Monday, 23 March 2015

ಕಣ್ಣಿದ್ದೂ ಕುರುಡಾದ ಮನುವಾಣಿ..!

ಬೇಬಿ ನಿರ್ಭಯಾಳ  
ಬದುಕಿಗೆ ಬೆಳಕನ್ನು ನೀಡಲು  
ಮೊಂಬತ್ತಿಯ ಹಿಡಿದು  
ಬೀದಿಗಿಳಿಯಿತು ಜನ ಸಮೂಹ  
 
ಉದಯವಾಣಿಯೆಂಬ  
ಕೋಮುವಾಣಿ ಗೆ  
ಕಾಣಲಿಲ್ಲ ಪುಟ್ಟ  
ಮಗುವಿನ ಕಣ್ಣೀರು  
 
ಸುಳ್ಳು ಸುದ್ಧಿ ಹರಡಿ  
ವಿಕೃತ ಸುಖ ಪಡುವ  
ಚಾಳಿ ಇನ್ನೂ ಬಿಟ್ಟಿಲ್ಲ  
ಈ ವಾಣಿ  
 
ಪತ್ರಿಕಾ ಧರ್ಮವನ್ನು  
ಮರೆತು, ಜನರನ್ನು  
ದಾರಿ ತಪ್ಪಿಸುವ  
ಈ ವಾಣಿ ನಮಗೇಕೆ?  
 
ಸುಳ್ಳು ಸುದ್ದಿ ಹರಡುವ  
ಪತ್ರಿಕೆಯನ್ನು  
ಪ್ರಶ್ನಿಸುವ ವ್ಯವಸ್ಥೆ  
ದೇಶದಲ್ಲಿ ಇಲ್ಲವೇ?  
 
ನಿರ್ಭಯಾಳ ಬದುಕಿನಲ್ಲಿ  
ಚೆಂಡಾಟವಾಡಿದ ಕ್ರೂರಿಗಳ  
ಬೆನ್ನ ಹಿಂದೆ, ಉದಯವಾಣಿ  
ಇರಬಹುದೇ? - ಒಂದು ಸಂಶಯ  
 
                    - ಷಾ ಕುದ್ರಡ್ಕ


Posted by ಪ್ರತಿದಿನ ಪ್ರತಿಕ್ಷಣ

ಪತ್ರಿಕಾ ಧರ್ಮ ಮರೆತ ಉದಯವಾಣಿ..!

ಪತ್ರಿಕಾ ವರದಿಗಳು ಎಷ್ಟು ನಿಷ್ಪಕ್ಷವಾಗಿರುತ್ತವೆ ಎಂಬುದಕ್ಕೆ ಪುಟ್ಟ ಬಾಲೆ ನಿರ್ಭಯಳ ಮೇಲೆ ಜರುಗಿದ ಲೈಂಗಿಕ ದೌರ್ಜನ್ಯವನ್ನು ಖಂಡಿಸಿ ಮಂಗಳೂರಿನ ಪ್ರಜ್ಞಾವಂತ ಜನರು ನಡೆಸಿದ ಮೋಂಬತ್ತಿ ಜಾಥಾವನ್ನು ತಿರುಚಿ ವರದಿ ಮಾಡಿದ ಉದಯವಾಣಿ ಪತ್ರಿಕೆಯೇ ಸಾಕ್ಷಿ.

ಬೇಬಿ ನಿರ್ಭಯಳಿಗಾಗಿ ಮಂಗಳೂರಿನ ಸಾವಿರಾರು ಪ್ರಜ್ಞಾವಂತ ಜನರು ಜಾತಿ ಮತ ಬೇಧವನ್ನು ಮರೆತು ಒಂದಾದರು. ಮೌನವಾಗಿ ಮೋಂಬತ್ತಿ ಹಿಡಿದು ಜಾಥಾ ನಡೆಸಿದರು. ಇದು ಮಂಗಳೂರಿನಲ್ಲಿರುವ ಎಲ್ಲರಿಗೂ ತಿಳಿದ ವಿಷಯ. ಅನೇಕ ಪತ್ರಿಕೆಗಳಲ್ಲೂ, ಇಂಟರ್ನೆಟ್ ಮಾಧ್ಯಮಗಳಲ್ಲೂ ಇದರ ವರದಿ ಪ್ರಕಟವಾಗಿದೆ.

ಆದರೆ ಮಣಿಪಾಲದಿಂದ ಪ್ರಕಟವಾಗುವ ಮಂಗಳೂರಿನ ಕೋಮುವಾದಿ ಪತ್ರಿಕೆಗೆ ಈ ಸತ್ಯವನ್ನು ಅರಗಿಸಿಕೊಳ್ಳಲಾಗಲಿಲ್ಲ. ಮೋಂಬತ್ತಿ ಜಾಥಾವನ್ನು ಇವರ ವರದಿಗಾರರು ಕಂಡಿದ್ದಾರೆ. ಫೋಟೋ ಕೂಡ ಕ್ಲಿಕ್ಕಿಸಿದ್ದಾರೆ. ಆ ಫೋಟೋ ಅನ್ನು ತಮ್ಮ ಪತ್ರಿಕೆಯಲ್ಲೂ ಮುದ್ರಿಸಿದ್ದಾರೆ. ಆದರೆ ಆ ಫೋಟೋಗೆ ನೀಡಿದ ಕ್ಯಾಪ್ಶನ್ ಹೇಗಿತ್ತು ಗೊತ್ತೇ? ಯುವ ಐ ಎ ಎಸ್ ಅಧಿಕಾರಿ ಡಿ.ಕೆ. ರವಿ ಅವರ ನಿಗೂಢ ಸಾವಿನ ಬಗ್ಗೆ ಸರಕಾರದ ಧೋರಣೆಯನ್ನು ಖಂಡಿಸಿ ಹಾಗೂ ಉನ್ನತ ಮಟ್ಟದ ತನಿಖೆಗೆ ಆಗ್ರಹಿಸಿ ವಿದ್ಯಾರ್ಥಿಗಳ ಸಂಘಟನೆ ನಡೆಸಿದ ಮೋಂಬತ್ತಿ ಜಾಥಾ !!!

