Monday 31 August 2015

"ಸೂಫಿಸಂ" ಹಾಗೂ "ಮೋದಿಸಂ "


ಸೂಫಿಸಂ ಹಾಗೂ ಮೋದಿಸಂ..!
ಹಿಂದು ಧರ್ಮವೇ ಏನೆಂದು ತಿಳಿಯದ ಮಾನ್ಯ ಮೋದಿಜಿಯಿಂದ ಮುಸ್ಲಿಮರಿಗೆ ನಿಜವಾದ ಇಸ್ಲಾಂ ತಿಳಿಯಲು ಕರೆ..!
ಐದು ಸಾವಿರಕ್ಕಿಂತಲೂ ಹೆಚ್ಚು ಭಾರತೀಯ ಮುಸ್ಲಿಮರನ್ನು ವಧಿಸಲು, ಪರದೆಯ ಹಿಂದಿನಿಂದ ನರಹಂತಕರಿಗೆ ಅನುವು ಮಾಡಿಕೊಟ್ಟ, ದೇಶದಲ್ಲಿ ಇತಿಹಾಸದಲ್ಲೇ ಮುಸ್ಲಿಮರ ಈದ್ ಹಬ್ಬಕ್ಕೆ ದೇಶದ ಪ್ರಧಾನಿಯಾಗಿ ಶುಭಾಶಯ ಹೇಳುವುದನ್ನೂ ಕೂಡಾ ನಿಲ್ಲಿಸಿದ ಮೊದಲ ಪ್ರದಾನಿಯೊಬ್ಬರಿಂದ ಇಲ್ಲಿನ ಮುಸಲ್ಮಾನನು ದೇಶದ ಅಧೋಗತಿಯನ್ನಲ್ಲದೆ ಬೇರೇನನ್ನೂ ನಿರೀಕ್ಷಿಸಲು ಸಾಧ್ಯವಿಲ್ಲ..
ಇನ್ನು ಮೋದಿಜಿ ಉಲ್ಲೇಖಿಸಿದ ಸೂಫಿಸಂ, ಕಬೀರ್ ದಾಸರಂತೆ ಮಂದಿರಗಳಲ್ಲಿ ಭಜಾನಾ ನಿರತರೋ, ಅಬ್ದುಲ್ ಕಲಾಂರಂತೆ ಹಿಂದೂ ಸಂಪ್ರದಾಯವಾದಿ ಮುಸ್ಲಿಮನೋ ಆಗಿದ್ದಾರೆ, ಅದ್ಯಾಕೋ ನಮ್ಮ ಕೆಲ ಉಲೆಮಾಗಳಿಗೆ ಮೋದಿಯೆಂದರೆ ಬಹಳ ಇಷ್ಟ..!
ಅಲ್ಲದಿದ್ದರೂ ಮೋದಿಜಿಯವರಿಗೆ ಮೊದಲಿನಿಂದಲೂ ಒಬ್ಬ ನೈಜ ಮುಸಲ್ಮಾನನೆಂದರೆ ಬಹಳ ಕೋಪ. ಆದರೆ ಶಿಯಾಗಳು, ಭೋರಿಗಳು, ಸೂಫಿಗಳನ್ನು ಅಪ್ಪಿಕೊಂಡು ಮುದ್ದಾಡುತ್ತಾ, ಮೊನ್ನೆ ದುಬೈಯಲ್ಲಿ ನಡೆದಂತ ತನ್ನ ಭಾಷಣಗಳಿಗೆ ಮುಸ್ಲಿಮರೆಲ್ಲರೂ ಚಪ್ಪಾಳೆ ತಟ್ಟುವರೆಂದು ಲೋಕಕ್ಕೆ ತಿಳಿಸಲೆಂದೇ, ಟೋಪಿ ಗಡ್ಡ ಭರಿತ ಶಿಯಾ, ಬೋರಿಗಳನ್ನೇ ತನ್ನ ಸ್ಟೇಜ್ ಮುಂದೆ ಕುಳ್ಳಿರಿಸಿ ಚಪ್ಪಾಳೆ ಗಿಟ್ಟಿಸಿಕೊಂಡಂತೆಯೇ, ಹಿಂದಿನ ಚುನಾವಣೆಯಲ್ಲೂ  ಅವರುಗಳಿಂದ ಓಟ್ ಪಡೆದಿರುತ್ತಾರೆ.
ಇನ್ನು ಮೋದಿಯವರ ಮಾತು ನಿಜವಾದ ಇಸ್ಲಾಮೀ ಸೂಫಿ ಉಲೆಮಾಗಳ ಬಗ್ಗೆಯಾಗಿದ್ದರೆ., ಮೋದಿಯ ಮಾತಿಗೆ ಮರುಳಾದವರಿಗೆ ತಿಳಿಯದಾಯಿತೇ.., ಔರಂಗಜೇಬ'ರೆಂಬ ದೇಶಕಂಡ ಅಪ್ರತಿಮ ಆಡಳಿತಾಧಿಕಾರಿ ಕೂಡಾ ಒಬ್ಬ ಸೂಫೀ ಅನುಯಾಯಿಯಾಗಿದ್ದರೆಂದು..?!
ಹೌದು ಔರಂಗಜೇಬರು "ನಕ್ಷ್ ಬಂದೀ -ಮುಜದ್ದಿದೀ " ಸೂಫೀ ತತ್ವದವರಾಗಿದ್ದು. ಹಾಗೂ ಮುಜದ್ದಿದೀ ಪಂಡಿತ ಶೈಕ್ ಅಹ್ಮದ್ ಸರ್ಹಿಂದೀ ಅವರ ಮೂರನೇ ಮಗ, "ಕ್ವಾಜಾ ಮಹಮ್ಮದ್ ಮಾಸೂಮ್" ಅವರ ಶಿಷ್ಯರೂ ಕೂಡಾ ಆಗಿದ್ದರು. ಆದುದರಿಂದಲೇ ಆಗಿತ್ತು ತಮ್ಮ ಆಡಳಿತಾವದಿಯಲ್ಲಿ ಭಾರತೀಯರಲ್ಲಿ ಬೀಡು ಬಿಟ್ಟಿದ್ಧ ಮದ್ಯಪಾನ, ಧೂಮಪಾನ, ಜೂಜು, ಕ್ಯಾಸ್ಟರೇಷನ್ (ಗಂಡಸುತನವನ್ನು ಇಲ್ಲವಾಗಿಸುವ ಶಿಕ್ಷೆ), ದಾಸ್ಯ ಪದ್ದತಿ, ಅನನುವದನೀಯ ಲೈಂಗಿಕತೆಯನ್ನು ಔರಂಗಜೇಬರು ಷರಹೀ ಪ್ರಕಾರ ನಿಷಿದ್ದಗೊಳಿಸಿದ್ದು.
ಅದೇ ಸೂಫೀ ರಾಜ ಔರಂಗಜೇಬರ ವಿರುದ್ಧವಾಗಿದೆ, ಇಂದಿನ ಮೋದಿ ಸಂಘಪರಿವಾರವು ಇತಿಹಾಸ ತಿರುಚುವ ಭಾಗವಾಗಿ,  ದೆಹಲಿಯಲಿಯ "ಔರಂಗಜೇಬರ" ಹೆಸರಿನ ರಸ್ತೆಯ ಮರುನಾಮಕರಣ. ಸೂಫೀ ತತ್ವದ ಬಗ್ಗೆ ಮಾತನಾಡುವ ಮೊದಿಗೆ ಅದು ಹೇಗೆ ಸಾಧ್ಯವಾಯಿತು,  ಸೂಫೀ ರಾಜರೊಬ್ಬರನ್ನು ಕ್ರೂರಿಯೆಂದು ಬಣ್ಣಿಸಲು ..?
ಇನ್ನು ಸೂಫಿಗಳೆಂಬ ಹೆಸರಿನಲ್ಲಿ ಮೋದಿಯ ಕೃಪಕಟಾಕ್ಷ ಭೇಟಿ ಬಯಸಿದ ನಮ್ಮ ಉಲೆಮಾಗಳಿಗಾದರೂ ಔರಂಗಜೇಬರ ಬಗ್ಗೆ ಇತಿಹಾಸ ತಿಳಿಸಿ ಕೊಡಲಸಾಧ್ಯವಾಯಿತೇ..?!
ಇನ್ನು ರಾಜರೊಬ್ಬರು ತನ್ನ ಆಡಳಿತಕಾಲದಲ್ಲಿ ಮಾಡಿದ ಯುದ್ಧಗಳ ಅನುಪಾತದಲ್ಲಿ ಕ್ರೂರಿಯೆಂದು ಬಣ್ಣುಸುವುದಾದರೆ, ಲೊಕದಾದ್ಯಂತ ರಾಜರಲ್ಲಿಯುದ್ದಮಾಡದ ರಾಜರೆಷ್ಟು..?
ಒಂದು ರಾಜ್ಯಕೀಯ ಅಂದಮೇಲೆ , ಯುದ್ಧಗಳು ಆ ರಾಜ್ಯದ ಹಿತದೃಷ್ಟಿಯಿಂದಾಗಿರುತ್ತದೆಯೇ ಹೊರತು ದುರದೃಷ್ಟಿಯಿಂದಲ್ಲ ಅನ್ನುವುದು ಇತಿಹಾಸ ಬಲ್ಲ ಪ್ರತಿಯೊಬ್ಬನಿಗೂ ತಿಳಿದಿದೆ.
ಇನ್ನು ಮೋದಿಯ ಹೇಳಿಕೆಯು, ಇಸ್ಲಾಮಿ ಸೂಫಿಸಂ'ನ ಪರವಲ್ಲ...!
ಬದಲಾಗಿ ಇದು ಸೂಫಿಗಳೆನ್ನಲ್ಪಡುವವರಿಂದ 'ಮೋದಿಸಂ'ನ ಗುಣಗಾನ..!
©ಚಿಂತಕ
#ಹೊಂಗಿರಣ

Wednesday 29 July 2015

ನಾನು ಕಂಡ ಕಲಾಂ-ಜಿ ಹಾಗೂ ಸಂಘ ಪರಿವಾರದ ರಾಜಕೀಯಕ್ಕೆ  ಎರೆಯಾದ ವ್ಯಕ್ತಿತ್ವ !

