Saturday, 6 September 2014

ಅಪ್ಪಟ ದೇಶಪ್ರೇಮಿ, ಕೋಮುವಾದಿಗಳ ದುಸ್ವಪ್ನ..! ಅಕ್ಬರುದ್ದೀನ್ ಉವೈಸಿ


ಇವತ್ತು ಹಲವು ಮಾದ್ಯಮಗಳು ಮಾಡುವ ಹೇಸಿಗೆ ಕೆಟ್ಟ ಕೆಲಸಗಳಿಂದಾಗಿ ಮಾದ್ಯಮ ಜಗತ್ತು
ತನ್ನ ವರ್ಚಸ್ಸನ್ನು ಕಳೆದು ಕೊಳ್ಳುತ್ತಾ ಬಂದಿದೆ....ಒಬ್ಬ ನಿಜವಾದ ಅಪರಾದಿಯನ್ನು ನಿರಪರಾದಿಯನ್ನಾಗಿಯೂ,ಒಬ್ಬ ನಿರಪರಾದಿಯನ್ನು ಅಪರಾದಿಯನ್ನಾಗಿಯೂ ಬಿಂಬಿಸುವಲ್ಲಿ ಈ ಮಾದ್ಯಮಗಳು ಪ್ರಮುಖ ಪಾತ್ರವನ್ನು ವಹಿಸುತ್ತದೆ...ಇದರ ಪ್ರಭಾವವು ನಮಗೆ ಇಂದು ನಮ್ಮ ಕಣ್ಣ ಮುಂದೆಯೇ ಗೋಚರಿಸುತ್ತಾ ಇದೆ,ಆರ್.ಎಸ್.ಎಸ್ ನವರಿಂದ ತುಂಬಿ ತುಳುಕುತ್ತಿರುವ ಮಾದ್ಯಮ ಜಗತ್ತಿನ ದುಷ್ಟ ಕುತಂತ್ರಗಳಿಂದಾಗಿ ಇವತ್ತು ಅದೆಷ್ಟೋ ಮುಸ್ಲಿಂ ಯುವಕರು ಶಂಕಿತ ಭಯೋತ್ಪಾದಕರು ಎಂಬ ನೆಲೆಯಲ್ಲಿ ಬಂದಿತರಾಗಿ ಯಾವುದೇ ವಿಚಾರಣೆಯನ್ನು ಸಹ ಎದುರಿಸಲಾಗದೆ ತಮ್ಮ ಜೀವನದ ಅತ್ಯಮೂಲ್ಯ ಕ್ಷಣಗಳನ್ನು ಕಳೆದುಕೊಳ್ಳುತ್ತಿದ್ದಾರೆ..
    ನಿಮಗೆ ಗೊತ್ತಿರಬಹುದು ಕೆಲವು ದಿನಗಳ ಹಿಂದೆ ಮುಸ್ಲಿಮರ ಪ್ರಭಾವಿ  ನಾಯಕ ಹೈದರಾಬಾದ್ ಸಂಸದ ಜನಾಬ್ ಅಸದುದ್ದೀನ್ ಒವೈಸಿ ಯವರನ್ನು ಕೆಲವು ಮಾಧ್ಯಮಗಳು ಸುಳ್ಳು ಸುದ್ದಿಗಳನ್ನು ಬಿತ್ತರಿಸಿ ದೇಶ ದ್ರೋಹಿ ಎಂಬ ಹಣೆಪಟ್ಟಿಯನ್ನು ಕಟ್ಟಲು ಪ್ರಯತ್ನ ಪಟ್ಟವು....ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧ ನಡೆದರೆ ಭಾರತದ ೨೫ ಕೋಟಿ ಮುಸ್ಲಿಮರು ಪಾಕಿಸ್ತಾನದ ಸೈನ್ಯದೊಂದಿಗೆ ಸೇರಿ ಭಾರತದ ವಿರುದ್ಧ  ಯುದ್ದ ಮಾಡುತ್ತೇವೆ ಎಂಬ ಹೇಳಿಕೆಯನ್ನು ನೀಡಿದ್ದಾರೆಂಬ ಸುಳ್ಳಿನ ಕಂತೆಯನ್ನು ಬಿತ್ತರಿಸಲಾಯಿತು.ಅಸದುದ್ದೀನ್ ಒವೈಸಿ ಯವರಂತಹ ನಾಯಕರಿಗೆ ಇಂತಹ ದುರ್ಗತಿ ಬಂದರೆ ಇನ್ನು ಒಬ್ಬ ಸಾಮಾನ್ಯ ಮುಸ್ಲಿಮನ ಸ್ಥಿತಿ ಗತಿಯೇನು??
ಪ್ರಜಾಪ್ರಭುತ್ವದ ಕಾವಲು ನಾಯಿಯಂತೆ ಕೆಲಸ ಮಾಡಬೇಕಾಗಿದ್ದಂತಹ ಇಂತಹ ಮಾದ್ಯಮಗಳಿಗಿಂತ ತನ್ನ ಕಾಮ ತೃಷೆಯನ್ನು ತೀರಿಸಿಕೊಳ್ಳಲು ಹೊತ್ತಲ್ಲದ ಹೊತ್ತಿನಲ್ಲಿ ಎಲ್ಲಂದರಲ್ಲಿ ಗಂಟು ಹಾಕಿ ಕೊಳ್ಳುವ ನಮ್ಮ ಊರಿನ ಬೊಗ್ಗಿ ಮತ್ತು ಬೊಗ್ರ ನಾಯಿಗಳು ಎಷ್ಟೋ ವಾಸಿ ಅಲ್ಲವೇ?
ಪಾಕಿಸ್ತಾನದ ನ್ಯೂಸ್ ವಾಹಿನಿಯೊಂದು ಪ್ರಾಯೋಜಿಸಿದಂತಹ ಇಂಡೋ-ಪಾಕ್ ಡಿಬೆಟ್ ಕಾರ್ಯಕ್ರಮವೊಂದರಲ್ಲಿ ಅಂದಿನ ಕೇಂದ್ರ ಸಚಿವರಾಗಿದ್ದಂತಹ ಶ್ರೀ.ಮಣಿಶಂಕರ್ ಅಯ್ಯರ್ ಮತ್ತು ಬಿ.ಜೆ.ಪಿ ಸಂಸದ ಕೀರ್ತಿ ಅಝಾದ್ ರೊಂದಿಗೆ ಸೇರಿ ಭಾರತದ ಪ್ರತಿನಿಧಿಯಾಗಿ ಭಾಗವಹಿಸಿದಂತಹ ಜನಾಬ್ ಅಸದುದ್ದೀನ್ ಒವೈಸಿ ಯವರು ಪಾಕಿಸ್ತಾನದ ಕೆಲವು ಸಚಿವರುಗಳು ಕೇಳಿದ ಪ್ರಶ್ನೆಗಳಿಗೆ ತನ್ನ ಮಾತಿನ ಚಾಟಿ ಏಟಿನ ಮೂಲಕ  ಉತ್ತರಿಸಿದ ಒಂದು ಸಣ್ಣ ವೀಡಿಯೋ ತುಣುಕನ್ನು ನಾನು ಕೆಳಗೆ ಅಪ್ ಲೋಡ್ ಮಾಡಿದ್ದೇನೆ.....ದಯವಿಟ್ಟು ಈ ವೀಡಿಯೋವನ್ನು ವೀಕ್ಷಿಸಿ ನೀವೇ ನಿರ್ಧರಿಸಿ ಇಂತಹ ವ್ಯಕ್ತಿಗಳಿಂದ ಇಂತಹ ದೇಶ ಪ್ರೇಮಿಗಳಿಂದದೇಶದ್ರೋಹದ ಮಾತುಗಳು ಹೊರಡಲು ಸಾದ್ಯವೇ ಎಂದು..


