗಳು ಅಡ್ಡದಿಡ್ಡಿಯಾಗಿ ರಸ್ತೆಬದಿಗೆ ಸವರಿ ಅವಘಾಡಗಳು ಸಂಭವಿಸುತ್ತಲೇ ಇರುತ್ತದೆ. ಮಳೆಗಾಲದಲ್ಲಿ ಇಲ್ಲಿ ನದಿ ತುಂಬಿ ಹರಿಯುತ್ತಿದ್ದು, ಇದರಿಂದ ವಾಹನ ಚಾಲಕರು ರೋಸಿ ಹೋಗಿದ್ದಾರೆ. ಈ ಬಗ್ಗೆ ಸಂಬಂಧಪಟ್ಟವರಲ್ಲಿ ಒತ್ತಡ ಹಾಕಿದರೆ ಇದು ನಮಗೆ ಸಂಬಂಧಪಟ್ಟದ್ದಲ್ಲ ಎಂದು ಹೇಳಿ ಕೈ ತೊಳೆದುಕೊಳ್ಳುತ್ತ, ಜನರ ಪ್ರಾಣದ ಮೇಲೆ ಅವರು ಆಟವಾಡುತ್ತಿದ್ದಾರೆ ಎಂದು ಸ್ಥಳೀಯರು ದೂರಿದ್ದಾರೆ. ಕಳಪೆ ಕಾಮಗಾರಿಯಿಂದ ಈ ರಸ್ತೆ ಬದಿಯ ತಡೆಗೋಡೆ ಕುಸಿದು ಬಿದ್ದಿದ್ದು, ವರ್ಷ ಎರಡು ಕಳೆದರೂ ಇದರ ಮರು ಕಾಮಗಾರಿ ಇನ್ನೂ ಆರಂಭವಾಗಿಲ್ಲ. ಮುಂದಿನ ಮಳೆಗಾಲ ಬರುವ ಒಳಗೆ ಸಂಬಂಧಪಟ್ಟವರು ಇದಕ್ಕೊಂದು ಪರಿಹಾರ ಕಂಡುಕೊಳ್ಳದೇ ಇದ್ದರೆ ಇಲ್ಲಿ ಜನರ ಪ್ರಾಣಕ್ಕೆ ಅಪಾಯವಾಗುದಂತ್ತೂ ಸತ್ಯ ಎಂದು ಸಾರ್ವಜನಿಕರು ತಿಳಿಸಿದ್ದಾರೆ.
 

                                                                                              