ನಾನು ಕಂಡ ಕಲಾಂ-ಜಿ ಹಾಗೂ ಸಂಘ ಪರಿವಾರದ ರಾಜಕೀಯಕ್ಕೆ  ಎರೆಯಾದ ವ್ಯಕ್ತಿತ್ವ !

"ಕುಲ್ಲು ನಫ್ಸಿನ್ ಝಾಇಕತುಲ್ ಮೌತ್" ( ಪ್ರತಿಯೊಂದು ಶರೀರವೂ ಮರಣದ ರುಚಿ ಯನ್ನು ಆಸ್ವಾದಿಸಲಿದೆ) ಅನ್ನುವ ಕುರ್-ಆನ್ ವಾಕ್ಯವನ್ನು ನೆನಪಿಸುತ್ತಾ ನಮ್ಮ ದೇಶದ ಮಿಸೈಲ್ ಮೇನ್ ಎಂದೇ ಪ್ರಖ್ಯಾತ ಅಬ್ದುಲ್ ಕಲಾಂ ಅವರು ಷಿಲ್ಲಾಂಗ್ ಐ.ಐ.ಎಮ್ ನಲ್ಲಿ ಭಾಷಣ ಮಾಡುತ್ತಿದ್ದಾಗ ಹ್ರದಯಾಘಾತದಿಂದ ಮರಣಹೊಂದಿದರೆಂದು ಕೇಳಿದಾಗಲೇ ತುಂಬಾ ನೋವಾಯಿತು ನನಗೆ. ಈ ಹಿಂದಿನಿಂದಲೂ ಬಹುತೇಕ ಭಾರತೀಯರಂತೆ ನಾನೂ ಒಬ್ಬ ಅವರ ಸರಳ ನಡೆ ನುಡಿಗಳಿಂದ ಪ್ರಭಾವಿತವಾಗಿ ಅವರ ಅಭಿಮಾನಿಯಾಗಿದ್ದರಂದ ಮೊದಲಿನಿಂದಲೂ ಅವರ ಬಗ್ಗೆ ಬರುತ್ತಿದ ಪ್ರತಿಯೊಂದು  ನ್ಯೂಸ್ ಗಳನ್ನು ಬಹಳ ಕುತೂಹಲದಿಂದ ಅವಲೋಕಿಸುತ್ತಿದ್ದೆ.

ಹೌದು ಹಾಗೆ ನೋಡಿದರೆ ಅವರ ಬಗ್ಗೆ ಒಂದಕ್ಷರ ಇಲ್ಲ ಸಲ್ಲದ ಆರೋಪವಾಗಲಿ, ರಾಜಕೀಯವಾಗಿ ಯಾವುದೇ ಶತ್ರುತ್ವವಾಗಲೀ ಇರುವವರಿಲ್ಲ. ಆದರೂ ಇಂದು ನನಗೆ ಲಭಿಸಿದ ಸಂಘ ಪರಿವಾರಿಗಳ ವಾಟ್ಸಪ್ ಮೆಸೇಜ್ ಒಂದು ನನ್ನನ್ನು ಚಿಂತಾಕ್ರಾಂತನನ್ನಾಗಿ ಮಾಡಿತು.
ಅದೇನೆಂದರೆ
"दिल में गीता और जुबां पे कुरान दिखा देना!
कभी मिले तो कलाम साहब जैसा मुसलमान दिखा देना!!
दरगाह पे मत्था टेकता हिन्दू बहुत देखा है!
कभी कृष्ण की भक्ति में डूबा खान दिखा देना!!"
ಅಂದರೆ "ಮನದಲ್ಲಿ ಭಗವದ್ಗೀತೆ ಬಾಯಲ್ಲಿ ಕುರಾನ್ ತೋರಿಸಿ..!
ಎಂದಾದರೂ ಸಿಕ್ಕರೆ ಕಲಾಂ ಸಾಹಬ್ ನಂತಹ ಮುಸ್ಲಿಮನನ್ನು ತೋರಿಸಿ...!
ದರ್ಗಾದಲ್ಲಿ ಶಿರಭಾಗುವ ಹಿಂದು ಬಹಳ ನೋಡಿದ್ದೇವೆ..!
ಎಂದಾದರೂ ಕ್ರಷ್ಣನ ಭಕ್ತಿಯಲ್ಲಿ ಮುಳುಗಿದ ಖಾನ್ ನನ್ನು  ತೋರಿಸಿ..!"

ಹೌದು ಹಾಗೆ ನೋಡಿದರೆ  ಸಂಘಪರಿವಾರಕ್ಕೆ  ಕಲಾಂ ಅನ್ನುವ ಅದ್ಭುತ ವಿಜ್ಞಾನಿಯ ಸಾಧನೆಯು ಮಿಗಿಲಾಗಿರಲಿಲ್ಲ. ಆ ಅದ್ಭುತ ವ್ಯಕ್ತಿತ್ವದ ಓರ್ವ ಶಿಕ್ಷಕ..,ಓರ್ವ ಲೇಖಕ, ಯುವ ತಲೆಮಾರಿನ ಪ್ರೋತ್ಸಾಹಕ ಅನ್ನುವ ಯಾವುದೇ ವಿಚಾರಗಳು ಅವರ ಹೆಮ್ಮೆಗೆ ಕಾರಣವಾಗಿರಲಿಲ್ಲ...!
ಬದಲಾಗಿ ಅಬ್ದುಲ್ ಕಲಾಂ ಅನ್ನುವ ಪ್ರತಿಭೆಯ ವ್ಯಕ್ತಿತ್ವವು ಭಗ್ವದ್ಗೀತೆ ಓದುತ್ತಿದ್ದರು, ಅನುದಿನ ಕರ್ನಾಟಿಕ್ ಸಂಗೀತ ಕೇಳುತ್ತಿದ್ದರು ಹಾಗು ಹಿಂದೂ ಸಂಸ್ಕೃತಿಯನ್ನು   ಮೆಚ್ಚಿದ್ದರು ಹಾಗು ದೇವಾಲಯಗಳನ್ನು, ಸ್ವಾಮಿಗಳನ್ನು, 
ಭೇಟಿ ನೀಡಿ ಆಶೀರ್ವಾದವನ್ನು  ಪಡೆಯುತ್ತಿದ್ದರು ಹಾಗೂ ನಾಗ್ಪುರದ ಆರ್.ಎಸ್.ಎಸ್ ಶಾಖೆಗೆ ಭೇಟಿ ನೀಡಿ ನಮಿಸಿದ್ದರು, ಅನ್ನುವುದೇ ಸಂಘಪರಿವಾರಿಗಳ ಹೆಮ್ಮೆಯ ವಿಚಾರವಾಗಿತ್ತು.ಅದೇ ಕಾರಣದಿಂದಾಗಿತ್ತು ಸಂಘಪರಿವಾರ ಬೆಂಬಲಿತ ಬಿ.ಜೆ.ಪಿಯು 2002ನೇ ಇಸವಿಯಲ್ಲಿ ಅವರನ್ನು ರಾಷ್ಟ್ರ ಪತಿಯನ್ನಾಗಿ ನಾಮಕರಣ ಮಾಡಿತು.
ಯಾಕೆಂದರೆ ಒಬ್ಬ ಅಚ್ಚ ಮುಸ್ಲಿಮನಾಗಿ ಇಸ್ಲಾಮಿನ ತತ್ವಾದರ್ಷಗಳನ್ನು ಅಳವಡಿಸಿ ಜೀವನ ನಡೆಸಿದ ಯಾವೊಂದು ಭಾರತೀಯ ಪ್ರತಿಭೆಗೂ ಸಂಘಪರಿವಾರಿಗಳಾಗಲಿ ಇಲ್ಲಿನ ಸರಕಾರಿ ವ್ಯವಸ್ಥೆಗಳಾಗಲಿ ಯಾವುದೇ ಸ್ಥಾನಮಾನವಾಗಲಿ ಉನ್ನತ ಪದವಿಗಳನ್ನಾಗಲೀ ಇಲ್ಲಿಯವರೆಗೆ ನೀಡಿದ್ದಿಲ್ಲ. ಮುಸ್ಲಿಮರಿಗೆ ದೇಷಪ್ರೇಮವಿಲ್ಲ ಎಂದು ಮುಸ್ಲಿಮರನ್ನು ಮಿಲಿಟರಿ ಸೇವೆ, ಸರಕಾರಿ ಉದ್ಯೊಗ, ಹಾಗೂ ಶೈಕ್ಷಣಿಕವಾಗಿಯೂ, ಪ್ರಜಾಪ್ರಭುತ್ವ ವ್ಯವಸ್ಥೆಯಿಂದಲೇ ಕಿತ್ತೊಗೆಯುವ ಷಡ್ಯಂತರವಾಗಿದೆ ಸ್ವಾತಂತ್ರ್ಯಾ  ಪೂರ್ವದಿಂದಲೂ ಸಂಘಪರಿವಾರಿಗಳು ನಡೆಸುತ್ತಿರುವುದು. ಇನ್ನು ಇಂದಿನ ಭಾರತೀಯ ಮುಸಲ್ಮಾನರ ಪರಿಸ್ಥಿತಿಯಂತೂ ನೋಡಿದರೆ ಮುಸ್ಲಿಮರು ಜೈಲುಗಳಲ್ಲಿ ಕೊಳೆಯಬೆಕಾದವರಾಗಿದ್ದಾರೆ. ಮರಣದಂಡನೆಯೆಂಬುದು ಅಮಾಯಕ ಮುಸ್ಲಿಮರಿಗೆ ನೀಡಿದ ಮೀಸಲಾತಿಯಂತಿದೆ. ಪ್ರಜಾಪ್ರಭುತ್ವದ ತಲೆಯಮೇಲೆ ಭಕ ಪಕ್ಷಿಯಂತೆ ಮೆರೆದಾಡುವ ಸಂಘಪರಿವಾರವು,  ಅಬ್ದುಲ್ ಕಲಾಂ ಅನ್ನುವ ಮನುಷ್ಯತ್ವವಾದಿಯ ಕೈಗಳನ್ನು ಎಲ್ಲಯೋ ಕಟ್ಟಿ ಹಾಕಿದಂತೆ ಭಾಸವಾಗುತ್ತದೆ. ಏಕೆಂದರೆ ತಮ್ಮ ಆಡಳಿತಾವಧಿಯಲ್ಲಿ ಬಂದ 21 ಮರಣ ದಂಡನೆ ವಿಧಿಸಲ್ಪಟ್ಟ ದಯಾ ಅರ್ಜಿಯಲ್ಲಿ,  20 ನ್ನು ಕೂಡ ಮುಟ್ಟಲು ಅವರಿಂದ ಏನೋ ತಡೆಯುತ್ತಿದ್ದವು.