ಸಂಘ ಪರಿವಾರದವರ ಕುತಂತ್ರದಿಂದಾಗಿ ಭಾರತದ ಮುಸ್ಲಿಮರು ಪಡುತ್ತಿರುವ ಯಾತನೆಯ ಬಗ್ಗೆ ಪಾಕಿಸ್ತಾನದ ಸಚಿವರೊಬ್ಬರು ವಿವರಿಸಿದಾಗ ವಾಸ್ತವವಾಗಿ ಅದು ನಿಜವಾಗಿದ್ದರೂ ಸಹ ತನ್ನ ದೇಶವು ಇನ್ನೊಂದು ರಾಷ್ಟ್ರದೆದುರು ತಲೆ ತಗ್ಗಿಸಬಾರದೆಂಬ ಉದ್ದೇಶದಿಂದ ತನ್ನ ತೀಕ್ಷ್ಣವಾದ ಪ್ರತಿಕ್ರಿಯೆಯ ಮೂಲಕ ಆ ಸಚಿವನ ಬಾಯಿ ಮುಚ್ಚಿಸಿ ನಿಜವಾದ ದೇಶ ಪ್ರೇಮವನ್ನು ಮೆರೆದ ಅಸದುದ್ದೀನ್ ಒವೈಸಿಯವರ ದೇಶ ಪ್ರೇಮವೇ ಇವತ್ತು ಭಾರತದ ಪ್ರತಿಯೊಬ್ಬರಿಗೂ ಮಾದರಿ ಎಂಬುದನ್ನು ಮರೆಯದಿರಿ

ಇಂತೀ
ನಿಮ್ಮ ಸಹೋದರ
ಮಹಮ್ಮದ್ ಅನ್ವರ್ ಮಠ

Monday, 17 June 2013

ಬದಲಾದ ಕೋಟಿಕೆರೆ..! ವಿಟ್ಲ ಜನತೆಯ ಅಚ್ಚುಮೆಚ್ಚಿನ ಈಜು ಕೊಳ...!


kotikere swiming pool renewed, vittal, prathidina.blogspot.in
Kotikere swimming pool, vittal
ವಿಟ್ಲದ ಆಸುಪಾಸುನವರಿಗೆ ಮಳೆ ಬಂತೆಂದರೆ ಸುಗ್ಗಿಯೋ ಸುಗ್ಗಿ, ಸಮೀಪದಲ್ಲಿರುವ ಕೋಟಿಕೆರೆಗೆ ದಾವಿಸಿ ನೀರು ತುಂಬಿದೆಯೋ ಇಲ್ಲವೋ ಎಂದು ನೋಡುತ್ತಲೇ ಇರುತ್ತಾರೆ..! ಈದೀಗ ನೀರು ತುಂಬಿ ತುಳುಕುತ್ತಿರುವ ಕೋಟಿ ಕೆರೆಯಲ್ಲಿ ಜನರೂ ತುಳುಕುತ್ತಿದ್ದಾರೆ. ಚಿಕ್ಕವರು ದೊಡ್ಡವರು ಎಂಬ ಯಾವುದೇ ಬೇದವಿಲ್ಲದೆ ಎಲ್ಲಾ ವರ್ಗದ ಜನರು ಈಜು ಕಲಿಯಲು ಮುಂಜಾನೆ 5 ಗಂಟೆಗೆ ಎದ್ದು ಇಲ್ಲಿ ತಲುಪುತ್ತಾರೆ.  ಮಳೆಯಿರಲಿ ಗಾಳಿ ಯಿರಲಿ ಇಲ್ಲಿನ ಈಜಿನ ಮೋಜಿಗೆ ಪಾರವೇ ಇಲ್ಲ. ಒಮ್ಮೆ ಇಲ್ಲಿಗೆ ಈಜಿಗೆ ಬಂದವರು ಮಾರು ಹೊಗುತ್ತಾರೆ. ಹಿಂದೊಮ್ಮೆ ರಾಜರ ಕಾಲದಲ್ಲಿ ನಿರ್ಮಿತವಾಗಿದ್ದ ಈಜು ಕೊಳ ಎಂದು ಪ್ರತೀತಿಯಿರುವ ಈ ಕೊಳ ಇಂದು ಪುನರ್ ನಿರ್ಮಿತವಾಗಿ ಅದೆಷ್ಟೋ ಜನಗಳಿಗೆ ಈಜು ಕಲಿಸಲು ಈ ವರ್ಷ ಸಜ್ಜಾಅಗಿದೆ.
 ಇನ್ನೇಕೆ ತಡ...?! ಬನ್ನಿ ನೀವು ಕಲಿಯಿರಿ ಉಚಿತವಾಗಿ ಈಜು.. !
ಕೋಟಿಕೆರೆ ಮಸ್ತಿ ..!