ಮಾನವೀಯತೆ ನಶಿಸಿ ಹೋದ ವ್ಯಕ್ತಿಯಿಂದಲೇ ಹೊರತು ಇನ್ನಾರಿಂದಲೂ ಇಂತಹ ವರದಿ ಪ್ರಕಟಿಸಲು ಸಾಧ್ಯವಿಲ್ಲ. Respect my Childhood ಎಂಬ ಫಲಕವನ್ನು ಕೈಯಲ್ಲಿ ಹಿಡಿದಿರುವ ಮಕ್ಕಳು ಡಿಕೆ ರವಿಗಾಗಿ ಪ್ರತಿಭಟನೆ ಮಾಡುತ್ತಿದ್ದಾರೆಂದು ಹೇಳಲು ಇವರಿಗೆ ಸ್ವಲ್ಪವಾದರೂ ಬುದ್ಧಿಯೆಂಬುದು ಇಲ್ಲವೇ? ಎಲ್ಲಿಯ ತನಕ ಈ ಪೀತ ಪತ್ರಿಕೆಗಳಿಗೆ ಜನರು ಸಾಮಾಜಿಕ ಬಹಿಷ್ಕಾರ ಹಾಕುವುದಿಲ್ಲವೋ ಅಲ್ಲಿಯ ತನಕ ಸಮಾಜದಲ್ಲಿ ನೆಮ್ಮದಿಯಿರದು.

ಸತ್ಯಸಾರಥಿ


Posted by ಪ್ರತಿದಿನ ಪ್ರತಿಕ್ಷಣ

ಕೋಮುವಾಣಿಯ ಅಚಾತುರ್ಯ..!?

ದಕ್ಷಿಣ ಕನ್ನಡ ಜಿಲ್ಲೆಯ ತೊಕ್ಕೊಟ್ಟಿನಲ್ಲಿ ಇನ್ನೂ ಸಹ ಪ್ರಪಂಚವನ್ನೇ ಸರಿಯಾಗಿ ನೋಡದ ಅಪ್ರಾಪ್ತ ಪ್ರಾಯದ ಬಾಲೆಯೊಂದನ್ನು ವಿಕ್ರತ ಕಾಮಿ ಮಧುಕರ ಎಂಬಾತ ತನ್ನ ಕಾಮ ತೀಟೆಯನ್ನು ತೀರಿಸಲು ಉಪಯೋಗಿಸಿದ್ದನು.ಈ ಪ್ರಕರಣವು ಇಲ್ಲಿನ ಹೇಸಿಗೆಗೆಟ್ಟ ಸರಕಾರ ಮತ್ತು ನೀತಿಗೆಟ್ಟ ಮಾಧ್ಯಮಕ್ಕೆ ದೊಡ್ಡ ಸುದ್ಧಿಯಾಗದಿದ್ದರೂ ಅದೆಷ್ಟೋ ಪೋಷಕರ ನಿದ್ದೆಗೆಡಿಸಿತು.ಇದರ ವಿರುದ್ಧ ಧ್ವನಿ ಎತ್ತದಿದ್ದರೆ ಇಂದು ಆ ಮಗುವಿಗೆ ಆದ ಅನ್ಯಾಯ ನಾಳೆ ನಮ್ಮ ಮನೆಯ ಮಕ್ಕಳಿಗೂ ಆಗಬಹುದು ಎಂದು ಮನಗೊಂಡು ಮಂಗಳೂರಿನ ಸಮಾನ ಮನಸ್ಕರೆಲ್ಲಾ ಜೊತೆಗೂಡಿ "ಜಸ್ಟಿಸ್ ಪಾರ್ ಬೇಬಿ ನಿರ್ಭಯ" ಎಂಬ ನಾಮದೊಂದಿಗೆ ಮೊನ್ನೆ ಶನಿವಾರ  ಸಾವಿರಾರು ಜನರ ಭಾಗವಹಿಸುವಿಕೆಯಲ್ಲಿ ಶಾಂತಿಯುತ್ತ ಮೊಂಭತ್ತಿ ಪ್ರತಿಭಟನೆಯನ್ನು ನಡೆಸಿ ರಾಷ್ಟ್ರಾದಾದ್ಯಂತ ಗಮನ ಸೆಳೆದರು.
          ಆದರೆ ಕೋಮುವಾಣಿ ಎಂಬ ಬಿರುದನ್ನು ಪಡೆದಿರುವ ಉದಯವಾಣಿ ಪತ್ರಿಕೆಗೆ ಮಾತ್ರ ಈ ವಿಷಯ ಗೊತ್ತೇ ಇಲ್ಲಾ ಅಂತ ಕಾಣುತ್ತೆ.ಮೊನ್ನೆ ನಡೆದ ಮೊಂಬತ್ತಿ ಪ್ರತಿಭಟನೆಯ ಭಾವ ಚಿತ್ರವನ್ನು ಪ್ರಕಟಿಸಿ ಅದನ್ನು ಡಿ.ಕೆ. ರವಿಯವರ ಪ್ರಕರಣಕ್ಕೆ ತಿರುಚಲು ಪ್ರಯತ್ನಿಸುತ್ತಿದೆ,ಇದಕ್ಕೆ ಪ್ರಮುಖ ಕಾರಣ ಅನ್ಯಾಯಕ್ಕೊಳಗಾದ ಆ ಮಗು ಮುಸ್ಲಿಮ್ ಸಮುದಾಯಕ್ಕೊಳಪಟ್ಟಿತ್ತು.