ಈ ದೇಶ ಕಂಡ ಅಬ್ದುಲ್ ಕಲಾಂ ಅನ್ನುವ ಅದ್ಭುತ ವ್ಯಕ್ತಿತ್ವವು ಸಂಘಪರಿವಾರಿಗಳ ಕೈಯಲ್ಲಿ ಗೊತ್ತಿದ್ದೋ ಗೊತ್ತಿಲ್ಲದೆಯೋ ಎರೆಯಾಗಿ, ಹಿಂದುತ್ವದ ಪ್ರಚಾರಕನಾಗಿ ಸಮಾಜವು,ಮಾಧ್ಯಮಗಳೂ ಚಿತ್ರಿಸಿದ್ದು  ಖೇದಕರ ವಿಷಯವಾಗಿದೆ.

ಇಲ್ಲಿ ಕೇಳಲೇಬೆಕಾದ ಸಂಗತಿಯಂದರೆ , ಅವರೊಬ್ಬ ಅಪ್ಪಟ ಮುಸ್ಲಿಮನಾಗಿ ಇಸ್ಲಾಮಿ ತತ್ವಾದರ್ಷದೊಂದಿಗೆ ಜೀವಿಸುತ್ತಿದ್ದರೆ ಸಂಘ ಪರಿವಾರ ಹಾಗೂ ಬಿ.ಜೆ.ಪಿ ಅವರಿಗೆ ರಾಷ್ಟ್ರಪತಿ ಸ್ಥಾನವನ್ನು  ಹಾಗೂ ಈಗ ಕಾಣುವಷ್ಟು ಸ್ವೀಕರಣೆ ಲಭಿಸುತಿತ್ತೇ? 
ಅಥವಾ  ಅಬ್ದಲ್ ಕಲಾಂ ಅವರ ಸ್ಥಾನದಲ್ಲಿ ಒಬ್ಬ ಜಾತ್ಯಾತೀತ ಹಿಂದು ( ಹಿಂದುತ್ವ ವಿರೋಧಿ)  ಆಗಿದ್ದಿದ್ದರೆ ಆತನಿಗೆ ಸಂಘಪರಿವಾರಗಳು ಈಗ ಕೊಡುವ ಸ್ವೀಕರಣೆಗಳು ಕೊಡುತ್ತಿದ್ದರೇ..?!

ಯಾಕೂಬ್ ಮೆಮನ್ ನಂತಹ ದೇಶದ ಪ್ರತಿಷ್ಟ ಸಿ.ಎ ಪದವಿಧರ ಒಬ್ಬ ಅಬ್ದುಲ್ ಕಲಾಂ ನಂತಹ ಹಿಂದು ಸಂಪ್ರಧಾಯಿಯಾಗದ್ಸಿದ್ದರೆ,  ನಮ್ಮ ಸಂಘಪರಿವಾರಿ ನಾಯಕರು ಸರಕಾರಗಳು, ನ್ಯಾಯ ವ್ಯವಸ್ಥೆಯು ಅವರನ್ನು ಮಾಡದ ತಪ್ಪಿಗೆ ಮರಣ ದಂಡನೆ ವಿಧಿಸುತಿತ್ತೇ?

ಸಂಘ ಪರಿವಾರ ಬೆಂಬಲಿತ ಸಾದ್ವಿ ಪ್ರಜ್ನಾ ಸಿಂಗ್ ಮಕ್ಕಾ ಮಸ್ಜಿದ್, ಅಜ್ಮೀರ್ ಮಸ್ಜಿದ್,ಮಾಲೆಂಗಾವ್ ಬ್ಲಾಸ್ಟ್, ಸಂಜೊತಾ ಎಕ್ಸ್ ಪ್ರೆಸ್  ಬ್ಲಾಸ್ಟ್ ಗಳ ಆರೋಪ ಸಾಭಿತಾದರೂ  , ಮರಣ ದಂಡನೆ ವಿಧಿಸಲಾಗಿದೆಯೇ?

ಹಿಂದು ಸಂಪ್ರದಾಯಿ ಸಲ್ಮಾನ್ ಖಾನ್ ನೊಂದಿಗೆ "ಭಜರಂಗಿ ಭಾಯಿ ಜಾನ್" ಅಂತ ಭೀಗುತ್ತಿದ್ದ ಇಲ್ಲಿನ ಷಂಡ ಪರಿವಾರಿಗಳು, ಸಲ್ಮಾನ್ ನ್ಯಾಯಕ್ಕಾಗಿ ಯಾಕೂಬ್ ಮೆಮನ್ ಅವರ ಪರ ಮಾತನಾಡಿದಾಗ
ಸಲ್ಮಾನ್ ಅನ್ನು ಪಾಕಿಸ್ತಾನಕ್ಕೆ ಕಳಿಸಿ ಅಂತಲೂ, ಸಲ್ಮಾನ್ಗೆ ನೀಡಿರುವ ಬೇಲ್ ಹಿಂಪಡೆಯಿರಿ ಅಂತಲೂ ತಮ್ಮ ಸಂಘಪರಿವಾರಿ ಬೆಂಬಲಿತ ನ್ಯಾಯವಾದಿಗಳಿಗೆ ತಾಕೀತು ಮಾಡುವಾಗ, ನಮ್ಮ ನ್ಯಾಯ ವ್ಯವಸ್ಥೆಯೂ ಎಷ್ಟೊಂದು ಹದಗೆಟ್ಟಿದೆ ಅನ್ನುವುದು ಸುಸ್ಪಷ್ಟವಲ್ಲವೇ?

ಪ್ರಜಾಪ್ರಭುತ್ವದ ಅಡಿಪಾಯಗಳಾದ ಶಾಸಕಾಂಗ,ಕಾರ್ಯಾಂಗ ಜನಸಾಮಾನ್ಯರ ನಂಬಿಕೆಗಳು ಹದಗೆಟ್ಟರೂ, ನ್ಯಾಯಾಂಗದಲ್ಲಿರುವ ಜನರ ಭರವಸೆಗಳನ್ನು ಉಳಿಸಿಕೊಳ್ಳಲು ಆಸಾಧ್ಯವಾಗುತ್ತಿದೆಯೇ?