Kotikere pond Jumps... vittal.

Saturday, 12 May 2012

ವಿಟ್ಲ ಸರ್ಕಾರಿ ಕಾಲೇಜು ಮೂಲಸೌಕರ್ಯ ವಂಚಿತ,


ಮಹಮ್ಮದ್ ಅಲಿ ವಿಟ್ಲ.
ವಿಟ್ಲ: ಪ್ರಸ್ತುತ ವಿಟ್ಲದಲ್ಲಿ ಈ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಕುಳಿತುಕೊಳ್ಳಲು ಸರಿಯಾದ ತರಗತಿಗಳಿಲ್ಲ, ಶೌಚಾಲಯವಿಲ್ಲ, ಆವರಣಗೋಡೆಯಿಲ್ಲ, ಸಭಾಭವನವಿಲ್ಲ, ನಿರ್ಜನ ಪ್ರದೇಶದಲ್ಲಿರುವ ಈ ಕಾಲೇಜಿಗೆ ವಿದ್ಯಾರ್ಥಿಗಳು ೨ ಕಿ.ಮೀ ಕಾಲು ನಡಿಗೆ ಮೂಲಕ ಸಂಚಾರಿಸಬೇಕಾಗಿದೆ. ಸರಿಯಾದ ಕಾಲೇಜು ಕ್ಯಾಂಟಿನ್‌ಯಿಲ್ಲ, ಸರಿಯಾದ ಕ್ರೀಡಾಂಗಣವಿಲ್ಲ, ಇನ್ನೂ ಅನೇಕ ಸಮಸ್ಯೆಗಳಿರುವ ಕಾಲೇಜು ಬಂಟ್ವಾಳ ತಾಲ್ಲೂಕಿನ ವಿಟ್ಲ ಎಂಬ ಪ್ರದೇಶದಲ್ಲಿ ಬೊಬ್ಬೆಕೇರಿ ಎಂಬಲ್ಲಿದೆ. ಅದೇ ವಿಟ್ಲ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಇದು ಮೂಲಸೌಕರ್ಯ ಪಡೆಯುವಲ್ಲಿ ಹಿಂದುಳಿದಿದೆ. ೭೫೦ಕ್ಕಿಂತಲೂ ಅಧಿಕ ವಿದ್ಯಾರ್ಥಿಗಳಿರುವ ಈ ಕಾಲೇಜು ದ.ಕನ್ನಡ ಜಿಲ್ಲೆಯಲ್ಲೇ ಇಂತಹ ದುಸ್ಥಿತಿಯ ಕಾಲೇಜು ಬೇರೆ ಎಲ್ಲಿಯೂ ಕಂಡು ಬರಲು ಸಾಧ್ಯವಿಲ್ಲ. ಬಿ.ಎ, ಬಿ.ಕಾಂ, ಎಂ.ಎಸ್.ಡಬ್ಲ್ಯೂ, ಬಿ.ಎಸ್.ಡಬ್ಲ್ಯೂ, ವ್ಯಾಸಂಗಗಳು ಪ್ರಸ್ತುತ ಇದೀಗ ನಡೆಯುತ್ತಿದೆ. ಈ ಕಾಲೇಜಿಗೆ ಕನ್ಯಾನ, ಬಾಯಾರು, ಕಬಕ, ಪೆರುವಾಯಿ, ಪಕಳಕುಂಜ, ಸಾಲೆತ್ತೂರು. ಬಾಕ್ರಬೈಲು, ಕಲ್ಲಡ್ಕ, ಮುಂತಾದ ಪ್ರದೇಶಗಳಿಂದ ವಿದ್ಯಾರ್ಥಿಗಳು ಇಲ್ಲಿಗೆ ಬರುತ್ತಾರೆ.
೨೦ ವರ್ಷಗಳ ಹಿಂದೆ ಅಂದರೆ ೧೯೯೩ರಲ್ಲಿ ಆರಂಭವಾದ ಈ ಕಾಲೇಜು ಪುತ್ತೂರು ರಸ್ತೆಯ ಕೆ.ಇ.ಬಿ ಬಳಿಯ ಪುರಭವನ ಬಳಿ ಕಾರ್ಯಚರಣೆ ನಡೆಸುತ್ತಿತ್ತು. ಕೆಲ ಜನಪ್ರತಿನಿಧಿಗಳ ಸಹಕಾರದೊಂದಿಗೆ ಅದನ್ನು ೨ ಕಿ.ಮೀ ದೂರದ ವಿಟ್ಲ ಬೊಬ್ಬೆಕೇರಿ ಒಟ್ಟೆಶಾಂತಿ ಬಳಿಗೆ ಸ್ವಂತ ಕಟ್ಟಡಕ್ಕೆ ಸ್ಥಳಾಂತರಗೊಂಡಿತ್ತು. ಆದರೆ ಈ ಜಾಗದ ಕೆಲ ಜಾಗಗಳು ಖಾಸಗಿ ವ್ಯಕ್ತಿಗಳ ಪಾಲಾಗುತ್ತಿದೆ. ಕಾಲೇಜಿನ ಸ್ವಂತ ಜಾಗದಲ್ಲಿ ಮೂರು ತರಗತಿ ಕೊಠಡಿಗಳು, ಪ್ರಾಂಶುಪಾಲರ ಕೊಠಡಿ, ಗ್ರಂಥಾಲಯ ಕೊಠಡಿ, ಉಪನ್ಯಾಸಕರ ಕೊಠಡಿ ಆರಂಭವಾಗಿತ್ತು.
