Sunday 12 April 2015

ವಿನಾಶಕಾರಿ ವ್ಯಕ್ತಿಗೆ ಪದ್ಮವಿಭೂಷಣ.. ಆಘಾತಕಾರಿ ವ್ಯಕ್ತಿಗೆ ಅಜಾತಶತ್ರು ಪಟ್ಟ..!

ವಿನಾಶಕಾರಿ ವ್ಯಕ್ತಿಗೆ ಪದ್ಮವಿಭೂಷಣ.. ಆಘಾತಕಾರಿ ವ್ಯಕ್ತಿಗೆ ಅಜಾತಶತ್ರು ಪಟ್ಟ..!

ಪದ್ಮವಿಭೂಷಣ.. ಭಾರತ ರತ್ನ ಹೊರತುಪಡಿಸಿದರೆ ದೇಶದ ಎರಡನೇ ಅತ್ಯುನ್ನತ ಗೌರವ.. ಹಾಗಂತ ಈ ನಾಗರಿಕ  ಪ್ರಶಸ್ತಿಗಳೆಲ್ಲಾ ಪ್ರಶ್ನಾತೀತವಲ್ಲ. ತನಗೆ ತಾನೇ ಪ್ರಶಸ್ತಿ ಘೋಷಿಸಿಕೊಂಡ ಮೊದಲ ಪ್ರಧಾನಿ ನೆಹರೂ ಅವರಿಂದ ಹಿಡಿದು, ಹಿಂದುತ್ವವಾದಿಗಳ ಹೃದಯಸಾಮ್ರಾಟ ಮೋದಿ ಕೃಪೆಯಿಂದ ಭಾರತ ರತ್ನ ಪ್ರಶಸ್ತಿ ದಕ್ಕಿಸಿಕೊಂಡ ಹಿಂದೂ ರಾಷ್ಟ್ರದ ಪ್ರತಿಪಾದಕ ಮದನ್ ಮೋಹನ್ ಮಾಳವೀಯವರೆಗೂ ಈ ದೇಶದ ಅತ್ಯುನ್ನತ ಪ್ರಶಸ್ತಿ ಭಾರತ ರತ್ನ ಗೌರವವೇ ಪ್ರಶ್ನೆಗೊಳಗಾಗಿದೆ. ಇನ್ನು ಪದ್ಮ ಪ್ರಶಸ್ತಿಗಳ ಕಥೆಯನ್ನು ಕೇಳೋದೆ ಬೇಡ ಬಿಡಿ.. ತುಕ್ಕುಹಿಡಿದ ಉಕ್ಕು ಅಡ್ವಾಣಿ, ಡೋಂಗಿ ಗುರುಗಳು, ದೇಶವನ್ನು ಮುಕ್ಕಿ ತಿನ್ನುತ್ತಿರುವ
ಕಾರ್ಪರೇಟರ್ ಕುಳಗಳಿಗೆ  ದೇಶದ ಬಹುದೊಡ್ಡ ಗೌರವ ಪ್ರಶಸ್ತಿಯನ್ನು ನೀಡುವುದೆಂದರೆ ಅದರ ಮೌಲ್ಯಗಳು ಹೇಗೆ ತಾನೇ ಉಳಿದೀತು..