"ಚಿಂತಿಸುವವರಿಗೆ  ದ್ರ್ ಷ್ಟಾಂತವಿದೆ" ಎಂಬ ಕುರ್-ಆನ್ ವಚನವನ್ನು ನೆನಪಿಸುತ್ತಾ,
ಕೊನೆಯದಾಗಿ ಕಲಾಂ ರವರ ನುಡಿಮುತ್ತೊಂದು
"In a democracy, the well-being, individuality and happiness of every citizen is important for the overall prosperity, peace and happiness of the nation" -A. P. J. Abdul Kalam

-ಚಿಂಥನ ಮಂಥನ
#ಹೊಂಗಿರಣ


Sunday 12 April 2015

ವಿನಾಶಕಾರಿ ವ್ಯಕ್ತಿಗೆ ಪದ್ಮವಿಭೂಷಣ.. ಆಘಾತಕಾರಿ ವ್ಯಕ್ತಿಗೆ ಅಜಾತಶತ್ರು ಪಟ್ಟ..!

ವಿನಾಶಕಾರಿ ವ್ಯಕ್ತಿಗೆ ಪದ್ಮವಿಭೂಷಣ.. ಆಘಾತಕಾರಿ ವ್ಯಕ್ತಿಗೆ ಅಜಾತಶತ್ರು ಪಟ್ಟ..!

ಪದ್ಮವಿಭೂಷಣ.. ಭಾರತ ರತ್ನ ಹೊರತುಪಡಿಸಿದರೆ ದೇಶದ ಎರಡನೇ ಅತ್ಯುನ್ನತ ಗೌರವ.. ಹಾಗಂತ ಈ ನಾಗರಿಕ  ಪ್ರಶಸ್ತಿಗಳೆಲ್ಲಾ ಪ್ರಶ್ನಾತೀತವಲ್ಲ. ತನಗೆ ತಾನೇ ಪ್ರಶಸ್ತಿ ಘೋಷಿಸಿಕೊಂಡ ಮೊದಲ ಪ್ರಧಾನಿ ನೆಹರೂ ಅವರಿಂದ ಹಿಡಿದು, ಹಿಂದುತ್ವವಾದಿಗಳ ಹೃದಯಸಾಮ್ರಾಟ ಮೋದಿ ಕೃಪೆಯಿಂದ ಭಾರತ ರತ್ನ ಪ್ರಶಸ್ತಿ ದಕ್ಕಿಸಿಕೊಂಡ ಹಿಂದೂ ರಾಷ್ಟ್ರದ ಪ್ರತಿಪಾದಕ ಮದನ್ ಮೋಹನ್ ಮಾಳವೀಯವರೆಗೂ ಈ ದೇಶದ ಅತ್ಯುನ್ನತ ಪ್ರಶಸ್ತಿ ಭಾರತ ರತ್ನ ಗೌರವವೇ ಪ್ರಶ್ನೆಗೊಳಗಾಗಿದೆ. ಇನ್ನು ಪದ್ಮ ಪ್ರಶಸ್ತಿಗಳ ಕಥೆಯನ್ನು ಕೇಳೋದೆ ಬೇಡ ಬಿಡಿ.. ತುಕ್ಕುಹಿಡಿದ ಉಕ್ಕು ಅಡ್ವಾಣಿ, ಡೋಂಗಿ ಗುರುಗಳು, ದೇಶವನ್ನು ಮುಕ್ಕಿ ತಿನ್ನುತ್ತಿರುವ
ಕಾರ್ಪರೇಟರ್ ಕುಳಗಳಿಗೆ  ದೇಶದ ಬಹುದೊಡ್ಡ ಗೌರವ ಪ್ರಶಸ್ತಿಯನ್ನು ನೀಡುವುದೆಂದರೆ ಅದರ ಮೌಲ್ಯಗಳು ಹೇಗೆ ತಾನೇ ಉಳಿದೀತು..

ಇತ್ತೀಚೆಗೆ ದೇಶದ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿ ಪದ್ಮವಿಭೂಷಣ ಅಡ್ವಾಣಿಗೆ ನೀಡಿದ್ದು ನಿಮಗೆಲ್ಲಾ ಗೊತ್ತೇ ಇದೆ. ಪ್ರಶಸ್ತಿ ನೀಡಿದ ಮರುದಿನವೇ ಸುಪ್ರೀಂ ಕೋರ್ಟ್ ಅಡ್ವಾಣಿಗೆ ಸಮನ್ಸ್ ಒಂದು ಜಾರಿ ಮಾಡಿತು. ಅದು ಈ ದೇಶದ ಸಂವಿಧಾನ, ಕಾನೂನುಗಳನ್ನು ಮಣ್ಣುಪಾಲು ಮಾಡಿದ, ಪರಮೋಚ್ಛ ನ್ಯಾಯಾಲಯಕ್ಕೆ ವಂಚಿಸಿದ ವಿಷಯವಾಗಿ  ನೀಡಲ್ಪಟ್ಟ ಸಮನ್ಸ್ . 1992ರಲ್ಲಿ ಬಾಬರಿ ಮಸೀದಿ ದ್ವಂಸಕ್ಕೆ ಸಂಬಂದಿಸಿ ಇಂದಿಗೂ ಆರೋಪಿ ಸ್ಥಾನದಲ್ಲಿರುವ ಅಡ್ವಾಣಿ ಸೇರಿದಂತೆ 20 ಮಂದಿ ಬಿಜೆಪಿ ಹಾಗು ಸಂಘಪರಿವಾರದ ವ್ಯಕ್ತಿಗಳಿಗೆ ಸುಪ್ರೀಂಕೋರ್ಟ್ ಸಮನ್ಸ್ ಜಾರಿಮಾಡಿದೆ. ಅಡ್ವಾಣಿ ಹೊರತುಪಡಿಸಿ ಇನ್ನುಳಿದ ವಿನಾಶಕಾರಿ ವ್ಯಕ್ತಿಗಳು ಸಹ ಮೋದಿ ಸರ್ಕಾರದ ಅವಧಿಯಲ್ಲಿ ನಾಗರಿಕ ಪ್ರಶಸ್ತಿಗಳನ್ನು ಪಡೆದರೆ ಅಚ್ಚರಿಯಿಲ್ಲ. ಈ ದೇಶವನ್ನು ವಿನಾಶದತ್ತ ಕೊಂಡೊಯ್ಯುತ್ತಿರುವ ವಿಭಜನಕಾರಿ ಶಕ್ತಿಗಳಿಗೆ ಮೋದಿ ಸರ್ಕಾರವಲ್ಲದೆ ಬೇರೆ ಯಾವ ಸರ್ಕಾರಗಳು ನಾಗರಿಕ ಪ್ರಶಸ್ತಿಗಳನ್ನು ನೀಡಲು ಸಾಧ್ಯ ಹೇಳಿ..?

ಮೋದಿ ಸರ್ಕಾರ ಅಡ್ವಾಣಿಗೆ ಪದ್ಮವಿಭೂಷಣ ಪಾರಿತೋಷಕ ಪ್ರಕಟಿಸಿದಾಗ ಮತ್ತು ಪ್ರಧಾನಮಾಡಿದಾಗ ಪತ್ರಿಕೆ ಹಾಗೂ ಟಿವಿ ಮಾಧ್ಯಮಗಳು,  ಹಲ್ಲುಕೀಳಲ್ಪಟ್ಟಿರುವ ಕೇಸರಿ ಮುದಿವ್ಯಾಘ್ರನನ್ನು ಹೊಗಳಿ ಅಟ್ಟಕ್ಕೇರಿಸಿದ್ದವು. ಆದರೆ ಅದರ ಮರುದಿನವೇ ಸುಪ್ರೀಂಕೋರ್ಟ್ ಹೊರಡಿಸಿದ ಸಮನ್ಸ್ ಅಡ್ವಾಣಿ, ಮೋದಿ ಸರ್ಕಾರ್ ಹಾಗೂ ಮಾಧ್ಯಮಗಳ ಹೊಗಳುವಿಕೆಗೆ ತಕ್ಕ ಮಂಗಳಾರತಿಯನ್ನು ಮಾಡಿದೆ. ಅಡ್ವಾಣಿ ಅವರದ್ದು ಪದ್ಮವಿಭೂಷಣ ಪಡೆಯುವಷ್ಟು ವಿಶೇಷ ವ್ಯಕ್ತಿತ್ವ ಅಲ್ಲ. ಅದು ವಿನಾಶಕಾರಿ ವ್ಯಕ್ತಿತ್ವ ಎಂಬುದನ್ನು ಸುಪ್ರೀಂ ಸಮನ್ಸ್ ಪರೋಕ್ಷವಾಗಿ ಈ ದೇಶಕ್ಕೆ ತಿಳಿಸಿಕೊಟ್ಟಿದೆ.