ಕಾಲೇಜಿನ ಸ್ವಲ್ಪ ದೂರದಲ್ಲಿ ದೊಡ್ಡದಾದ ಸಭಾಭವನ ಕಟ್ಟಲಾಗಿದೆ ಅದರಲ್ಲಿ ೬ ತರಗತಿಗಳು ನಡೆಯುತ್ತಿರುತ್ತದೆ. ಅಲ್ಲಿ ಒಂದು ತರಗತಿಯ ಪಾಠ ಪ್ರವಚನ ಇನ್ನೊಂದು ತರಗತಿಗೆ ಕೇಳಿಸುತ್ತದೆ ಇದರಿಂದ  ಪಾಠ ವಿದ್ಯಾರ್ಥಿಗಳಿಗೆ ಅರ್ಥವಾಗುತ್ತಿಲ್ಲ. ಇದರ ಮಹಡಿ ಶೀಟ್‌ನ ತೂತಾಗಿ ಮಳೆಗಾಲದಲ್ಲಿ ನೀರು ಒಳಗಡೆ ಬೀಳುತ್ತದೆ. ಬೇಸಿಗೆಗಾಲದಲ್ಲಿ ಪಾರಿವಾಳ ಹಿಕ್ಕಿನ ಅಭಿಷೇಕ ವಿದ್ಯಾರ್ಥಿಗಳ ಮೈಮೇಲೆ ಬೀಳುತ್ತದೆ, ಇಲ್ಲಿಗೆ ಉಪನ್ಯಾಸಕರು ಒಂದು ಅವಧಿ ತರಗತಿ ಮುಗಿಸಿ ಕಾಲೇಜು ಕಚೇರಿಗೆ ತೆರಳಲು ಅವರಿಗೆ ಅಂದಾಜು ೧೫ ನಿಮಿಷಗಳುಬೇಕು. ಇಲ್ಲಿ ಕಾರ್ಡ್‌ಬೋರ್ಡ್ ಪಾರ್ಟಿಶನ್ ಮಾಡಿ ತರಗತಿಗಳು ನಡೆಯುತ್ತವೆ. ವಿದ್ಯಾರ್ಥಿಗಳು ಸಂಖ್ಯೆಯನ್ನು ಮನದಲ್ಲಿಟ್ಟುಕೊಂಡ ಕೆಲವರು ನೂತನ ಕಟ್ಟಡ ಕಟ್ಟಿಸಲು ಕೈಹಾಕಿದ್ದರು ಆದರೆ ಅದು ಹಣದ ಕೊರತೆಯಿಂದ ಅರ್ಧಕ್ಕೆ ನಿಂತಿದೆ. ಕೆಂಪು ಕಲ್ಲಿನಿಂದ ಕಟ್ಟಲಾದ ಈ ಕಟ್ಟಡ ಅರ್ಧಕ್ಕೆ ನಿಂತ ಪರಿಣಾಮ ಅದೀಗ ಪಾಲುಬಿದ್ದಿದ್ದು, ಅದು ದನಗಳಿಗೆ ಹಾಗೂ ನಾಯಿಗಳಿಗೆ ಆಶ್ರಯತಾಣವಾಗಿದೆ.
ಪದವಿ ವಿದ್ಯಾರ್ಥಿಗಳಿಗೆ ೧೫ ತರಗತಿ ಕೊಠಡಿಗಳು, ೧೨ ಶೌಚಾಲಯ ಕೊಠಡಿಗಳು, ಕನಿಷ್ಠಪಕ್ಷ ೩೦ವಿದ್ಯಾರ್ಥಿಗಳು ಕುಳಿತುಕೊಳ್ಳಲು ಬೇಕಾದಂತಹ ಗ್ರಂಥಾಲಯ ಕೊಠಡಿಗಳುಬೇಕೇಬೇಕು ಎಂದು ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ. ವಾಚ್‌ಮ್ಯಾನ್, ಪಿವನ್, ಗ್ರಂಥಾಲಯ ಸಹಾಯಕ, ವಾಣಿಜ್ಯಶಾಸ್ತ್ರ, ಕಲಾಶಾಸ್ತ್ರ, ಮುಂತಾದ ತರಗತಿಗಳಿ ಉಪನ್ಯಾಸಕರ ಕೊರತೆಯಿದೆ. ಈ ಎಲ್ಲಾ ಸಮಸ್ಯೆಯನ್ನು ಸಂಬಂಧಪಟ್ಟವರು ನಿವಾರಿಸಿದರೆ ಇಲ್ಲಿಯ ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರು ನೆಮ್ಮದಿಯಿಂದ ಇರಲು ಸಾಧ್ಯ ಎಂಬ ಮಾತು ಕೇಳಿ ಬರುತ್ತಿದೆ. ಆದರೆ ಮೇಲಾಧಿಕಾರಿಗಳಿಗೆ ಈ ಸಮಸ್ಯೆಯನ್ನು ಮುಟ್ಟಿಸಲು ಯಾರು ಕೂಡ ಮುಂದೆ ಬರುತ್ತಿಲ್ಲ ಆರೋಪಗಳು ಕೇಳಿಬರುತ್ತಿದೆ.