ಇಂಥಹ ಸಂಧರ್ಭದಲ್ಲೂ ಸಹ ತನ್ನ ಕೋಮು ವಿಕ್ರತಿಯನ್ನು ತೋರಿಸುವ ಇಂಥಹ ನೀತಿಗೆಟ್ಟ ಪತ್ರಿಕೆಗಳನ್ನು ನಾಡಿನ ಪ್ರತಿಯೊಬ್ಬರೂ ಸಹ ಬಹಿಷ್ಕರಿಸಬೇಕಾಗಿದೆ.ಅನೇಕ ಬಾರಿ ಸುಳ್ಳು ಸುದ್ಧಿಯನ್ನು ಪ್ರಕಟಿಸಿ ಕರಾವಳಿಯ ಜನರ ಕೋಮು ಬಾವನೆಗಳನ್ನು ಕೆರಳಿಸಿ  ಅದೆಷ್ಟೋ ಕೋಮುಗಲಭೆಯನ್ನು ಉಂಟುಮಾಡಿದಂತಹ ಕುಖ್ಯಾತಿಯನ್ನು ಪಡೆದಿದೆ ಈ ಉಗ್ರವಾಣಿ ಪತ್ರಿಕೆ.

          ಇಲ್ಲಿ ಗಮನಿಸಬೇಕಾದ ಪ್ರಮುಖ ಅಂಶವೇನೆಂದರೆ ಡಿ.ಕೆ.ರವಿಯವರ ಪ್ರಕರಣಕ್ಕೆ ಸಂಬಂದಿಸಿದಂತೆ ಮಂಗಳೂರಿನಲ್ಲಿ ಎಲ್ಲಿಯೂ ಸಹ ಮೊಂಬತ್ತಿ ಪ್ರತಿಭಟನೆ ನಡೆದೆ ಇಲ್ಲ.ಎಲ್ಲಿಯಾದರೂ ದಾರಿ ಹೋಕ ನಾಯಿಗಳು ವಿಸರ್ಜಿಸಿದರೂ  ಪೋಟೊ ತೆಗೆದು ಅದನ್ನೇ ಪ್ಲ್ಯಾಶ್ ನ್ಯೂಶ್ ಅಂತ ಪ್ರಕಟಿಸುವ ಕೋಮು ವಾಣಿ ಉದಯವಾಣಿಯಂತಹ ಹಲವು ಕೋಮುವಾದಿ ಪತ್ರಿಕೆಗಳು ಇವತ್ತು ತನ್ನ ಪತ್ರಿಕಾ ಧರ್ಮವನ್ನು ಮರೆತಂತಿದೆ.

          ಸಮಾಜದಲ್ಲಿ ನಡೆಯುತ್ತಿರುವ ಅನಾಚಾರಗಳ ಸತ್ಯಾಸತ್ಯತೆಯನ್ನು ಪ್ರಕಟಿಸಲು ಎಡವಿ ಸದಾ ಸುಳ್ಳು ಸುದ್ದಿಯನ್ನು ಪ್ರಕಟಿಸುತ್ತಿರುವ ದುಷ್ಟ ಶಕ್ತಿಗಳೊಂದಿಗೆ ಕೈ ಜೋಡಿಸಿರುವ ಇಂಥಹ ಹೊಲಸು ಪತ್ರಿಕೆಗಳ ವಿರುದ್ಧ ಸಾರ್ವಜನಿಕರು ಆದಷ್ಟು ಬೇಗ ಎಚ್ಚೆತ್ತುಕೊಳ್ಳಲಿ

ಮಹಮ್ಮದ್ ಅನ್ವರ್
Justice#for#Baby#Nirbhaya


Posted by ಪ್ರತಿದಿನ ಪ್ರತಿಕ್ಷಣ

Thursday, 19 March 2015

ಅರಣ್ಯ ರೋಧನವಾದ ಮಂಗಳೂರು ಅತ್ಯಾಚಾರ ಪ್ರಕರಣ..!

"ಮುಗ್ಧ ಹಸುಳೆಯನ್ನು ಅತ್ಯಾಚಾರಗೈದು ರೌದ್ರಾವತಾರ ತೋರಿದ ಕಾಮುಕನ ಬಂಧನಕ್ಕಾಗ್ರಹಿಸಿ, ನ್ಯಾಯಕ್ಕಾಗಿ  ಸ್ಟೇಷನ್ ಮೆಟ್ಟಿಲೇರಿದ ಯುವಕರನ್ನೇ, ಒಳ ದಬ್ಬಿ ರಾಟೆಯೆತ್ತಿದ, ಸಂಘ ಪರಿವಾರದ ಅಡಿಯಾಳುಗಳಂತೆ ವರ್ತಿಸುವ ಮಂಗಳೂರು ಪೋಲೀಸ್ ವಿಭಾಗದ ಅಧಿಕಾರಿಗಳ ವಿರುದ್ದ ಯಾವುದೇ ರೀತಿಯ ಕಾನೂನು ಕ್ರಮ ಜರುಗಿಸಲಾಗದ ಮಿನಿಸ್ಟರ್ ಎಂದು ಸುತ್ತಾಡುವ ಊರಿನವನೇ ಆದ ಗಂಡಸುತನವಿಲ್ಲದವನಿಂದ ಏನು ಮಾಡಲು ಸಾಧ್ಯ"..!?

ಹೀಗೆ ಪ್ರಶ್ನಿಸಿದ್ದು ನಾನಲ್ಲ..,

ನಿನ್ನೆ ಪ್ರಾಯಸ್ತರಿಬ್ಬರಲ್ಲಿ ಮಸೀದಿಯ ಅಧ್ಯಕ್ಷರೋರ್ವರು ಮಾತನಾಡುವುದು ನನಗೆ ಕಿವಿಗೆ ಬಿತ್ತು..! ಈ ಹಿಂದಿನಿಂದಲೂ ಕಾಂಗ್ರೆಸ್ ಪರ ಕೆಲಸ ಮಾಡಿ ಸಮಾಜದಲ್ಲಿ ಗೌರವಾನ್ವಿತರೆನಿಸಿಕೊಂಡಿದ್ದ ಅವರ ಮಾತು ಕೇಳಿ ನಾನು ಒಮ್ಮೆಲೇ ಆವಕ್ಕಾಗಿ ಹೋದೆನು..