ಮಾಧ್ಯಮ, ಕೇಸರಿ ಪಾಳಯ ಹಾಗೂ ಕೆಲ ಮಾಧ್ಯಮದ ಮಂದಿಗೆ ಮಾಜಿ ಪಿಎಂ ಅಟಲ್ ಬಿಹಾರಿ ವಾಜಪೇಯಿ ಇಂದಿಗೂ ಅಜಾತಶತ್ರು. ಆದರೆ ವಾಸ್ತವ ಪೂರ್ತಿ ತದ್ವಿರುದ್ಧ. ವಾಜಪೇಯಿ ಅಜಾತಶತ್ರುವಲ್ಲ, ಆಘಾತಕಾರಿ ವ್ಯಕ್ತಿ ಎಂಬುದು ಅವರ ಟ್ರ್ಯಾಕ್ ರೆಕಾರ್ಡ್ ಸ್ಪಷ್ಟವಾಗಿ ತಿಳಿಸಿಕೊಡುತ್ತೆ.. ಸ್ವಾತಂತ್ರ್ತಪೂರ್ವದಲ್ಲಿ ಸೆರೆಮನೆಯಿಂದ ಮುಕ್ತಿಪಡೆಯಲು ಬ್ರಿಟೀಷರ ಕಾಲು ಹಿಡಿದು ಕ್ಷಮೆ ಕೇಳಿದ್ದ ವಾಜಪೇಯಿ, ಮುಂದಕ್ಕೆ ಬ್ರಿಟೀಷರ ಪರ ಕೆಲಸ ಮಾಡೋದಾಗಿ ಆಂಗ್ಲ ಕುನ್ನಿಗಳಿಗೆ ಭಾಷೆ ಕೊಟ್ಟಿದ್ದರು. ಅದರಂತೆ ವಾಜಪೇಯಿ ಹಾಗೂ ಸಂಘಪರಿವಾರ ಬ್ರಿಟೀಷರ ಪರವಾಗಿದ್ದನ್ನು ಈ ದೇಶದ ನೈಜ ಇತಿಹಾಸ ತಿಳಿಸಿಕೊಡ್ತಿದೆ. ಇನ್ನು ವಾಜಪೇಯಿ ತನ್ನ ಅವಧಿಯಲ್ಲಿ ಅನಗತ್ಯವಾದ ಒಂದು ಯುದ್ಧಕ್ಕೆ(ಕಾರ್ಗಿಲ್) ಕಾರಣವಾಗಿ ಈ ದೇಶವನ್ನು ಸುಮಾರು 30. ವರ್ಷಗಳಷ್ಟು ಹಿಂದಕ್ಕೆ ಕೊಂಡುಹೋಗಿದ್ದರು. ಅದಲ್ದೆ  ಬಾಬರಿ ಮಸೀದಿ ದ್ವಂಸ ಪ್ರಕರಣದಲ್ಲೂ ವಾಜಪೇಯಿ ಆರೋಪಿ. ಮಸೀದಿದ ದ್ವಂಸಕ್ಕೆ ಸಂಬಂದಿಸಿ ನ್ಯಾ..ಮನಮೋಹನ್ ಸಿಂಗ್ ಲಿಬರ್ಹಾನ್ ನೀಡಿರುವ ಲಿಬರ್ಹಾನ್ ವರದಿಯಲ್ಲಿ ಸೌಮ್ಯವಾದಿ ಮುಖವಾಡದ ಅಸಲಿಯತ್ತು ಹೊರಬಂದಿದ್ದು, ವಾಜಪೇಯಿ ಕೂಡ ಬಾಬರಿ ಮಸೀದಿ ದ್ವಂಸಕ್ಕೆ ಕಾರಣ ಎಂಬುದನ್ನು ಆಯೋಗ ಸ್ಪಷ್ಟವಾಗಿ ತಿಳಿಸಿದೆ. ಈಗ ಹೇಳಿ ಅಟಲ್ ಅಜಾತಶತ್ರುನೋ ಅಥವಾ ಸಂವಿಧಾನ ಪ್ರೇಮಿಗಳಾದ ಈ ದೇಶದ ಬಹುಸಂಖ್ಯಾತರ ಶತ್ರುನೋ..?

ನಿಜ.. ಈ ದೇಶದ ನಾಗರಿಕ ಪ್ರಶಸ್ತಿಗಳ ಆಯ್ಕೆ ಬಗ್ಗೆ ನೆಹರೂ ಕಾಲದಲ್ಲೇ ಪ್ರಶ್ನೆ ಎದ್ದಿತ್ತು. ಸರ್ಕಾರ ನೀಡೋ ಪ್ರಶಸ್ತಿಗಳೆಲ್ಲಾ ಬಿಕರಿಯಾಗ್ತಿದೆ ಎಂಬ ಆರೋಪಗಳಿತ್ತು. ಇದೀಗ ಮೋದಿ ಅವಧಿಯಲ್ಲಿ ನಾಗರಿಕ ಪುರಸ್ಕಾರಗಳೆಲ್ಲಾ ಬಿಕರಿಯಾಗ್ತಿರೋದು ಸ್ಪಷ್ಟ. ಜತೆಗೆ ವಿನಾಶಕಾರಿ ವ್ಯಕ್ತಿಗಳಿಗೆ ವಿಶೇಷ ಸಾಧನೆಯ ಹೆಸರಲ್ಲಿ ಪುರಸ್ಕಾರ ನೀಡ್ತಿರೋದು ಈ ದೇಶದ ದುರಂತವೇ ಸರಿ. ಇದೆಲ್ಲಕ್ಕಿಂತ ಹೆಚ್ಚಾಗಿ ಪ್ರಶಸ್ತಿ ವಿಜೇತರ ಮೌಲ್ಯಮಾಪನ ಮಾಡಬೇಕಾದ ಮಾಧ್ಯಮಗಳು ಮೋದಿ ಪ್ರಣೀತ ಭಾರತ ದೇಶದ ಬಗ್ಗೆ ತುತ್ತೂರಿ ಊದುತ್ತಿರೋದು ಈ ದೇಶ ಎತ್ತ ಕಡೆ ಸಾಗುತ್ತಿದೆ ಎಂಬುದಕ್ಕೆ ಸ್ಪಷ್ಟ ಉದಾಹರಣೆ.

ಮಾಧ್ಯಮ ಹಾಗೂ ಸರ್ಕಾರ ಹೇಳುವಂತೆ ಅಡ್ವಾಣಿ ಉಕ್ಕಿನ ವ್ಯಕ್ತಿತ್ವದ ವಿಶೇಷ ವ್ಯಕ್ತಿಯಲ್ಲ. ಮುದಿವ್ಯಾಘ್ರ ಈ ದೇಶದ ವಿನಾಶಕಾರಿ ವ್ಯಕ್ತಿ. ಇನ್ನು ಅಟಲ್ ಕೂಡ ಅಜಾತಶತ್ರುವಲ್ಲ.. ಬದಲಾಗಿ ಆಘಾತಕಾರಿ ಸೊತ್ತು..!

*ದೇಷ ಪ್ರೇಮಿ


Posted by ಪ್ರತಿದಿನ ಪ್ರತಿಕ್ಷಣ

Monday 23 March 2015

ಕಣ್ಣಿದ್ದೂ ಕುರುಡಾದ ಮನುವಾಣಿ..!

ಬೇಬಿ ನಿರ್ಭಯಾಳ  
ಬದುಕಿಗೆ ಬೆಳಕನ್ನು ನೀಡಲು  
ಮೊಂಬತ್ತಿಯ ಹಿಡಿದು  
ಬೀದಿಗಿಳಿಯಿತು ಜನ ಸಮೂಹ  
 
ಉದಯವಾಣಿಯೆಂಬ  
ಕೋಮುವಾಣಿ ಗೆ  
ಕಾಣಲಿಲ್ಲ ಪುಟ್ಟ  
ಮಗುವಿನ ಕಣ್ಣೀರು  
 
ಸುಳ್ಳು ಸುದ್ಧಿ ಹರಡಿ  
ವಿಕೃತ ಸುಖ ಪಡುವ  
ಚಾಳಿ ಇನ್ನೂ ಬಿಟ್ಟಿಲ್ಲ  
ಈ ವಾಣಿ  
 
ಪತ್ರಿಕಾ ಧರ್ಮವನ್ನು  
ಮರೆತು, ಜನರನ್ನು  
ದಾರಿ ತಪ್ಪಿಸುವ  
ಈ ವಾಣಿ ನಮಗೇಕೆ?  
 
ಸುಳ್ಳು ಸುದ್ದಿ ಹರಡುವ  
ಪತ್ರಿಕೆಯನ್ನು  
ಪ್ರಶ್ನಿಸುವ ವ್ಯವಸ್ಥೆ  
ದೇಶದಲ್ಲಿ ಇಲ್ಲವೇ?  
 