--
Mohammad Ali
Vittla
Reporter, Vittla
9980205258

ವಿಟ್ಲ ಗ್ರಾಮ ಪಂಚಾಯತ್ ನಲ್ಲಿ ಸ್ವಚತಾ ಕಾರ್ಯಕ್ರಮ


ವಿಟ್ಲ: ಸ್ವಚ್ಛತೆಯ ಗ್ರಾಮ ನಮ್ಮ ಜೀವನ ಹೇಗಿರಬೇಕೆಂದು ತೋರಿಸುತ್ತದೆ, ಸ್ವಚ್ಛ ಗ್ರಾಮವಿದ್ದಾರೆ ನಮ್ಮ ಆರೋಗ್ಯವು ಉತ್ತಮವಾಗಿರುತ್ತದೆ ಎಂದು ದ.ಕನ್ನಡ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಕೆ.ಟಿ ಶೈಲಜಾ ಭಟ್ ಹೇಳಿದರು.
  ವಿಟ್ಲ ಗ್ರಾ.ಪಂಚಾಯಿತಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ. ಜನಶಿಕ್ಷಣ ಟ್ರಸ್ಟ್ ಮಂಗಳೂರು ಹಾಗೂ ಸಮಾಜ ಕಾರ್ಯ ವಿದ್ಯಾರ್ಥಿಗಳು ವಿಟ್ಲ ಸರ್ಕಾರಿ ಕಾಲೇಜು ಇದರ ಸಹಯೋಗದಲ್ಲಿ ಭಾನುವಾರ ಸಂಜೆ ವಿಟ್ಲ ಪಂಚಾಯಿತಿ ಸಭಾಭವನದಲ್ಲಿ ನಡೆದ "ಸ್ವಚ್ಛ ಗ್ರಾಮದೆಡೆಗೆ-ನಮ್ಮ ನಡಿಗೆ" ವಿಶೇಷ ನೈರ್ಮಲ್ಯ ಸಪ್ತಾಹ ವಿಶೇಷ ಪ್ರೇರಣಾ ಶಿಬಿರವನ್ನು ಉದ್ಘಾಟಸಿ ಅವರು ಮಾತನಾಡಿದರು.
ಜನರಿಗೆ ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸಬೇಕು, ಕಸ ತ್ಯಾಜಗಳನ್ನು ಸಂಗ್ರಹಿಸಿ ವಿಲೇವೇರಿ ಮಾಡಬೇಕು, "ಸ್ವಚ್ಛ ನಿರ್ಮಾಲ ಗ್ರಾಮ" ಬಹುಮಾನದಲ್ಲಿ ಬಂದ ೫೦ಲಕ್ಷ ರೂ. ಹಣವನ್ನು ಇಂತಹ ಕಾರ್ಯಗಳಿಗೆ ಬಳಸಲಾಗುವುದು ಎಂದರು.
 ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ವಿಟ್ಲ ಗ್ರಾ.ಪಂ ಅಧ್ಯಕ್ಷ ರಮಾನಾಥ ವಿಟ್ಲ  ಇನ್ನೂ ೬ ತಿಂಗಳ ಒಳಗೆ ವಿಟ್ಲ ಪರಿಸರದ ಎಲ್ಲಾ ಚರಂಡಿಗಳನ್ನು ಸ್ವಚ್ಛಗೊಳಸಲಾಗುವುದು ಹಾಗೂ ವಿಟ್ಲ ರಸ್ತೆ ವಿಸ್ತರಣೆ ಅನುದಾನವಾದ ಹಣವನ್ನು ನಾಲ್ಕು ಮಾರ್ಗದಲ್ಲಿ ಚರಂಡಿ ವ್ಯವಸ್ಥೆಯನ್ನು ಮಾಡಲಾಗುವುದು ಎಂದು ತಿಳಿಸಿದರು.
  ಬಂಟ್ವಾಳ ತಾಲ್ಲೂಕು ಪಂಚಾಯಿತಿ ಸದಸ್ಯರಾದ ಉಷಾ ಕೆ, ಜೂಲಿಯಾನ ಮೇರಿ ಲೋಬೋ, ಮಂಗಳೂರು ಜನಶಿಕ್ಷಣ ಟ್ರಸ್ಟ್ ಇದರ ನಿರ್ದೇಶಕ ಶ್ರೀ ಕೃಷ್ಣ ಮೂಲ್ಯ,  ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಇದರ ಯೋಜನಾಧಿಕಾರಿ ದಯಾವತಿ, ವಿಶೇಷ ಆರ್ಥಿಕ ವಲಯ ಹಸಿರು ಪಟ್ಟಿ ಇದರ ಸಲಹೆಗಾರ ದೀನೇಶ್ ನಾಯಕ್, ವಿಟ್ಲ ಸಮುದಾಯ ಆರೋಗ್ಯ ಕೇಂದ್ರ ಇಲ್ಲಿಯ ವೈದ್ಯಾಧಿಕಾರಿ ಡಾ.ಪ್ರಶಾಂತ್, ಉಪನ್ಯಾಸಕ ಜಾನ್ ಡಿ,ಸೋಜ, ಪಂ ಅಭಿವೃದ್ಧಿ ಅಧಿಕಾರಿ ರಮೇಶ್ ರಾಠೋಡ್, ಕಾರ್ಯದರ್ಶಿ ಜಗದೀಶ್ ನಾಯಕ್, ಎಂ.ಕೆ ಮೂಸ ಇದ್ದರು.
    ಮಾರ್ಚ್ ೨೫ರಿಂದ ಮಾರ್ಚ್ ೩೧ ವರೆಗೆ ವಿಟ್ಲ ಪರಿಸರದ ವಿವಿಧಕಡೆಗಳಲ್ಲಿ ಸ್ವಚ್ಛ ಗ್ರಾಮದೆಡೆಗೆ-ನಮ್ಮ ನಡಿಗೆ" ವಿಶೇಷ ನೈರ್ಮಲ್ಯ ಸಪ್ತಾಹ ಕಾರ್ಯಕ್ರಮ ನಡೆಯಲಿದೆ.



Saturday, 17 March 2012

ರಾಜಕೀಯ ವಿದ್ಯಮಾನಗಳ ವಿಶ್ಲೇಶಣೆ....!

ಪ್ರತಿದಿನ ಪ್ರತಿಕ್ಶಣ ರಾಜಕೀಯ ವಿದ್ಯಮಾನಗಳ ವಿಶ್ಲೇಶಣೆಯಲ್ಲಿ ನಿಮ್ಮ ವಿಶ್ಲೇಶಣೆ ಹಾಗೂ ಅಭಿಪ್ರಾಯಗಳನ್ನೂ ಪ್ರಕಟಿಸಿ.

 
Design by Free WordPress Themes | Bloggerized by - Free Blogger Themes | @javtl