ಅವರೊಂದಿಗೆ ಪ್ರತಿ ಚುನಾವಣೆಯ ಸಮಯದಲ್ಲೂ ನಾನು ಹಾಗೂ ಸಂಗಡಿಗರು ಅದೆಷ್ಟೋ ಬಾರಿ ಹಗಲಿರುಳೆನ್ನದೆ ಪಕ್ಷಕ್ಕಾಗಿ ಕೆಲಸ ಮಾಡಿದ್ದೇವೆ..

ಹಾಗೇ ಅವರ ಮಾತು ಮುಂದುವರೀತಿತ್ತು..
ನಮ್ಮ ಮಿನಿಸ್ಟರ್ ಮೇಲೆ ಇವರಿಗೆ ಏನೋ ಅಸಮಾಧಾನ ಇದ್ದುದರಿಂದಲೆ ಹೀಗೆಲ್ಲ ಹೇಳುತ್ತಿದ್ದಾರೆ ಅಂದುಕೊಂಡು ನಾನು ಕೂಡಾ ಸುಮ್ಮನಿದ್ದೆ..

ಆದರೆ ಅದಾಗಲೇ ಪ್ರತಿ ವಾಟ್ಸಾಪ್ ಗ್ರೂಪ್ಗಳಲ್ಲಿ ಹಸುಳೆಯ ಅತ್ಯಾಚಾರದ ಆರೋಪ, ಪ್ರತ್ಯಾರೋಪಗಳು ಹರಿದಾಡುತ್ತಿರುವುದನ್ನು ಕಂಡು, ಮಗುವಿನ ಹೆಸರಲ್ಲೂ ರಾಜಕೀಯ ಮಾಡುತ್ತಿದ್ದಾರಲ್ಲ ಎಂದು ನನ್ನ ಮನಸ್ಸಿನೊಳಗೆ ಚುಚ್ಚುತ್ತಿದ್ದವು..

ಆದರೆ ನಾನು ಕಂಡು ಕೊಂಡ ಹಾಗೆ ಒಂದಂತು ನಿಜ, ಎಲ್ಲೋ ಒಂದು ಕಡೆ ನಮ್ಮ ಮಿನಿಸ್ಟರ್ ಅವರ ಸೋಷಿಯಲ್ ಮೀಡಿಯೇಟರ್ಗಳಾಗಿ ವರ್ತಿಸುತ್ತಿರುವ ಜನರೇ ಅವರ ಭವಿಷ್ಯಕ್ಕೆ ಧಕ್ಕೆಯಾಗುತ್ತಿದ್ದಾರೆ.

ಇಂದು ಮಿನಿಸ್ಟರ್ ಅವರ ವಿರುದ್ದ ಕೇಳಿ ಬರುವ ಆರೋಪಗಳು ಬಹುತೇಕ ಅವರಿಂದಾಗಿಯೇ ಆಗಿದೆ. ಕಂಡದ್ದನ್ನು, ಉಂಡದನ್ನೂ, ಕಕ್ಕಿದ್ದನ್ನೂ ನೆಕ್ಕಿದ್ದನ್ನೂ ಅತಿಯಾಗಿ ಫೋಟಾಯಿಸಿ ಅನಾವಶ್ಯಕ ವಾರ್ತೆ ಮಾಡುವ ಚೇಳಗಳಿಂದ ಖಂಡಿತವಾಗಿಯೂ ಮಿನಿಸ್ಟರ್ ಅವರ ರಾಜಕೀಯ ಭವಿಷ್ಯಕ್ಕೆ ತೊಡಕಾಗಲಿದೆ..
ಅದೂ ಅಲ್ಲದೆ ಉಳ್ಳಾಲದಲ್ಲಿ ನಡೆದ ಅತ್ಯಾಚಾರ ಪ್ರಕರಣವನ್ನು ಸುಳ್ಳು ಎಂದು ನಿರೂಪಿಸಲು ಬಹುತೇಕ ಇಂತಹ ಚೇಳುಗಳು ಹರಸಾಹಸ ಪಟ್ಟಿರುವುದು ಎಲ್ಲಾ ವಾಟ್ಸಾಪ್ ಗ್ರೂಪ್ಗಳಲ್ಲಿ ಎದ್ದು ಕಾಣುತ್ತಿತು.. ಹಾಗೆ ನೋಡಿದರೆ ಮಿನಿಸ್ಟರ್ ಅವರನ್ನು ತನ್ನ ಕರ್ತವ್ಯದಿಂದ ನುಣುಚಿಕೊಳ್ಳುವಂತೆ ಮಾಡಲು ಇವರುಗಳೇ ಕಾರಣ. ಮಾಡಬೇಕಾದ ಕಾರ್ಯಗಳನ್ನು ಮಾಡದೆ, ಅನಾವಶ್ಯಕ ಕಾರ್ಯಗಳನ್ನ ಪ್ರಚುರಪಡಿಸುವ ಇವರುಗಳ ತಂತ್ರ ಎಷ್ಟು ಸರಿಯೋ ದೇವನೇ ಬಲ್ಲ.

ಇನ್ನು ಕೆಲ ಪರದೇಷದಲ್ಲಿ ಕೂತ ಮಿನಿಸ್ಟರ್ ಅಭಿಮಾನಿಗಳು, ಮಿನಿಸ್ಟರ್ ಸ್ವಿಚ್ ಆಫ್ ಮಾಡಿರಲಿಲ್ಲ, ಮಗುವಿಗೆ ಡೆಸ್ಕ್ ಬಿತ್ತು, ಅಂತೆ ಕಂತೆಗಳ ಮಹಾ ಮಾಹಾಪೂರವನ್ನೇ ಹರಿದು ಬಿಡುತ್ತಿದ್ದರು..

ಆದರೆ ನಿಜ ಸಂಗತಿಯ ವಿಷ್ಲೇಶಿಸಿದ ನಾನೂ ಕೆಲವು ಸತ್ಯಗಳನ್ನು ಕಂಡುಕೊಂಡೆ.