ನಿರ್ಭಯಾಳ ಬದುಕಿನಲ್ಲಿ  
ಚೆಂಡಾಟವಾಡಿದ ಕ್ರೂರಿಗಳ  
ಬೆನ್ನ ಹಿಂದೆ, ಉದಯವಾಣಿ  
ಇರಬಹುದೇ? - ಒಂದು ಸಂಶಯ  
 
                    - ಷಾ ಕುದ್ರಡ್ಕ


Posted by ಪ್ರತಿದಿನ ಪ್ರತಿಕ್ಷಣ

ಪತ್ರಿಕಾ ಧರ್ಮ ಮರೆತ ಉದಯವಾಣಿ..!

ಪತ್ರಿಕಾ ವರದಿಗಳು ಎಷ್ಟು ನಿಷ್ಪಕ್ಷವಾಗಿರುತ್ತವೆ ಎಂಬುದಕ್ಕೆ ಪುಟ್ಟ ಬಾಲೆ ನಿರ್ಭಯಳ ಮೇಲೆ ಜರುಗಿದ ಲೈಂಗಿಕ ದೌರ್ಜನ್ಯವನ್ನು ಖಂಡಿಸಿ ಮಂಗಳೂರಿನ ಪ್ರಜ್ಞಾವಂತ ಜನರು ನಡೆಸಿದ ಮೋಂಬತ್ತಿ ಜಾಥಾವನ್ನು ತಿರುಚಿ ವರದಿ ಮಾಡಿದ ಉದಯವಾಣಿ ಪತ್ರಿಕೆಯೇ ಸಾಕ್ಷಿ.

ಬೇಬಿ ನಿರ್ಭಯಳಿಗಾಗಿ ಮಂಗಳೂರಿನ ಸಾವಿರಾರು ಪ್ರಜ್ಞಾವಂತ ಜನರು ಜಾತಿ ಮತ ಬೇಧವನ್ನು ಮರೆತು ಒಂದಾದರು. ಮೌನವಾಗಿ ಮೋಂಬತ್ತಿ ಹಿಡಿದು ಜಾಥಾ ನಡೆಸಿದರು. ಇದು ಮಂಗಳೂರಿನಲ್ಲಿರುವ ಎಲ್ಲರಿಗೂ ತಿಳಿದ ವಿಷಯ. ಅನೇಕ ಪತ್ರಿಕೆಗಳಲ್ಲೂ, ಇಂಟರ್ನೆಟ್ ಮಾಧ್ಯಮಗಳಲ್ಲೂ ಇದರ ವರದಿ ಪ್ರಕಟವಾಗಿದೆ.

ಆದರೆ ಮಣಿಪಾಲದಿಂದ ಪ್ರಕಟವಾಗುವ ಮಂಗಳೂರಿನ ಕೋಮುವಾದಿ ಪತ್ರಿಕೆಗೆ ಈ ಸತ್ಯವನ್ನು ಅರಗಿಸಿಕೊಳ್ಳಲಾಗಲಿಲ್ಲ. ಮೋಂಬತ್ತಿ ಜಾಥಾವನ್ನು ಇವರ ವರದಿಗಾರರು ಕಂಡಿದ್ದಾರೆ. ಫೋಟೋ ಕೂಡ ಕ್ಲಿಕ್ಕಿಸಿದ್ದಾರೆ. ಆ ಫೋಟೋ ಅನ್ನು ತಮ್ಮ ಪತ್ರಿಕೆಯಲ್ಲೂ ಮುದ್ರಿಸಿದ್ದಾರೆ. ಆದರೆ ಆ ಫೋಟೋಗೆ ನೀಡಿದ ಕ್ಯಾಪ್ಶನ್ ಹೇಗಿತ್ತು ಗೊತ್ತೇ? ಯುವ ಐ ಎ ಎಸ್ ಅಧಿಕಾರಿ ಡಿ.ಕೆ. ರವಿ ಅವರ ನಿಗೂಢ ಸಾವಿನ ಬಗ್ಗೆ ಸರಕಾರದ ಧೋರಣೆಯನ್ನು ಖಂಡಿಸಿ ಹಾಗೂ ಉನ್ನತ ಮಟ್ಟದ ತನಿಖೆಗೆ ಆಗ್ರಹಿಸಿ ವಿದ್ಯಾರ್ಥಿಗಳ ಸಂಘಟನೆ ನಡೆಸಿದ ಮೋಂಬತ್ತಿ ಜಾಥಾ !!!

ಮಾನವೀಯತೆ ನಶಿಸಿ ಹೋದ ವ್ಯಕ್ತಿಯಿಂದಲೇ ಹೊರತು ಇನ್ನಾರಿಂದಲೂ ಇಂತಹ ವರದಿ ಪ್ರಕಟಿಸಲು ಸಾಧ್ಯವಿಲ್ಲ. Respect my Childhood ಎಂಬ ಫಲಕವನ್ನು ಕೈಯಲ್ಲಿ ಹಿಡಿದಿರುವ ಮಕ್ಕಳು ಡಿಕೆ ರವಿಗಾಗಿ ಪ್ರತಿಭಟನೆ ಮಾಡುತ್ತಿದ್ದಾರೆಂದು ಹೇಳಲು ಇವರಿಗೆ ಸ್ವಲ್ಪವಾದರೂ ಬುದ್ಧಿಯೆಂಬುದು ಇಲ್ಲವೇ? ಎಲ್ಲಿಯ ತನಕ ಈ ಪೀತ ಪತ್ರಿಕೆಗಳಿಗೆ ಜನರು ಸಾಮಾಜಿಕ ಬಹಿಷ್ಕಾರ ಹಾಕುವುದಿಲ್ಲವೋ ಅಲ್ಲಿಯ ತನಕ ಸಮಾಜದಲ್ಲಿ ನೆಮ್ಮದಿಯಿರದು.

ಸತ್ಯಸಾರಥಿ


Posted by ಪ್ರತಿದಿನ ಪ್ರತಿಕ್ಷಣ

ಕೋಮುವಾಣಿಯ ಅಚಾತುರ್ಯ..!?

ದಕ್ಷಿಣ ಕನ್ನಡ ಜಿಲ್ಲೆಯ ತೊಕ್ಕೊಟ್ಟಿನಲ್ಲಿ ಇನ್ನೂ ಸಹ ಪ್ರಪಂಚವನ್ನೇ ಸರಿಯಾಗಿ ನೋಡದ ಅಪ್ರಾಪ್ತ ಪ್ರಾಯದ ಬಾಲೆಯೊಂದನ್ನು ವಿಕ್ರತ ಕಾಮಿ ಮಧುಕರ ಎಂಬಾತ ತನ್ನ ಕಾಮ ತೀಟೆಯನ್ನು ತೀರಿಸಲು ಉಪಯೋಗಿಸಿದ್ದನು.ಈ ಪ್ರಕರಣವು ಇಲ್ಲಿನ ಹೇಸಿಗೆಗೆಟ್ಟ ಸರಕಾರ ಮತ್ತು ನೀತಿಗೆಟ್ಟ ಮಾಧ್ಯಮಕ್ಕೆ ದೊಡ್ಡ ಸುದ್ಧಿಯಾಗದಿದ್ದರೂ ಅದೆಷ್ಟೋ ಪೋಷಕರ ನಿದ್ದೆಗೆಡಿಸಿತು.ಇದರ ವಿರುದ್ಧ ಧ್ವನಿ ಎತ್ತದಿದ್ದರೆ ಇಂದು ಆ ಮಗುವಿಗೆ ಆದ ಅನ್ಯಾಯ ನಾಳೆ ನಮ್ಮ ಮನೆಯ ಮಕ್ಕಳಿಗೂ ಆಗಬಹುದು ಎಂದು ಮನಗೊಂಡು ಮಂಗಳೂರಿನ ಸಮಾನ ಮನಸ್ಕರೆಲ್ಲಾ ಜೊತೆಗೂಡಿ "ಜಸ್ಟಿಸ್ ಪಾರ್ ಬೇಬಿ ನಿರ್ಭಯ" ಎಂಬ ನಾಮದೊಂದಿಗೆ ಮೊನ್ನೆ ಶನಿವಾರ  ಸಾವಿರಾರು ಜನರ ಭಾಗವಹಿಸುವಿಕೆಯಲ್ಲಿ ಶಾಂತಿಯುತ್ತ ಮೊಂಭತ್ತಿ ಪ್ರತಿಭಟನೆಯನ್ನು ನಡೆಸಿ ರಾಷ್ಟ್ರಾದಾದ್ಯಂತ ಗಮನ ಸೆಳೆದರು.
          ಆದರೆ ಕೋಮುವಾಣಿ ಎಂಬ ಬಿರುದನ್ನು ಪಡೆದಿರುವ ಉದಯವಾಣಿ ಪತ್ರಿಕೆಗೆ ಮಾತ್ರ ಈ ವಿಷಯ ಗೊತ್ತೇ ಇಲ್ಲಾ ಅಂತ ಕಾಣುತ್ತೆ.ಮೊನ್ನೆ ನಡೆದ ಮೊಂಬತ್ತಿ ಪ್ರತಿಭಟನೆಯ ಭಾವ ಚಿತ್ರವನ್ನು ಪ್ರಕಟಿಸಿ ಅದನ್ನು ಡಿ.ಕೆ. ರವಿಯವರ ಪ್ರಕರಣಕ್ಕೆ ತಿರುಚಲು ಪ್ರಯತ್ನಿಸುತ್ತಿದೆ,ಇದಕ್ಕೆ ಪ್ರಮುಖ ಕಾರಣ ಅನ್ಯಾಯಕ್ಕೊಳಗಾದ ಆ ಮಗು ಮುಸ್ಲಿಮ್ ಸಮುದಾಯಕ್ಕೊಳಪಟ್ಟಿತ್ತು.