ಮಾಣಿ ಅಪಘಾತ



ವಿಟ್ಲ: ಸರ್ಕಾರಿ ಬಸ್, ಆಟೋ ರಿಕ್ಷಾ ಹಾಗೂ ಬೈಕ್ ಪರಸ್ಪರ ಅಪಘಾತಕ್ಕೀಡಾದ ಪರಿಣಾಮ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡ ಘಟನೆ ವಿಟ್ಲ ಠಾಣಾ ವ್ಯಾಪ್ತಿಯ ಮಾಣಿ ಜಂಕ್ಷನ್‌ನಲ್ಲಿ ಶನಿವಾರ ಮಧ್ಯಾಹ್ನ ನಡೆದಿದೆ.
 ಪಾಟ್ರುಕೋಡಿ ನಿವಾಸಿ ಜುಬೈರ್(೨೩) ಎಂಬವರು ಗಾಯಗೊಂಡ ಬೈಕ್ ಸವಾರ.
ಪುತ್ತೂರು ಕಡೆಯಿಂದ ಕೆಎಸ್‌ಆರ್‌ಟಿಸಿ ಬಸ್ ಮಂಗಳೂರು ಕಡೆ ತೆರಳುತ್ತಿದ್ದವು ಅದರ ಹಿಂಬಾದಿಯಿಂದ ಬೈಕ್‌ವೊಂದು ಚಲಿಸುತ್ತಿತ್ತು. ಬಸ್ಸಿನ ಮುಂಬಾಗದಲ್ಲಿ ಆಟೋ ರಿಕ್ಷಾ ಚಾಲಕ ಅದನ್ನು ಬದಿಗೆ ನಿಲ್ಲಿಸಲು ಮುಂದದಾಗ ಬಸ್ ಚಾಲಕ ಬ್ರೇಕ್ ಹಾಕಿದ್ದರಿಂದ ಬೈಕ್ ಬಸ್ಸಿನ ಹಿಂಬಾದಿಗೆ ಡಿಕ್ಕಿ ಹೊಡೆದು ಈ ಘಟನೆ ಸಂಭವಿಸಿದೆ. ಗಾಯಾಳುವನ್ನು ಬಂಟ್ವಾಳ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

Monday, 2 April 2012

ಶಾಲಾ ವಾರ್ಷಿಕೋತ್ಸವದ

ಸಾಲೆತ್ತೂರು: ಜಿಲ್ಲೆಯಲ್ಲಿ ೨೫೦ಕ್ಕಿಂತ ಹೆಚ್ಚು ಆಂಗ್ಲ ಮಾಧ್ಯಮ ಶಾಲೆಗಳು ಇದ್ದು, ಇದರಿಂದ ಸರ್ಕಾರದ ಹೊರೆ ಕಡಿಮೆಯಾಗಿದೆ, ಪ್ರತಿಯೊಬ್ಬರು ವಿದ್ಯಾವಂತರಾದರೆ ಬಲಿಷ್ಠ ಸಮಾಜ ನಿರ್ಮಾಣವಾಗಲು ಸಾಧ್ಯ ಎಂದು ಬಂಟ್ವಾಳ ಶಾಸಕ ರಮಾನಾಥ ರೈ ಹೇಳಿದರು.
ಅವರು ಏಪ್ರಿಲ್೧ರ ಭಾನುವಾರ ಸಾಲೆತ್ತೂರು ಪಾಲ್ತಾಜೆ ಸಿರಿ ವಿದ್ಯಾಲಯ ಆಂಗ್ಲ ಮಾಧ್ಯಮ ಶಾಲೆ ಇದರ ನೂತನ ಕೊಠಡಿಗಳ ಉದ್ಘಾಟನೆ ಹಾಗೂ ಶಾಲಾ ವಾರ್ಷಿಕೋತ್ಸವದ ಸಭಾಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಹಿಂದಿನ ಕಾಲದಲ್ಲಿ ಗುರುಕುಳ ಶಿಕ್ಷಣವು ಅರಮನೆ ಅರಸರಿಗೆ ಮಾತ್ರ ಸೀಮಿತವಾಗಿದ್ದವು, ಆದರೆ ಇದೀಗ ಅಂತಹ ಪರಿಸ್ಥಿತಿ ಹೋಗಿ ಎಲ್ಲಾರೂ ಸಮಾನ ಶಿಕ್ಷಣವನ್ನು ಪಡೆಯುವಂತಾಗಿದ್ದು, ಶೇಕಡ ೧೦೦ರಲ್ಲಿ ೯೯ಜನ ಶಿಕ್ಷಣವನ್ನು ಪಡೆಯುತ್ತಿದ್ದಾರೆ  ಎಂದರು. ಸಿಇಟಿಯಂತಹ ಪರೀಕ್ಷೆಗಳನ್ನು ದುರ್ಬಲ ಹಾಗೂ ಬಡ ವಿದ್ಯಾರ್ಥಿಗಳಿಗೆ ಬರೆಯಲು ಸರ್ಕಾರ ಅವಕಾಶವನ್ನು ಮಾಡಿಕೊಟ್ಟಿದ್ದರಿಂದ ಯಾರು ಕೂಡ ಶಿಕ್ಷಣದಿಂದ ವಂಚಿತರಾಗುವುದಿಲ್ಲ ಎಂದು ಅವರು ತಿಳಿಸಿದರು.
   ಶಾಲೆಯ ನೂತನ ಕೊಠಡಿಗಳ ಉದ್ಘಾಟನೆಯನ್ನು ಉದ್ಯಮಿ ನಡಿಗುತ್ತು ತಿಮ್ಮಪ್ಪ ನಾಯ್ಕ್ ಅವರು ನೆರವೇರಿಸಿದರು. ಸಭಾಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೊಳ್ನಾಡು ಗ್ರಾ.ಪಂ ಅಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ ಕುಲಾಲು ವಹಿಸಿದ್ದರು. ಶಾಲಾ ಕೊಠಡಿ ನಿರ್ಮಾಣಕ್ಕೆ ಸಹಾಯ ಧನ ಒದಗಿಸಿದ ನಡಿಗುತ್ತು ತಿಮ್ಮಪ್ಪ ನಾಯ್ಕ್, ಕಟ್ಟಡ ಕಾಮಗಾರಿ ಮಾಡಿದ ರವಿರಾಜ್, ಶ್ರೀನಿವಾಸ ಅವರ ಪರವಾಗಿ ಚಂದ್ರಹಾಸ ರವರನ್ನು ಇದೇ ಸಂದರ್ಭ ಶಾಲಾ ಸಮಿತಿ ವತಿಯಿಂದ ಸನ್ಮಾನಿಸಲಾಯಿತು.
ಜಿಲ್ಲಾ ಪಂಚಾಯಿತಿ ಸದಸ್ಯರಾದ ಎಂ.ಎಸ್ ಮಹಮ್ಮದ್, ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಬಂಟ್ವಾಳ ಸ್ಥಾಯಿ ಸಮಿತಿ ಅಧ್ಯಕ್ಷ ಮಾಧವ ಮಾವೆ, ಸದಾನಂದ ಶೆಟ್ಟಿ, ಶೀನಪ್ಪ ಆಳ್ವ, ರಾಜೇಶ್ ರೈ ಪಾಲ್ತಾಜೆ, ದೇವಿದಾಸ್ ಶೆಟ್ಟಿ ಪಾಲ್ತಾಜೆ, ಧನಲಕ್ಷ್ಮೀ ಇದ್ದರು.


