Monday 23 March 2015

ಪತ್ರಿಕಾ ಧರ್ಮ ಮರೆತ ಉದಯವಾಣಿ..!

ಪತ್ರಿಕಾ ವರದಿಗಳು ಎಷ್ಟು ನಿಷ್ಪಕ್ಷವಾಗಿರುತ್ತವೆ ಎಂಬುದಕ್ಕೆ ಪುಟ್ಟ ಬಾಲೆ ನಿರ್ಭಯಳ ಮೇಲೆ ಜರುಗಿದ ಲೈಂಗಿಕ ದೌರ್ಜನ್ಯವನ್ನು ಖಂಡಿಸಿ ಮಂಗಳೂರಿನ ಪ್ರಜ್ಞಾವಂತ ಜನರು ನಡೆಸಿದ ಮೋಂಬತ್ತಿ ಜಾಥಾವನ್ನು ತಿರುಚಿ ವರದಿ ಮಾಡಿದ ಉದಯವಾಣಿ ಪತ್ರಿಕೆಯೇ ಸಾಕ್ಷಿ.

ಬೇಬಿ ನಿರ್ಭಯಳಿಗಾಗಿ ಮಂಗಳೂರಿನ ಸಾವಿರಾರು ಪ್ರಜ್ಞಾವಂತ ಜನರು ಜಾತಿ ಮತ ಬೇಧವನ್ನು ಮರೆತು ಒಂದಾದರು. ಮೌನವಾಗಿ ಮೋಂಬತ್ತಿ ಹಿಡಿದು ಜಾಥಾ ನಡೆಸಿದರು. ಇದು ಮಂಗಳೂರಿನಲ್ಲಿರುವ ಎಲ್ಲರಿಗೂ ತಿಳಿದ ವಿಷಯ. ಅನೇಕ ಪತ್ರಿಕೆಗಳಲ್ಲೂ, ಇಂಟರ್ನೆಟ್ ಮಾಧ್ಯಮಗಳಲ್ಲೂ ಇದರ ವರದಿ ಪ್ರಕಟವಾಗಿದೆ.

ಆದರೆ ಮಣಿಪಾಲದಿಂದ ಪ್ರಕಟವಾಗುವ ಮಂಗಳೂರಿನ ಕೋಮುವಾದಿ ಪತ್ರಿಕೆಗೆ ಈ ಸತ್ಯವನ್ನು ಅರಗಿಸಿಕೊಳ್ಳಲಾಗಲಿಲ್ಲ. ಮೋಂಬತ್ತಿ ಜಾಥಾವನ್ನು ಇವರ ವರದಿಗಾರರು ಕಂಡಿದ್ದಾರೆ. ಫೋಟೋ ಕೂಡ ಕ್ಲಿಕ್ಕಿಸಿದ್ದಾರೆ. ಆ ಫೋಟೋ ಅನ್ನು ತಮ್ಮ ಪತ್ರಿಕೆಯಲ್ಲೂ ಮುದ್ರಿಸಿದ್ದಾರೆ. ಆದರೆ ಆ ಫೋಟೋಗೆ ನೀಡಿದ ಕ್ಯಾಪ್ಶನ್ ಹೇಗಿತ್ತು ಗೊತ್ತೇ? ಯುವ ಐ ಎ ಎಸ್ ಅಧಿಕಾರಿ ಡಿ.ಕೆ. ರವಿ ಅವರ ನಿಗೂಢ ಸಾವಿನ ಬಗ್ಗೆ ಸರಕಾರದ ಧೋರಣೆಯನ್ನು ಖಂಡಿಸಿ ಹಾಗೂ ಉನ್ನತ ಮಟ್ಟದ ತನಿಖೆಗೆ ಆಗ್ರಹಿಸಿ ವಿದ್ಯಾರ್ಥಿಗಳ ಸಂಘಟನೆ ನಡೆಸಿದ ಮೋಂಬತ್ತಿ ಜಾಥಾ !!!

ಮಾನವೀಯತೆ ನಶಿಸಿ ಹೋದ ವ್ಯಕ್ತಿಯಿಂದಲೇ ಹೊರತು ಇನ್ನಾರಿಂದಲೂ ಇಂತಹ ವರದಿ ಪ್ರಕಟಿಸಲು ಸಾಧ್ಯವಿಲ್ಲ. Respect my Childhood ಎಂಬ ಫಲಕವನ್ನು ಕೈಯಲ್ಲಿ ಹಿಡಿದಿರುವ ಮಕ್ಕಳು ಡಿಕೆ ರವಿಗಾಗಿ ಪ್ರತಿಭಟನೆ ಮಾಡುತ್ತಿದ್ದಾರೆಂದು ಹೇಳಲು ಇವರಿಗೆ ಸ್ವಲ್ಪವಾದರೂ ಬುದ್ಧಿಯೆಂಬುದು ಇಲ್ಲವೇ? ಎಲ್ಲಿಯ ತನಕ ಈ ಪೀತ ಪತ್ರಿಕೆಗಳಿಗೆ ಜನರು ಸಾಮಾಜಿಕ ಬಹಿಷ್ಕಾರ ಹಾಕುವುದಿಲ್ಲವೋ ಅಲ್ಲಿಯ ತನಕ ಸಮಾಜದಲ್ಲಿ ನೆಮ್ಮದಿಯಿರದು.

ಸತ್ಯಸಾರಥಿ


Posted by ಪ್ರತಿದಿನ ಪ್ರತಿಕ್ಷಣ

0 comments:

Post a Comment

 
Design by Free WordPress Themes | Bloggerized by - Free Blogger Themes | @javtl