ಇತ್ತೀಚೆಗೆ ದೇಶದ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿ ಪದ್ಮವಿಭೂಷಣ ಅಡ್ವಾಣಿಗೆ ನೀಡಿದ್ದು ನಿಮಗೆಲ್ಲಾ ಗೊತ್ತೇ ಇದೆ. ಪ್ರಶಸ್ತಿ ನೀಡಿದ ಮರುದಿನವೇ ಸುಪ್ರೀಂ ಕೋರ್ಟ್ ಅಡ್ವಾಣಿಗೆ ಸಮನ್ಸ್ ಒಂದು ಜಾರಿ ಮಾಡಿತು. ಅದು ಈ ದೇಶದ ಸಂವಿಧಾನ, ಕಾನೂನುಗಳನ್ನು ಮಣ್ಣುಪಾಲು ಮಾಡಿದ, ಪರಮೋಚ್ಛ ನ್ಯಾಯಾಲಯಕ್ಕೆ ವಂಚಿಸಿದ ವಿಷಯವಾಗಿ  ನೀಡಲ್ಪಟ್ಟ ಸಮನ್ಸ್ . 1992ರಲ್ಲಿ ಬಾಬರಿ ಮಸೀದಿ ದ್ವಂಸಕ್ಕೆ ಸಂಬಂದಿಸಿ ಇಂದಿಗೂ ಆರೋಪಿ ಸ್ಥಾನದಲ್ಲಿರುವ ಅಡ್ವಾಣಿ ಸೇರಿದಂತೆ 20 ಮಂದಿ ಬಿಜೆಪಿ ಹಾಗು ಸಂಘಪರಿವಾರದ ವ್ಯಕ್ತಿಗಳಿಗೆ ಸುಪ್ರೀಂಕೋರ್ಟ್ ಸಮನ್ಸ್ ಜಾರಿಮಾಡಿದೆ. ಅಡ್ವಾಣಿ ಹೊರತುಪಡಿಸಿ ಇನ್ನುಳಿದ ವಿನಾಶಕಾರಿ ವ್ಯಕ್ತಿಗಳು ಸಹ ಮೋದಿ ಸರ್ಕಾರದ ಅವಧಿಯಲ್ಲಿ ನಾಗರಿಕ ಪ್ರಶಸ್ತಿಗಳನ್ನು ಪಡೆದರೆ ಅಚ್ಚರಿಯಿಲ್ಲ. ಈ ದೇಶವನ್ನು ವಿನಾಶದತ್ತ ಕೊಂಡೊಯ್ಯುತ್ತಿರುವ ವಿಭಜನಕಾರಿ ಶಕ್ತಿಗಳಿಗೆ ಮೋದಿ ಸರ್ಕಾರವಲ್ಲದೆ ಬೇರೆ ಯಾವ ಸರ್ಕಾರಗಳು ನಾಗರಿಕ ಪ್ರಶಸ್ತಿಗಳನ್ನು ನೀಡಲು ಸಾಧ್ಯ ಹೇಳಿ..?

ಮೋದಿ ಸರ್ಕಾರ ಅಡ್ವಾಣಿಗೆ ಪದ್ಮವಿಭೂಷಣ ಪಾರಿತೋಷಕ ಪ್ರಕಟಿಸಿದಾಗ ಮತ್ತು ಪ್ರಧಾನಮಾಡಿದಾಗ ಪತ್ರಿಕೆ ಹಾಗೂ ಟಿವಿ ಮಾಧ್ಯಮಗಳು,  ಹಲ್ಲುಕೀಳಲ್ಪಟ್ಟಿರುವ ಕೇಸರಿ ಮುದಿವ್ಯಾಘ್ರನನ್ನು ಹೊಗಳಿ ಅಟ್ಟಕ್ಕೇರಿಸಿದ್ದವು. ಆದರೆ ಅದರ ಮರುದಿನವೇ ಸುಪ್ರೀಂಕೋರ್ಟ್ ಹೊರಡಿಸಿದ ಸಮನ್ಸ್ ಅಡ್ವಾಣಿ, ಮೋದಿ ಸರ್ಕಾರ್ ಹಾಗೂ ಮಾಧ್ಯಮಗಳ ಹೊಗಳುವಿಕೆಗೆ ತಕ್ಕ ಮಂಗಳಾರತಿಯನ್ನು ಮಾಡಿದೆ. ಅಡ್ವಾಣಿ ಅವರದ್ದು ಪದ್ಮವಿಭೂಷಣ ಪಡೆಯುವಷ್ಟು ವಿಶೇಷ ವ್ಯಕ್ತಿತ್ವ ಅಲ್ಲ. ಅದು ವಿನಾಶಕಾರಿ ವ್ಯಕ್ತಿತ್ವ ಎಂಬುದನ್ನು ಸುಪ್ರೀಂ ಸಮನ್ಸ್ ಪರೋಕ್ಷವಾಗಿ ಈ ದೇಶಕ್ಕೆ ತಿಳಿಸಿಕೊಟ್ಟಿದೆ.