ಕ್ರಿಕೆಟ್ ಮೈದಾನದಲ್ಲಿ ಮಾರಮಾರಿ.


ಕನ್ಯಾನ:  ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾಟವನ್ನು ವೀಕ್ಷಿಸುತ್ತಿದ್ದ ಸಂದರ್ಭ ಪೂರ್ವ ದ್ವೇಷದ ಹಿನ್ನೆಲೆಯಲ್ಲಿ ತಂಡವೊಂದು ವ್ಯಕ್ತಿಯೊಬ್ಬನ ಮೇಲೆ ಮಾರಕಾಯುಧಗಳಿಂದ ಹಲ್ಲೆ ನಡೆಸಿದ ಘಟನೆ ಕನ್ಯಾನ ಸಮೀಪದ ಗೋಳಿಕಟ್ಟೆ ಎಂಬಲ್ಲಿ ಏರಿಲ್ ೧ರ ಶನಿವಾರ ರಾತ್ರಿ ನಡೆದಿದ್ದು, ಗಾಯಾಳುವಿನ ಸ್ಥಿತಿ ಚಿಂತಾಜನಕವಾಗಿದೆ.
 ಕೇರಳ ಮೂಲದ  ಉಂಬೈ ಎಂಬಾತನೇ ಗಂಭೀರವಾಗಿ ಹಲ್ಲೆಗೊಳಗಾಗಿದ್ದು, ಚಿಂತಾಜನಕ ಸ್ಥಿತಿಯಲ್ಲಿ ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ.  ಕೇರಳದ ಪೈವಳಿಕೆ ನಿವಾಸಿಗಳಾದ ರಿಯಾಝ್, ಹಜೀಜ್ ಹಾಗೂ ನೂರ್ ಷಾ ಎಂಬವರೇ ಹಲ್ಲೆ ನಡೆಸಿದ ಆರೋಪಿಗಳೆಂದು ಗಾಯಾಳು ಆರೋಪಿಸಿದ್ದಾನೆ.
    ಕನ್ಯಾನದಲ್ಲಿ ಶನಿವಾರ ರಾತ್ರಿ  ಮ್ಯಾಕ್ಸಿನ್ ಗೋಳಿಕಟ್ಟೆ ಎಂಬ ಎಂಬ ಸಂಘಟನೆ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾಟದವನ್ನು ಆಯೋಜಿಸಿತ್ತು. ಈ ಪಂದ್ಯಾಟವನ್ನು ವೀಕ್ಷಿಸಲೆಂದು ಉಂಬೈ ತನ್ನ ಸ್ನೇಹಿತ ಜತೆ ಬಂದಿದ್ದ ಎನ್ನಲಾಗಿದೆ. ಅದೇ ಸಂದರ್ಭದಲ್ಲಿ ಆರೋಪಿಗಳಾದ ಪೈವಳಿಕೆ ನಿವಾಸಿಗಳಾದ ರಿಯಾಝ್, ಹಜೀಜ್ ಹಾಗೂ ನೂರ್ ಷಾ ಎಂಬವರು ಕೂಡ ಬಂದಿದ್ದರು. ಈ ಇಬ್ಬರ ತಂಡದ ನಡುವೆ ಈ ಹಿಂದೆಯೂ ಜಗಳವಾಗಿದ್ದವು. ಈ ಬಗ್ಗೆ ಕೇರಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿತ್ತು ಎನ್ನಲಾಗಿದೆ. ಇವರ ನಡುವೆ ಪರಸ್ಪರ ದ್ವೇಷದ ಬೀಜ ಆಗಾಗ ಆರಂಭವಾಗುತ್ತಿತ್ತು. ಇದೇ ಕಾರಣಕ್ಕೆ ಮೂವರ ತಂಡ ಉಂಬೈನೊಂದಿಗೆ ಜಗಳ ತೆಗೆದು ಆತನಿಗೆ ಯದ್ವಾತದ್ವಾ ಹಲ್ಲೆ ನಡೆಸಿದೆ ಎಂದು ಹೇಳಲಾಗಿದೆ. ಘಟನೆಯಲ್ಲಿ ತೀವ್ರವಾಗಿ ತಲೆಗೆ ಗಾಯಗೊಂಡಿದ್ದ ಉಂಬೈಯನ್ನು ಸ್ಥಳೀಯರು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಘಟನೆ ಬಗ್ಗೆ ವಿಟ್ಲ ಪೊಲೀಸ್ ಠಾಣೆಗೆ ದೂರು ನೀಡಿದ್ದು,ರಿಯಾಝ್, ಹಜೀಜ್ ಹಾಗೂ ನೂರ್ ಷಾ ಎಂಬ ಮೂವರ ಮೇಲೆ ಪ್ರಕರಣ ದಾಖಲಾಗಿದೆ.
 .