ಇಂಥಹ ಸಂಧರ್ಭದಲ್ಲೂ ಸಹ ತನ್ನ ಕೋಮು ವಿಕ್ರತಿಯನ್ನು ತೋರಿಸುವ ಇಂಥಹ ನೀತಿಗೆಟ್ಟ ಪತ್ರಿಕೆಗಳನ್ನು ನಾಡಿನ ಪ್ರತಿಯೊಬ್ಬರೂ ಸಹ ಬಹಿಷ್ಕರಿಸಬೇಕಾಗಿದೆ.ಅನೇಕ ಬಾರಿ ಸುಳ್ಳು ಸುದ್ಧಿಯನ್ನು ಪ್ರಕಟಿಸಿ ಕರಾವಳಿಯ ಜನರ ಕೋಮು ಬಾವನೆಗಳನ್ನು ಕೆರಳಿಸಿ  ಅದೆಷ್ಟೋ ಕೋಮುಗಲಭೆಯನ್ನು ಉಂಟುಮಾಡಿದಂತಹ ಕುಖ್ಯಾತಿಯನ್ನು ಪಡೆದಿದೆ ಈ ಉಗ್ರವಾಣಿ ಪತ್ರಿಕೆ.

          ಇಲ್ಲಿ ಗಮನಿಸಬೇಕಾದ ಪ್ರಮುಖ ಅಂಶವೇನೆಂದರೆ ಡಿ.ಕೆ.ರವಿಯವರ ಪ್ರಕರಣಕ್ಕೆ ಸಂಬಂದಿಸಿದಂತೆ ಮಂಗಳೂರಿನಲ್ಲಿ ಎಲ್ಲಿಯೂ ಸಹ ಮೊಂಬತ್ತಿ ಪ್ರತಿಭಟನೆ ನಡೆದೆ ಇಲ್ಲ.ಎಲ್ಲಿಯಾದರೂ ದಾರಿ ಹೋಕ ನಾಯಿಗಳು ವಿಸರ್ಜಿಸಿದರೂ  ಪೋಟೊ ತೆಗೆದು ಅದನ್ನೇ ಪ್ಲ್ಯಾಶ್ ನ್ಯೂಶ್ ಅಂತ ಪ್ರಕಟಿಸುವ ಕೋಮು ವಾಣಿ ಉದಯವಾಣಿಯಂತಹ ಹಲವು ಕೋಮುವಾದಿ ಪತ್ರಿಕೆಗಳು ಇವತ್ತು ತನ್ನ ಪತ್ರಿಕಾ ಧರ್ಮವನ್ನು ಮರೆತಂತಿದೆ.

          ಸಮಾಜದಲ್ಲಿ ನಡೆಯುತ್ತಿರುವ ಅನಾಚಾರಗಳ ಸತ್ಯಾಸತ್ಯತೆಯನ್ನು ಪ್ರಕಟಿಸಲು ಎಡವಿ ಸದಾ ಸುಳ್ಳು ಸುದ್ದಿಯನ್ನು ಪ್ರಕಟಿಸುತ್ತಿರುವ ದುಷ್ಟ ಶಕ್ತಿಗಳೊಂದಿಗೆ ಕೈ ಜೋಡಿಸಿರುವ ಇಂಥಹ ಹೊಲಸು ಪತ್ರಿಕೆಗಳ ವಿರುದ್ಧ ಸಾರ್ವಜನಿಕರು ಆದಷ್ಟು ಬೇಗ ಎಚ್ಚೆತ್ತುಕೊಳ್ಳಲಿ

ಮಹಮ್ಮದ್ ಅನ್ವರ್
Justice#for#Baby#Nirbhaya


Posted by ಪ್ರತಿದಿನ ಪ್ರತಿಕ್ಷಣ

Thursday 19 March 2015

ಅರಣ್ಯ ರೋಧನವಾದ ಮಂಗಳೂರು ಅತ್ಯಾಚಾರ ಪ್ರಕರಣ..!

"ಮುಗ್ಧ ಹಸುಳೆಯನ್ನು ಅತ್ಯಾಚಾರಗೈದು ರೌದ್ರಾವತಾರ ತೋರಿದ ಕಾಮುಕನ ಬಂಧನಕ್ಕಾಗ್ರಹಿಸಿ, ನ್ಯಾಯಕ್ಕಾಗಿ  ಸ್ಟೇಷನ್ ಮೆಟ್ಟಿಲೇರಿದ ಯುವಕರನ್ನೇ, ಒಳ ದಬ್ಬಿ ರಾಟೆಯೆತ್ತಿದ, ಸಂಘ ಪರಿವಾರದ ಅಡಿಯಾಳುಗಳಂತೆ ವರ್ತಿಸುವ ಮಂಗಳೂರು ಪೋಲೀಸ್ ವಿಭಾಗದ ಅಧಿಕಾರಿಗಳ ವಿರುದ್ದ ಯಾವುದೇ ರೀತಿಯ ಕಾನೂನು ಕ್ರಮ ಜರುಗಿಸಲಾಗದ ಮಿನಿಸ್ಟರ್ ಎಂದು ಸುತ್ತಾಡುವ ಊರಿನವನೇ ಆದ ಗಂಡಸುತನವಿಲ್ಲದವನಿಂದ ಏನು ಮಾಡಲು ಸಾಧ್ಯ"..!?

ಹೀಗೆ ಪ್ರಶ್ನಿಸಿದ್ದು ನಾನಲ್ಲ..,

ನಿನ್ನೆ ಪ್ರಾಯಸ್ತರಿಬ್ಬರಲ್ಲಿ ಮಸೀದಿಯ ಅಧ್ಯಕ್ಷರೋರ್ವರು ಮಾತನಾಡುವುದು ನನಗೆ ಕಿವಿಗೆ ಬಿತ್ತು..! ಈ ಹಿಂದಿನಿಂದಲೂ ಕಾಂಗ್ರೆಸ್ ಪರ ಕೆಲಸ ಮಾಡಿ ಸಮಾಜದಲ್ಲಿ ಗೌರವಾನ್ವಿತರೆನಿಸಿಕೊಂಡಿದ್ದ ಅವರ ಮಾತು ಕೇಳಿ ನಾನು ಒಮ್ಮೆಲೇ ಆವಕ್ಕಾಗಿ ಹೋದೆನು..

ಅವರೊಂದಿಗೆ ಪ್ರತಿ ಚುನಾವಣೆಯ ಸಮಯದಲ್ಲೂ ನಾನು ಹಾಗೂ ಸಂಗಡಿಗರು ಅದೆಷ್ಟೋ ಬಾರಿ ಹಗಲಿರುಳೆನ್ನದೆ ಪಕ್ಷಕ್ಕಾಗಿ ಕೆಲಸ ಮಾಡಿದ್ದೇವೆ..

ಹಾಗೇ ಅವರ ಮಾತು ಮುಂದುವರೀತಿತ್ತು..
ನಮ್ಮ ಮಿನಿಸ್ಟರ್ ಮೇಲೆ ಇವರಿಗೆ ಏನೋ ಅಸಮಾಧಾನ ಇದ್ದುದರಿಂದಲೆ ಹೀಗೆಲ್ಲ ಹೇಳುತ್ತಿದ್ದಾರೆ ಅಂದುಕೊಂಡು ನಾನು ಕೂಡಾ ಸುಮ್ಮನಿದ್ದೆ..

ಆದರೆ ಅದಾಗಲೇ ಪ್ರತಿ ವಾಟ್ಸಾಪ್ ಗ್ರೂಪ್ಗಳಲ್ಲಿ ಹಸುಳೆಯ ಅತ್ಯಾಚಾರದ ಆರೋಪ, ಪ್ರತ್ಯಾರೋಪಗಳು ಹರಿದಾಡುತ್ತಿರುವುದನ್ನು ಕಂಡು, ಮಗುವಿನ ಹೆಸರಲ್ಲೂ ರಾಜಕೀಯ ಮಾಡುತ್ತಿದ್ದಾರಲ್ಲ ಎಂದು ನನ್ನ ಮನಸ್ಸಿನೊಳಗೆ ಚುಚ್ಚುತ್ತಿದ್ದವು..

ಆದರೆ ನಾನು ಕಂಡು ಕೊಂಡ ಹಾಗೆ ಒಂದಂತು ನಿಜ, ಎಲ್ಲೋ ಒಂದು ಕಡೆ ನಮ್ಮ ಮಿನಿಸ್ಟರ್ ಅವರ ಸೋಷಿಯಲ್ ಮೀಡಿಯೇಟರ್ಗಳಾಗಿ ವರ್ತಿಸುತ್ತಿರುವ ಜನರೇ ಅವರ ಭವಿಷ್ಯಕ್ಕೆ ಧಕ್ಕೆಯಾಗುತ್ತಿದ್ದಾರೆ.

