Showing posts with label A.P Usthad Karnataka Yatre. Show all posts
Showing posts with label A.P Usthad Karnataka Yatre. Show all posts

Thursday, 25 September 2014

ಮತ ಪಂಗಡಗಳೆಲ್ಲೆಯನ್ನು ಮೀರಬೇಕಾದ ಮಾನವತಾ ಯಾತ್ರೆ


ಮನುಕುಲವನ್ನು ಗೌರವಿಸಿ ಎಂಬ ಧ್ಯೇಯ ವಾಕ್ಯದೊಂದಿಗೆ ದಕ್ಷಿಣ ಭಾರತದ ಸುಪ್ರಸಿದ್ಧ ಉಲಮರಾದಂತಹ ಶೈಖುನಾ ಕಾಂತಪುರಂ ಅಬೂಬಕ್ಕರ್ ಮುಸ್ಲಿಯಾರ್ ಉಸ್ತಾದರು ಕೈಗೊಂಡಿರುವ ಕರ್ನಾಟಕ ಯಾತ್ರೆಯು ಮುಸ್ಲಿಮ್ ಸಮುದಾಯದಲ್ಲಿ ಒಂದು ಬಿರುಸಿನ ಬದಲಾವಣೆಯ ಗಾಳಿಯನ್ನು ಬೀಸಲಿ.....

*ಸುನ್ನಿ,ಸಲಫಿ,ಎಸ್.ಕೆ.ಎಸ್.ಎಸ್.ಎಫ್,ಎಸ್.ಎಸ್.ಎಫ್,ಜಮಾತುಲ್ ಇಸ್ಲಾಂ,ತಬ್ಲೀಗ್ ಮುಂತಾದ ಹಲವು ಪಂಗಡಗಳಾಗಿ ಛಿದ್ರ ಛಿದ್ರಗೊಂಡಿರುವ ನಮ್ಮ ಸಮುದಾಯವು ಒಂದಾಗಲಿ

*ಪರಸ್ಪರ ಸಲಾಮ್ ಹೇಳಲು ತಾತ್ಸಾರ ಮನೋಭಾವನೆ ತೋರುತ್ತಿದ್ದಂತಹ ಜನರು ಒಬ್ಬರನ್ನೊಬ್ಬರು ಪರಸ್ಪರ ಆಲಂಗಿಸಿಕೊಂಡು ಸಲಾಮ್ ಹೇಳುವಂತಾಗಲಿ

*ನಾನು ಆ ಪಂಗಡದವನು ನಾನು ಈ ಪಂಗಡದವನು ಅಂತ ಹೇಳುತ್ತಿದ್ದ ಜನರು ಎಲ್ಲಾ ಪಂಗಡಬೇದ ಗಳನ್ನು ಮರೆತು ನಾವೆಲ್ಲರೂ ಮುಸ್ಲಿಮರು ಎಂದು ಹೆಮ್ಮೆಯಿಂದ ಹೇಳುವಂತಾಗಲಿ

*ಆ ಪಂಗಡದವನು ಸ್ವರ್ಗಕ್ಕೆ ಹೋಗಲಾರ ನಮ್ಮ ಪಂಗಡದವರಿಗೆ ಮಾತ್ರ ಸ್ವರ್ಗ ನಿಶ್ಚಿತ ಎಂದು ಬೀಗುತಿದ್ದ ಜನರು ಯಾರಿಗೆ ಸ್ವರ್ಗ ಯಾರಿಗೆ ನರಕ ಎಂದು ನಿಶ್ಚಯಿಸುವವನು ಅಲ್ಲಾಹನ ಹೊರತು ಬೇರೆ ಯಾರು ಅಲ್ಲ ಎಂಬ ಸತ್ಯವನ್ನು ಅರಿಯುವಂತಾಗಲಿ

*ಕುರ್ ಹಾನ್ ಮತ್ತು ಹದೀಸಿನ ಗಂಧ ಗಾಳಿ ಗೊತ್ತಿಲ್ಲದೆ ಯಾರೋ ಏನೋ ಹೇಳಿ ಕೊಟ್ಟದ್ದನ್ನೇ ಇಸ್ಲಾಂ ಎಂದು ನಂಬಿದ್ದ ಜನರು ಕುರ್ ಹಾನ್ ಮತ್ತು ಹದೀಸಿನ ನೈಜ ಅರ್ಥವನ್ನು ಕಲಿತು ಒಬ್ಬ ನಿಜವಾದ ಮುಸ್ಲಿಮನಾಗುವಂತಾಗಲಿ

*ನಮ್ಮ ಈ ಒಗ್ಗಟ್ಟನ್ನು ನೋಡಿ ಕೆಲವುಮುಸ್ಲಿಮ್ ವಿರೋಧಿ ಸಂಘಟನೆಗಳು ಅಸೂಯೆ ಪಡುವಂತಾಗಲಿ

      ಆದರೆ ಇದೆಲ್ಲವೂ ಸಾಧ್ಯನಾ?ಎಂಬ ಪ್ರಶ್ನೆ ನಮ್ಮಲ್ಲಿ ಎದುರಾಗಬಹುದು.ಖಂಡಿತವಾಗಿಯೂ ಸಹ ನಮ್ಮಲ್ಲಿ ಇಂತಹ
ಒಂದು ಬದಲಾವಣೆ ಸಾದ್ಯವಿದೆ ಏಕೆಂದರೆ ಸೋದರ ಪ್ರೇಮವ ಜಗತ್ತಿಗೆ ಸಾರಿದ ಮಹಮ್ಮದ್ ಮುಸ್ತಫ (ಸ.ಅ) ರವರ ಅನುಯಾಯಿಗಲು ನಾವು.ನಮ್ಮಿಂದ ಅಸಾಧ್ಯವೆಂಬುದು ಯಾವುದೂ ಇಲ್ಲ.

                 ಇನ್ಶಾಅಲ್ಲಾ ಇಂತಹ ಒಂದು ಬದಲಾವಣೆಯ ಪ್ರಾರಂಭವು ನಮ್ಮ ಉಸ್ತಾದರ ಕರ್ನಾಟಕ ಯಾತ್ರೆಯಿಂದ ಆರಂಭಗೊಳ್ಳಲಿ ಹಾಗು ಉಸ್ತಾದರಿಗೆ ಇನ್ನೂ ಸಹ ಇಂತಹ ಒಳ್ಳೆ ಒಳ್ಳೆಯ ದೀನೀ ಕಾರ್ಯವನ್ನು ಮಾಡಲು ಸರ್ವಶಕ್ತನಾದ ಅಲ್ಲಾಹನು ಅನುಗ್ರಹಿಸಲಿ..............ಆಮೀನ್ ಯಾ ರಬ್ಬಲ್ ಆಲಾಮೀನ್

ಅಷ್ಟ ದಿಕ್ಕುಗಳಲ್ಲಿ ಮೊಳಗಲಿ ಅಲ್ಲಾಹು ಅಕ್ಬರ್ ಎಂಬ ತಕ್ಬೀರ್

ಮಹಮ್ಮದ್ ಅನ್ವರ್ ಮಠ

 
Design by Free WordPress Themes | Bloggerized by - Free Blogger Themes | @javtl