ಒಬ್ಬ ಅರೋಪಿಯನ್ನು ರಕ್ಷಿಸಲು ಅಧಿಕಾರದಲ್ಲಿದ್ದುಕೊಂಡೇ ಹೆಣಗಾಡಿದ ಪ್ರಯತ್ನದ ಅರ್ಧದಷ್ಟು ಕೂಡ, ಮಗುವಿನ ಪರ ನ್ಯಾಯಕ್ಕೆ ಪ್ರಯತ್ನಿಸಲಸಾಧ್ಯವಾದುದು ಮಿನಿಸ್ಟರ್ಗಳಾಗಿರುವ ನಮ್ಮ ಸಮುದಾಯಿಕರ ಅಧೋಗತಿಯೇ ಸರಿ..

ಇಂತಹ ಪೊಳ್ಳು ಜಾತ್ಯಾತೀತತೆ ಇದ್ದರೇನು ಇಲ್ಲದಿದ್ದರೇನು, ನನ್ನ ಅಭಿಮಾನಿ ಸಹೋದರರೆ ಚಿಂತಿಸಿ..

ಅಧಿಕಾರದಲ್ಲಿದ್ದುಕೊಂಡೇ
ಇನ್ನು, ಶಾಲೆಯ ಹೆಸರು ಹಾಳಾಗದಿರಲು ಅರಂಭದಲ್ಲೇ ಮ್ಯಾನೇಜ್ಮೆಂಟ್ ಮಾಡಿದ ಕಸರತ್ತು, ಆರೋಪಿಯನ್ನು  ರಕ್ಷಿಸಲೆತ್ನಿಸಿದ ಸಂಘ ಪರಿವಾರಿಗಳ ಕೈವಾಡ, ತೊಕ್ಕೋಟು ಹಾಸ್ಪಿಟಲ್ ಕುತಂತ್ರ, ಪೋಲೀಸ್ ಇಲಾಖೆಯ ದೌರ್ಜನ್ಯ, ಸ್ಥಳೀಯ ವಾರ್ತಾ ವಾಹಿನಿಗಳ ಇಬ್ಬಗೆ ನೀತಿ, ಸ್ಥಳೀಯ ಕೆಲ ಕಾಂಗ್ರೆಸಿಗರ ಪೊಳ್ಳು ಜಾತ್ಯಾತೀತತೆಯ ನಾಟಕತ್ವ, ನಾಮ್ಕೆ ವಾಸ್ತೆ ಸೋಷಿಯಲ್ ಮೀಡಿಯೆಟರ್ಗಳ ಸುಳ್ಳು ನಿರೂಪಣಾ ಕಂತೆಗಳ ನಡುವಿನಲ್ಲಿ ಏನೂ ತಿಳಿಯದ ಹಸುಳೆಯ ಮುಗ್ದ ಕೂಗು ತಿಳಿಯದಾದುದು ನಿಜವಾಗಿಯೂ  ಖೇದಕರ. ಖಂಡಿತವಾಗಿಯೂ ಪ್ರಕರಣ ತಿರುಚಲು ಹೆಣಗಾಡಿದವರೆ ಆ ಮಗು ನಿಮ್ಮ ಮನೆಯದ್ದೋ, ನಿಮ್ಮ ಸಹೋದರಿಯೋ, ಹೆಂಡತಿಯೋ, ತಾಯಿಯೋ, ಮಗಳೋ ಆಗಿರುತ್ತಿದ್ದಲ್ಲಿ ಏನಾಗುತಿತ್ತು.?!

ಹಾಗೆ ಇದೊಂದು ಹೆತ್ತವರಿಗೆ ಸಮಾಧಾನ ಪಡಿಸುವ ಪ್ರಕರಣವಾಗಿ ಮುಕ್ತಾಯಗೊಳಿಸದೆ, ಸಮಾಜಕ್ಕೆ ಪಾಠವಾಗಬೇಕಾದಂತಹ ತೀರ್ಪಾಗಿ, ಸಮಾಜದಲ್ಲಿ ಇಂತಹ ನೀಚತನ ಮರುಕಳಿಸದಂತೆ ಪ್ರತಿಯೊಬ್ಬರೂ ಜಾತಿ-ಮತ ಭೇದ ಮರೆತು ಪ್ರಯತ್ನಿಸಬೆಕಾಗಿದೆ. ಅಂತಹ ವಿಕೃತ ಕಾಮುಕರ ಬಗ್ಗೆ ಸಮಾಜದಲ್ಲಿ ಜಾಗ್ರತೆ ಹುಟ್ಟಿಸಿ, ಸಮಾಜದಲ್ಲಿರುವ ಅಂತಹ ತೊಡಕುಗಳನ್ನು ಹೋಗಲಾಡಿಸಲು ಯಾರನ್ನೂ ಕಾಯದೇ, ಸ್ವಯಂ ಹೋಗಲಾಡಿಸಲು ಪಣ ತೊಟ್ಟ ಉತ್ತಮ ಸಮುದಾಯವೊಂದು ಹೊರ ಹೊಮ್ಮಲಿ ಎಂದು ಆಷಿಸುತ್ತಾ...!

ಇತೀ ತಮ್ಮ ಹಿತೈಷಿ,
ಜಾವೇದ್ ಉಳ್ಳಾಲ..

Tuesday, 24 February 2015

ಕುನಾನ್-ಪುಷ್ಪೋರಾ.., ಬೆಲಿಯೇ ಎದ್ದು ಹೊಲ ಮೇದ ದಿನ..!