Sunday, 1 April 2012

ವಾರ್ತಾ ಮಾಧ್ಯಮದ ಮಹತ್ವ



       ಮಾಧ್ಯಮ ರಹಿತ ಸಮಾಜ ಎಂಬುವುದು ಪ್ರಸ್ತುತ ಕಾಲಘಟ್ಟದಲ್ಲಿ ಊಹಿಸಲಾಗದ ಒಂದು ವಿಷಯವಾಗಿದೆ. ಯಾವುದೇ ದೇಶದಲ್ಲಿ ಮಾಧ್ಯಮಕ್ಕೆ ನಿರ್ಭಂಧಗಳನ್ನು ಆ ದೇಶದ ಪ್ರಾಧಿಕಾರವು ವಿಧಿಸಿದೆ ಎಂದರೆ ಅದು ಒಂದು ಸರ್ವಾಧಿಕಾರೀ ಆಡಳಿತವಿರುವ ದೇಶವೆಂದು ಸಾಮಾನ್ಯ ಜ್ಞಾನವಿರುವ ಯಾವುದೇ ವ್ಯಕ್ತಿಯೂ ನಿಸ್ಸಂದೇಹವಾಗಿ ಹೇಳಬಲ್ಲನು. ವಾಸ್ತವದಲ್ಲಿ ವಿಶ್ವದ ಯಾವುದೇ ದೇಶದಲ್ಲಿ ಮಾಧ್ಯಮ ಪ್ರಜಾಪ್ರಭುತ್ವದ ಆಧಾರ ಸ್ತಂಭಗಳಲ್ಲೊಂದು ಎಂದರೂ ತಪ್ಪಾಗಲಾರದು. ದೇಶವೊಂದರ ಆಡಳಿತ ವೈಖರಿಯನ್ನು ಪಕ್ಷತೆಯನ್ನೂ ಜನತೆಯ ಮುಂದಿಡುವುದು ಈಗ ಮಾಧ್ಯಮವಲ್ಲದೇ ಬೇರೆ ಯಾವುದೇ ಅಲ್ಲ ಅಷ್ಟರ ಮಟ್ಟಿಗೆ ಇಂದು ಮಾಧ್ಯಮ ಪ್ರಾಮುಖ್ಯತೆಯನ್ನು ಪಡೆದಿದೆ. 
ಪ್ರಪಂಚದಲ್ಲಿ ಎಲ್ಲಿ ಯಾವುದೇ ಘಟನೆ ನಡೆದಾಗ ಜನರಿಗೆ ವಷ್ಟುನಿಷ್ಟಾ ಸುದ್ದಿಯನ್ನು ಮಟ್ಟಿಸುವಂತಹ ಕೆಲಸವನ್ನು ಅದು ಮಾಡುತ್ತಿದೆ. ಓರ್ವ ರಾಜಕಾರಣಿಯ ಯಶಸ್ವಿಗೆ ಅದು ಸಹಾಯಕವಾಗಿದ್ದು, ಹಾಗೂ ಆತ ಕೆಟ್ಟ ದಾರಿ ಹಿಡಿದಾಗ ಆತನ ವಿನಾಶಕ್ಕೂ ಅದು ಕಾರಣವಾಗಿದೆ. ಇದಕ್ಕೊಂದು ಉದಾಹರಣೆಯೇ ಇತ್ತೀಚಿಗೆ ಬೆಂಗಳೂರಿನ ಸದನದೊಳಗೆ ಬ್ಲೂ ಸಿನಿಮಾ ನೋಡುತ್ತಿದ್ದ ಮೂವರು ಸಚಿವರನ್ನು ತನ್ನ ಕ್ಯಾಮರ ಮೂಲಕ ಖಾಸಗಿ ಚಾನೇಲ್‌ವೊಂದು ಅದನ್ನು ಸೆರೆಹಿಡಿದು ಅದನ್ನು ಜನರಿಗೆ ತೋರಿಸಿದ್ದರಿಂದ ಆ ಮೂವರು ರಾಜೀನಾಮೆ ನೀಡುವಂತೆ ಮಾಡಿದೆ. ಅದಲ್ಲದೇ ಈಜಿಪ್ಟ್‌ನ್ನು ಮೂವತ್ತು ವರ್ಷಗಳ ಕಾಲ ಅಧಿಕಾರ ನಡೆಸಿದ ಸರ್ವಾಧಿಕಾರಿ ಹುಸ್ನಿ ಮುಬಾರಕ್‌ನ ವಿರುದ್ಧ ನಡೆದ ದಂಗೆಯೂ ಆರಂಭವಾದದ್ದು ಅಂತರ್ಜಾಲ ಮಾಧ್ಯಮದಿಂದಾಗಿದೆ. ಮಧ್ಯ ಪ್ರಾಂಚ್ಯದಲ್ಲಿ ನಡೆಯುತ್ತಲೇ ಇರುವ ಸರಕಾರಿ ವಿರೋಧಿ ದಂಗೆಗಳಲ್ಲಿ ಮಾಧ್ಯಮದ ಸಜೀವ ಸಾನಿಧ್ಯವೂ ಇದ್ದೇ ಇದೆ.
 ಕಳೆದ ಅದೇಷ್ಟು ವರ್ಷಗಳಿಂದ ಪ್ರಮಾಣಿಕತೆಯಿಂದ ಕೆಲಸ ಮಾಡುತ್ತಿದ್ದಂತಹ ಪತ್ರಿಕೆ ಹಾಗೂ ದೃಶ್ಯ ಮಾಧ್ಯಮಗಳನ್ನು ಕೆಲ ಸಮಾಜದ ಘಾತುಕ ಶಕ್ತಿಗಳು ಅದರ ವಿರುದ್ಧ ತಮ್ಮ ಆಕ್ರಮನ ಮಾಡುತ್ತಿದ್ದಾರೆ. ಪತ್ರಿಕೆಯಲ್ಲಿ ಯಾವುದೇ ಸುದ್ದಿ ಪ್ರಕಟವಾದಗ ಅದರ ವಿರೋಧಿ ಶಕ್ತಿಗಳು ಪತ್ರಿಕೆ ಕಛೇರಿ ಮೇಲೆ ದಾಳಿ ಹಾಗೂ ಪತ್ರಿಕೆಗಳನ್ನು