Tuesday 30 December 2014

ಬಯೋತ್ಪಾದಕ ಮಾಧ್ಯಮಗಳು..!

ಇನ್ನೆಷ್ಟು ಮಾನಸಿಕ ಅಸ್ವಸ್ಥರು ಹುಟ್ಟಲಿರುವರೋ....??!!ನಿನ್ನೆಯಷ್ಟೇ ಸಮಾಜ ಘಾತುಕ ಭಯ ಉತ್ಪಾದಕರ ಬಾಂಬ್ ದಾಳಿಗೆ ಬೆಂಗಳೂರು ಬೆಚ್ಚಿಬಿದ್ದಿತ್ತು.ಒಬ್ಬರು ಅಮಾಯಕ ಮಹಿಳೆ ಇವರ ದುಷ್ಕೃತ್ಯಕ್ಕೆ ಬಲಿಯಾಗಿದ್ದರು.ಬಾಂಬ್ ಸ್ಪೋಟವಾದಾಗ ಸ್ಪೋಟದ ಸಮಗ್ರತೆಯನ್ನು ಸಚಿತ್ರವಾಗಿ ವರದಿ ಮಾಡಬೇಕಾದಂತಹ ಮಾಧ್ಯಮಗಳು ಕಾನೂನುಪಾಲಕರಿಗಿಂತ ತ್ವರಿತವಾಗಿ ಅಪರಾಧಿಗಳನ್ನು ಸೆರೆಹಿಡಿಲು ತಾಮುಂದು,ತಾಮುಂದುಅನ್ನುವಂತೆ ಪೈಪೋಟಿ ನಡೆಸಿದವು ಪೋಲೀಸ್ಉನ್ನತಾಧಿಕಾರಿಗಳುಸ್ಪೋಟದ ಹಿಂದಿರುವ ಶಕ್ತಿಗಳು ಯಾರೆಂದು ಗೊತ್ತಿಲ್ಲ ಎಂದು ಹೇಳಿಕೆ ನೀಡುವಾಗ ಇಲ್ಲಿನ ಮಾಧ್ಯಮಗಳಿಗೆ ಈ ಸಲ ಅದು ಯಾವುದೋ "ಅಲ್ ಉಮ್ಮ " ಅನ್ನುವ ಸಂಘಟನೆಯ ಕೈವಾಡವೆಂದು ಪ್ರಸಾರ ಮಾಡಿಯೇ ಬಿಟ್ಟಿತು...!!ಅದರಲ್ಲಿ ಅಚ್ಚರಿ ಪಡುವಂತದ್ದೇನಿಲ್ಲ, ಎಲ್ಲಿಯಾದರೂ ಬಾಂಬ್ ಸ್ಪೋಟಗೊಂಡರೆ ಅದರ ಪೂರ್ವಾಪರ ತಿಳಿಯದೆ ಯಾವುದೋ ಇಸ್ಲಾಮಿಕ್ ಹೆಸರಿನ ಸಂಘಟನೆಗಳ ಮೇಲೆ ಹೊರಿಸಿ ಮುಸ್ಲಿಮರನ್ನು ಸಂಶಯದಿಂದ ನೋಡುವಂತಾಗಿಸುವುದು ಮಾಧ್ಯಮದವರಿಗೆ ಪರಿಪಾಠವಾದಂತಿದೆ.ಜನತೆಯ ಮನಸ್ಸಿನಿಂದ ನಿನ್ನೆಯ ಬಾಂಬ್ ಸ್ಪೋಟದ ಭಯ ಮರೆಯಾಗುವ ಮುನ್ನವೇ ಅದು ಯಾವುದೋ ಅಬ್ದುಲ್ಲ ಖಾನ್ ಅನ್ನುವ ಹೆಸರಿನಲ್ಲಿ ಈ ಮೈಲ್ ರವಾನೆಯಾಗುತ್ತದೆ.