ಫೆಬ್ರವರಿ 23 ಹಾಗೂ 24  1991 ಬೆಲಿಯೇ ಎದ್ದು ಹೊಲ ಮೇದ ದಿನ, ದೇಶ ಕಾಯುವ ಯೋಧರ ಕಾಮವಾಂಛೆಗೆ ಸಿಲುಕಿ ಕಾಶ್ಮೀರದ ಸಹೋದರಿಯರ ಆರ್ತನಾದ ಮುಗಿಲು ಮುಟ್ಟಿದ ಕರಾಳ ರಾತ್ರಿ, ಆ ಸಹೋದರಿಯರ ಕಣ್ಣೀರು ದಾಳ್ ಸರೋವರದಂತೆ ಧಾರೆಯಾಗಿ ಉಕ್ಕಿ ಹರಿದ ರಾತ್ರಿ ..
ಹೌದು 24 ವರ್ಷಗಳ ಹಿಂದಿನ  ಇದೇ ರಾತ್ರಿ ಭಾರತದ ಸ್ವರ್ಗ ಎಂಬ ಖ್ಯಾತಿಯ ಭಗವಂತನ ವಿಶೇಷ ಒಲುಮೆಯ ಸುಂದರ ನಾಡು ಕಾಶ್ಮೀರದ ಕುನಾನ್ ಪೋಶ್ಪುರ ಎಂಬ ಗ್ರಾಮದ ನಾಗರೀಕರು ಅಪಾಯದ ಮುನ್ಸೂಚನೆ ಇಲ್ಲದೆ  ಎಂದಿನಂತೆ ಸುಖನಿದ್ರೆಗೆ ಜಾರಿದ್ದರು
ಮದ್ಯರಾತ್ರಿಯಾಗುತ್ತಿದ್ದಂತೆ ಬಂದೂಕು ಹಿಡಿದ ಭಾರತದ ಸೈನಿಕರು ಪೋಸ್ಫರ ಗ್ರಾಮ ಬಹುತೇಕ ಮನೆಗಳಿಗೆ ನುಗ್ಗಿ ಮೊದಲು ಅಲ್ಲಿದ್ದ ಪುರುಷರನ್ನೆಲ್ಲಾ ಬೂಟುಗಾಳಿನಿಂದ ಒದ್ದು ತಮ್ಮ ಸೇನಾ ವಾಹನಗಳಲ್ಲಿ ಬಂದಿಯಾಗಿಸಿದವರೇ ನಂತರ ಮುಸ್ಲಿಂ ಮನೆಯೊಳಕ್ಕೆ ನುಸುಳಿ ಮದುವೆಯಾದ ಮಹಿಳೆಯರನ್ನು ಮದುವೆಯಾಗ ಶಾಲಾ ಕಾಲೇಜು ಕಳಿಯುತ್ತಿರುವ ಯುವತಿಯರನ್ನು ಅಮಾನುಷವಾಗಿ ಸಾಮೂಹಿಕ ಅತ್ಯಾಚಾರವೆಸಗುತ್ತಾರೆ ಸಹಾಯಕ್ಕಾಗಿ ಆ ಸಹೋದರಿಯರ ಕೂಗಾಟ ಚೀರಾಟಗಳೆಲ್ಲವೂ ಗಾಳಿಯಲ್ಲೇ ಲೀನವಾದವು.
ಇ ಪೈಶಾಚಿಕ ಕೃತ್ಯ ವ್ಯವಸ್ಥಿತವಾಗಿ ಮಾಧ್ಯಮಗಳು ಮುಚ್ಚಿಹಾಕಿದವು ಬೆಣ್ಣೆ ಕದ್ದು ತಿಂದವರ ಮೂತಿಗಳನ್ನು ಪತ್ರಿಕೆಗಳು ಪತ್ರಿಕೆಯ ಸಹಾಯದಿಂದ ಒರೆಸಿ ಜಗತ್ತು ಕಾಣದ ಹಾಗೆ ವಿಶ್ವಕ್ಕೆ ತಿಳಿಯದ ಹಾಗೆ ನೋಡಿಕೊಂಡವು.
ಇಂದಿಗೂ ಕಾಶ್ಮೀರದ ಆ ಹಳ್ಳಿಯ ಹೆಂಗಸರನ್ನು ಯಾರೂ ಮದುವೆಯಾಗುತ್ತಿಲ್ಲ ಅದೇಷ್ಟೋ ಸಹೋದರಿಯರು ಸೈನಿಕರ ಇ ರಾಕ್ಷಸೀ ಕೃತ್ಯದಿಂದ ಸರ್ವಸ್ವವವನ್ನೂ ಕಳೆದುಕೊಂಡಿದ್ದಾರೆ ಇವತ್ತಿಗೂ ಕಣ್ಣೀರಲ್ಲದೆ ಮಾತುಗಳು ಬರುತ್ತಿಲ್ಲ ಅವರ ಬಾಯಿಯಿಂದ.
ಕಳೆದ ಒಂದು ದಿವಸಗಳ ಮೊದಲು ದಿ ಹಿಂದು ಎಂಬ ಪತ್ರಕರ್ತನೊಡನೆ ಭಾರತದ ಸೈನಿಕರಿಂದ ಅತ್ಯಾಚಾರವಾದ ಕಾಶ್ಮೀರದ 48 ವಯಸ್ಸಿನ ನತದೃಷ್ಟ ಸಂತ್ರಸ್ತ ಮಹಿಳೆಯೊಬ್ಬಳು ನಾನು ನನ್ನ ಇಪ್ಪತ್ತನಾಲ್ಕನೆಯ ವಯಸ್ಸಿನಲ್ಲಿಯೇ ಮರಣ ಹೊಂದಿದ್ದೇನೆ ಆದರೂ ನಿಮ್ಮ ಮುಂದೆ ಇಗ ಬಂದು ನಿಂತಿರುವುದು ನ್ಯಾಯ ಸಿಗುವುದೋ ಎಂಬ ಆಸೆಯಿಂದ ಮಾತ್ರ ಎಂದಾಗ ಅಲ್ಲಿದ್ದವರ ಕಣ್ಣುಗಳು ಮಂಜಾದವು.
ಇ ಸಹೋದರಿಯರಿಗೆ ನ್ಯಾಯ ಸಿಗಲು ಪ್ರತಿಯೊಬ್ಬನು ಶಬ್ದಿಸಬೇಕು ಅನ್ಯಾಯಿ ಅಕ್ರಮಿಯಾದ ಅಡಳಿತಗಾರನ ವಿರುದ್ಧ ಹೊರಾಡಬೇಕು.
ಇದು ಸತ್ಯ ಘಟನೆ ಇ ಲೇಖನಕ್ಕೆ ದೇಶದ್ರೋಹದ ಮುದ್ರೆಯೊತ್ತಿ ನನ್ನನ್ನು ಕಂಬಿ ಎಣಿಸುವ ಹಾಗೆ ಮಾಡುವ ಅಲೋಚನೆಗಳಿದ್ದಲ್ಲಿ ಸ್ವಾಗತ ನ್ಯಾಯಕ್ಕಾಗಿ ಅನ್ಯಾಯದ ವಿರುದ್ಧ ಅತ್ಯಾಚಾರ ವಿರುದ್ಧ ಅಕ್ರಮಿಗಳ ವಿರುದ್ಧ ಶಬ್ದಿಸಿದ್ದಕ್ಕೆ ಜನರನ್ನು ಎಚ್ಚರಿಸಿದ್ದಕ್ಕೆ ಅದೆಷ್ಟೋ ಕಾಲ ಕಂಬಿ ಎಣಿಸುವುದಕ್ಕೆ ನಾನು ಸಿದ್ದನಿದ್ದೇನೆ, ಜೊತೆಗೆ ಇ ಲೇಖನವನ್ನು ನ್ಯಾಯಕ್ಕಾಗಿ ಯಾರ ಸಹಾಯವಿಲ್ಲದೆ ಸೃಷ್ಟಿಕರ್ತನೊಂದಿಗೆ ಕಣ್ಣೀರಿಡುತ್ತಿರುವ ಕಾಶ್ಮೀರದ ಸಂತ್ರಸ್ಥ ಆ ನನ್ನ ಸಹೋದರಿಯರಿಗೆ ಅರ್ಪಿಸುತ್ತಿದ್ದೇನೆ.