ಸುಟ್ಟು ಹಾಕುತ್ತಿರುವುದು ಇದರಿಂದ ಪತ್ರಿಕೆಯ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಭಂಗ ತರುತ್ತಿದ್ದಾರೆ ಎಂದು ಹೇಳಬಹುದಾಗಿದೆ. ಒಂದು ಪತ್ರಿಕೆ ಹಾಗೂ ದೃಶ್ಯ ಮಾಧ್ಯಮ ತಪ್ಪು ಮಾಡಿದಾಗ ಅದನ್ನು ವಿರುದ್ಧ ಪ್ರತಿಭಟಿಸಲು ಜನತೆಗೆ ಅದೇಷ್ಟು ದಾರಿಗಳು ಇರುವಾಗ ಘಾತುಕ ಶಕ್ತಿಗಳು ಈ ರೀತಿಯಾಗಿ ಮಾಡುವುದು ಸರಿಯೇ? ಎಂಬ ಪ್ರಶ್ನೆ ಪ್ರಜ್ಞಾವಂತ ನಾಗರಿಕರಿಂದ ಕೇಳಿ ಬರತ್ತಿದೆ. ಓರ್ವ ಪತ್ರಕರ್ತನಿಗೆ ಸಮಾಜದಲ್ಲಿ ನಡೆಯುವಂತಹ ಅನ್ಯಾಯ ಅಕ್ರಮಗಳ ವಿರುದ್ಧ ಅಭಿವ್ಯಕ್ತಿ ಸ್ವಾತಂತ್ರ್ಯದ ಮೂಲಕ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಲು ಅವಕಾಶವಿದೆ. ಆದರೆ ಇಂದಿನ ದಿನಗಳಲ್ಲಿ ಪತ್ರಕರ್ತನ ಮೇಲೆ ಹಲ್ಲೆ, ಕೊಲೆ ಹಾಗೂ ಪತ್ರಿಕಾ ಕಛೇರಿ ಮೇಲೆ ದಾಳಿ ನಡೆಯುತ್ತಲೇ ಇದೆ. ಮುಂಬೈಯಲ್ಲಿ ಖ್ಯಾತ ಪತ್ರಕರ್ತರೋರ್ವರು ಅಂಡರ್ ವರ್ಲ್ದ್ ಡಾನ್‌ಗಳ ವಿರುದ್ಧ ಪತ್ರಿಕೆಯಲ್ಲಿ ವರದಿ ಮಾಡಿಕ್ಕೆ ಅವರನ್ನು ಆ ಡಾನ್‌ಗಳು ನಡು ರಸ್ತೆಯಲ್ಲಿಯೇ ಕೊಚ್ಚಿ ಹಾಕಿದ್ದರು. ಇದು ಮಾನವ ಹಕ್ಕಿನ ಉಲ್ಲಂಘನೆಯಾಗಿದೆ. ಈ ಕೃತ್ಯದ ತನಿಖೆ ಮುಗಿದ್ದು, ಆರೋಪಿಗಳನ್ನು ಪೊಲೀಸರ ಬಂಧಿಸಿದ್ದಾಗ ಆರೋಪಿಗಳ ಪೈಕಿ ಜಿಗ್ನಾ ಎಂಬ ಪತ್ರಕರ್ತೆ ಇದರಲ್ಲಿ ಭಾಗಿಯಾಗಿದ್ದಾಳೆ ಎಂದು ಪೊಲೀಸ್ ತನಿಖೆಯಿಂದ ಬಯಲಾದಾಗ ಪತ್ರಕರ್ತರಲ್ಲಿ ಕೂಡ ಕೆಲವರು ಕೆಟ್ಟವರು ಇದ್ದರೆ ಎಂಬುವುದು ಸಾಭಿತಾಗಿದೆ.
    ಒಟ್ಟಾಗಿ ಹೇಳುವುದಾದರೆ ಮಾಧ್ಯಮವೆಂಬುವುದು ಪ್ರಜಾಪ್ರಭುತ್ವ ಅವಿಭಾಜ್ಯ ಅಂಗವಾಗಿದ್ದು, ಪ್ರಪಂಚದ ಎಲ್ಲಾ ಆಗೂಹೋಗುಗಳನ್ನು ಅದು ವಿಮರ್ಶೆ ಮಾಡುತ್ತ ಪ್ರಮಾಣಿಕವಾಗಿ ಕೆಲಸ ಮಾಡುತ್ತಿದೆ. ಯಾವುದೇ ಓರ್ವ ಪತ್ರಕರ್ತ ತಪ್ಪು ಮಾಡಿದಾಗ ಇಡೀ ಮಾಧ್ಯಮ ವರ್ಗವನ್ನು ದೂರುವುದು ಸರಿಯಲ್ಲ. ವಾರ್ತಾ ಮಾಧ್ಯಮ ಪ್ರಮಾಣಿಕವಾಗಿ ಕೆಲಸ ಮಾಡುವಾಗ ಅದಕ್ಕೆ ಜನತೆ ಹಾಗೂ ಸರಕಾರ ಸಂಪೂರ್ಣವಾಗಿ ಬೆಂಬಲ ನೀಡಿದ್ದಾರೆ ಆದರ್ಶ ಸಮಾಜ ನಿರ್ಮಾಣ ವಾಗುವುದರಲ್ಲಿ ಯಾವುದೇ ಸಂದೇಹವಿಲ್ಲ.

ಮಹಮ್ಮದ್ ಅಲಿ
ಪತ್ರಕರ್ತ ವಿಟ್ಲ

 
Design by Free WordPress Themes | Bloggerized by - Free Blogger Themes | @javtl