ಬಾಂಬ್ ಸ್ಪೋಟದ ಬೆದರಿಕೆಯನ್ನು ಹಾಕುತ್ತಾನೆ ಮೂಡಬಿದ್ರೆ ಆಳ್ವಾಸ್ ಕಾಲೇಜಿಗೆ,ಅದಲ್ಲದೆ ನನ್ಜೊತೆ 600 ಯುವಕರ ಪಡೆ ಇದೆಯೆಂದು.ಮೊದಲೇ ಒಂದು ಸಮುದಾಯವನ್ನು ಗುರಿಯಾಗಿಸಿ ವರದಿ ಬಿತ್ತರಿಸುವ ಮಾಧ್ಯಮಗಳಿಗೆ ಒಬ್ಬ ಮುಸ್ಲಿಮನ ಹೆಸರು ಕೇಳಿಸಿದಾಗ ಆಹಾರ ದೊರಕಿದಂತಾಯ್ತು.ವರ್ಣರಂಜಿತವಾದ ವರದಿಗಳನ್ನು ಬಿತ್ತರಿಸಲು ಪ್ರಾರಂಭಿಸಿದವು..!!ಕಾನೂನು ಪಾಲಕರ ಸಮಯೋಚಿತವಾದ ತನಿಖೆಯಿಂದ ಈ ಮೇಲ್ ಕಳುಹಿಸಿದವನು ಅಬ್ದುಲ್ಲ ಖಾನ್ ಅಲ್ಲ ಅದು ಸತೀಶ್ ಅಂತ ಗೊತ್ತಾದದ್ದೇ ತಡ ಕ್ಷಣ ಮಾತ್ರದಲ್ಲಿ ಆತನನ್ನು ಮಾನಸಿಕ ರೋಗಿಯನ್ನಾಗಿಸಿ ಬಿಟ್ಟರು...!!!ಇಷ್ಟೆಲ್ಲಾ ಜ್ವಲಂತವಾದ ಸಮಸ್ಯೆಗಳು ಸಮಾಜದಲ್ಲಿ ತಲೆದೂರುತ್ತಾ ಇರುವಾಗ ಒಬ್ಬ ಮಾನಸಿಕ ರೋಗಿಯಾದವನಿಗೆ ತನ್ನಈ ಮೇಲ್ ಖಾತೆಯಿಂದ ಅನ್ಯ ಸಮುದಾಯದ ಯುವಕನ ಹೆಸರಲ್ಲಿ ಇಂತಹ ಮೇಲ್ ಕಳುಹಿಸಲು ಸಾಧ್ಯನಾ...??ಇಂತಹ ಮಾನಸಿಕ ರೋಗಿಗಳನ್ನು ಸೂಕ್ತವಾಗಿ ತನಿಖೆಗೊಳಪಡಿಸಿದರೆ ಇನ್ನಷ್ಟು ಮಾನಸಿಕ ರೋಗಿಗಳನ್ನು ಪತ್ತೆಹಚ್ಚಲು ಸಾಧ್ಯವಾದೀತು.ಅಂದು ಪ್ರದೀಪ್,ಇಂದು ಸತೀಶ್..ನಾಳೆ ಇನ್ನೊಬ್ಬ ಮಾನಸಿಕ ರೋಗಿ ಬೆಳಕಿಗೆ ಬರುವುದಕ್ಕಿಂತ ಮುಂಚೆ ಕಾನೂನು ಪಾಲಕರು ಜಾಗೃತರಾಗಬೇಕಿದೆ.ಮಾನಸಿಕ ಅಸ್ವಸ್ಥತೆ ದೇಶದ ಶಾಂತಿ,ಸೌಹಾರ್ದತೆಗೆ ಮಾರಕವಾಗದಿರಲಿ.

ಸ್ನೇಹಜೀವಿ ಅಡ್ಕ

0 comments:

Post a Comment

 
Design by Free WordPress Themes | Bloggerized by - Free Blogger Themes | @javtl