��...ಜಿಯಾಂಗ್ ತ್ಸೋ..����

Tuesday, 30 December 2014

ಬಯೋತ್ಪಾದಕ ಮಾಧ್ಯಮಗಳು..!

ಇನ್ನೆಷ್ಟು ಮಾನಸಿಕ ಅಸ್ವಸ್ಥರು ಹುಟ್ಟಲಿರುವರೋ....??!!ನಿನ್ನೆಯಷ್ಟೇ ಸಮಾಜ ಘಾತುಕ ಭಯ ಉತ್ಪಾದಕರ ಬಾಂಬ್ ದಾಳಿಗೆ ಬೆಂಗಳೂರು ಬೆಚ್ಚಿಬಿದ್ದಿತ್ತು.ಒಬ್ಬರು ಅಮಾಯಕ ಮಹಿಳೆ ಇವರ ದುಷ್ಕೃತ್ಯಕ್ಕೆ ಬಲಿಯಾಗಿದ್ದರು.ಬಾಂಬ್ ಸ್ಪೋಟವಾದಾಗ ಸ್ಪೋಟದ ಸಮಗ್ರತೆಯನ್ನು ಸಚಿತ್ರವಾಗಿ ವರದಿ ಮಾಡಬೇಕಾದಂತಹ ಮಾಧ್ಯಮಗಳು ಕಾನೂನುಪಾಲಕರಿಗಿಂತ ತ್ವರಿತವಾಗಿ ಅಪರಾಧಿಗಳನ್ನು ಸೆರೆಹಿಡಿಲು ತಾಮುಂದು,ತಾಮುಂದುಅನ್ನುವಂತೆ ಪೈಪೋಟಿ ನಡೆಸಿದವು ಪೋಲೀಸ್ಉನ್ನತಾಧಿಕಾರಿಗಳುಸ್ಪೋಟದ ಹಿಂದಿರುವ ಶಕ್ತಿಗಳು ಯಾರೆಂದು ಗೊತ್ತಿಲ್ಲ ಎಂದು ಹೇಳಿಕೆ ನೀಡುವಾಗ ಇಲ್ಲಿನ ಮಾಧ್ಯಮಗಳಿಗೆ ಈ ಸಲ ಅದು ಯಾವುದೋ "ಅಲ್ ಉಮ್ಮ " ಅನ್ನುವ ಸಂಘಟನೆಯ ಕೈವಾಡವೆಂದು ಪ್ರಸಾರ ಮಾಡಿಯೇ ಬಿಟ್ಟಿತು...!!ಅದರಲ್ಲಿ ಅಚ್ಚರಿ ಪಡುವಂತದ್ದೇನಿಲ್ಲ, ಎಲ್ಲಿಯಾದರೂ ಬಾಂಬ್ ಸ್ಪೋಟಗೊಂಡರೆ ಅದರ ಪೂರ್ವಾಪರ ತಿಳಿಯದೆ ಯಾವುದೋ ಇಸ್ಲಾಮಿಕ್ ಹೆಸರಿನ ಸಂಘಟನೆಗಳ ಮೇಲೆ ಹೊರಿಸಿ ಮುಸ್ಲಿಮರನ್ನು ಸಂಶಯದಿಂದ ನೋಡುವಂತಾಗಿಸುವುದು ಮಾಧ್ಯಮದವರಿಗೆ ಪರಿಪಾಠವಾದಂತಿದೆ.ಜನತೆಯ ಮನಸ್ಸಿನಿಂದ ನಿನ್ನೆಯ ಬಾಂಬ್ ಸ್ಪೋಟದ ಭಯ ಮರೆಯಾಗುವ ಮುನ್ನವೇ ಅದು ಯಾವುದೋ ಅಬ್ದುಲ್ಲ ಖಾನ್ ಅನ್ನುವ ಹೆಸರಿನಲ್ಲಿ ಈ ಮೈಲ್ ರವಾನೆಯಾಗುತ್ತದೆ.ಬಾಂಬ್ ಸ್ಪೋಟದ ಬೆದರಿಕೆಯನ್ನು ಹಾಕುತ್ತಾನೆ ಮೂಡಬಿದ್ರೆ ಆಳ್ವಾಸ್ ಕಾಲೇಜಿಗೆ,ಅದಲ್ಲದೆ ನನ್ಜೊತೆ 600 ಯುವಕರ ಪಡೆ ಇದೆಯೆಂದು.ಮೊದಲೇ ಒಂದು ಸಮುದಾಯವನ್ನು ಗುರಿಯಾಗಿಸಿ ವರದಿ ಬಿತ್ತರಿಸುವ ಮಾಧ್ಯಮಗಳಿಗೆ ಒಬ್ಬ ಮುಸ್ಲಿಮನ ಹೆಸರು ಕೇಳಿಸಿದಾಗ ಆಹಾರ ದೊರಕಿದಂತಾಯ್ತು.ವರ್ಣರಂಜಿತವಾದ ವರದಿಗಳನ್ನು ಬಿತ್ತರಿಸಲು ಪ್ರಾರಂಭಿಸಿದವು..!!ಕಾನೂನು ಪಾಲಕರ ಸಮಯೋಚಿತವಾದ ತನಿಖೆಯಿಂದ ಈ ಮೇಲ್ ಕಳುಹಿಸಿದವನು ಅಬ್ದುಲ್ಲ ಖಾನ್ ಅಲ್ಲ ಅದು ಸತೀಶ್ ಅಂತ ಗೊತ್ತಾದದ್ದೇ ತಡ ಕ್ಷಣ ಮಾತ್ರದಲ್ಲಿ ಆತನನ್ನು ಮಾನಸಿಕ ರೋಗಿಯನ್ನಾಗಿಸಿ ಬಿಟ್ಟರು...!!!ಇಷ್ಟೆಲ್ಲಾ ಜ್ವಲಂತವಾದ ಸಮಸ್ಯೆಗಳು ಸಮಾಜದಲ್ಲಿ ತಲೆದೂರುತ್ತಾ ಇರುವಾಗ ಒಬ್ಬ ಮಾನಸಿಕ ರೋಗಿಯಾದವನಿಗೆ ತನ್ನಈ ಮೇಲ್ ಖಾತೆಯಿಂದ ಅನ್ಯ ಸಮುದಾಯದ ಯುವಕನ ಹೆಸರಲ್ಲಿ ಇಂತಹ ಮೇಲ್ ಕಳುಹಿಸಲು ಸಾಧ್ಯನಾ...??ಇಂತಹ ಮಾನಸಿಕ ರೋಗಿಗಳನ್ನು ಸೂಕ್ತವಾಗಿ ತನಿಖೆಗೊಳಪಡಿಸಿದರೆ ಇನ್ನಷ್ಟು ಮಾನಸಿಕ ರೋಗಿಗಳನ್ನು ಪತ್ತೆಹಚ್ಚಲು ಸಾಧ್ಯವಾದೀತು.ಅಂದು ಪ್ರದೀಪ್,ಇಂದು ಸತೀಶ್..ನಾಳೆ ಇನ್ನೊಬ್ಬ ಮಾನಸಿಕ ರೋಗಿ ಬೆಳಕಿಗೆ ಬರುವುದಕ್ಕಿಂತ ಮುಂಚೆ ಕಾನೂನು ಪಾಲಕರು ಜಾಗೃತರಾಗಬೇಕಿದೆ.ಮಾನಸಿಕ ಅಸ್ವಸ್ಥತೆ ದೇಶದ ಶಾಂತಿ,ಸೌಹಾರ್ದತೆಗೆ ಮಾರಕವಾಗದಿರಲಿ.