ಮಾಧ್ಯಮ, ಕೇಸರಿ ಪಾಳಯ ಹಾಗೂ ಕೆಲ ಮಾಧ್ಯಮದ ಮಂದಿಗೆ ಮಾಜಿ ಪಿಎಂ ಅಟಲ್ ಬಿಹಾರಿ ವಾಜಪೇಯಿ ಇಂದಿಗೂ ಅಜಾತಶತ್ರು. ಆದರೆ ವಾಸ್ತವ ಪೂರ್ತಿ ತದ್ವಿರುದ್ಧ. ವಾಜಪೇಯಿ ಅಜಾತಶತ್ರುವಲ್ಲ, ಆಘಾತಕಾರಿ ವ್ಯಕ್ತಿ ಎಂಬುದು ಅವರ ಟ್ರ್ಯಾಕ್ ರೆಕಾರ್ಡ್ ಸ್ಪಷ್ಟವಾಗಿ ತಿಳಿಸಿಕೊಡುತ್ತೆ.. ಸ್ವಾತಂತ್ರ್ತಪೂರ್ವದಲ್ಲಿ ಸೆರೆಮನೆಯಿಂದ ಮುಕ್ತಿಪಡೆಯಲು ಬ್ರಿಟೀಷರ ಕಾಲು ಹಿಡಿದು ಕ್ಷಮೆ ಕೇಳಿದ್ದ ವಾಜಪೇಯಿ, ಮುಂದಕ್ಕೆ ಬ್ರಿಟೀಷರ ಪರ ಕೆಲಸ ಮಾಡೋದಾಗಿ ಆಂಗ್ಲ ಕುನ್ನಿಗಳಿಗೆ ಭಾಷೆ ಕೊಟ್ಟಿದ್ದರು. ಅದರಂತೆ ವಾಜಪೇಯಿ ಹಾಗೂ ಸಂಘಪರಿವಾರ ಬ್ರಿಟೀಷರ ಪರವಾಗಿದ್ದನ್ನು ಈ ದೇಶದ ನೈಜ ಇತಿಹಾಸ ತಿಳಿಸಿಕೊಡ್ತಿದೆ. ಇನ್ನು ವಾಜಪೇಯಿ ತನ್ನ ಅವಧಿಯಲ್ಲಿ ಅನಗತ್ಯವಾದ ಒಂದು ಯುದ್ಧಕ್ಕೆ(ಕಾರ್ಗಿಲ್) ಕಾರಣವಾಗಿ ಈ ದೇಶವನ್ನು ಸುಮಾರು 30. ವರ್ಷಗಳಷ್ಟು ಹಿಂದಕ್ಕೆ ಕೊಂಡುಹೋಗಿದ್ದರು. ಅದಲ್ದೆ  ಬಾಬರಿ ಮಸೀದಿ ದ್ವಂಸ ಪ್ರಕರಣದಲ್ಲೂ ವಾಜಪೇಯಿ ಆರೋಪಿ. ಮಸೀದಿದ ದ್ವಂಸಕ್ಕೆ ಸಂಬಂದಿಸಿ ನ್ಯಾ..ಮನಮೋಹನ್ ಸಿಂಗ್ ಲಿಬರ್ಹಾನ್ ನೀಡಿರುವ ಲಿಬರ್ಹಾನ್ ವರದಿಯಲ್ಲಿ ಸೌಮ್ಯವಾದಿ ಮುಖವಾಡದ ಅಸಲಿಯತ್ತು ಹೊರಬಂದಿದ್ದು, ವಾಜಪೇಯಿ ಕೂಡ ಬಾಬರಿ ಮಸೀದಿ ದ್ವಂಸಕ್ಕೆ ಕಾರಣ ಎಂಬುದನ್ನು ಆಯೋಗ ಸ್ಪಷ್ಟವಾಗಿ ತಿಳಿಸಿದೆ. ಈಗ ಹೇಳಿ ಅಟಲ್ ಅಜಾತಶತ್ರುನೋ ಅಥವಾ ಸಂವಿಧಾನ ಪ್ರೇಮಿಗಳಾದ ಈ ದೇಶದ ಬಹುಸಂಖ್ಯಾತರ ಶತ್ರುನೋ..?

