Friday 26 December 2014

ಹಿಂಸೆ


ಮನುಷ್ಯ ದೇಹಗಳು  
ಛಿದ್ರಗೊಂಡು ಬೀಳುತ್ತಿವೆ, 
ಗಾಳಿಯ ರಭಸಕ್ಕೆ  
ಬಿದ್ದ ತರಗೆಲೆಯಂತೆ  
 
ಹಿಂಸಾ ಮುಖ  
ವ್ಯಾಘ್ರರ ಕ್ರೂರ ಕೈಗಳ  
ರುದ್ರ ನರ್ತನಕ್ಕೆ  
ಬಲಿಯಾಗುತ್ತಿದೆ ಬಡ ಜೀವ  
 
ಮರಣದ ನೋವು  
ಅರಿತವನೊಬ್ಬ  
ಮನುಷ್ಯ ಜೀವ  
ತೆಗೆಯುವನೇ? 
 
ತಾನು ಕೊಲ್ಲುವ  
ವ್ಯಕ್ತಿಯ ನಂಬಿ  
ಬದುಕುವ ಕುಟುಂಬವ  
ಮರೆತನೆ ?  
 
ಧರ್ಮ, ಪಾರ್ಟಿಗಾಗಿ  
ಹಿಂಸೆ ಗಿಳಿಯುವ  
ನೀಚ ಪ್ರವೃತ್ತಿ  
ಕೊನೆಗೊಳ್ಳುವುದಾದರೂ ಎಂದು? 
 
ಬಾಪೂಜಿ ಕಂಡ  
"ರಾಮ ರಾಜ್ಯ"  
ಕಟ್ಟುವ ಸಮಯ  
ಬರುವುದಾದರೂ ಎಂದು ?  
 
 
                - ಷಾ ಕುದ್ರಡ್ಕ

0 comments:

Post a Comment

 
Design by Free WordPress Themes | Bloggerized by - Free Blogger Themes | @javtl