ಸ್ನೇಹಜೀವಿ ಅಡ್ಕ

Friday, 26 December 2014

ಸಂಭ್ರಮ..!

ಭಾರತ ಸಂಭ್ರಮಿಸುತ್ತಿದೆ... 
ಚಂದ್ರನಲ್ಲಿಗೆ ತಾನು ಮುಟ್ಟಿದೆನೆಂದು. 
 
ಮೂರು ಹೊತ್ತು ಊಟವಿಲ್ಲದ 
ಕಡು ಬಡವನನ್ನು ಮೆಟ್ಟಿ.. 
ಮನೆಯಿಲ್ಲದೆ ಮರದಡಿಯಲ್ಲಿ 
ಮಲಗುವ ಕಂದಮ್ಮಗಳ ತುಳಿದು.. 
ಎಳೆ ಮಗುವನ್ನು ಬೆನ್ನಿಗೆ ಕಟ್ಟಿ 
ದುಡಿಯುವ ಹೆಣ್ಣು ಮಗಳ ಕಡೆಗಣಿಸಿ.. 
ತಾನು ಸೀದಾ ಹೋದದ್ದು ಚಂದ್ರನಲ್ಲಿಗೆ... 
 
ಭೂಮಿಯಲಿ ಸಿಗದ ಮನಶಾಂತಿ 
ಚಂದ್ರನಲ್ಲಿ ಹುಡುಕುವ ತವಕವೇ ? 
ಮುಂದುವರಿದ ವಿಶ್ವ ರಾಷ್ಟ್ರಗಳಿಗೆ 
ಸರಿ ಸಾಟಿಯಾಗಿ ನಿಲ್ಲುವ ಹಂಬಲವೇ ? 
ಕೂಡಿಟ್ಟ ಜನರ ಸಂಪತ್ತನ್ನು 
ಮುಗಿಸಿ ಬಿಡುವ ತಂತ್ರವೇ ? 
      ಗೊತ್ತಿಲ್ಲ! 
ಅಂತೂ ನಾವು ತಲುಪಿದೆವು ಚಂದ್ರನಲ್ಲಿಗೆ... 
 
ಭಾರತ ಸಂಬ್ರಮಿಸುತ್ತಿದೆ ... 
ಚಂದ್ರನಲ್ಲಿಗೆ ತಾನು ಮುಟ್ಟಿದೆ ನೆಂದು... 
 
                      @sha kudradka @

 
Design by Free WordPress Themes | Bloggerized by - Free Blogger Themes | @javtl