ನಿಜ.. ಈ ದೇಶದ ನಾಗರಿಕ ಪ್ರಶಸ್ತಿಗಳ ಆಯ್ಕೆ ಬಗ್ಗೆ ನೆಹರೂ ಕಾಲದಲ್ಲೇ ಪ್ರಶ್ನೆ ಎದ್ದಿತ್ತು. ಸರ್ಕಾರ ನೀಡೋ ಪ್ರಶಸ್ತಿಗಳೆಲ್ಲಾ ಬಿಕರಿಯಾಗ್ತಿದೆ ಎಂಬ ಆರೋಪಗಳಿತ್ತು. ಇದೀಗ ಮೋದಿ ಅವಧಿಯಲ್ಲಿ ನಾಗರಿಕ ಪುರಸ್ಕಾರಗಳೆಲ್ಲಾ ಬಿಕರಿಯಾಗ್ತಿರೋದು ಸ್ಪಷ್ಟ. ಜತೆಗೆ ವಿನಾಶಕಾರಿ ವ್ಯಕ್ತಿಗಳಿಗೆ ವಿಶೇಷ ಸಾಧನೆಯ ಹೆಸರಲ್ಲಿ ಪುರಸ್ಕಾರ ನೀಡ್ತಿರೋದು ಈ ದೇಶದ ದುರಂತವೇ ಸರಿ. ಇದೆಲ್ಲಕ್ಕಿಂತ ಹೆಚ್ಚಾಗಿ ಪ್ರಶಸ್ತಿ ವಿಜೇತರ ಮೌಲ್ಯಮಾಪನ ಮಾಡಬೇಕಾದ ಮಾಧ್ಯಮಗಳು ಮೋದಿ ಪ್ರಣೀತ ಭಾರತ ದೇಶದ ಬಗ್ಗೆ ತುತ್ತೂರಿ ಊದುತ್ತಿರೋದು ಈ ದೇಶ ಎತ್ತ ಕಡೆ ಸಾಗುತ್ತಿದೆ ಎಂಬುದಕ್ಕೆ ಸ್ಪಷ್ಟ ಉದಾಹರಣೆ.

ಮಾಧ್ಯಮ ಹಾಗೂ ಸರ್ಕಾರ ಹೇಳುವಂತೆ ಅಡ್ವಾಣಿ ಉಕ್ಕಿನ ವ್ಯಕ್ತಿತ್ವದ ವಿಶೇಷ ವ್ಯಕ್ತಿಯಲ್ಲ. ಮುದಿವ್ಯಾಘ್ರ ಈ ದೇಶದ ವಿನಾಶಕಾರಿ ವ್ಯಕ್ತಿ. ಇನ್ನು ಅಟಲ್ ಕೂಡ ಅಜಾತಶತ್ರುವಲ್ಲ.. ಬದಲಾಗಿ ಆಘಾತಕಾರಿ ಸೊತ್ತು..!

*ದೇಷ ಪ್ರೇಮಿ


Posted by ಪ್ರತಿದಿನ ಪ್ರತಿಕ್ಷಣ

0 comments:

Post a Comment

 
Design by Free WordPress Themes | Bloggerized by - Free Blogger Themes | @javtl