ಇಂದು ಮಿನಿಸ್ಟರ್ ಅವರ ವಿರುದ್ದ ಕೇಳಿ ಬರುವ ಆರೋಪಗಳು ಬಹುತೇಕ ಅವರಿಂದಾಗಿಯೇ ಆಗಿದೆ. ಕಂಡದ್ದನ್ನು, ಉಂಡದನ್ನೂ, ಕಕ್ಕಿದ್ದನ್ನೂ ನೆಕ್ಕಿದ್ದನ್ನೂ ಅತಿಯಾಗಿ ಫೋಟಾಯಿಸಿ ಅನಾವಶ್ಯಕ ವಾರ್ತೆ ಮಾಡುವ ಚೇಳಗಳಿಂದ ಖಂಡಿತವಾಗಿಯೂ ಮಿನಿಸ್ಟರ್ ಅವರ ರಾಜಕೀಯ ಭವಿಷ್ಯಕ್ಕೆ ತೊಡಕಾಗಲಿದೆ..
ಅದೂ ಅಲ್ಲದೆ ಉಳ್ಳಾಲದಲ್ಲಿ ನಡೆದ ಅತ್ಯಾಚಾರ ಪ್ರಕರಣವನ್ನು ಸುಳ್ಳು ಎಂದು ನಿರೂಪಿಸಲು ಬಹುತೇಕ ಇಂತಹ ಚೇಳುಗಳು ಹರಸಾಹಸ ಪಟ್ಟಿರುವುದು ಎಲ್ಲಾ ವಾಟ್ಸಾಪ್ ಗ್ರೂಪ್ಗಳಲ್ಲಿ ಎದ್ದು ಕಾಣುತ್ತಿತು.. ಹಾಗೆ ನೋಡಿದರೆ ಮಿನಿಸ್ಟರ್ ಅವರನ್ನು ತನ್ನ ಕರ್ತವ್ಯದಿಂದ ನುಣುಚಿಕೊಳ್ಳುವಂತೆ ಮಾಡಲು ಇವರುಗಳೇ ಕಾರಣ. ಮಾಡಬೇಕಾದ ಕಾರ್ಯಗಳನ್ನು ಮಾಡದೆ, ಅನಾವಶ್ಯಕ ಕಾರ್ಯಗಳನ್ನ ಪ್ರಚುರಪಡಿಸುವ ಇವರುಗಳ ತಂತ್ರ ಎಷ್ಟು ಸರಿಯೋ ದೇವನೇ ಬಲ್ಲ.

ಇನ್ನು ಕೆಲ ಪರದೇಷದಲ್ಲಿ ಕೂತ ಮಿನಿಸ್ಟರ್ ಅಭಿಮಾನಿಗಳು, ಮಿನಿಸ್ಟರ್ ಸ್ವಿಚ್ ಆಫ್ ಮಾಡಿರಲಿಲ್ಲ, ಮಗುವಿಗೆ ಡೆಸ್ಕ್ ಬಿತ್ತು, ಅಂತೆ ಕಂತೆಗಳ ಮಹಾ ಮಾಹಾಪೂರವನ್ನೇ ಹರಿದು ಬಿಡುತ್ತಿದ್ದರು..

ಆದರೆ ನಿಜ ಸಂಗತಿಯ ವಿಷ್ಲೇಶಿಸಿದ ನಾನೂ ಕೆಲವು ಸತ್ಯಗಳನ್ನು ಕಂಡುಕೊಂಡೆ.

ಒಬ್ಬ ಅರೋಪಿಯನ್ನು ರಕ್ಷಿಸಲು ಅಧಿಕಾರದಲ್ಲಿದ್ದುಕೊಂಡೇ ಹೆಣಗಾಡಿದ ಪ್ರಯತ್ನದ ಅರ್ಧದಷ್ಟು ಕೂಡ, ಮಗುವಿನ ಪರ ನ್ಯಾಯಕ್ಕೆ ಪ್ರಯತ್ನಿಸಲಸಾಧ್ಯವಾದುದು ಮಿನಿಸ್ಟರ್ಗಳಾಗಿರುವ ನಮ್ಮ ಸಮುದಾಯಿಕರ ಅಧೋಗತಿಯೇ ಸರಿ..

ಇಂತಹ ಪೊಳ್ಳು ಜಾತ್ಯಾತೀತತೆ ಇದ್ದರೇನು ಇಲ್ಲದಿದ್ದರೇನು, ನನ್ನ ಅಭಿಮಾನಿ ಸಹೋದರರೆ ಚಿಂತಿಸಿ..

ಅಧಿಕಾರದಲ್ಲಿದ್ದುಕೊಂಡೇ
ಇನ್ನು, ಶಾಲೆಯ ಹೆಸರು ಹಾಳಾಗದಿರಲು ಅರಂಭದಲ್ಲೇ ಮ್ಯಾನೇಜ್ಮೆಂಟ್ ಮಾಡಿದ ಕಸರತ್ತು, ಆರೋಪಿಯನ್ನು  ರಕ್ಷಿಸಲೆತ್ನಿಸಿದ ಸಂಘ ಪರಿವಾರಿಗಳ ಕೈವಾಡ, ತೊಕ್ಕೋಟು ಹಾಸ್ಪಿಟಲ್ ಕುತಂತ್ರ, ಪೋಲೀಸ್ ಇಲಾಖೆಯ ದೌರ್ಜನ್ಯ, ಸ್ಥಳೀಯ ವಾರ್ತಾ ವಾಹಿನಿಗಳ ಇಬ್ಬಗೆ ನೀತಿ, ಸ್ಥಳೀಯ ಕೆಲ ಕಾಂಗ್ರೆಸಿಗರ ಪೊಳ್ಳು ಜಾತ್ಯಾತೀತತೆಯ ನಾಟಕತ್ವ, ನಾಮ್ಕೆ ವಾಸ್ತೆ ಸೋಷಿಯಲ್ ಮೀಡಿಯೆಟರ್ಗಳ ಸುಳ್ಳು ನಿರೂಪಣಾ ಕಂತೆಗಳ ನಡುವಿನಲ್ಲಿ ಏನೂ ತಿಳಿಯದ ಹಸುಳೆಯ ಮುಗ್ದ ಕೂಗು ತಿಳಿಯದಾದುದು ನಿಜವಾಗಿಯೂ  ಖೇದಕರ. ಖಂಡಿತವಾಗಿಯೂ ಪ್ರಕರಣ ತಿರುಚಲು ಹೆಣಗಾಡಿದವರೆ ಆ ಮಗು ನಿಮ್ಮ ಮನೆಯದ್ದೋ, ನಿಮ್ಮ ಸಹೋದರಿಯೋ, ಹೆಂಡತಿಯೋ, ತಾಯಿಯೋ, ಮಗಳೋ ಆಗಿರುತ್ತಿದ್ದಲ್ಲಿ ಏನಾಗುತಿತ್ತು.?!

ಹಾಗೆ ಇದೊಂದು ಹೆತ್ತವರಿಗೆ ಸಮಾಧಾನ ಪಡಿಸುವ ಪ್ರಕರಣವಾಗಿ ಮುಕ್ತಾಯಗೊಳಿಸದೆ, ಸಮಾಜಕ್ಕೆ ಪಾಠವಾಗಬೇಕಾದಂತಹ ತೀರ್ಪಾಗಿ, ಸಮಾಜದಲ್ಲಿ ಇಂತಹ ನೀಚತನ ಮರುಕಳಿಸದಂತೆ ಪ್ರತಿಯೊಬ್ಬರೂ ಜಾತಿ-ಮತ ಭೇದ ಮರೆತು ಪ್ರಯತ್ನಿಸಬೆಕಾಗಿದೆ. ಅಂತಹ ವಿಕೃತ ಕಾಮುಕರ ಬಗ್ಗೆ ಸಮಾಜದಲ್ಲಿ ಜಾಗ್ರತೆ ಹುಟ್ಟಿಸಿ, ಸಮಾಜದಲ್ಲಿರುವ ಅಂತಹ ತೊಡಕುಗಳನ್ನು ಹೋಗಲಾಡಿಸಲು ಯಾರನ್ನೂ ಕಾಯದೇ, ಸ್ವಯಂ ಹೋಗಲಾಡಿಸಲು ಪಣ ತೊಟ್ಟ ಉತ್ತಮ ಸಮುದಾಯವೊಂದು ಹೊರ ಹೊಮ್ಮಲಿ ಎಂದು ಆಷಿಸುತ್ತಾ...!

ಇತೀ ತಮ್ಮ ಹಿತೈಷಿ,
ಜಾವೇದ್ ಉಳ್ಳಾಲ..

 
Design by Free WordPress Themes | Bloggerized by - Free Blogger Themes | @javtl